Child Education: ಪೋಷಕರೇ, ಮಗುವಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸಬೇಕೆ? ಇಲ್ಲಿದೆ ಕೆಲವು ಟಿಪ್ಸ್

ಓದಿನಲ್ಲಿ ಹಿಂದಿರುವ ಮಕ್ಕಳ ಬಗ್ಗೆ ಪೋಷಕರು ಹೆಚ್ಚಾಗಿ ಚಿಂತಿತರಾಗಿದ್ದಾರೆ. ಅಂತಹ ಮಕ್ಕಳಿಗೆ ಅಧ್ಯಯನದಲ್ಲಿ ಆಸಕ್ತಿ ಮೂಡಿಸುವುದು ಕಷ್ಟವೇನಲ್ಲ. ಪಾಲಕರು ಕೆಲ ಟಿಪ್ಸ್ ಬಳಸಿ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡಿಸಬಹುದು. ಇಂದು ನಾವು ಮಕ್ಕಳಲ್ಲಿ ಹೇಗೆ ಓದಿನ ಬಗ್ಗೆ ಆಸಕ್ತಿ ಹೆಚ್ಚಿಸಬೇಕೆನ್ನುವ ಬಗ್ಗೆ ಹೇಳುತ್ತೇವೆ. ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:

ಮಗುವು (Child) ತನ್ನದೇ ಆದ ವ್ಯಕ್ತಿತ್ವ, ಕಲಿಕೆಯ ಸಾಮರ್ಥ್ಯ ಮತ್ತು ಆಸಕ್ತಿಗಳನ್ನು ಹೊಂದಿದ್ದು ಇತರ ಮಕ್ಕಳಿಗಿಂತ ವಿಭಿನ್ನವಾಗಿ ಇರುತ್ತದೆ. ನೀವು ಕೆಲಸಕ್ಕೆ ಹೋಗುವ ಪೋಷಕರಾಗಲಿ ಅಥವಾ ಮನೆಯಲ್ಲಿರುವ ಪೋಷಕರಾಗಲಿ (parents) ಮಕ್ಕಳು ಮತ್ತು ಹದಿಹರೆಯದ ಮಕ್ಕಳನ್ನು ನಿಭಾಯಿಸುವುದು ಕಷ್ಟಕರವಾಗಿರುತ್ತದೆ. ನೀವು ಎಷ್ಟೇ ಉನ್ನತ ವ್ಯಕ್ತಿಯಾಗಿದ್ದರೂ ಕೂಡ ಮಗುವನ್ನು ಬೆಳೆಸುವುದು ಬಹಳ ದೊಡ್ಡ ಜವಾಬ್ದಾರಿ (responsibility) ಮತ್ತು ಕೆಲವೊಮ್ಮೆ ಒತ್ತಡ ಎನಿಸುವುದು ಸಹಜ. ಆದರೆ ಎಲ್ಲ ಮಕ್ಕಳು ಓದಿನಲ್ಲಿ ಚುರುಕಿರುವುದಿಲ್ಲ. ಕೆಲ ಮಕ್ಕಳು ಅತಿ ಬುದ್ಧಿವಂತರಾಗಿದ್ದರೂ (intelligent) ಓದಿನಲ್ಲಿ ಆಸಕ್ತಿ ತೋರಿಸುವುದಿಲ್ಲ. ಮಕ್ಕಳನ್ನು ಓದಿಸೋದು ದೊಡ್ಡ ತಲೆನೋವು ಎನ್ನುವ ಪಾಲಕರು ಕೆಲ ಯೋಜನೆಗಳನ್ನು ಬಳಸಿ ಅವರಿಗೆ ಓದಿನಲ್ಲಿ ಆಸಕ್ತಿ ಬರುವ ರೀತಿ ಮಾಡಬಹುದು.


ಪ್ರತಿ ಮಗುವೂ ಒಂದೇ ರೀತಿ ಇರೋದಿಲ್ಲ. ಕೆಲವು ಮಕ್ಕಳು ತುಂಬಾ ಚುರುಕಾಗಿರುತ್ತಾರೆ ಮತ್ತು ಕೆಲವರು ತುಂಬಾ ಬುದ್ಧಿವಂತರಾಗಿರ್ತಾರೆ. ಮತ್ತೆ ಕೆಲವರು ಎಲ್ಲ ಕೆಲಸದಲ್ಲೂ ಹಿಂದಿರುತ್ತಾರೆ. ಅನೇಕ ಮಕ್ಕಳು ತಮ್ಮ ಹೆತ್ತವರಿಂದ ಹೇಳಿಸಿಕೊಳ್ಳದೆ ಅಧ್ಯಯನಕ್ಕೆ ಪ್ರಾಮುಖ್ಯತೆ ನೀಡ್ತಾರೆ. ವಿದ್ಯಾಭ್ಯಾಸದಲ್ಲಿ ಮುಂದಿರಬೇಕೆಂಬ ಕಾರಣಕ್ಕೆ ಪ್ರತಿ ದಿನ ಓದಿ, ಮುಂದೆ ಬರ್ತಾರೆ. ಅಂಥ ಮಕ್ಕಳಿಗೆ ಪೋಷಕರು ಓದುವಂತೆ ಹೆಚ್ಚು ಒತ್ತಾಯ ಮಾಡಬೇಕಾಗಿಲ್ಲ.


ಆದರೆ ಕೆಲ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚು ಆಸಕ್ತಿ ಇರುವುದಿಲ್ಲ. ಓದಿನಲ್ಲಿ ಹಿಂದಿರುವ ಮಕ್ಕಳ ಬಗ್ಗೆ ಪೋಷಕರು ಹೆಚ್ಚಾಗಿ ಚಿಂತಿತರಾಗಿದ್ದಾರೆ. ಅಂತಹ ಮಕ್ಕಳಿಗೆ ಅಧ್ಯಯನದಲ್ಲಿ ಆಸಕ್ತಿ ಮೂಡಿಸುವುದು ಕಷ್ಟವೇನಲ್ಲ. ಪಾಲಕರು ಕೆಲ ಟಿಪ್ಸ್ ಬಳಸಿ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡಿಸಬಹುದು. ಇಂದು ನಾವು ಮಕ್ಕಳಲ್ಲಿ ಹೇಗೆ ಓದಿನ ಬಗ್ಗೆ ಆಸಕ್ತಿ ಹೆಚ್ಚಿಸಬೇಕೆನ್ನುವ ಬಗ್ಗೆ ಹೇಳುತ್ತೇವೆ. ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿ.


ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಮೂಡಿಸಲು ಈ ಕೆಲವು ಸಲಹೆಗಳನ್ನು ಅನುಸರಿಸಿ:


ವಿವಿಧ ವಯೋಮಾನದವರಿಗೆ ಇರುವ ಕಲಿಯುವ ವಿಧಾನ
ಮಗು ನಡೆಯಲು ಪ್ರಾರಂಭಿಸುವ ಮೊದಲೇ ಅದರ ಕಲಿಕೆ ಪ್ರಾರಂಭವಾಗಿರುತ್ತದೆ. ಆನಂತರ ಅವರು ನಡೆಯಲು ಕಲಿಯುತ್ತಾರೆ. ತಿನ್ನಲು ಕಲಿಯುತ್ತಾರೆ. ಮಾತನಾಡಲು ಕಲಿಯುತ್ತಾರೆ. ಅಧ್ಯಯನ ಮಾಡಲು ಕಲಿಯುತ್ತಾರೆ ಮತ್ತು ಇನ್ನಷ್ಟು ಕಲಿಯುತ್ತಲೇ ಇರುತ್ತಾರೆ. ಅದೇ ರೀತಿಯಲ್ಲಿ, ನಿಮ್ಮ ಮಗುವನ್ನು ಹೇಗೆ ಅಧ್ಯಯನ ಮಾಡಬೇಕೆಂಬುದರ ಬಗ್ಗೆ ಈಗ ನೀವು ಕಲಿಯುವ ಹಂತದಲ್ಲಿರುತ್ತೀರಿ. ಆದ್ದರಿಂದ, ಕಲಿಕೆಗೆ ವಿಭಿನ್ನ ವಿಧಾನವಿದೆ, ಮತ್ತು ಅದು ನಿಮ್ಮ ಮಗುವಿನ ಮೇಲೆ ಅವಲಂಬಿತವಾಗಿರುತ್ತದೆ. ಇದನ್ನು ಜಾಣತನದಿಂದ ನಿರ್ವಹಿಸಿ.


ಮಗುವಿನ ದೃಷ್ಟಿಕೋನ ಬದಲಿಸಿ
ಹದಿಹರೆಯದ ಮಕ್ಕಳನ್ನು ಅಧ್ಯಯನಕ್ಕೆ ಸ್ವಯಂ ಕೂರಿಸುವುದು ಪೋಷಕರಿಗೆ ಅದು ದೊಡ್ಡ ಸವಾಲು ಆಗಿರುತ್ತದೆ. ಈ ಹದಿಹರೆಯದ ಮಕ್ಕಳಿಗೆ ಯಾರು ಏನು ಯೋಚನೆ ಮಾಡುತ್ತಾರೆ ಎಂಬುದರ ಬಗ್ಗೆ ಗಮನ ಇರುವುದಿಲ್ಲ. ತಮ್ಮ ಅಧ್ಯಯನದ ನಡವಳಿಕೆಗೆ ಅವರ ಪೋಷಕರ ವಿಧಾನದ ಬಗ್ಗೆ ಅವರು ಏನು ತಿಳಿದುಕೊಳ್ಳುತ್ತಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಇದರ ಬಗ್ಗೆ ಪಿಎಚ್‌.ಡಿ ಸ್ಕಾಲರ್‌ ಮೋನಿಕಾ ಅವರೊಂದಿಗೆ ಮಾತುಕತೆ ನಡೆಸುತ್ತಿರುವಾಗ, 'ನನ್ನ ಹದಿಹರೆಯದ ವಯಸ್ಸಿನಲ್ಲಿ, ನನಗೆ ನೆನಪಿರುವಂತೆ ಅಥವಾ ಈಗಲೂ ಸಹ ನನ್ನ ಪೋಷಕರು ನನ್ನನ್ನು ಅಧ್ಯಯನ ನಡೆಸಲು ಪ್ರೇರೇಪಿಸುತ್ತಾರೆ. ಅವರು ನಮ್ಮನ್ನು ಶಾಲೆಗೆ ಕಳುಹಿಸಲು ಎಷ್ಟೆಲ್ಲ ಕಷ್ಟ ಪಟ್ಟರು ಎಂಬ ತಮ್ಮ ಹೋರಾಟದ ಕಥೆಯನ್ನು ಹಂಚಿಕೊಳ್ಳುತ್ತಾರೆ ಇದು ನನಗೆ ಹೆಮ್ಮೆ ಅನಿಸುತ್ತದೆ ಮತ್ತು ಕಷ್ಟಪಟ್ಟು ಕೆಲಸ ಮಾಡಲು ಉತ್ತೇಜನ ನೀಡುತ್ತದೆ.


ಇದನ್ನೂ ಓದಿ:  Children Health: ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗೋದು ಯಾಕೆ? ವೈದ್ಯರು ಬಿಚ್ಚಿಟ್ಟ ಸತ್ಯ!

ಶ್ಲಾಘಿಸಿ ಮತ್ತು ಬಹುಮಾನ ನೀಡಿ
ನಿಮ್ಮ ಮಕ್ಕಳು ನಿಮ್ಮಂತೆಯೇ ಇರುತ್ತಾರೆ. ಇದು ಸತ್ಯ. ನಿಮ್ಮ ಗುಣಗಳೇ ಅವರಿಗೂ ಬಂದಿರುತ್ತದೆ. ನಿಮ್ಮ ಮಕ್ಕಳ ಅಧ್ಯಯನದಲ್ಲಿ ಚಿಕ್ಕ ಸಾಧನೆ ಮಾಡಿದಾಗ ಅವರನ್ನು ಮನದುಂಬಿ ಹೊಗಳಿ. ಅದಕ್ಕೆ ಸೂಕ್ತವಾದ ಬಹುಮಾನ ನೀಡಿ ಹಾರೈಸಿ. ನಿಮ್ಮ ಮಗುವಿಗೆ ಅವರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಉತ್ತಮ ಭಾವನೆ ಮೂಡಿಸಿ ಮತ್ತು ನೀವು ಅವರ ಬಗ್ಗೆ ಹೆಮ್ಮೆಪಡುತ್ತೀರಿ ಎಂದು ಹೇಳಿ. ಇದು ಮಕ್ಕಳಿಗೆ ನಿಮ್ಮ ಬಗ್ಗೆ ಮೂಡಿಸಬೇಕಾದ ಅತ್ಯಂತ ಅಮೂಲ್ಯವಾದ ಭಾವನೆ ಆಗಿದೆ.


ಆಕರ್ಷಣೆಗಳನ್ನು ಕಡಿಮೆ ಮಾಡಿ
ತಂತ್ರಜ್ಞಾನದ ಈ ಯುಗದಲ್ಲಿ, ಹದಿಹರೆಯದವರಿಗೆ ದೊಡ್ಡ ಆಕರ್ಷಣೆ ಎಂದರೆ ಮೊಬೈಲ್ ಫೋನ್. ಅವರು ಚಿಕ್ಕವರಿದ್ದಾಗಿನಿಂದಲೂ ಮೊಬೈಲ್‌ ಕೊಟ್ಟು ಕಲಿಸಿದ್ದು ನೀವೇ ಬೇರೆ ಯಾರು ಅಲ್ಲ. ಆದರೆ ಈಗ ಆ ತಪ್ಪನ್ನು ಸರಿಪಡಿಸಿಕೊಳ್ಳುವ ಸಮಯ ಇದಾಗಿದೆ. ಅವರು ಅಧ್ಯಯನದಲ್ಲಿ ತೊಡಗಿರುವ ಸಮಯದಲ್ಲಿ ಮೊಬೈಲ್ ಫೋನ್ ಅನ್ನು ದೂರವಿರಿಸಲು ದಯವಿಟ್ಟು ಉತ್ತಮ ಮಾರ್ಗವನ್ನು ಕಂಡುಕೊಳ್ಳಿ ಆ ಸಮಯದಲ್ಲಿ ನೀವು ನಿಮ್ಮ ಮೊಬೈಲ್ ಫೋನ್/ಟಿವಿಯನ್ನು ಸಹ ಬಳಸದಿರುವುದು ಉತ್ತಮ ಮಾರ್ಗವಾಗಿದೆ.


ಮಕ್ಕಳೊಂದಿಗೆ ಕುಳಿತುಕೊಳ್ಳಿ
ಮಕ್ಕಳ ಜೊತೆ ಪಾಲಕರು ಬೆರೆಯುವುದು ಬಹಳ ಮುಖ್ಯ. ಮಕ್ಕಳು ಓದುವ ಸಂದರ್ಭದಲ್ಲಿ ಪಾಲಕರು ಅವರ ಜೊತೆ ಕುಳಿತುಕೊಳ್ಳಬೇಕು. ಪಕ್ಕದಲ್ಲಿ ಕುಳಿತುಕೊಂಡು ಅವರಿಗೆ ಅಧ್ಯಯನದ ಬಗ್ಗೆ ಹೇಳುತ್ತಲೇ ಇರಬೇಕು. ನೀವೇ ಅವರಿಗೆ ಕಲಿಸಲು ಪ್ರಯತ್ನಿಸಬೇಕು. ಇದರಿಂದ ಮಗುವಿಗೆ ಓದುವ ಆಸಕ್ತಿ ಇನ್ನಷ್ಟು ಹೆಚ್ಚುತ್ತದೆ. ಆಗಾಗ ಅವರ ನೆಚ್ಚಿನ ವಿಷಯದ ಬಗ್ಗೆ ಪ್ರಶ್ನೆಗಳನ್ನು ಮತ್ತು ಉತ್ತರಗಳನ್ನು ಕೇಳುತ್ತಿರಬೇಕು. ನೀವು ಅವರ ಜೊತೆ ಕುಳಿತಾಗ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಶುರುವಾಗುತ್ತದೆ.


ಅಂಕಗಳಿಗೆ ಆದ್ಯತೆ ನೀಡಬೇಡಿ
ಮಕ್ಕಳು ಎ ಪ್ಲಸ್ ತೆಗೆದುಕೊಳ್ಳಬೇಕು, ನೂರಕ್ಕೆ ನೂರು ಅಂಕ ತೆಗೆದುಕೊಳ್ಳಬೇಕೆಂದು ಪಾಲಕರು ಬಯಸ್ತಾರೆ. ಸದಾ ಮಕ್ಕಳಿಗೆ ಈ ಸಂಖ್ಯೆ ಬಗ್ಗೆಯೇ ಹೇಳ್ತಿರುತ್ತಾರೆ. ನೀನು ಮೊದಲ ರ್ಯಾಂಕ್ ಬರಬೇಕು, ನೀವು ಎ ಪ್ಲಸ್ ತೆಗೆದುಕೊಳ್ಳಬೇಕು ಹೀಗೆ ಅವರಿಗೆ ವಿದ್ಯಾಭ್ಯಾಸ ಹೇಳಿ ಕೊಡುವಾಗ ಸಂಖ್ಯೆಗೆ ಹೆಚ್ಚು ಆದ್ಯತೆ ನೀಡ್ತಾರೆ. ಆದ್ರೆ ಸಂಖ್ಯೆ ಮುಖ್ಯವಲ್ಲ. ನಿಮ್ಮ ಮಕ್ಕಳಿಗೆ ಸಂಖ್ಯೆಗಳನ್ನು ಹೇಳುವ ಬದಲು, ಹೊಸ ವಿಷಯಗಳನ್ನು ಕಲಿಸಲು ಒತ್ತು ನೀಡಿ. ಸಂಖ್ಯೆಗಳು ಮಗುವಿನ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಹೊಸ ವಿಷ್ಯಗಳು ಮಗುವಿನಲ್ಲಿ ಹೊಸ ಆಸಕ್ತಿ ಹುಟ್ಟಿಸುತ್ತದೆ. ಆಗ ಮಕ್ಕಳು ತಾವಾಗಿಯೇ ಕಲಿಕೆ ಬಗ್ಗೆ ಆಸಕ್ತಿ ತೋರಿಸುತ್ತಾರೆ.


ಇದನ್ನೂ ಓದಿ:  Smartphone Addiction: ಮಗುವಿನ ಮೊಬೈಲ್ ಚಟ ಬಿಡಿಸಲು ಇಲ್ಲಿದೆ 7 ಸೂಪರ್ ಟ್ರಿಕ್ಸ್

ಅಧ್ಯಯನ ವೇಳಾಪಟ್ಟಿಯನ್ನು ತಯಾರಿಸಿ
ನಿಮ್ಮ ಮಗುವಿಗೆ ಓದಲು ಸಮಯವನ್ನು ನಿಗದಿಪಡಿಸಿ. ಇದರಿಂದ ಮಗು ತನ್ನ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸುತ್ತದೆ. ಇದು ಮಗುವಿನ ಸ್ವಂತ ಓದುವ ಬಯಕೆಯನ್ನು ಜಾಗೃತಗೊಳಿಸುತ್ತದೆ. ಮಕ್ಕಳ ಅಧ್ಯಯನ ವೇಳಾಪಟ್ಟಿಯ ಹೊರತಾಗಿ ಅವರ ಆಹಾರ, ಪಾನೀಯ ಮತ್ತು ಆಟಕ್ಕೂ ನಿಗದಿತ ಸಮಯವನ್ನು ನಿಗದಿಪಡಿಸಬೇಕು. ಇದರಿಂದ ಮಕ್ಕಳಿಗೆ ಸಮಯದ ಮಹತ್ವದ ಅರಿವಾಗುತ್ತದೆ.


ಮಗುವಿನ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಿ
ನೀವು ಮಗುವಿಗೆ ಕಲಿಸಿದಾಗಲೆಲ್ಲಾ, ಅವರ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಮಗು ಓದುವ ಮೂಲಕ ಅಥವಾ ಬರೆಯುವ ಮೂಲಕ ಚೆನ್ನಾಗಿ ನೆನಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆಯೇ ಎಂದು ನೀವು ನೋಡುತ್ತೀರಿ. ಯಾವ ವಿಧಾನದಲ್ಲಿ ಮಗು ಹೆಚ್ಚು ಕಲಿಯುತ್ತದೆ ಎಂಬುದನ್ನು ತಿಳಿದು, ಮಗುವಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಸುತ್ತೀರಿ.


ಇದನ್ನೂ ಓದಿ: Puberty And Girls: ಹೆಣ್ಣು ಮಕ್ಕಳಲ್ಲಿ ಅತೀ ಚಿಕ್ಕ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ದೈಹಿಕ ಬದಲಾವಣೆಗಳ ಬಗ್ಗೆ ತಜ್ಞರು ಹೇಳೋದೇನು?

ಮಗುವನ್ನು ಪ್ರೇರೇಪಿಸಿ ಮಗುವನ್ನು ಸದಾ ಪ್ರೇರೇಪಿಸಬೇಕು. ಮಗುವಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕ ಸಿಗದೆ ಹೋದಾಗಲೂ ನೀವು ಅವರನ್ನು ನಿಂದಿಸಬೇಡಿ. ಉತ್ತಮ ಪ್ರದರ್ಶನ ನೀಡಲು ನೀವು ಅವನನ್ನು ಪ್ರೇರೇಪಿಸಬೇಕು. ಇದು ಅವರ ಉತ್ಸಾಹವನ್ನು ಹೆಚ್ಚಿಸುತ್ತದೆ. ಆಗ ಮಕ್ಕಳು ಅಧ್ಯನಕ್ಕೆ ಹೆಚ್ಚು ಆಸಕ್ತಿ ತೋರಿಸುತ್ತಾರೆ. ಇದರಿಂದ ಅವರ ಕಲಿಕೆ ವೇಗ ಹೆಚ್ಚಾಗುತ್ತದೆ.

Published by:Ashwini Prabhu
First published: