ಈ ಆರೋಗ್ಯ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಬೀಟ್‌ರೂಟ್‌ ತಿನ್ನಬೇಡಿ!

Health tips: ಒಬ್ಬ ವ್ಯಕ್ತಿಯು ಯಾವುದೇ ರೀತಿಯ ಅಲರ್ಜಿ ಅಥವಾ ಚರ್ಮದ ದದ್ದು ಸಮಸ್ಯೆಯಿಂದ ಬಳಲುತ್ತಿದ್ದರೆ, ಅವರು ಬೀಟ್ರೂಟ್ ಅನ್ನು ಆಹಾರದಲ್ಲಿ ಸೇರಿಸಿಕೊಳ್ಳಬಾರದು.

ಬಿಟ್‌ ರೂಟ್

ಬಿಟ್‌ ರೂಟ್

  • Share this:
ಸಾಮಾನ್ಯವಾಗಿ ದೇಹವನ್ನು(Human body) ಆರೋಗ್ಯಕರವಾಗಿಟ್ಟುಕೊಳ್ಳಲು (Health)ದೇಹಕ್ಕೆ ಅವಶ್ಯಕವಾದಂತಹ ಪೋಷಕಾಂಶಗಳನ್ನು ಒದಗಿಸುವ ಈ ಕೆಲವು ತರಕಾರಿ ಜ್ಯೂಸ್ ಮತ್ತು ಹಣ್ಣುಗಳ (Friuts) ಜ್ಯೂಸ್ ಅನ್ನು ತಜ್ಞರು ದೈನಂದಿನ ಆಹಾರ ಪದ್ದತಿಯಲ್ಲಿ ಸೇರಿಸಿಕೊಳ್ಳಿ ಎಂದು ಹೇಳುವುದನ್ನು ನಾವೆಲ್ಲರೂ ಕೇಳಿರುತ್ತೇವೆ.ಆದರೆ ಇಲ್ಲೊಂದು ತರಕಾರಿಯು (Vegetable) ಕೆಲವು ರೋಗಗಳಿಂದ (problem)ಬಳಲುತ್ತಿರುವವರಿಗೆ ಅಷ್ಟೊಂದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಹಾಗಾದರೆ ಅದ್ಯಾವ ತರಕಾರಿಯ ಬಗ್ಗೆ ನಾವು ಮಾತಾಡುತ್ತಿದ್ದೇವೆ ಎಂದು ತಿಳಿದುಕೊಳ್ಳಲು ನಿಮಗೆ ಕುತೂಹಲವಿರುವುದು ಸಹಜವಾದ ವಿಷಯ. ಬೀಟ್ರೂಟ್(Beetroot) ಅಥವಾ ಇದರ ಜ್ಯೂಸ್ ಅನ್ನು ಪ್ರತಿದಿನ ತಪ್ಪದೇ ಸೇವಿಸುವುದರಿಂದ ನಮ್ಮ ಮೆದುಳಿನ ಕಾರ್ಯ ಸುಧಾರಿಸುತ್ತದೆ ಮತ್ತು ನಮ್ಮ ದೇಹದಲ್ಲಿನ ರಕ್ತನಾಳಗಳ ಆರೋಗ್ಯ ಕಾಪಾಡಲು ಸಹ ಇದು ಸಹಾಯಕವಾಗಿದೆ.

ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ
ಬೀಟ್ರೂಟ್ ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ ಮತ್ತು ನಮ್ಮ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಅನೇಕ ಜನರು ಬೀಟ್ರೂಟ್ ಅನ್ನು ಸಲಾಡ್ ರೂಪದಲ್ಲಿ ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುತ್ತಾರೆ. ಇದರಲ್ಲಿ ಪೊಟ್ಯಾಶಿಯಂ, ಕಬ್ಬಿಣ, ಮೆಗ್ನೀಶಿಯಂ, ವಿಟಮಿನ್ ಬಿ6ನಂತಹ ಪೋಷಕಾಂಶಗಳು ಸಮೃದ್ಧವಾಗಿದೆ ಮತ್ತು ಇದು ರಕ್ತ ರಕ್ತಹೀನತೆಯ ಸಮಸ್ಯೆ ನಿವಾರಿಸುತ್ತದೆ.

ಇದನ್ನೂ ಓದಿ: Beetroot Juice: ಬಿಪಿ ಸಮಸ್ಯೆಗೆ ಬೀಟ್​ರೂಟ್​ ಜ್ಯೂಸ್ ಬೆಸ್ಟ್- ಇದರಲ್ಲಿ ಏನೆಲ್ಲಾ ಪ್ರಯೋಜನಗಳಿದೆ ನೋಡಿ

ಆದರೆ ಇದು ಅಡ್ಡ ಪರಿಣಾಮಗಳನ್ನು ಸಹ ಉಂಟುಮಾಡಬಹುದು ಎಂದು ಕೆಲವು ಆರೋಗ್ಯ ವೆಬ್‌ಸೈಟ್‌ಗಳ ವರದಿಗಳು ಹೇಳುತ್ತಿವೆ. ನಿರ್ದಿಷ್ಟ ರೋಗಗಳಿಂದ ಬಳಲುತ್ತಿರುವ ಕೆಲವರು ಬೀಟ್ರೂಟ್ ಅನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲೇಬಾರದು ಎಂದು ಹೇಳುತ್ತದೆ.

ಕಡಿಮೆ ರಕ್ತದೊತ್ತಡ ಹೊಂದಿರುವ ವ್ಯಕ್ತಿ
ಬೀಟ್ರೂಟ್ ತಿನ್ನುವುದು ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವ ರೋಗಿಗಳಿಗೆ ಹಾನಿಕಾರಕವಾಗಬಹುದು, ಬೀಟ್ರೂಟ್ ಸೇವಿಸುವುದರಿಂದ ರಕ್ತದೊತ್ತಡ ಇನ್ನಷ್ಟು ಕಡಿಮೆಯಾಗುತ್ತದೆ. ಆದ್ದರಿಂದ, ಕಡಿಮೆ ರಕ್ತದೊತ್ತಡದ ಸಮಸ್ಯೆ ಎದುರಿಸುತ್ತಿರುವ ಜನರು ಬೀಟ್ರೂಟ್ ಅನ್ನು ತಮ್ಮ ಆಹಾರದಿಂದ ಹೊರಗಿಡುವುದು ಅವರ ಆರೋಗ್ಯಕ್ಕೆ ಒಳ್ಳೆಯದು.

ಮೂತ್ರಪಿಂಡದ ಕಲ್ಲುಗಳಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು
ಈ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿರುವ ಜನರು ಬೀಟ್ರೂಟ್ ಅನ್ನು ತಮ್ಮ ಆಹಾರದಲ್ಲಿ ಸೇರಿಸಬಾರದು. ಪಿತ್ತಕೋಶ ಅಥವಾ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯಿಂದ ಬಳಲುತ್ತಿರುವವರು ಬೀಟ್ರೂಟ್ ತಿನ್ನುವುದನ್ನು ಬಿಡಬೇಕು. ಏಕೆಂದರೆ ಬೀಟ್ರೂಟ್‌ನಲ್ಲಿ ಆಕ್ಸಲೇಟ್ ಪ್ರಮಾಣ ಸಾಕಷ್ಟು ಹೆಚ್ಚಾಗಿದ್ದು ಇದು ಕಿಡ್ನಿಯಲ್ಲಿ ಕಲ್ಲುಗಳ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವರು
ಒಬ್ಬ ವ್ಯಕ್ತಿಯು ಯಾವುದೇ ರೀತಿಯ ಅಲರ್ಜಿ ಅಥವಾ ಚರ್ಮದ ದದ್ದು ಸಮಸ್ಯೆಯಿಂದ ಬಳಲುತ್ತಿದ್ದರೆ, ಅವರು ಬೀಟ್ರೂಟ್ ಅನ್ನು ಆಹಾರದಲ್ಲಿ ಸೇರಿಸಿಕೊಳ್ಳಬಾರದು. ಏಕೆಂದರೆ ಬೀಟ್ರೂಟ್ ತಿನ್ನುವುದರಿಂದ ನಿಮ್ಮ ಅಲರ್ಜಿ ಮತ್ತು ಚರ್ಮದ ದದ್ದುಗಳ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಬಹುದು.

ಮಧುಮೇಹ ರೋಗಿಗಳು
ಯಾವ ವ್ಯಕ್ತಿಯು ಮಧುಮೇಹದಿಂದ ಬಳಲುತ್ತಿರುತ್ತಾರೆಯೋ ಅವರು ಬೀಟ್ರೂಟ್ ತಿನ್ನುವುದನ್ನು ಬಿಡುವುದು ಒಳ್ಳೆಯದು. ಏಕೆಂದರೆ ಇದು ನಿಮ್ಮ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಬೀಟ್ರೂಟ್ ಹೆಚ್ಚಿನ ಗ್ಲೈಸೀಮಿಕ್ ಸೂಚ್ಯಂಕ ಹೊಂದಿರುತ್ತದೆ, ಇದು ನಿಮ್ಮ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿಸುತ್ತದೆ. ಬೀಟ್ರೂಟ್ ಸೇವಿಸುವುದಕ್ಕೂ ಮುಂಚಿತವಾಗಿ ಮೊದಲು ನೀವು ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಇದನ್ನೂ ಓದಿ: ಬೀಟ್ ರೂಟ್ ಜ್ಯೂಸ್ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಪ್ರಯೋಜನ
ಬೀಟ್ ರೂಟ್ ನಲ್ಲಿ ಫಾಲಟೆ, ವಿಟಮಿನ್ ಸಿ, ಬೀಟೈನ್, ಮ್ಯಾಂಗನೀಸ್, ಪೊಟಾಶಿಯಂ, ಕಬ್ಬಿನಾಂಶ, ಕ್ಯಾಲ್ಸಿಯಂ, ತಾಮ್ರ ಮತ್ತು ವಿಟಮಿನ್ ಬಿ6 ಇದೆ.ಪ್ರತೀ ನಿತ್ಯ ಒಂದು ಲೋಟ ಬೀಟ್ ರೂಟ್ ಜ್ಯೂಸ್ ಕುಡಿದರೆ ಅದರಿಂದ ತ್ರಾಣ ಹೆಚ್ಚಾಗುತ್ತದೆ. ನೈಟ್ರೇಟ್ ಅಂಶವು ನೈಟ್ರೇಟ್ ಆಕ್ಸೈಡ್ ಆಗಿ ಪರಿವರ್ತನೆಗೊಳ್ಳೂವ ಮೂಲಕ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆ ವೇಳೆ ಆಮ್ಲಜನಕದ ಸರಬರಾಜು ಹೆಚ್ಚಿಸುವುದು ಮತ್ತು ಆಯಾಸ ಕಡಿಮೆ ಮಾಡುವುದು. ಜ್ಯೂಶ್ ನ್ನು ನಿಯಮಿತವಾಗಿ ಕುಡಿದರೆ ಅದರಿಂದ ದೈಹಿಕವಾಗಿ ಶಕ್ತಿ ಬರುವುದು. ಯಕೃತ್ ನ ಶುದ್ದೀಕರಣವು ಸರಿಯಾಗಿ ಇಲ್ಲದೆ ಇದ್ದರೆ ಅದರಿಂದ ಕಾಯಿಲೆಗಳು ಬರುವುದು. ಇಂತಹ ಸಮಯದಲ್ಲಿ ಬೀಟ್ ರೂಟ್ ಜ್ಯೂಸ್ ಪರಿಣಾಮಕಾರಿ ಆಗಿರುತ್ತದೆ. ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್, ವಿಟಮಿನ್ ಬಿ, ಕ್ಯಾಲ್ಸಿಯಂ, ಕಬ್ಬಿನಾಂಶ ಮತ್ತು ಬೀಟೈನ್ ದೇಹಕ್ಕೆ ತುಂಬಾ ಒಳ್ಳೆಯದು.
Published by:vanithasanjevani vanithasanjevani
First published: