• Home
  • »
  • News
  • »
  • lifestyle
  • »
  • Cough Syrup: ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡುವಾಗ ಈ ವಿಷಯಗಳ ನಿರ್ಲಕ್ಷ್ಯ ಬೇಡ

Cough Syrup: ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡುವಾಗ ಈ ವಿಷಯಗಳ ನಿರ್ಲಕ್ಷ್ಯ ಬೇಡ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಭಾರತದಲ್ಲಿ ಮೇಡನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ನಾಲ್ಕು ಕೆಮ್ಮು ಸಿರಪ್‌ಗಳಿಂದ ಉಂಟಾಗುವ ಅಪಾಯಗಳ ಬಗೆಗಿನ ಎಚ್ಚರಿಕೆಯು ಭಾರತೀಯ ಪೋಷಕರಲ್ಲಿ ಭೀತಿಯನ್ನು ಸಹ ಸೃಷ್ಟಿಸಿದೆ. ಮಕ್ಕಳ ಔಷಧಿಗಳ ಬಗ್ಗೆ ತುಂಬಾ ಸೂಕ್ಷ್ಮತೆ, ಎಚ್ಚರಿಕೆ ವಹಿಸಬೇಕು.

  • Share this:

ಭಾರತದಲ್ಲಿ ಮೇಡನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ನಾಲ್ಕು ಕೆಮ್ಮು ಮತ್ತು ಶೀತ ಸಿರಪ್‌ಗಳ ಔಷಧಿಗಳ (Syrups) ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಕೆ ನೀಡಿದೆ. ಆಫ್ರಿಕನ್ ದೇಶವಾದ ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಸಂಬಂಧಿಸಿರಬಹುದು ಎಂದು ಎಚ್ಚರಿಸಿದೆ. ಕೆಮ್ಮು ಸಿರಪ್‌ಗಳಿಂದ ಉಂಟಾಗುವ ಅಪಾಯಗಳ (Danger) ಬಗೆಗಿನ ಎಚ್ಚರಿಕೆಯು ಭಾರತೀಯ ಪೋಷಕರಲ್ಲಿ (Parents) ಭೀತಿಯನ್ನು ಸಹ ಸೃಷ್ಟಿಸಿದೆ. ಮಕ್ಕಳ ಔಷಧಿಗಳ ಬಗ್ಗೆ ತುಂಬಾ ಸೂಕ್ಷ್ಮತೆ, ಎಚ್ಚರಿಕೆ ವಹಿಸಬೇಕು. ಇದಕ್ಕೆ ಸಂಬಂಧಿಸಿದಂತೆ ನವಿ ಮುಂಬೈನ ಅಪೋಲೋ ಆಸ್ಪತ್ರೆಗಳ ಶಿಶುವೈದ್ಯ ಡಾ.ಅಭಿಜಿತ್ ಬಾಗ್ಡೆ ಅವರು ಮಕ್ಕಳಿಗೆ (Children) ನೀಡುವ ಔಷಧಿಗಳನ್ನು ಒಳಗೊಂಡ ಪ್ರೋಟೋಕಾಲ್‌ಗಳ ಕುರಿತು ಸಲಹೆ ನೀಡಿದ್ದಾರೆ.


ಮಕ್ಕಳಿಗೆ ಕೆಮ್ಮು ಸಿರಪ್ ನೀಡುವಾಗ ಗಮನಿಸಬೇಕಾದ ವಿಷಯಗಳು
1) ಬಳಕೆ ಸರಿಯಾಗಿದ್ದರೆ ಔಷಧಗಳು ಸುರಕ್ಷಿತ: ಔಷಧಿಗಳನ್ನು ಮಾರುಕಟ್ಟೆಗೆ ತರುವ ಮೊದಲು, ವ್ಯಾಪಕವಾದ ಸುರಕ್ಷತಾ ಪ್ರಯೋಗಗಳನ್ನು ನಡೆಸಲಾಗುತ್ತದೆ. ಕೆಮ್ಮು ಸಿರಪ್ ಬಳಕೆಯಿಂದ ಗಂಭೀರವಾದ ಅಡ್ಡಪರಿಣಾಮಗಳು ಉಂಟಾಗುವುದು ತುಂಬಾ ಅಪರೂಪ. ಹೀಗಿದ್ದರೂ ಗ್ಯಾಂಬಿಯಾದಲ್ಲಿ ಉಂಟಾದ ಅವಘಡ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಈ ಪ್ರಕರಣ ಭಾರತದಲ್ಲಿ ವೈದ್ಯರು ಮತ್ತು ಚಿಕಿತ್ಸಾ ವಿಧಾನಗಳಲ್ಲಿ ಜನ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ.


ಹೀಗಾಗಿ ಇದಕ್ಕೆ ಪ್ರತಿಕ್ರಿಯೆ ನೀಡಿದ ಡಾ.ಅಭಿಜಿತ್ ಬಾಗ್ಡೆ ವೈದ್ಯರು ಮತ್ತು ಔಷಧಗಳ ಬಗ್ಗೆ ನಂಬಿಕೆಯನ್ನು ಕಳೆದುಕೊಳ್ಳಬಾರದು. ಸ್ವತಃ ವೈದ್ಯರೂ ಕೂಡ ತಮ್ಮ ಸ್ವಂತ ಕುಟುಂಬ ಮತ್ತು ಮಕ್ಕಳಿಗೆ ಅದೇ ಔಷಧವನ್ನು ನೀಡುತ್ತಾರೆ. ಬಳಕೆ ಸರಿಯಾಗಿದ್ದರೆ ಔಷಧಗಳು ಸುರಕ್ಷಿತ ಎಂದಿದ್ದಾರೆ.


2) ಕೆಮ್ಮಿನ ಕಾರಣ ಮತ್ತು ಸ್ಥಳವನ್ನು ನಿರ್ಣಯಿಸುವುದು ಅತ್ಯಗತ್ಯ: ಒಟ್ಟಾರೆ ಯಾವುದೋ ಔಷಧಿಯನ್ನು ಇನ್ಯಾವುದಕ್ಕೋ ಕೊಡಬಾರದು. ಸಿರಪ್‌ ನೀಡುವ ಮುನ್ನ ಕೆಮ್ಮಿನ ಕಾರಣ ಮತ್ತು ಸ್ಥಳವನ್ನು ನಿರ್ಣಯಿಸಬೇಕು. ಕೆಮ್ಮು ವಾಯುಮಾರ್ಗಗಳು, ಗಂಟಲು ಮತ್ತು ಶ್ವಾಸಕೋಶದ ರಕ್ಷಣಾತ್ಮಕ ಪ್ರತಿಫಲಿತವಾಗಿದೆ. ಯಾವುದೇ ಸ್ರವಿಸುವಿಕೆ ಅಥವಾ ಸೋಂಕು ಇದ್ದರೆ ಕೆಮ್ಮು ಸಕ್ರಿಯಗೊಳ್ಳುತ್ತದೆ. ಜ್ವರ, ಉಸಿರಾಟದ ತೊಂದರೆ, ಶೀತ ಮತ್ತು ಧ್ವನಿ ಬದಲಾವಣೆಯೊಂದಿಗೆ ಕೆಮ್ಮು ಕೂಡ ಸಂಬಂಧಿಸಿದೆ.


ಇದನ್ನೂ ಓದಿ: Birth Weight: ನವಜಾತ ಶಿಶುಗಳ ತೂಕದಲ್ಲಿ ಈ ವ್ಯತ್ಯಾಸ ಆದ್ರೆ ಅಪಾಯ ಗ್ಯಾರಂಟಿಯಂತೆ


ಗಂಟಲಿನಲ್ಲಿ ಏನಾದರೂ ಸಿಕ್ಕಿಹಾಕಿಕೊಂಡರೆ ಅಥವಾ ಮಗುವು ಅನೇಕ ವಾಯುಗಾಮಿ ಉದ್ರೇಕಕಾರಿ ಅಂಶಗಳನ್ನು ಹೊಂದಿರುವ ಪ್ರದೇಶದಲ್ಲಿದ್ದರೆ ಕೆಮ್ಮು ಸಂಭವಿಸಬಹುದು. ಈ ಹೆಚ್ಚುವರಿ ರೋಗಲಕ್ಷಣಗಳಲ್ಲಿ ಯಾವುದು ಮತ್ತು ಮಗುವಿನ ದೈಹಿಕ ಪರೀಕ್ಷೆಯ ಜೊತೆಗೆ ಸೋಂಕಿನ ಸ್ಥಳದ ಬಗ್ಗೆ ರೋಗನಿರ್ಣಯವನ್ನು ಮಾಡಲಾಗುತ್ತದೆ. ಮಗುವಿಗೆ ಗಂಟಲಿನ ಸೋಂಕು, ಧ್ವನಿಪೆಟ್ಟಿಗೆ ಸೋಂಕು ಅಥವಾ ವಾಯುಮಾರ್ಗ ಅಥವಾ ಶ್ವಾಸಕೋಶದ ಸೋಂಕು ಇದೆಯೇ ಎಂಬುದನ್ನು ನಿರ್ಧರಿಸಿ ಔಷಧಿ ನೀಡಬೇಕು ಎನ್ನುತ್ತಾರೆ ವೈದ್ಯರು.


3) ಸೋಂಕಿನ ಪ್ರಕಾರಕ್ಕೆ ಅನುಗುಣವಾಗಿ ಕೆಮ್ಮಿನ ಸಿರಪ್‌ಗಳನ್ನು ತೆಗೆದುಕೊಳ್ಳಿ: ಕೆಮ್ಮು ಗುಣಮುಖವಾಗಲೆಂದು ಸುಮ್ಮನೆ ಕಣ್ಮುಚ್ಚಿಕೊಂಡು ಔಷಧಿಗಳನ್ನು ತೆಗೆದುಕೊಳ್ಳಬಾರದು. ಎಲ್ಲಾ ಔಷಧಿಗಳಂತೆ, ಕೆಮ್ಮಿನ ಸಿರಪ್ಗಳನ್ನು ಸಮಸ್ಯೆಯ ಆಧಾರದ ಮೇಲೆಯೇ ತೆಗೆದುಕೊಳ್ಳಬೇಕು.


ಸಾಮಾನ್ಯವಾಗಿ ಸೂಚಿಸಲಾಗುವ ಕೆಮ್ಮು ಸಿರಪ್‌ಗಳು ಆಂಟಿಹಿಸ್ಟಮೈನ್‌ಗಳಾಗಿವೆ, ಇದು ಎಲ್ಲಾ ವಯಸ್ಸಿನವರಿಗೆ ಸುರಕ್ಷಿತವಾಗಿದೆ. ಎರಡನೇ ವರ್ಗದ ಔಷಧಗಳು ಕೆಮ್ಮು ನಿವಾರಕಗಳಾಗಿವೆ, ಇದು ಎರಡು ವರ್ಷದೊಳಗಿನ ಮಕ್ಕಳಿಗೆ ಶಿಫಾರಸು ಮಾಡಲಾಗುವುದಿಲ್ಲ.


ಅವುಗಳನ್ನು ಶಿಫಾರಸು ಮಾಡಲಾಗದಿದ್ದರೂ ತುರ್ತು ಸಂದರ್ಭದಲ್ಲಿ ನೀಡಬಹುದು.. ಈ ಎರಡೂ ಔಷಧಿಗಳು ಸುಲಭವಾಗಿ ಲಭ್ಯವಿರುತ್ತವೆ ಮತ್ತು ರೋಗಲಕ್ಷಣದ ಪರಿಹಾರವನ್ನು ನೀಡುತ್ತವೆ. ಆದರೆ ಮುಖ್ಯವಾಗಿ ನಾವಿಲ್ಲಿ ತಿಳಿಯಬೇಕಾದದ್ದು ಸೋಂಕಿನ ಪ್ರಕಾರಕ್ಕೆ ಅನುಗುಣವಾಗಿ ಕೆಮ್ಮಿನ ಸಿರಪ್‌ಗಳನ್ನು ತೆಗೆದುಕೊಳ್ಳುವುದು ಎನ್ನುತ್ತಾರೆ ವೈದ್ಯರು.


4) ಸೋಂಕಿನ ಮೇಲೆ ಚಿಕಿತ್ಸೆ ಕೇಂದ್ರೀಕರಿಸಿ: ರೋಗಲಕ್ಷಣದ ಪರಿಹಾರದ ಹೊರತಾಗಿ, ಸೋಂಕಿನ ಮೇಲೆ ಚಿಕಿತ್ಸೆ ಕೇಂದ್ರೀಕರಿಸುವುದು ಮುಖ್ಯವಾಗಿದೆ. ಕೆಮ್ಮನ್ನು ಕಡಿಮೆ ಮಾಡಲು ಕೆಮ್ಮು ಸಿರಪ್ ಅನ್ನು ಸರಳವಾಗಿ ಸೇವಿಸುವುದರಿಂದ ಸಮಸ್ಯೆಯ ಮೂಲವನ್ನು ಗುಣಪಡಿಸುವುದಿಲ್ಲ.


ಇದನ್ನೂ ಓದಿ:  Child Care: 1 ವರ್ಷ ಆಗೋಕೆ ಮೊದ್ಲೆ ಮಕ್ಕಳಿಗೆ ಈ ಆಹಾರಗಳನ್ನು ಕೊಡಲೇಬೇಡಿ


ಉದಾಹರಣೆಗೆ, ಕಫವಿದ್ದರೆ ಶ್ವಾಸನಾಳವನ್ನು ಸ್ವಚ್ಛಗೊಳಿಸಲು ಬ್ರಾಂಕೋಡಿಲೇಟರ್ಗಳನ್ನು ನೀಡಲಾಗುತ್ತದೆ. ಬ್ಯಾಕ್ಟೀರಿಯಾದ ಸೋಂಕು ಇದ್ದರೆ, ಪ್ರತಿಜೀವಕಗಳನ್ನು ತೆಗೆದುಕೊಳ್ಳಬೇಕು. ವೈದ್ಯರ ಪ್ರಿಸ್ಕ್ರಿಪ್ಷನ್ ಆಧರಿಸಿ ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳುವುದು ಮುಖ್ಯ. ಅಲ್ಲದೆ, ಸೂಚಿಸಿದ ಔಷಧಿಗಳನ್ನು ಏಕಾಏಕಿ ನಿಲ್ಲಿಸಬಾರದು ಮತ್ತು ಸಂಪೂರ್ಣ ಕೋರ್ಸ್ ಅನ್ನು ಪೂರ್ಣಗೊಳಿಸಬೇಕು ಎನ್ನುತ್ತಾರೆ ವೈದ್ಯರು.

Published by:Ashwini Prabhu
First published: