• Home
  • »
  • News
  • »
  • lifestyle
  • »
  • Parenting: ಮಕ್ಕಳಿಲ್ಲದವರನ್ನು ದೂರ ಮಾಡದಿರಿ, ಅವರಲ್ಲೂ ಭಾವನೆಗಳಿವೆ ಎಂಬುವುದನ್ನು ಮರೆಯದಿರಿ!

Parenting: ಮಕ್ಕಳಿಲ್ಲದವರನ್ನು ದೂರ ಮಾಡದಿರಿ, ಅವರಲ್ಲೂ ಭಾವನೆಗಳಿವೆ ಎಂಬುವುದನ್ನು ಮರೆಯದಿರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Parenting Mentality: ಮಕ್ಕಳಿರುವ ಪೋಷಕರು ಅದೇ ರೀತಿಯ ಇತರೆ ಪೋಷಕರನ್ನು ಹೆಚ್ಚು ಕರುಣಾಮಯಿಗಳೆಂದು ಹಾಗೂ ಮಾನಸಿಕವಾಗಿ ಹೆಚ್ಚು ಪ್ರಬುದ್ಧರಾಗಿರುವರೆಂದು ಪರಿಗಣಿಸುತ್ತಾರೆ. ಇದೇ ದೃಷ್ಟಿಕೋನವನ್ನು ಅವರು ಮಕ್ಕಳಿಲ್ಲದ ದಂಪತಿಗಳ ಬಗ್ಗೆ ಹೊಂದಿರುತ್ತಾರೆ ಎನ್ನಲು ಸಾಧ್ಯವಿಲ್ಲ.

  • Share this:

ಆಂಗ್ಲದಲ್ಲಿ (English)  ಒಂದು ಗಾದೆಯಿದೆ. ಒಂದೇ ಗರಿಯ ಹಕ್ಕಿಗಳು ಸಂಘಟಿತವಾಗಿ ಹಾರುತ್ತವ .ಎಂದು. ಅಂದರೆ ಇದರ ತಾತ್ಪರ್ಯ ಒಂದೇ ಬಗೆಯ ಸಾಮ್ಯತೆಯಿರುವ ಅಥವಾ ಒಂದೇ ಗುಣಲಕ್ಷಣವುಳ್ಳ ಜೀವಿಗಳು ಸಂಘಟಿತರಾಗಿರುತ್ತಾರೆ ಎಂದು ಹೇಳಬಹುದು. ಇದು ಮಕ್ಕಳನ್ನು (Children) ಹೊಂದಿರುವ ಪೋಷಕರೊಂದಿಗೆ ಅಳೆದು ತೂಗಿ ನೋಡಿದಾಗ ಸತ್ಯವೆಂದೇ ಕಂಡುಬರುತ್ತದೆ. ಏಕೆಂದರೆ ಈ ದಿಸೆಯಲ್ಲಿ ಸಮೀಕ್ಷೆಯೊಂದನ್ನು ನಡೆಸಲಾಗಿದ್ದು ಅದರ ಫಲಿತಾಂಶಗಳು ಈ ಮೇಲಿನ ನಾಣ್ಣುಡಿಯನ್ನು ಸಮರ್ಥಿಸುವ ರೀತಿಯಲ್ಲಿರುವುದು ಕಂಡುಬಂದಿದೆ. ಸಾಮಾನ್ಯವಾಗಿ ಮಕ್ಕಳು ಹೊಂದಿರುವ ಪೋಷಕರು ಇತರೆ ಮಕ್ಕಳಿರುವ ಪೋಷಕರೊಂದಿಗೆ (Parents) ಅಥವಾ ಮಕ್ಕಳಿಲ್ಲದ ದಂಪತಿಗಳ ಬಗ್ಗೆ ಯಾವ ರೀತಿ ಧೋರಣೆ ಹೊಂದಿರುತ್ತಾರೆ ಎಂಬುದನ್ನು ಅಧ್ಯಯನ ನಡೆಸುವುದೇ ಈ ಸಮೀಕ್ಷೆಯ ಗುರಿಯಾಗಿತ್ತು. ಇಲ್ಲಿ ಪ್ರೋನಾಟಾಲಿಸಮ್ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಇದು ಸಹಜವಾಗಿ ಒಂದೇ ಸಂಘಟಿತ ವ್ಯವಸ್ಥೆಯಲ್ಲಿ ಇರಬಹುದಾದ ಜನರ ಗುಂಪನ್ನು ಸಂಭೋದಿಸುತ್ತದೆ ಹಾಗೂ ಇದು ಎಲ್ಲೆಡೆ ಸಾಮಾನ್ಯವಾದ ವಿಷಯವೇ ಆಗಿದೆ.


ಹಾಗಾಗಿ ಇದರ ಅಡಿಯಲ್ಲಿ ಗಮನಿಸಿದಾಗ ಮಕ್ಕಳಿರುವ ಪೋಷಕರು, ಮಕ್ಕಳಿಲ್ಲದೆ ಇರುವ ದಂಪತಿಗಳಿಗಿಂತ ಇತರೆ ಮಕ್ಕಳಿರುವ ಪೋಷಕರೊಂದಿಗೆ ಹೆಚ್ಚು ಸೌಹಾರ್ದಯುತವಾಗಿ ವರ್ತಿಸುತ್ತಾರೆಂಬುದು ಕಂಡುಬರುತ್ತದೆ. ಉದಾಹರಣೆಗೆ ಮಕ್ಕಳಿರುವ ಪೋಷಕರು ಅದೇ ರೀತಿಯ ಇತರೆ ಪೋಷಕರನ್ನು ಹೆಚ್ಚು ಕರುಣಾಮಯಿಗಳೆಂದು ಹಾಗೂ ಮಾನಸಿಕವಾಗಿ ಹೆಚ್ಚು ಪ್ರಬುದ್ಧರಾಗಿರುವರೆಂದು ಪರಿಗಣಿಸುತ್ತಾರೆ. ಇದೇ ದೃಷ್ಟಿಕೋನವನ್ನು ಅವರು ಮಕ್ಕಳಿಲ್ಲದ ದಂಪತಿಗಳ ಬಗ್ಗೆ ಹೊಂದಿರುತ್ತಾರೆ ಎನ್ನಲು ಸಾಧ್ಯವಿಲ್ಲ.


ಹಾಗಾಗಿ 2022 ರಲ್ಲೇ ಮಿಶಿಗನ್ ನಗರದಲ್ಲಿ 1500 ವಯಸ್ಕರ ಸಮೀಕ್ಷೆಯೊಂದನ್ನು ನಡೆಸಲಾಯಿತು. ಅದರಲ್ಲಿ ಪೋಷಕರನ್ನು ಇತರೆ ಮಕ್ಕಳಿರುವ ಪೋಷಕರು ಹಾಗೂ ಮಕ್ಕಳಿಲ್ಲದ ಪೋಷಕರ ಪ್ರತಿ ಯಾವ ಧೋರಣೆ ಹೊಂದಿದ್ದಾರೆಂದು ಪ್ರಶ್ನಿಸಲಾಯಿತು, ಇದೇ ಸಂದರ್ಭದಲ್ಲಿ ಮಕ್ಕಳಿಲ್ಲದ ದಂಪತಿಗಳಿಗೂ ಸಹ ಅವರು ಇತರೆ ಮಕ್ಕಳಿಲ್ಲದವರ ಹಾಗೂ ಮಕ್ಕಳಿದ್ದವರ ಪ್ರತಿ ಯಾವ ಅಭಿಪ್ರಾಯ ಹೊಂದಿದ್ದಾರೆಂದು ಕೇಳಲಾಯಿತು.


ಇದರಲ್ಲಿ ಕಂಡುಬಂದ ಫಲಿತಾಂಶವೆಂದರೆ ಪೋಷಕರಾದವರು ಇತರೆ ಪೋಷಕರ ಪ್ರತಿ ಬಲವಾದ ಸೌಹಾರ್ದತೆಯನ್ನು ಪ್ರದರ್ಶಿಸಿದರೆ ಮಕ್ಕಳಿಲ್ಲದ ವಯಸ್ಕರು ಇತರೆ ಮಕ್ಕಳಿಲ್ಲದ ವಯಸ್ಕರ ಪ್ರತಿ ಯಾವುದೇ ರೀತಿಯ ಪರಿಣಾಮಕಾರಿಯಾದ ಸೌಹಾರ್ದತೆಯನ್ನು ತೋರಿಸಲಿಲ್ಲ.


ಜನರ ಧೋರಣೆ


ಇಲ್ಲಿ ಮುಖ್ಯವಾಗಿ ಜನರು ತಮ್ಮದೆ ಆದ ಗುಂಪಿನ ಜನರ ಹಾಗೂ ಹೊರಗಿನ ಜನರ ಪ್ರತಿ ಯಾವ ರೀತಿಯ ಧೋರಣೆ ಹೊಂದಿದ್ದಾರೆ ಎಂಬುದನ್ನು ಅಧ್ಯಯನ ಮಾಡುವುದು ಮುಖ್ಯವಾಗುತ್ತದೆ. ಅದರಂತೆ 2017 ರಲ್ಲಿ ನಡೆದಿದ್ದ ಸಮೀಕ್ಷೆಯೊಂದರಲ್ಲಿ Pew ಎಂಬ ಸಂಶೋಧನಾ ಕೇಂದ್ರವು ಇವಾಂಜೆಲಿಕಲ್ಸ್ (ಧರ್ಮಪ್ರಚಾರಕರು/ಕ್ರೈಸ್ತ ಧರ್ಮದವರು) ಗಳನ್ನು ಕುರಿತು ತಮ್ಮ ಸಮುದಾಯದವರ ಪ್ರತಿ ಹಾಗೂ ಅದರ ಆಚೆ ಇರುವ ಜನರ ಪ್ರತಿ ಯಾವ ಧೋರಣೆ ಹೊಂದಿದ್ದಾರೆಂದು ಕೇಳಲಾಯಿತು.


ಇದನ್ನೂ ಓದಿ: ಕಣ್ಣಿನಿಂದ ಹೃದಯದ ಆರೋಗ್ಯದವರೆಗೆ ಒಮೆಗಾ-3 ಕೊಬ್ಬಿನಾಮ್ಲಗಳ ಪ್ರಯೋಜನಗಳಿವು


ಈ ಸಂದರ್ಭದಲ್ಲಿ ಬಹುಸಂಖ್ಯೆಯಲ್ಲಿ ಕ್ರೈಸ್ತ ಧರ್ಮಕ್ಕೊಳಪಟ್ಟವರು ತಮ್ಮದೆ ಆದ ಜನರ ಪ್ರತಿ ಹೆಚ್ಚು ಅಹ್ಲಾದಕತೆಯ ಅನುಭವ ಹೊಂದಿರುವುದಾಗಿ ಹೇಳಿದ್ದರು. ಇದರ ಸರಾಸರಿ ಪ್ರಮಾಣ 81 ರಷ್ಟಿತ್ತು. ಇದೇ ಪ್ರಶ್ನೆಯನ್ನು ನಾಸ್ತಿಕರಿಗೂ ಕೇಳಲಾಗಿ ಅವರು ಸಹ ಇದೇ ರೀತಿಯ ಉತ್ತರ ನೀಡಿದ್ದರು ಹಾಗೂ ಅದರ ಸರಾಸರಿ ಪ್ರಮಾಣ 82 ರಷ್ಟಿತ್ತು. ಒಟ್ಟಿನಲ್ಲಿ ತಮ್ಮದೆ ಆದ ಗುಂಪಿನ ಜನರೊಂದಿಗೆ ಜನರು ಹೆಚ್ಚು ಬೆಸೆಯಲ್ಪಡುತ್ತಾರೆ ಎಂಬುದನ್ನು ಈ ಸಮೀಕ್ಷೆ ಹೊರಹಾಕಿತ್ತು.


ಇದೇ ರೀತಿಯ ಕಾರ್ಯವಿಧಾನ


ಸದ್ಯ ನಡೆದಿದ್ದ ಸಮೀಕ್ಷೆಯಲ್ಲೂ ಮಕ್ಕಳಿರುವ ಹಾಗೂ ಮಕ್ಕಳಿಲ್ಲದ ದಂಪತಿಗಳ ಪ್ರತಿಯೂ ಇದೇ ರೀತಿಯ ಕಾರ್ಯ ವಿಧಾನವನ್ನು ಅನುಸರಿಸಲಾಯಿತು ಹಾಗೂ ಅದರಲ್ಲಿ ಮೂರು ಮಹತ್ವದ ಅಂಶಗಳು ಹೊರಬಂದಿರುವುದಾಗಿ ಸಮೀಕ್ಷೆ ಹೇಳಿದೆ.




ಮೊದಲನೇಯದಾಗಿ, ಮಕ್ಕಳಿಲ್ಲದವರು ಇತರೆ ಮಕ್ಕಳಿಲ್ಲದವರನ್ನು ಮಕ್ಕಳಿರುವ ಪೋಷಕರ ರೀತಿಯಲ್ಲೇ ಕಾಣುತ್ತಾರೆ. ಇದು ಕೊಂಚ ಆಸಕ್ತಿಕರವಾಗಿದೆ, ಏಕೆಂದರೆ ಅವರಿಗೂ ಮಕ್ಕಳಿಲ್ಲದ್ದರಿಂದ ತಮ್ಮದೆ ಆದ ಗುಂಪಿನೊಳಗೆ ಅವರು ಸೇರುತ್ತಾರೆಂಬ ಸತ್ಯ ಗೊತ್ತಿದ್ದರೂ ಅವರ ಪ್ರತಿ ಹೆಚ್ಚು ಸೌಹಾರ್ದತೆಯನ್ನು ಅವರು ತೋರಿಸಿಲ್ಲ.


ಎರಡನೇಯದಾಗಿ, ಮಕ್ಕಳಿರುವವರು ಮಕ್ಕಳಿಲ್ಲದವರಿಗಿಂತ ಮಕ್ಕಳಿರುವ ಇತರೆ ಪೋಷಕರ ಪ್ರತಿ ಹೆಚ್ಚು ಧನಾತ್ಮಕ ಧೋರಣೆ ಹೊಂದಿದ್ದಾರೆ. ಇದು ಸಹಜವಾಗಿ ತಾವು ಒಂದೇ ಗುಂಪಿನಲ್ಲಿ ಸೇರಲ್ಪಡುವುದರಿಂದ ಮಕ್ಕಳಿರುವ ಪೋಷಕರಿಗೆ ಇತರೆ ಮಕ್ಕಳಿರುವ ಪೋಷಕರೇ ಮಕ್ಕಳಿಲ್ಲದವರಿಗಿಂತ ಹೆಚ್ಚು ನೆಚ್ಚಿನವರಾಗಿದ್ದಾರೆ.


ಮೂರನೇಯದಾಗಿ, ಮಕ್ಕಳಿದ್ದವರು ಹಾಗೂ ಮಕ್ಕಳಿಲ್ಲದವರು ಇತರೆ ಮಕ್ಕಳಿಲ್ಲದವರ ಪ್ರತಿ ಸಮಾನ ರೀತಿಯ ಭಾವನೆಯನ್ನೇ ಹೊಂದಿದ್ದಾರೆ. ಇದು ಇಲ್ಲಿ ಮುಖ್ಯವಾಗುತ್ತದೆ. ಏಕೆಂದರೆ ಮಕ್ಕಳಿದ್ದವರು ಮಕ್ಕಳಿಲ್ಲದವರನ್ನು ಒಂದು ಸೌಹಾರ್ದತೆಯಲ್ಲಿ ಕಾಣುತ್ತಾರೆಯೇ ಹೊರತು ಅವರನ್ನು ದೂಷಿಸುವುದಿಲ್ಲ ಅಥವಾ ಅವರನ್ನು ಕೀಳರಿಮೆಯ ಭಾವನೆಯಿಂದ ನೋಡುವುದಿಲ್ಲ.


ಇದನ್ನೂ ಓದಿ: ನಿಮ್ಮ ನೆನಪಿನ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತೆ ಈ 10 ಪೋಷಕಾಂಶಗಳು


ಒಟ್ಟಿನಲ್ಲಿ ಸಮೀಕ್ಷೆಯ ತಿರುಳೆಂದರೆ ಮಕ್ಕಳಿಲ್ಲದವರು ಇತರೆ ಮಕ್ಕಳಿರುವವರಿಗಿಂತ ಹೆಚ್ಚು ಅತೃಪ್ತರಾಗಿದ್ದಾರೆಯೇ ಹೊರತು ಯಾರೂ ಯಾವ ರೀತಿಯ ಕೀಳರಿಮೆಯ ಭಾವನೆ ಹೊಂದಿಲ್ಲವೆಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ.

Published by:Sandhya M
First published: