ಕ್ರಿಸ್ಮಸ್ ಹಬ್ಬ (Christmas Celebration) ಬಂತು ಎಂದರೆ ಸಾಕು ಮನೆಯಲ್ಲಿ ಮಕ್ಕಳು ಕ್ರಿಸ್ಮಸ್ ಟ್ರೀ (Tree) ಅನ್ನು ಇರಿಸಿ ಅದಕ್ಕೆ ಚಿಕ್ಕ ಚಿಕ್ಕ ಬಣ್ಣ ಬಣ್ಣದ ಬಾಲ್ ಗಳನ್ನು ಮತ್ತು ಚಿಕ್ಕ ಚಿಕ್ಕ ಉಡುಗೊರೆಯ (Gift) ಬಾಕ್ಸ್ ಗಳನ್ನು ಕ್ರಿಸ್ಮಸ್ ಟ್ರೀ ಯ ಕೊಂಬೆಗಳಲ್ಲಿ ನೇತಾಕಿ ತುಂಬಾನೇ ಚೆನ್ನಾಗಿ ಕಾಣುವಂತೆ ಅಲಂಕಾರ ಮಾಡುವುದನ್ನು ನಾವೆಲ್ಲಾ ನೋಡಿರುತ್ತೇವೆ. ಅದರಲ್ಲೂ ಮನೆಯಲ್ಲಿ ಚಿಕ್ಕ ಮಕ್ಕಳು ಇದ್ರಂತೂ ಮುಗಿದೇ ಹೋಯಿತು, ಆ ಎಲ್ಲಾ ಆಟಿಕೆಗಳನ್ನು ಬಾಯಲ್ಲಿ ಹಾಕಿಕೊಂಡು ಮನೆಯೆಲ್ಲಾ ಸುತ್ತಾಡುತ್ತಿರುತ್ತವೆ. ಕ್ರಿಸ್ಮಸ್ ಟ್ರೀ ಅನ್ನು ಅಲಂಕಾರ ಮಾಡಬೇಕು ಆ ಆಟಿಕೆಗಳನ್ನ (Toys) ಕೊಡು ಅಂತ ತಂದೆ ತಾಯಂದಿರು ಎಷ್ಟೇ ಗೊಗೆರೆದರೂ ಸಹ ಮಕ್ಕಳು ಕಿವಿಯ ಮೇಲೆ ಆ ಮಾತನ್ನು ಹಾಕಿಕೊಳ್ಳುವುದೇ ಇಲ್ಲ. ಆದರೆ ಪೋಷಕರಿಗೆ (Parents) ಎಲ್ಲಿ ಆ ಮಕ್ಕಳು (Children) ಆ ಚಿಕ್ಕ ಪುಟ್ಟ ಆಟಿಕೆಗಳನ್ನು ಬಾಯಲ್ಲಿ ಹಾಕಿಕೊಂಡು ನುಂಗಿ ಬಿಡುತ್ತವೆ ಅನ್ನೋ ಆತಂಕ.
ಮಕ್ಕಳು ಆಟಿಕೆಗಳನ್ನು ನುಂಗುವ ಬಗ್ಗೆ ಪೋಷಕರನ್ನು ಎಚ್ಚರಿಸಿದ್ದಾರೆ ವೈದ್ಯರು
ಹೌದು., ಮನೆಯಲ್ಲಿರುವ ಮಕ್ಕಳು ಕೈಗೆ ಸಿಕ್ಕಿದ್ದೆಲ್ಲವನ್ನು ಬಾಯಿಗೆ ಹಾಕಿಕೊಳ್ಳುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಆದರೆ ಕೆಲವೊಮ್ಮೆ ಅದು ಬಾಯಿಂದ ಗಂಟಲಿಗೆ ಇಳಿದರೆ ಕಷ್ಟ. ಅದಕ್ಕೆ ವೈದ್ಯರು ಕ್ರಿಸ್ಮಸ್ ಉಡುಗೊರೆಗಳಿಂದ ಹಿಡಿದು ಪಟಾಕಿಗಳವರೆಗೆ ಮಕ್ಕಳು ಈ ಸಣ್ಣ ಪುಟ್ಟ ವಸ್ತುಗಳನ್ನು ನುಂಗುವ ಅಪಾಯಗಳ ಬಗ್ಗೆ ಪೋಷಕರಿಗೆ ಎಚ್ಚರಿಕೆ ನೀಡಲಾಗಿದೆ.
ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಕಳೆದ 10 ವರ್ಷಗಳಲ್ಲಿ ಈ ರೀತಿಯ ಸಣ್ಣ ಪುಟ್ಟ ವಸ್ತುಗಳನ್ನು ಸೇವಿಸಿದ ನಂತರ ಆಸ್ಪತ್ರೆಗೆ ದಾಖಲಾದ ಮಕ್ಕಳ ಸಂಖ್ಯೆ 228 ಕ್ಕೆ ದ್ವಿಗುಣಗೊಂಡಿದೆ ಎಂದು ಪ್ರಮುಖ ಎನ್ಎಚ್ಎಸ್ ವೈದ್ಯರು ತಿಳಿಸಿದ್ದಾರೆ.
ಬಟನ್ ಬ್ಯಾಟರಿಗಳು, ಮ್ಯಾಗ್ನೆಟಿಕ್ ಬಾಲ್ ಗಳು ಮತ್ತು ಕ್ರಿಸ್ಮಸ್ ಕ್ರ್ಯಾಕರ್ ಆಟಿಕೆಗಳು ಸೇರಿದಂತೆ ವಸ್ತುಗಳನ್ನು ತೆಗೆದು ಹಾಕಲು ಶಸ್ತ್ರಚಿಕಿತ್ಸಕರು ಜೀವ ಉಳಿಸುವ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದರ ಪರಿಣಾಮವಾಗಿ ಕೆಲವು ಮಕ್ಕಳು ಸಾವನ್ನಪ್ಪಿದ್ದಾರೆ ಕೂಡ ಎಂದು ಹೇಳಿದ್ದಾರೆ.
ಯಾವೆಲ್ಲಾ ಆಟಿಕೆಗಳು ಮಕ್ಕಳಿಗೆ ಡೆಂಜರ್
ಉಡುಗೊರೆಗಳಲ್ಲಿ ಬಳಸಲಾಗುವ "ಸಣ್ಣ ಬಟನ್ ಬ್ಯಾಟರಿಗಳು" ಮತ್ತು ಕ್ರಿಸ್ಮಸ್ ದೀಪಗಳು, ಟಿವಿ ರಿಮೋಟ್ ಗಳು ಮತ್ತು ಗ್ರೀಟಿಂಗ್ಸ್ ಕಾರ್ಡ್ ಗಳು ಸಹ ಹೆಚ್ಚಿನ ಹಾನಿಯನ್ನು ಉಂಟು ಮಾಡುವ ಸಣ್ಣ ವಸ್ತುಗಳಲ್ಲಿ ಸೇರಿವೆ.
"ವರ್ಷದ ಈ ಸಮಯವು ಕುಟುಂಬಗಳು ಒಟ್ಟಿಗೆ ಸೇರುವುದರಿಂದ ಸಂತೋಷದ ಸಮಯವಾಗಿದೆ. ಯಾರೊಬ್ಬ ಪೋಷಕರು ಸಹ ತಮ್ಮ ಮಕ್ಕಳು ಕ್ರಿಸ್ಮಸ್ ಹಬ್ಬದ ದಿನ ಆಸ್ಪತ್ರೆಯಲ್ಲಿನ ಬೆಡ್ ಮೇಲೆ ಮಲಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಅಂತ ಬಯಸುವುದಿಲ್ಲ. ಆದ್ದರಿಂದಲೇ ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಈ ಆಟಿಕೆಗಳ ಬಗ್ಗೆ ಆಗಾಗ್ಗೆ ಎಚ್ಚರಿಸುತ್ತಲೇ ಇರುತ್ತಾರೆ" ಎಂದು ಎನ್ಎಚ್ಎಸ್ ರಾಷ್ಟ್ರೀಯ ಕ್ಲಿನಿಕಲ್ ನಿರ್ದೇಶಕ ಪ್ರೊ. ಸೈಮನ್ ಕೆನ್ನಿ ಹೇಳಿದರು.
"ಈ ಬ್ಯಾಟರಿಗಳು ಮತ್ತು ಇತರ ಸಣ್ಣ ವಸ್ತುಗಳು ಕ್ರಿಸ್ಮಸ್ ಉಡುಗೊರೆಗಳು, ದೀಪಗಳು ಮತ್ತು ರಿಮೋಟ್ ಕಂಟ್ರೋಲ್ ಗಳಂತಹ ಇತರ ದೈನಂದಿನ ವಸ್ತುಗಳ ಭಾಗವಾಗಿದೆ ಎಂದು ನಮಗೆ ತಿಳಿದಿದೆ, ಆದರೆ ಸಡಿಲ ಬ್ಯಾಟರಿಗಳು ಸುರಕ್ಷಿತವಾಗಿ ಕೈಗೆಟುಕದಂತೆ ಮತ್ತು ಯಾವುದೇ ಉಡುಗೊರೆಗಳು ಬ್ಯಾಟರಿಗಳನ್ನು ಸ್ಕ್ರೂಡ್ ಆಗಿರುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ತಮ್ಮ ಮಕ್ಕಳನ್ನು ಸಾಧ್ಯವಾದಷ್ಟು ಸುರಕ್ಷಿತವಾಗಿಡುವಂತೆ ನಾನು ಪೋಷಕರನ್ನು ಒತ್ತಾಯಿಸುತ್ತೇನೆ" ಎಂದು ಅವರು ಹೇಳಿದರು.
ಚಿಕ್ಕ ಗಾತ್ರದ ಬ್ಯಾಟರಿಗಳನ್ನು ನುಂಗಿದರೆ ಮಗುವಿನ ಗಂಟಲು, ಅನ್ನ ನಾಳ ಅಥವಾ ಇತರ ಆಂತರಿಕ ದೇಹದ ಭಾಗಗಳ ಮೂಲಕ ಅತ್ಯಂತ ಸುಡುವಿಕೆಗೆ ಕಾರಣವಾಗಬಹುದು, ಇದು ಸರಿಪಡಿಸಲಾಗದ ಹಾನಿಯನ್ನು ಉಂಟು ಮಾಡುತ್ತದೆ ಎಂದು ಎನ್ಎಚ್ಎಸ್ ಹೇಳಿದೆ.
ಏನ್ ಹೇಳುತ್ತೇ ‘ಚೈಲ್ಡ್ ಆ್ಯಕ್ಸಿಡೆಂಟ್ ಪ್ರಿವೆನ್ಷನ್ ಟ್ರಸ್ಟ್’
ಚೈಲ್ಡ್ ಆ್ಯಕ್ಸಿಡೆಂಟ್ ಪ್ರಿವೆನ್ಷನ್ ಟ್ರಸ್ಟ್ ಪ್ರಕಾರ, ಯುಕೆಯಲ್ಲಿ ವರ್ಷಕ್ಕೆ ಒಬ್ಬರಿಂದ ಇಬ್ಬರು ಮಕ್ಕಳು ಬ್ಯಾಟರಿಗಳನ್ನು ನುಂಗುವುದರಿಂದ ಸಾಯುತ್ತಾರೆ ಎಂದಿದೆ. 2011-12ರಲ್ಲಿ 115 ರಷ್ಟಿದ್ದ15 ವರ್ಷದೊಳಗಿನ ಮಕ್ಕಳ ಸಂಖ್ಯೆ 2021-22ರಲ್ಲಿ 228ಕ್ಕೆ ಏರಿಕೆಯಾಗಿದೆ. ರಾಯಲ್ ಸೊಸೈಟಿ ಫಾರ್ ದಿ ಪ್ರಿವೆನ್ಷನ್ ಆಫ್ ಆ್ಯಕ್ಸಿಡೆಂಟ್ಸ್ ನ ಸಾರ್ವಜನಿಕ ಆರೋಗ್ಯ ಸಲಹೆಗಾರ ಆಶ್ಲೇ ಮಾರ್ಟಿನ್ ಮಾತನಾಡಿ "ಕ್ರಿಸ್ಮಸ್ನಲ್ಲಿ ಎಲ್ಲರೂ ಬ್ಯುಸಿ ಆಗಿರುತ್ತಾರೆ ಹೀಗಾಗಿ ನಾವು ಕುಟುಂಬಗಳನ್ನು ಜಾಗರೂಕರಾಗಿರಲು ಮತ್ತು ಈ ಉತ್ಪನ್ನಗಳನ್ನು ಸಣ್ಣ ಮಕ್ಕಳ ಕೈಗೆಟುಕದಂತೆ ಇರಿಸಲು ಎಚ್ಚರಿಸುತ್ತಲೇ ಇರುತ್ತೇವೆ” ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ