• Home
  • »
  • News
  • »
  • lifestyle
  • »
  • Cancer: ಕಣ್ಣಿನ ಚಿಕಿತ್ಸೆಗೆ ಹೋದ ರೋಗಿಗೆ ಇದ್ದಿದ್ದು ಕ್ಯಾನ್ಸರ್; ಜೀವ ಉಳಿಸಿತ್ತು ಆ ಒಂದು ಅಪಾಯಿಂಟ್​ಮೆಂಟ್!

Cancer: ಕಣ್ಣಿನ ಚಿಕಿತ್ಸೆಗೆ ಹೋದ ರೋಗಿಗೆ ಇದ್ದಿದ್ದು ಕ್ಯಾನ್ಸರ್; ಜೀವ ಉಳಿಸಿತ್ತು ಆ ಒಂದು ಅಪಾಯಿಂಟ್​ಮೆಂಟ್!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಎಲ್ಲದರ ಹಿಂದೆಯೂ ಒಂದು ಕಾರಣವಿರುತ್ತೆ ಅಂತ ಅದಕ್ಕೇ ಹೇಳ್ತಾರೇನೋ. ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ವ್ಯಕ್ತಿ ಮತ್ಯಾವುದೋ ಕಾರಣಕ್ಕೆ ಕಣ್ಣಿನ ವೈದ್ಯರ ಬಳಿ ಹೋಗಿದ್ದೇ ಆತನ ಜೀವ ಉಳಿಯೋಕೆ ಕಾರಣವಾಗಿದೆ.

  • Share this:

ಒಮ್ಮೊಮ್ಮೆ ಜೀವನದಲ್ಲಿ (Life) ನಾವಿಡುವ ಹೆಜ್ಜೆ ಮತ್ತೊಂದು ಯಾವುದೋ ಮಹತ್ವದ ಘಟ್ಟಕ್ಕೆ ಕಾರಣವಾಗುತ್ತದೆ (Reason). ಬದುಕಲ್ಲಿ ನಡೆಯುವ ಪ್ರಮುಖ ಘಟನೆಗಳ ಹಿಂದೆ ಒಂದು ಕಾರಣ ಇದ್ದೇ ಇರುತ್ತೆ ಅನ್ನೋದು ಸುಳ್ಳಲ್ಲ. ತನಗೆ ಕ್ಯಾನ್ಸರ್‌ (Cancer) ಇದೆ ಎಂಬುದೇ ಗೊತ್ತಿಲ್ಲದ ವ್ಯಕ್ತಿಯೊಬ್ಬ (Person) ಕಣ್ಣಿನ ವೈದ್ಯರ ಬಳಿಗೆ ಹೋಗಿದ್ದೇ ಆತನ ಜೀವ ಉಳಿಯೋಕೆ ಕಾರಣವಾಗಿದೆ. ಹೌದು, ಇದು ಆಶ್ಚರ್ಯ ಆದರೂ ನಿಜ. ಎಲ್ಲದರ ಹಿಂದೆಯೂ ಒಂದು ಕಾರಣವಿರುತ್ತೆ ಅಂತ ಅದಕ್ಕೇ ಹೇಳ್ತಾರೇನೋ. ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ವ್ಯಕ್ತಿ ಮತ್ಯಾವುದೋ ಕಾರಣಕ್ಕೆ ಕಣ್ಣಿನ ವೈದ್ಯರ ಬಳಿ ಹೋಗಿದ್ದೇ ಆತನ ಜೀವ (Life) ಉಳಿಯೋಕೆ ಕಾರಣವಾಗಿದೆ.


ಅಷ್ಟಕ್ಕೂ ಆ ವ್ಯಕ್ತಿಯ ಹೆಸರು ಮ್ಯಾಟ್ ವಾಯ್ಸ್‌ ಅಂತ. ವಯಸ್ಸು 40 ವರ್ಷ. ಲಂಡನ್‌ ನ ಮಾಜಿ ಮೆಕ್ಯಾನಿಕ್.‌ ಆದ್ರೆ ಆತ್ರ ತನ್ನ 32 ನೇ ವಯಸ್ಸಿನಿಂದ ಲೂ ತಲೆನೋವಿನ ಸಮಸ್ಯೆ ಕಾಡುತ್ತಿತ್ತು. ಜೊತೆಗೆ ತಲೆ ಸುತ್ತುವ ಸಮಸ್ಯೆ ಕೂಡ ಆತನಿಗಿತ್ತು. ಸತತ 7 ವರ್ಷಗಳ ಕಾಲ ತಡೆದುಕೊಂಡ ವಾಯ್ಸ್‌ ಗೆ 2020 ರ ಏಪ್ರಿಲ್‌ ಹೊತ್ತಿಗೆ ತಲೆ ನೋವು ಅಸಹನೀಯವಾಯ್ತು. ನಿಂತಲ್ಲಿಯೇ ಅವರು ಕುಸಿದು ಬೀಳತೊಡಗಿದರು. ಅಲ್ಲದೇ ಅವರಿಗೆ ದೃಷ್ಟಿಯಲ್ಲಿ ಕಪ್ಪನೆಯ ಗೋಳಗಳು ಕಾಣತೊಡಗಿದ್ದವು. ಈ ಬಗ್ಗೆ ಯುಕೆ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದ ಅವರು, ತನಗಿರುವ ರಕ್ತದೊತ್ತಡ ಸಮಸ್ಯೆಯಿಂದಾಗಿಯೇ ನನ್ನ ದೃಷ್ಟಿಯಲ್ಲಿ ಹೀಗಾಗಿದೆ ಅಂತ ವೈದ್ಯರು ಭಾವಿಸಿದ್ದಾಗಿ ತಿಳಿಸಿದರು.


ಕಣ್ಣಿನ ಡಾಕ್ಟರ್‌ ಬಳಿ ಹೋದಾಗಿ ಕಾದಿತ್ತು ಶಾಕಿಂಗ್‌ ನ್ಯೂಸ್‌


ಕೊನೆಗೂ ಅವರು ಕಣ್ಣಿನ ಡಾಕ್ಟರ್‌ ಬಳಿ ಹೋದಾಗ ಶಾಕಿಂಗ್‌ ನ್ಯೂಸ್‌ ಕಾದಿತ್ತು. ವೈದ್ಯರು ಮೆದುಳಿನಲ್ಲಿ ಗಡ್ಡೆ ಅಥವಾ ರಕ್ತಸ್ರಾವ ಆಗಿರಬಹುದು ಎಂದರು. ಕೊನೆಗೆ ಮತ್ತೊಬ್ಬ ಡಾಕ್ಟರ್‌, ವಾಯ್ಸ್‌ ಅವರಿಗೆ ಮೆದುಳಿನ ಕ್ಯಾನ್ಸರ್‌ ಇದೆ ಎಂದು ನಿರ್ಣಯಿಸಿದರು. ಇದನ್ನು ಆಸ್ಟ್ರೋಸೈಟೋಮಾ ಎಂದು ಕರೆಯಲಾಗುತ್ತದೆ. ಆಸ್ಟ್ರೋಸೈಟೋಮಾಗಳು ಗ್ಲಿಯೋಮಾ ಎಂದು ಕರೆಯಲ್ಪಡುವ ಒಂದು ರೀತಿಯ ಮೆದುಳಿನ ಕ್ಯಾನ್ಸರ್ ಆಗಿದೆ. ಜಾನ್ಸ್ ಹಾಪ್ಕಿನ್ಸ್ ಮೆಡಿಸಿನ್ ಪ್ರಕಾರ ಸುಮಾರು ಶೇ. 33 ರಷ್ಟು ಮೆದುಳಿನ ಕ್ಯಾನ್ಸರ್ ಗ್ಲಿಯೊಮಾಸ್ ಆಗಿದೆ. ಮಿದುಳಿನ ಕ್ಯಾನ್ಸರ್‌ ಗಳು ಅಪರೂಪ ಮತ್ತು ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ US ನಲ್ಲಿ ಒಬ್ಬ ವ್ಯಕ್ತಿಯು ತಮ್ಮ ಜೀವಿತಾವಧಿಯಲ್ಲಿ ಮೆದುಳು ಅಥವಾ ಬೆನ್ನುಹುರಿಯ ಮಾರಣಾಂತಿಕ ಗೆಡ್ಡೆ ಬೆಳೆಯುವ ಸಾಧ್ಯತೆಯು 1% ಕ್ಕಿಂತ ಕಡಿಮೆಯಾಗಿದೆ.


ಇದನ್ನೂ ಓದಿ: ನಟಿ ಜೆನಿಲಿಯಾ ರೀತಿ ಹಬ್ಬಕ್ಕೆ ವೆರೈಟಿ ಸೀರೆ ನೀವೂ ಟ್ರೈ ಮಾಡಿ


ಗ್ಲಿಯೋಮಾ ಅಥವಾ ಮೆದುಳು ಕ್ಯಾನ್ಸರ್‌ ನ ಲಕ್ಷಣಗಳಿವು!


ಗ್ಲಿಯೊಮಾಸ್ ಮೆದುಳು ಅಥವಾ ಬೆನ್ನುಹುರಿಯ ಮೇಲೆ ಒತ್ತುವ ಮೂಲಕ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ನಿಧಾನವಾಗಿ ಸಂಭವಿಸುವ ಮತ್ತು ಸೂಕ್ಷ್ಮವಾಗಿರಬಹುದಾದ ಅತ್ಯಂತ ಸಾಮಾನ್ಯವಾದ ರೋಗಲಕ್ಷಣಗಳೂ ಇದರಲ್ಲಿ ಸೇರಿವೆ. ಅದರಲ್ಲಿ ಪ್ರಮುಖವಾಗಿ ತಲೆನೋವು, ರೋಗಗ್ರಸ್ತವಾಗುವಿಕೆಗಳು, ವ್ಯಕ್ತಿತ್ವ ಬದಲಾವಣೆಗಳು, ತೋಳುಗಳು, ಮುಖ ಅಥವಾ ಕಾಲುಗಳಲ್ಲಿ ದೌರ್ಬಲ್ಯ ಮತ್ತು ಮಾತಿನ ಸಮಸ್ಯೆಗಳು ಪ್ರಮುಖ ಲಕ್ಷಣಗಳಾಗಿವೆ. ಜಾನ್ಸ್ ಹಾಪ್ಕಿನ್ಸ್ ಮೆಡಿಸಿನ್ ಪ್ರಕಾರ ವಾಂತಿ, ದೃಷ್ಟಿ ನಷ್ಟ ಮತ್ತು ತಲೆತಿರುಗುವಿಕೆ ಪ್ರಮುಖ ಲಕ್ಷಣಗಳಾಗಿವೆ.


“ನಾನು ಕಣ್ಣಿನ ವೈದ್ಯರ ಬಳಿ ಹೋಗದೇ ಇದ್ದಿದ್ದರೆ ನಾನು ಮಕ್ಕಳಿಗಾಗಿ ನಾನು ಇಲ್ಲಿ ಜೋವಂತವಾಗಿರಲು ಸಾಧ್ಯವಾಗುತ್ತಿಲಿಲ್ಲ” ಎಂದು ಹೇಳುವಾಗ ಭಾವುಕರಾಗಿದ್ದರು ವಾಯ್ಸ್.‌ ನಂತರದಲ್ಲಿ ಆಪರೇಷನ್‌ ಮಾಡಿ ವಾಯ್ಸ್‌ ಅವರ ಮೆದುಳಿನಲ್ಲಿದ್ದ ಮುಷ್ಠಿ ಗಾತ್ರದ ಗಡ್ಡೆಯನ್ನು ತೆಗೆದುಹಾಕಲಾಯಿತು. ನಂತರದಲ್ಲಿ ಅವರು 6 ವಾರಗಳ ಕಾಲ ರೇಡಿಯೊಥೆರಪಿ ಚಿಕಿತ್ಸೆ ಪಡೆದರು. ನಂತರ ಜನವರಿ 2021 ರವರೆಗೆ ಮೂರು ಕಿಮೊಥೆರಪಿ ನಡೆಯಿತು.


ಇದನ್ನೂ ಓದಿ: ಹಬ್ಬಕ್ಕೆ ಕೇವಲ 5 ನಿಮಿಷದಲ್ಲಿ ಟ್ರೆಂಡಿ ಹೇರ್​ ಸ್ಟೈಲ್ ಮನೆಯಲ್ಲೇ ಮಾಡ್ಕೊಳಿ


ಕೂದಲು ಕಳೆದುಕೊಂಡಾಗಿನ ಅನುಭವ


"ನಾನು ನನ್ನ ಕೂದಲನ್ನು ಕಳೆದುಕೊಂಡೆ. ನನ್ನ ಮಕ್ಕಳು ನನ್ನ ವಿಭಿನ್ನವಾಗಿ ನೋಡುವುದನ್ನು ಸಹಿಸಿಕೊಳ್ಳುವುದು ಬಹಳ ಕಷ್ಟ ಎಂದರು. ಸದ್ಯ ವಾಯ್ಸ್‌ ಅವರ ಕ್ಯಾನ್ಸರ್‌ ನಿಯಂತ್ರಣದಲ್ಲಿದೆ. ಆದ್ರೆ ಅವರಿಗೆ ಅಲ್ಪಾವಧಿಯ ಮೆಮೊರಿ ಲಾಸ್‌ ಹಾಗೂ ನಡೆದಾಡುವ ಸಮಸ್ಯೆಗಳಿವೆ. ಹೀಗಾಗಿ ಅವರು ಮೊದಲಿನಂತರ ಮೆಕ್ಯಾನಿಕ್‌ ಕೆಲಸ ಮಾಡಲು ಸಾಧ್ಯವಿಲ್ಲ. ಸದ್ಯ ಅವರು ಅರೆಕಾಲಿಕ ನರ್ಸ್‌ ಆಗಿರುವ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ. ಹೀಗೆ ಅದೃಷ್ಟವಶಾತ್‌ ಕಣ್ಣಿನ ಡಾಕ್ಟರ್‌ ಬಳಿ ತೆಗೆದುಕೊಂಡ ಅಪಾಯಿಂಟ್‌ ಮೆಂಟ್‌ ಈತನ ಜೀವ ಉಳಿಸಿದ್ದು ಸುಳ್ಳಲ್ಲ.

First published: