Children Care: ಪೋಷಕರೇ ಮಕ್ಕಳಿಗೆ ಆ್ಯಂಟಿಬಯೋಟಿಕ್ಸ್ ಕೊಡೋ ಮುನ್ನ ಈ ವಿಷಯಗಳನ್ನು ತಿಳಿದುಕೊಳ್ಳಿ

ಅನೇಕ ಪೋಷಕರು ತಮ್ಮ ಮಕ್ಕಳು ಮಳೆಗಾಲದಲ್ಲಿ ಪದೇ ಪದೇ ಅನಾರೋಗ್ಯಕ್ಕೆ ಗುರಿಯಾದಾಗ ವೈದ್ಯರನ್ನು ಸಂಪರ್ಕಿಸದೆ ತಾವೇ ಸ್ವತಃ ತಮ್ಮ ಮಕ್ಕಳಿಗೆ ಬೇಗ ಗುಣಮುಖರಾಗಲಿ ಎಂಬ ಉದ್ದೇಶದಿಂದ ಆ್ಯಂಟಿಬಯೋಟಿಕ್ಸ್ ಅನ್ನು ನೀಡುತ್ತಾರೆ. ಹೀಗೆ ವೈದ್ಯರನ್ನು ಸಂಪರ್ಕಿಸದೆ, ಒಂದು ಮಾತನ್ನು ಕೇಳದೆಯೇ ಮತ್ತು ತಮ್ಮ ಮಕ್ಕಳಿಗೆ ಯಾವ ಔಷಧಿ ನೀಡಿದರೆ ಒಳ್ಳೆಯದು ಎಂದು ತಿಳಿದುಕೊಳ್ಳದೆಯೇ ತಾವೇ ಸ್ವಯಂ ಔಷಧೋಪಚಾರ ಮಾಡಿಕೊಳ್ಳುವುದಕ್ಕೆ ವೈದ್ಯರು ಏನು ಹೇಳುತ್ತಿದ್ದಾರೆ ಒಮ್ಮೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗಂತೂ ಮಳೆಗಾಲದಲ್ಲಿ (Rainy Season) ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ (Illness) ತುತ್ತಾಗುತ್ತಾ ಇರುವುದನ್ನು ನಾವೆಲ್ಲಾ ನೋಡಿಯೇ ಇರುತ್ತೇವೆ. ಮಳೆಗಾಲದಲ್ಲಿ ಮಕ್ಕಳಿಗೆ (Children) ಈ ಶೀತ, ಕೆಮ್ಮು ಮತ್ತು ವೈರಲ್ ಜ್ವರ ತುಂಬಾನೇ ಸಾಮಾನ್ಯವಾಗಿರುತ್ತವೆ. ಸ್ವಲ್ಪ ತಣ್ಣನೆಯ ಗಾಳಿಯಲ್ಲಿ (Air) ಸುತ್ತಾಡಿದರೂ ಮಕ್ಕಳಲ್ಲಿ ಶೀತ (Cold) ಕಾಣಿಸಿಕೊಳ್ಳುತ್ತದೆ. ಆ ಶೀತ ಹಾಗೆಯೇ ಕೆಲವು ದಿನಗಳ ಕಾಲ ಮುಂದುವರೆದು ಜ್ವರಕ್ಕೆ (Fever) ದಾರಿ ಮಾಡಿಕೊಡುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೆಚ್ಚಾಗಿ ವೈದ್ಯರ ಬಳಿ ಬರುವ ಪ್ರಕರಣಗಳು ಈ ಶೀತ, ಜ್ವರ ಮತ್ತು ಕೆಮ್ಮಿನಂತಹ ಲಕ್ಷಣಗಳನ್ನೇ ಹೊಂದಿರುತ್ತವೆ.

ವೈದ್ಯರನ್ನು ಸಂಪರ್ಕಿಸದೆ ಮಕ್ಕಳಿಗೆ ಆ್ಯಂಟಿಬಯೋಟಿಕ್ಸ್ ಕೊಡಬೇಡಿ
ಅನೇಕ ಪೋಷಕರು ತಮ್ಮ ಮಕ್ಕಳು ಮಳೆಗಾಲದಲ್ಲಿ ಪದೇ ಪದೇ ಅನಾರೋಗ್ಯಕ್ಕೆ ಗುರಿಯಾದಾಗ ವೈದ್ಯರನ್ನು ಸಂಪರ್ಕಿಸದೆ ತಾವೇ ಸ್ವತಃ ತಮ್ಮ ಮಕ್ಕಳಿಗೆ ಬೇಗ ಗುಣಮುಖರಾಗಲಿ ಎಂಬ ಉದ್ದೇಶದಿಂದ ಆ್ಯಂಟಿಬಯೋಟಿಕ್ಸ್ ಅನ್ನು ನೀಡುತ್ತಾರೆ. ಹೀಗೆ ವೈದ್ಯರನ್ನು ಸಂಪರ್ಕಿಸದೆ, ಒಂದು ಮಾತನ್ನು ಕೇಳದೆಯೇ ಮತ್ತು ತಮ್ಮ ಮಕ್ಕಳಿಗೆ ಯಾವ ಔಷಧಿ ನೀಡಿದರೆ ಒಳ್ಳೆಯದು ಎಂದು ತಿಳಿದುಕೊಳ್ಳದೆಯೇ ತಾವೇ ಸ್ವಯಂ ಔಷಧೋಪಚಾರ ಮಾಡಿಕೊಳ್ಳುವುದಕ್ಕೆ ವೈದ್ಯರು ಏನು ಹೇಳುತ್ತಿದ್ದಾರೆ ಒಮ್ಮೆ ನೋಡಿ. ಪೋಷಕರು ಮಕ್ಕಳಿಗೆ ಆ್ಯಂಟಿಬಯೋಟಿಕ್ಸ್ ಅನ್ನು ನೀಡುತ್ತಿರುವ ಬಗ್ಗೆ ವೈದ್ಯರು ತುಂಬಾನೇ ಕಳವಳ ವ್ಯಕ್ತಪಡಿಸಿದ್ದಾರೆ.

ಆ್ಯಂಟಿಬಯೋಟಿಕ್ಸ್ ಎಂದರೇನು?
ಸಾಮಾನ್ಯವಾಗಿ ಆ್ಯಂಟಿಬಯೋಟಿಕ್ಸ್ ಎಂಬುದು ತುಂಬಾನೇ ಸ್ಟ್ರಾಂಗ್ ಆಗಿರುವ ಔಷಧಿ ಎಂದು ಹೇಳಲಾಗುತ್ತದೆ. ಇದು ಬ್ಯಾಕ್ಟೀರಿಯಾದ ಸೋಂಕುಗಳ ವಿರುದ್ಧ ಮಾತ್ರ ಪರಿಣಾಮಕಾರಿ, ಆದರೆ ಮಳೆಗಾಲದಲ್ಲಿ ಮಕ್ಕಳಲ್ಲಿನ ಹೆಚ್ಚಿನ ಸೋಂಕುಗಳು ವೈರಲ್ ಆಗಿರುತ್ತವೆ ಎಂದು ಅನೇಕ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Smartphone Addiction: ಮಗುವಿನ ಮೊಬೈಲ್ ಚಟ ಬಿಡಿಸಲು ಇಲ್ಲಿದೆ 7 ಸೂಪರ್ ಟ್ರಿಕ್ಸ್

80 ಪ್ರತಿಶತದಷ್ಟು ಪೋಷಕರು ತಮ್ಮ ಮಕ್ಕಳಿಗೆ ಅನಾರೋಗ್ಯಕ್ಕೊಳಗಾದಾಗಲೆಲ್ಲಾ ಈ ಆ್ಯಂಟಿಬಯೋಟಿಕ್ಸ್ ನೀಡುವ ಸಾಮಾನ್ಯ ಅಭ್ಯಾಸವನ್ನು ಅವರು ವಿಷಾದಿಸಿದರು. ಈ ಸ್ವಯಂ-ಔಷಧೋಪಚಾರ ಮಾಡಿಕೊಳ್ಳುವುದು ನಿಮ್ಮ ಮಕ್ಕಳ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಅವರು ಹೇಳಿದರು.

ಈ ಬಗ್ಗೆ ಮಕ್ಕಳ ತಜ್ಞೆ ಡಾ. ಶಿವರಂಜನಿ ಸಂತೋಷ್ ಅವರು ಏನು ಹೇಳಿದ್ದಾರೆ
ಮಕ್ಕಳ ತಜ್ಞೆ ಡಾ. ಶಿವರಂಜನಿ ಸಂತೋಷ್ ಅವರು “ಪ್ರಸ್ತುತ ಮಳೆಗಾಲದಲ್ಲಿ ಮಕ್ಕಳಿಗೆ ಹೆಚ್ಚಾಗಿ ಬಾಧಿಸುವ ಕೈ ಕಾಲು ಮತ್ತು ಬಾಯಿ ರೋಗ, ಡೆಂಗ್ಯೂ, ಜ್ವರ, ಕೋವಿಡ್-19, ವೈರಲ್ ಅತಿಸಾರ ಮತ್ತು ವಾಂತಿಯಂತಹ ವೈರಲ್ ಸೋಂಕುಗಳು ಮಕ್ಕಳಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಸೋಂಕಿಗೆ ಕಾರಣವಾಗುತ್ತವೆ, ಆದರೆ ಬ್ಯಾಕ್ಟೀರಿಯಾದ ಸೋಂಕುಗಳು ಶೇಕಡಾ 10 ರಷ್ಟಿರುತ್ತವೆ.

ಗಂಟಲು ನೋವಿಗಾಗಿ, ಅವರು ತಮ್ಮ ಮಕ್ಕಳಿಗೆ ಅಜಿತ್ರಾಲ್ ಮತ್ತು ಒಫ್ಲೋಮಾಕ್ ಅನ್ನು ಸಡಿಲ ಚಲನೆಗಳಿಗಾಗಿ ನೀಡುತ್ತಾರೆ. ಇದು ಅತಿಸಾರ ಮತ್ತು ವಾಂತಿಯಂತಹ ಅಡ್ಡಪರಿಣಾಮಗಳನ್ನು ಸಹ ಉಂಟು ಮಾಡಬಹುದು ಮತ್ತು ಉಪಯುಕ್ತ ಕರುಳಿನ ಬ್ಯಾಕ್ಟೀರಿಯಾವನ್ನು ಸಹ ಕೊಲ್ಲಬಹುದು" ಎಂದು ಅವರು ಹೇಳಿದರು.

ನಿರ್ದಿಷ್ಟ ಆಂಟಿವೈರಲ್ ಔಷಧಿಗಳು ತೀವ್ರವಾದ ಫ್ಲೂ ಮತ್ತು ಚಿಕನ್ ಪಾಕ್ಸ್ ನಂತಹ ಕೆಲವು ಸೋಂಕುಗಳಿಗೆ ಮಾತ್ರ ಎಂದು ಡಾ. ಶಿವರಂಜನಿ ಸಂತೋಷ್ ಅವರು ಹೇಳಿದರು. ಹೈದರಾಬಾದಿನ ಕೊಂಡಾಪುರದ ಅಪೊಲೊ ಆಸ್ಪತ್ರೆಯಲ್ಲಿ ಕನ್ಸಲ್ಟೆಂಟ್ ಪೀಡಿಯಾಟ್ರಿಷಿಯನ್ ಆದಂತಹ ಡಾ. ಅವಶ್ ಪಾನಿ ಕೂಡ “ವೈದ್ಯರನ್ನು ಸಂಪರ್ಕಿಸದೆ ಪೋಷಕರು ವೈರಲ್ ಸೋಂಕುಗಳಿಗೆ ಆ್ಯಂಟಿಬಯೋಟಿಕ್ಸ್ ಗಳನ್ನು ನೀಡಿದ ಅನೇಕ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ” ಎಂದು ಹೇಳಿದರು.

ಮಕ್ಕಳಿಗೆ ಆ್ಯಂಟಿಬಯೋಟಿಕ್ಸ್ ಕೊಡುವ ಮುನ್ನ ವೈದ್ಯರನ್ನು ಸಂಪರ್ಕಿಸಿ
"ಇದು ಮುಂದೆ ಮಕ್ಕಳಲ್ಲಿ ಬಹಳ ಗಂಭೀರವಾದ ಸಮಸ್ಯೆಗಳನ್ನು ತಂದೊಡ್ಡಬಹುದು ಮತ್ತು ಅದರ ಪ್ರಮಾಣವು ಹೆಚ್ಚುತ್ತಿದೆ. ವಾಸ್ತವವಾಗಿ, ನಾನು ಆ್ಯಂಟಿಬಯೋಟಿಕ್ಸ್ ಗಳನ್ನು ಸೂಚಿಸದಿದ್ದಾಗ, ಪೋಷಕರು ದಯವಿಟ್ಟು ಅದನ್ನೇ ನೀಡಿ ಅಂತ ನನ್ನನ್ನು ಕೇಳುತ್ತಾರೆ" ಎಂದು ಅವರು ಹೇಳಿದರು.

ಇದನ್ನೂ ಓದಿ: Foods For Postpartum: ಹೆರಿಗೆಯ ನಂತರ ಈ ಆಹಾರಗಳನ್ನು ಸೇವಿಸಿದ್ರೆ ಬಹಳ ಒಳ್ಳೆಯದಂತೆ

ಪೋಷಕರು ವೈದ್ಯರನ್ನು ಸಂಪರ್ಕಿಸದೆ ತಮ್ಮ ಮಕ್ಕಳಿಗೆ ನೀಡುವ ಇತರ ಕೆಲವು ಸಾಮಾನ್ಯ ಔಷಧಗಳೆಂದರೆ ಅಝೀ, ಜಿಫಿ, ಟ್ಯಾಕ್ಸಿಮ್, ಆಗ್ಮೆಂಟಿನ್, ಕ್ಲಾಂಪ್ಕಿಡ್, ಕ್ಲಾವಮ್, ಕೋಪೆಡೆಮ್, ಮೊನೊಸೆಫ್ ಮತ್ತು ಆಫ್ಲಾಕ್ಸ್ ಓಝಡ್. ತಮ್ಮ ಮಕ್ಕಳ ಆರೋಗ್ಯದ ಸಲುವಾಗಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆಗಳನ್ನು ಪಡೆಯುವಂತೆ ಅವರು ಎಲ್ಲಾ ಪೋಷಕರಿಗೆ ಸಲಹೆ ನೀಡಿದ್ದಾರೆ.
Published by:Ashwini Prabhu
First published: