ಅಡುಗೆ ಮನೆ (Kitchen) ಎನ್ನುವುದು ಧ್ಯಾನ. ಮನೆಯ (Home) ಸದಸ್ಯರ ಆರೋಗ್ಯ (Health) ಅಡಗಿರುವುದೇ ಅಡುಗೆ ಮನೆಯಲ್ಲಿ. ಈಗ ಅಡುಗೆ ಕೆಲಸ ಕಲಿಯಲು ಹೆಣ್ಣು-ಗಂಡು ಎಂಬ ಭೇದವಿಲ್ಲ. ಇನ್ನು ಚಿಕ್ಕ ಮಕ್ಕಳು ಅಡುಗೆ ಮನೆಗೆ ಬಂದ ಕೂಡಲೇ ಅವರನ್ನು ಬೆದರಿಸಿ ಓಡಿಸುವುದೇ ಹೆಚ್ಚಿನ ತಾಯಂದಿರು (Mother) ಮಾಡುವ ಕೆಲಸ (Work). ಅದರಲ್ಲೂ ಕೊರೊನಾ ಬಂದಾಗಿನಿಂದ ಮಕ್ಕಳು (Children's) ಹೆಚ್ಚು ಕಾಲ ಮನೆಯಲ್ಲೇ ಇದ್ದಿದ್ದಿದೆ. ಆನ್ ಲೈನ್ ಕ್ಲಾಸ್, ಇಡೀ ದಿನ ಮನೆಯಲ್ಲೇ ಇದ್ದು ಬೋರ್ ಆಗಿ ಅಡುಗೆ ಮನೆಗೆ ಬರುವ ಮಕ್ಕಳನ್ನು ಬೆದರಿಸದೇ ಅವರಿಗೂ ಅಡುಗೆ ಮನೆಯ ಪಾಠ ಹೇಳಿ. ಇದು ನಿಮಗೂ ಅನುಕೂಲ. ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಅಡುಗೆ ಮನೆಯ ಬಗ್ಗೆ ಅರಿವು ಹೊಂದುವುದು ಮಕ್ಕಳಲ್ಲಿ ಕೀಳುರಿಮೆ ತೆಗೆದು ಹಾಕುತ್ತದೆ. ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಮತ್ತು ಅಡುಗೆ ಮನೆಯನ್ನು ಸ್ವಚ್ಛವಾಗಿರಿಸುವ, ಅಪಾಯಕಾರಿ ವಸ್ತುಗಳಾದ ಚಾಕು, ಸಿಲಿಂಡರ್, ಬೆಂಕಿ ಪೊಟ್ಟಣಗಳಿಂದ ದೂರವಿರುವುದು ಹೇಗೆಂದು ಪಾಠ ಹೇಳಿ ಕೊಡಿ.
ಸುರಕ್ಷತಾ ಸಲಹೆಗಳು:
ಮಕ್ಕಳು ಸಾಮಾನ್ಯವಾಗಿ ತಮ್ಮ ತಾಯಿಯೊಂದಿಗೆ ಅಡುಗೆ ಮಾಡುವುದನ್ನು ಆನಂದಿಸುತ್ತಾರೆ. ಅಡುಗೆ ಮಾಡುತ್ತಿರುವ ತಾಯಿಗೆ ನೀರು ತಂದು ಕೊಡುವುದು, ಈರುಳ್ಳಿ ಕೊಡುವುದು, ಚಪಾತಿ ಹಿಟ್ಟನ್ನು ಹಿಡಿದು ಲಟ್ಟಿಸುವುದು, ತಟ್ಟುವುದು ಮಾಡುತ್ತಾರೆ. ಆಗ ಮಕ್ಕಳಿಗೆ ಚೆಂದದ ಪಾಠ, ಕಥೆ ಹೇಳಿ. ಮಕ್ಕಳ ಆನಂದದಲ್ಲಿ ನೀವೂ ಭಾಗಿಯಾಗಿ.
ಕೆಲವೊಮ್ಮೆ ಮಕ್ಕಳಿಗೆ ಸ್ವಲ್ಪ ಅಪಾಯಕಾರಿಯೂ ಆಗಬಹುದು. ಆಗ ಮಕ್ಕಳಿಗೆ ಚಾಕು, ಸಿಲಿಂಡರ್, ಬೆಂಕಿ ಪೊಟ್ಟಣವನ್ನು ಮುಟ್ಟದಿರುವಂತೆ ಹೇಳಿ. ಮಕ್ಕಳು ಅಡುಗೆ ಮನೆಯಲ್ಲಿ ನಿಮ್ಮೊಂದಿಗೆ ಕಾಲ ಕಳೆಯುತ್ತಿದ್ದರೆ ಅಪಾಯಕಾರಿ ವಸ್ತುಗಳನ್ನು ಅವರ ಕೈಗೆಟುಕದಂತೆ ದೂರವಿರಿಸಿ.
ಇದನ್ನೂ ಓದಿ: ಚೆನ್ನಾಗಿ ನಿದ್ರೆ ಮಾಡುವುದು ನಿಮ್ಮ ಮಾನಸಿಕ ಸಮಸ್ಯೆಗಳಿಗೆ ಪರಿಹಾರವಂತೆ
ಅಡುಗೆ ಮನೆಯಲ್ಲಿ ಮಕ್ಕಳಿಗೆ ಆಹಾರ ಪದಾರ್ಥಗಳ ಬಗ್ಗೆ ತಿಳಿಸಿ ಕೊಡಿ:
ಯಾವ ಆಹಾರ ಪದಾರ್ಥವನ್ನು ಎಷ್ಟು ಹಾಕಬೇಕು, ಹೇಗೆ ಇಡಬೇಕು ಎಂಬುದನ್ನು ತಿಳಿಸಿ ಕೊಡಿ. ಇದರಿಂದ ಮಕ್ಕಳಿಗೆ ಆಹಾರ ಪದಾರ್ಥದ ತಿಳಿವಳಿಕೆ ಸಿಗುತ್ತದೆ. ಆಹಾರ ಪದಾರ್ಥಗಳನ್ನು ಹೇಗೆ ಬೆಳೆಯುತ್ತಾರೆ ಎಂಬ ಬಗ್ಗೆಯೂ ಹೇಳಿ ಕೊಡಿ. ಆಹಾರ ಪದಾರ್ಥಗಳ ಸೇವನೆ ನಮ್ಮ ಆರೋಗ್ಯ ಕಾಪಾಡುವ ಬಗ್ಗೆ ಹೇಳಿ. ಇದರಿಂದ ಕೆಲವು ಮಕ್ಕಳು ಊಟ ಮಡದೇ ಇರುವುದನ್ನು ತಪ್ಪಿಸಲು ಸಾಧ್ಯ. ಆಹಾರ ಪದಾರ್ಥಗಳ ಮಾಹಿತಿ ಮಗುವಿನಲ್ಲಿ ಊಟದ ಹಾಗೂ ತರಕಾರಿ ಸೇವನೆ ಬಗ್ಗೆ ಆಸಕ್ತಿ ಉಂಟು ಮಾಡಬಹುದು.
ನೈರ್ಮಲ್ಯವನ್ನು ಕಾಪಾಡಿ:
ಇದು ಕಾಳಜಿ ವಹಿಸಬೇಕಾದ ಮೊದಲ ಮತ್ತು ಪ್ರಮುಖ ಸುರಕ್ಷತಾ ಸಲಹೆ. ಅನೇಕ ಬಾರಿ ಮಕ್ಕಳು ಕೊಳಕು ಕೈಗಳಿಂದ ಅಡುಗೆ ಮನೆಯಲ್ಲಿ ಕೆಲಸ ಮಾಡಲು ಬರುತ್ತಾರೆ. ಹಣ್ಣು, ತರಕಾರಿಗಳನ್ನು ಸರಿಯಾಗಿ ತೊಳೆಯುವುದಿಲ್ಲ. ಇದರಿಂದ ನೀವು ಅನಾರೋಗ್ಯಕ್ಕೆ ಒಳಗಾಗಬಹುದು. ಆದ್ದರಿಂದ, ಮಗು ಅಡುಗೆ ಮನೆಯಲ್ಲಿ ಏನಾದರೂ ಕೆಲಸ ಮಾಡುತ್ತಿದ್ದರೆ ಮೊದಲು ಆಹಾರ ಪದಾರ್ಥಗಳನ್ನು ಚೆನ್ನಾಗಿ ತೊಳೆದು ಆನಂತರ ಬಳಸುವ ವಿಧಾನ ಕಲಿಸಿ. ಅಡುಗೆ ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳುವ ಬಗ್ಗೆ ಹೇಳಿ ಕೊಡಿ.
ಇದನ್ನೂ ಓದಿ: ಅಡುಗೆಗೆ ಮಾತ್ರವಲ್ಲ ಆರೋಗ್ಯ ಸಮಸ್ಯೆಗೂ ಪರಿಣಾಮಕಾರಿ ಪಲಾವ್ ಎಲೆ !
ಏಕಾಂಗಿಯಾಗಿ ಮಕ್ಕಳನ್ನು ಅಡುಗೆ ಮನೆಗೆ ಬಿಡಬೇಡಿ:
ಕೆಲವೊಮ್ಮೆ ನೀವು ಮಕ್ಕಳೊಂದಿಗೆ ಅಡುಗೆ ಮನೆಯಲ್ಲಿದ್ದಾಗ, ನೀವು ಇದ್ದಕ್ಕಿದ್ದಂತೆ ಕರೆ ಬಂದರೆ, ನೀವು ಅಡುಗೆ ಕೆಲಸವನ್ನು ಮಗುವಿಗೆ ಒಪ್ಪಿಸಿ, ಸ್ವಲ್ಪ ಸಮಯ ಹೊರಗೆ ಹೋಗುತ್ತೀರಿ. ಆದರೆ ಇದು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮಾರಕವಾಗಬಹುದು. ಆದ್ದರಿಂದ, ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಮಕ್ಕಳನ್ನು ಆಗಾಗ ಗಮನಿಸುತ್ತಿರಬೇಕು.
ಮನೆಯ ಎಲ್ಲ ಕೆಲಸಗಳಲ್ಲಿ ಮಕ್ಕಳನ್ನೂ ಭಾಗಿಯಾಗಿಸಿಕೊಳ್ಳುವುದು ಅತ್ಯುತ್ತಮ ದಾರಿ. ಬೇರೆ ಸಂದರ್ಭದಲ್ಲಾದರೆ ರಜೆಯೆಂದರೆ ಆಡಲು ಓಡುವ ಮಕ್ಕಳನ್ನು ಮನೆಯಲ್ಲೇ ಕೂರಿಸಿ ಏನಾದರೂ ಕೆಲಸ ಕಲಿಸುವುದು ಕಷ್ಟಸಾಧ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ