PCOS And Tea: PCOS ಕಡಿಮೆ ಮಾಡಲು ಆಯುರ್ವೇದ ಮದ್ದು! ಅಡ್ಡ ಪರಿಣಾಮಗಳಿಲ್ಲದೆ ಔಷಧಿ

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ನ್ನು ತೊಡೆದು ಹಾಕಲು ಆಯುರ್ವೇದ ವೈದ್ಯರ ಸಲಹೆ ಅನುಸರಿಸಬಹುದು. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ನಿಂದ ಬಳಲುತ್ತಿರುವ ಮಹಿಳೆಯರಿಗಾಗಿ ಆಯುರ್ವೇದ ವೈದ್ಯೆ ದೀಕ್ಷಾ ಭಾವಸರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS ) ಹಾರ್ಮೋನ್ ಅಸಮತೋಲನದಿಂದ ಉಂಟಾಗುವ ಕಾಯಿಲೆ (Disease) ಇದಾಗಿದೆ. ವಯಸ್ಕ ಮಹಿಳೆಯರಲ್ಲಿ (Woman’s) ಈ ಸ್ಥಿತಿಯು ಸಾಮಾನ್ಯ ಆಗಿದೆ. ಅನೇಕ ಗಂಭೀರ ಪರಿಣಾಮಗಳು (Serious Effects) ಬೀರಬಹುದು. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಹೊಂದಿರುವ ಮಹಿಳೆಯರಲ್ಲಿ ಮುಟ್ಟು ಅನಿಯಮಿತ ಆಗಿರುತ್ತದೆ. ಮತ್ತು ದೀರ್ಘ ಕಾಲದವರೆಗೆ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಲ್ಲದೇ, ಈ ಸಮಸ್ಯೆಯು ಆಂಡ್ರೊಜೆನ್ ಅಂದ್ರೆ ಪುರುಷ ಹಾರ್ಮೋನ್ ಮಟ್ಟ ಹೆಚ್ಚಿಸಲು ಕೆಲಸ ಮಾಡುತ್ತದೆ. ಇದರ ಜೊತೆ ಈ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಲ್ಲಿ ಮೊಟ್ಟೆಗಳು ನಿಯಮಿತವಾಗಿ ರೂಪುಗೊಳ್ಳುವುದಿಲ್ಲ. ಇದು ಮಹಿಳೆಯರಿಗೆ ಗರ್ಭ ಧರಿಸಲು ತೊಂದರೆ ಉಂಟು ಮಾಡುತ್ತದೆ.

    ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಗೆ ಆಯುರ್ವೇದ ಚಿಕಿತ್ಸೆ

    ನೀವು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ನ್ನು ತೊಡೆದು ಹಾಕಲು ಆಯುರ್ವೇದ ವೈದ್ಯರ ಸಲಹೆ ಅನುಸರಿಸಬಹುದು. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ನಿಂದ ಬಳಲುತ್ತಿರುವ ಮಹಿಳೆಯರಿಗಾಗಿ ಆಯುರ್ವೇದ ವೈದ್ಯೆ ದೀಕ್ಷಾ ಭಾವಸರ್, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಇದರಲ್ಲಿ ಅವರು ಅದನ್ನು ಸರಿಪಡಿಸಲು ನೈಸರ್ಗಿಕ ಮತ್ತು ಪರಿಣಾಮಕಾರಿ ಮಾರ್ಗಗಳ ಬಗ್ಗೆ ತಿಳಿಸಿದ್ದಾರೆ.

    ಅವರು ಹೇಳಿರುವ ಐದು ರೀತಿಯ ಗಿಡಮೂಲಿಕೆ ಚಹಾಗಳು ಮತ್ತು ಅವರ ಸ್ವಭಾವಕ್ಕೆ ಅನುಗುಣವಾಗಿ ಅಂದರೆ ದೇಹ ಮತ್ತು ಮನಸ್ಸಿನ ಪ್ರಕಾರ ಸರಿಯಾದ ಜೀವನಶೈಲಿ ಬದಲಾವಣೆಗಳು, ರೋಗಿಗಳಲ್ಲಿ ಪಿಸಿಓಎಸ್ ಅನ್ನು ಗುಣಪಡಿಸುವಲ್ಲಿ ಅದ್ಭುತ ಫಲಿತಾಂಶ ನೀಡುತ್ತವೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ತೂಕ ಹೆಚ್ಚಿಸಿಕೊಳ್ಳೋಕೆ ಈ ಆಹಾರಗಳು ಬೆಸ್ಟ್! ಪೋಷಕಾಂಶವೂ ಸಿಗುತ್ತೆ

    ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ನ್ನು ಸರಿಪಡಿಸಲು ಈ ಮೂರು ವಿಷಯಗಳು ಅವಶ್ಯಕ

    ಆರೋಗ್ಯಕರ ಊಟ

    ಒಳ್ಳೆಯ ನಿದ್ರೆ

    ವ್ಯಾಯಾಮ ಮತ್ತು ಪ್ರಾಣಾಯಾಮ

    ಪುದೀನ ಚಹಾ

    ನೀವು ಹೆಚ್ಚಿನ ಟೆಸ್ಟೋಸ್ಟೆರಾನ್, ಹಿರ್ಸುಟಿಸಮ್ ಮತ್ತು ಅಂಡೋತ್ಪತ್ತಿ ತೊಂದರೆ ಎದುರಿಸುತ್ತಿದ್ದರೆ, ಸೂಪರ್‌ ಮಿಂಟ್ ಚಹಾವು ನಿಮ್ಮ ದಿನಚರಿಗೆ ಉತ್ತಮ ಸೇರ್ಪಡೆಯಾಗಿದೆ. ಇದು ಅಂಡೋತ್ಪತ್ತಿಯನ್ನು ಉತ್ತೇಜಿಸುತ್ತದೆ. ಜೊತೆಗೆ ಆಂಡ್ರೋಜೆನ್ಗಳನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪುದೀನಾ ಚಹಾವನ್ನು ಸೇವಿಸುವುದು ಸಾಕಷ್ಟು ಪ್ರಯೋಜನ ನೀಡುತ್ತದೆ.

    ಶುಂಠಿ ಚಹಾ

    ಶುಂಠಿಯು ಮಹಿಳೆಯರ ದೇಹದಲ್ಲಿ ಇರುವ ಹಾರ್ಮೋನ್‌ಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಶುಂಠಿ ಉರಿಯೂತ ನಿವಾರಕ ಗುಣ ಹೊಂದಿದೆ. ಇದು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ನಿಂದ ಉಂಟಾಗುವ ಸೆಳೆತ, ಮೂಡ್ ಸ್ವಿಂಗ್‌ ಮತ್ತು ತಲೆನೋವಿನ ರೋಗ ಲಕ್ಷಣ ನಿಯಂತ್ರಿಸಲು ಸಹಾಯ ಮಾಡುತ್ತದೆ. ನೀವು ಅದನ್ನು ಬೆಳಿಗ್ಗೆ ಅಥವಾ ಸಂಜೆ ಯಾವುದೇ ಸಮಯದಲ್ಲಿ ಕುಡಿಯಬಹುದು. ಹೆಚ್ಚುವರಿ ಪ್ರಯೋಜನಗಳಿಗೆ ನಿಂಬೆ ಅಥವಾ ಜೇನುತುಪ್ಪ ಸೇರಿಸಿ.

    ಹಸಿರು ಚಹಾ

    ಇದು ಇನ್ಸುಲಿನ್ ಪ್ರತಿರೋಧಕ್ಕೆ ಕೊಡುಗೆ ನೀಡುತ್ತದೆ. ಮತ್ತು ಪಿಸಿಓಎಸ್ ನಿಂದ ಬಳಲುತ್ತಿರುವ ಅಧಿಕ ತೂಕ ಮತ್ತು ಬೊಜ್ಜು ಮಹಿಳೆಯರಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆ ಮಾಡುತ್ತದೆ. ಆಗ ಸಾಮಾನ್ಯ ಚಹಾದ ಬದಲಿಗೆ ಈ ಆರೋಗ್ಯಕರ ಗ್ರೀನ್ ಟೀ ಯನ್ನು ದೈನಂದಿನ ಭಾಗವಾಗಿಸಿ.

    ದಾಲ್ಚಿನ್ನಿ ಚಹಾ

    ದಾಲ್ಚಿನ್ನಿ ಚಹಾ ಸೇವನೆ ನಿಮ್ಮ ಹೆಚ್ಚಿದ ರಕ್ತದ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ದಾಲ್ಚಿನ್ನಿ ಚಹಾ ಸೇವನೆ ಬೊಜ್ಜು ಮತ್ತು ತೂಕ ಹೆಚ್ಚಿರುವ ಜನರು ಮತ್ತು ಇದು ತೂಕ ಕಡಿಮೆ ಮಾಡಲು ಸಹಾಯಕವಾಗಿದೆ.

    ಇದನ್ನೂ ಓದಿ: ಆರೋಗ್ಯಕರ ಜೀವಕೋಶ ಹೊಂದಲು ದಿನಕ್ಕೆಷ್ಟು ಪ್ರೋಟೀನ್ ಬೇಕು ಗೊತ್ತೇ?

    ಜೊತೆಗೆ ನಿಮ್ಮ ಅವಧಿಗಳನ್ನು ಕ್ರಮಬದ್ಧಗೊಳಿಸಲು ಸಹಾಯ ಮಾಡುತ್ತದೆ. ಕೆಫೀನ್ ಮುಕ್ತ ದಾಲ್ಚಿನ್ನಿ ಚಹಾವನ್ನು ನೀವು ದಿನವಿಡೀ ಯಾವಾಗ ಬೇಕಾದರೂ ಒಂದು ಕಪ್ ಕುಡಿಯಬಹುದು.
    Published by:renukadariyannavar
    First published: