• Home
  • »
  • News
  • »
  • lifestyle
  • »
  • Parenting Tips: ಪೋಷಕರು ಮಕ್ಕಳನ್ನು ಮಲಗಿಸೋಕೆ ಬಳಸೋ ತಂತ್ರಗಳು ಅವರ ಬೆಳವಣಿಗೆ ಮೇಲೂ ಎಫೆಕ್ಟ್​ ಆಗುತ್ತಂತೆ

Parenting Tips: ಪೋಷಕರು ಮಕ್ಕಳನ್ನು ಮಲಗಿಸೋಕೆ ಬಳಸೋ ತಂತ್ರಗಳು ಅವರ ಬೆಳವಣಿಗೆ ಮೇಲೂ ಎಫೆಕ್ಟ್​ ಆಗುತ್ತಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Parents Sleep Techniques: ನವಜಾತ ಶಿಶುಗಳಿಗೆ ಅವುಗಳನ್ನು ಮಲಗಿಸುವುದೇ ಬೇಡ ಯಾವಾಗಲೂ ನಿದ್ರೆ ಮಾಡುತ್ತಿರುತ್ತವೆ. ನಂತರ ಬೆಳೆಯುತ್ತಾ ಬೆಳೆಯುತ್ತಾ ನಿದ್ರೆ ಕಡಿಮೆಯಾಗುತ್ತದೆ.

  • Trending Desk
  • 2-MIN READ
  • Last Updated :
  • Share this:

ಅಂತರರಾಷ್ಟ್ರೀಯ (International) ತಜ್ಞರ ತಂಡವು 14 ದೇಶಗಳ ವಿಭಿನ್ನ ಸಂಸ್ಕೃತಿಗಳಲ್ಲಿ ಪೋಷಕರು (Parents) ತಮ್ಮ ಮಕ್ಕಳನ್ನು (Children) ಮಲಗಿಸಲು ಬಳಸುವ ತಂತ್ರಗಳನ್ನು ಅಧ್ಯಯನ ಮಾಡಿದೆ ಮತ್ತು ಅವು ಮಗುವಿನ ಮನೋಧರ್ಮದ ಬೆಳವಣಿಗೆಯ (Development) ನಡುವೆ ಹೇಗೆ ಪರಸ್ಪರ ಸಂಬಂಧವನ್ನು ಹೊಂದಿದೆ ಎಂಬುದನ್ನು ಸಹ ಪ್ರಸ್ತುತಪಡಿಸಿದೆ. ಮಗು ಹುಟ್ಟಿದಾಗಿನಿಂದ ಪ್ರತಿ ಹಂತದಲ್ಲೂ ಬೆಳವಣಿಗೆ ಆಗುತ್ತಲೇ ಇರುತ್ತದೆ. ಈ ಬೆಳವಣಿಗೆಯಲ್ಲಿ ನಿದ್ರೆಯದ್ದು (Sleep) ಪ್ರಮುಖ ಪಾತ್ರ. ನಿದ್ರೆಯ ಕೊರತೆ ಬೆಳವಣಿಗೆ ಮೇಲೆ, ಪುಟ್ಟ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಭವಿಷ್ಯದಲ್ಲಿ ಮನೋರೋಗಕ್ಕೂ ಕಾರಣವಾಗಬಹುದು ಎನ್ನುತ್ತವೆ ಕೆಲವು ಸಂಶೋಧನೆಗಳು.


ಪೋಷಕರು ಮಕ್ಕಳನ್ನು ಮಲಗಿಸುವ ತಂತ್ರಗಳು ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ


ನವಜಾತ ಶಿಶುಗಳಿಗೆ ಅವುಗಳನ್ನು ಮಲಗಿಸುವುದೇ ಬೇಡ ಯಾವಾಗಲೂ ನಿದ್ರೆ ಮಾಡುತ್ತಿರುತ್ತವೆ. ನಂತರ ಬೆಳೆಯುತ್ತಾ ಬೆಳೆಯುತ್ತಾ ನಿದ್ರೆ ಕಡಿಮೆಯಾಗುತ್ತದೆ. ಸರಿಯಾದ ಸಮಯದ ನಿದ್ರೆಯ ವೇಳಾಪಟ್ಟಿ ಕಾಪಾಡಿಕೊಳ್ಳಲು ಮತ್ತು ಅವರನ್ನು ಯಾವುದೇ ಗಡಿಬಿಡಿಯಿಲ್ಲದೆ ಮಲಗುವಂತೆ ಮಾಡುವುದು ಪೋಷಕರಿಗೆ ಸವಾಲೇ ಸರಿ.


ಸುಲಭವಾಗಿ ಮಕ್ಕಳನ್ನು ಮಲಗಿಸಲು ಪೋಷಕರು ಅವರದ್ದೇ ಆದ ಕೆಲ ತಂತ್ರಗಳನ್ನು ರೂಪಿಸಿಕೊಳ್ಳುತ್ತಾರೆ. ಜೋಗುಳ ಹಾಡುವ ಮೂಲಕ, ಲಾಲಿ ಹಾಡುವ ಮೂಲಕ, ಅತ್ತಿಂದಿತ್ತ ಓಡಾಡಿಸುವ ಮೂಲಕ ಮಕ್ಕಳನ್ನು ಮಲಗಿಸಲಾಗುತ್ತದೆ. ಹೀಗೆ ಸ್ವಲ್ಪ ಹೊತ್ತು ಮಾಡುವುದರಿಂದ ಮಕ್ಕಳು ಸುಲಭವಾಗಿ ನಿದ್ರೆಗೆ ಜಾರಿ ಬಿಡುತ್ತವೆ.


ಇತ್ತೀಚಿನ ಅಧ್ಯಯನ ಪೋಷಕರು ಮಕ್ಕಳನ್ನು ಮಲಗಿಸುವ ಈ ಟೆಕ್ನಿಕ್‌ಗಳೇ ಅವರ ಮನೋಧರ್ಮ ಮತ್ತು ನಡವಳಿಕೆ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ.


"ಪೋಷಕರು ಅವರ ಮಕ್ಕಳನ್ನು ಮಲಗಿಸಲು ಕೈಗೊಳ್ಳುವ ನಿದ್ರಿಸುವ ತಂತ್ರಗಳು ಮಕ್ಕಳ ನಿದ್ರೆಯ ಗುಣಮಟ್ಟದೊಂದಿಗೆ ಪರಸ್ಪರ ಸಂಬಂಧ ಹೊಂದಿವೆ, ಮತ್ತು ಮಕ್ಕಳ ಬೆಳವಣಿಗೆಯಲ್ಲಿ ಸಾಂಸ್ಕೃತಿಕ ಸಂದರ್ಭದ ಪ್ರಾಮುಖ್ಯತೆಯನ್ನು ದೀರ್ಘಕಾಲ ಗುರುತಿಸಲಾಗಿದೆ" ಎಂದು ವಾಷಿಂಗ್ಟನ್ ಸ್ಟೇಟ್ ಯೂನಿವರ್ಸಿಟಿಯ ಲೇಖಕರಾದ Ms ಕ್ರಿಸ್ಟಿ ಫಾಮ್ ಹೇಳಿದ್ದಾರೆ.


ಫ್ರಾಂಟಿಯರ್ಸ್ ಇನ್ ಸೈಕಾಲಜಿಯಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಫಾಮ್ ಮತ್ತು ಅವರ ಸಹೋದ್ಯೋಗಿಗಳು 14 ಕಡೆ ಮಕ್ಕಳ ಮನೋಧರ್ಮದ ಮೇಲೆ ವಿಭಿನ್ನ ಪೋಷಕರು ಬಳಸುವ ತಂತ್ರಗಳ ಪರಿಣಾಮವನ್ನು ಅಧ್ಯಯನ ಮಾಡಿದ್ದಾರೆ. ಮಗು ನಿದ್ರಿಸಲು ಸಹಾಯ ಮಾಡುವ ನಿಷ್ಕ್ರಿಯ ವಿಧಾನಗಳು ಉದಾಹರಣೆಗೆ ಮುದ್ದಾಡುವುದು, ಹಾಡುವುದು ಮತ್ತು ಪುಸ್ತಕಗಳನ್ನು ಓದುವುದು ಇಂತಹುಗಳ ಮೂಲಕ ಮಗು ಸುಲಭವಾಗಿ ನಿದ್ರಿಸುತ್ತದೆ ಆದರೆ ಸಕ್ರೀಯ ವಿಧಾನಗಳು ಅಂದರೆ ಕಾರು-ಬೈಕಿನಲ್ಲಿ ತಿರುಗಾಡಿಸುವುದು ಈ ರೀತಿಯ ವಿಧಾನಗಳು ಮಗುವಿನ ಮನೋಧರ್ಮಕ್ಕೆ ಧನಾತ್ಮಕವಾಗಿರುವುದಿಲ್ಲ ಎಂದು ಅಧ್ಯಯನ ಹೇಳಿದೆ.


ಮಕ್ಕಳ ಮನೋಧರ್ಮ


ಮಕ್ಕಳ ಮನೋಧರ್ಮವನ್ನು, ಮಕ್ಕಳು ತಮ್ಮ ನಡವಳಿಕೆಯನ್ನು ನಿಯಂತ್ರಿಸುವ ಮತ್ತು ಅವರ ಭಾವನೆಗಳನ್ನು ನಿರ್ವಹಿಸುವ ರೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ. ಎಲ್ಲಾ ಮಕ್ಕಳು ಒಂದೊಂದು ರೀತಿಯ ಮನೋಧರ್ಮ ಹೊಂದಿರುತ್ತಾರೆ. ಈ ಮನೋಧರ್ಮ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರಬಹುದು.
ಸಂಶೋಧಕರು ಮೂರು ಪ್ರಮುಖ ಅಂಶಗಳಿಂದ ಮನೋಧರ್ಮವನ್ನು ವ್ಯಾಖ್ಯಾನಿಸಿದ್ದಾರೆ. ಮೊದಲನೆಯದು ಸರ್ಜೆನ್ಸಿ (SUR), ಇದು ನಗು, ವಿಧಾನ ಪ್ರವೃತ್ತಿಗಳು, ಚಟುವಟಿಕೆ ಮತ್ತು ಉತ್ಸಾಹದಂತಹ ಧನಾತ್ಮಕ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ. ಎರಡನೆಯದು ಋಣಾತ್ಮಕ ಭಾವನಾತ್ಮಕತೆ (NE), ಇದು ಭಯ, ಕೋಪ, ದುಃಖ, ಮತ್ತು ಅಸ್ವಸ್ಥತೆಯನ್ನು ಉಂಟುಮಾಡುವ ಸಂದರ್ಭಗಳನ್ನು ಪ್ರತಿಬಿಂಬಿಸಿದರೆ, ಮೂರನೆಯದು ಪ್ರಯತ್ನದ ನಿಯಂತ್ರಣ (EC), ಗಮನ ಆಧಾರಿತ ನಿಯಂತ್ರಕ ಕೌಶಲ್ಯಗಳು ಮತ್ತು ಶಾಂತ ಚಟುವಟಿಕೆಗಳ ಆನಂದವನ್ನು ಒಳಗೊಂಡಂತೆ ಒಟ್ಟಾರೆ ಭಾವನೆಯನ್ನು ಸೆರೆಹಿಡಿಯುತ್ತದೆ.


ಇದನ್ನೂ ಓದಿ: ಈ 5 ಬೀಜಗಳಿದ್ರೆ ಸಾಕು ಪೋಷಕಾಂಶಗಳ ಕೊರತೆ ಆಗಲ್ಲ


14 ದೇಶಗಳಲ್ಲಿ ಅಧ್ಯಯನ


ಅಂತರರಾಷ್ಟ್ರೀಯ ಸಂಶೋಧಕರ ಗುಂಪು ಬೆಲ್ಜಿಯಂ, ಬ್ರೆಜಿಲ್, ಚಿಲಿ, ಚೀನಾ, ಫಿನ್‌ಲ್ಯಾಂಡ್, ಇಟಲಿ, ಮೆಕ್ಸಿಕೊ, ನೆದರ್‌ಲ್ಯಾಂಡ್ಸ್, ರೊಮೇನಿಯಾ, ರಷ್ಯಾ, ಸ್ಪೇನ್, ದಕ್ಷಿಣ ಕೊರಿಯಾ, ಟರ್ಕಿ ಮತ್ತು ಯುಎಸ್ ಸೇರಿ 14 ದೇಶಗಳಲ್ಲಿ 841 ಪೋಷಕರಿಗೆ ಬಾಲ್ಯದ ನಡವಳಿಕೆ ಬಗ್ಗೆ ಕೇಳಲಾಯಿತು. 17 ಮತ್ತು 40 ತಿಂಗಳ ವಯಸ್ಸಿನ ನಡುವಿನ ಮಕ್ಕಳ ಮನೋಧರ್ಮ ಮತ್ತು ಅವರ ಪೋಷಕರ ನಿದ್ರೆ ತಂತ್ರಗಳ ಬಗ್ಗೆ ಕ್ರಮವಾಗಿ ವರದಿ ಮಾಡಲು ಅವರನ್ನು ಕೇಳಲಾಯಿತು.


ಸಕ್ರಿಯ ಮತ್ತು ನಿಷ್ಕ್ರಿಯ ನಿದ್ರೆ


ಬೇರೆ ಬೇರೆ ದೇಶಗಳಲ್ಲಿ, ನಿದ್ರೆ-ಪೋಷಕ ವಿಧಾನಗಳಲ್ಲಿನ ವ್ಯತ್ಯಾಸಗಳು ವಿಭಿನ್ನ ಮನೋಧರ್ಮದ ಗುಣಲಕ್ಷಣಗಳೊಂದಿಗೆ ಸಂಬಂಧಿಸಿವೆ ಎಂದು ಅಧ್ಯಯನ ಕಂಡುಕೊಂಡಿದೆ. "ಪೋಷಕರು ಕೈಗೊಳ್ಳುವ ನಿದ್ರೆ ತಂತ್ರಗಳು ಅವರ ಮಗುವಿನ ಮನೋಧರ್ಮದ ಗುಣಲಕ್ಷಣಗಳೊಂದಿಗೆ ಗಣನೀಯವಾಗಿ ಸಂಬಂಧಿಸಿವೆ ಎಂದು ನಮ್ಮ ಅಧ್ಯಯನವು ತೋರಿಸುತ್ತದೆ, ಇದು ಅವರ ಬೆಳವಣಿಗೆಯ ಮೇಲೆ ಸಂಭಾವ್ಯ ಪರಿಣಾಮ ಬೀರುತ್ತದೆ" ಎಂದು ಫಾಮ್ ಹೇಳಿದರು


ನಿಷ್ಕ್ರಿಯ ನಿದ್ರೆ-ಪೋಷಕ ತಂತ್ರಗಳು ಸಂಸ್ಕೃತಿಯ ಮಟ್ಟದಲ್ಲಿ ಕಡಿಮೆ ಋಣಾತ್ಮಕ ಭಾವನಾತ್ಮಕತೆ (NE) ಮತ್ತು ಹೆಚ್ಚಿನ SUR ಮತ್ತು ವೈಯಕ್ತಿಕ ಮಟ್ಟದಲ್ಲಿ ಹೆಚ್ಚಿನ EC ಯೊಂದಿಗೆ ಸಂಬಂಧ ಹೊಂದಿವೆ. ಸಕ್ರಿಯ ನಿದ್ರೆ-ಪೋಷಕ ತಂತ್ರಗಳು ವೈಯಕ್ತಿಕ ಮಟ್ಟದಲ್ಲಿ ಮಾತ್ರ ಹೆಚ್ಚಿನ NE ಯೊಂದಿಗೆ ಸಂಬಂಧ ಹೊಂದಿವೆ ಎಂದು ಅಧ್ಯಯನ ಹೇಳಿದೆ.


ಇದನ್ನೂ ಓದಿ: ಟವೆಲ್​ ಸಣ್ಣ ಇದ್ರೂ ಕ್ಲೀನ್ ಮಾಡೋದು ಕಷ್ಟ ಅಂತೀರಾ? ಇಲ್ಲಿದೆ ನೋಡಿ ಸೂಪರ್ ಟಿಪ್ಸ್


ಯುಎಸ್‌, ಫಿನ್‌ಲ್ಯಾಂಡ್ ಮತ್ತು ನೆದರ್‌ಲ್ಯಾಂಡ್‌ಗಳು ನಿಷ್ಕ್ರಿಯ ತಂತ್ರಗಳನ್ನು ಬಳಸುವ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ದಕ್ಷಿಣ ಕೊರಿಯಾ, ಟರ್ಕಿ ಮತ್ತು ಚೀನಾ ನಂತರ ಇವೆ. ಇನ್ನೂ ಸಕ್ರಿಯ ತಂತ್ರಗಳಲ್ಲಿ ರೊಮೇನಿಯಾ, ಸ್ಪೇನ್ ಮತ್ತು ಚಿಲಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಟರ್ಕಿ, ಇಟಲಿ ಮತ್ತು ಬೆಲ್ಜಿಯಂ ನಂತರ ಇವೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ.

Published by:Sandhya M
First published: