• Home
  • »
  • News
  • »
  • lifestyle
  • »
  • Parenting Tips: ಮಕ್ಕಳನ್ನು ಸ್ವಾಭಿಮಾನಿಯನ್ನಾಗಿ ಬೆಳೆಸುವುದು ಹೇಗೆ? ಪೋಷಕರು ತಿಳಿದಿರಲೇಬೇಕಾದ ವಿಷ್ಯ ಇದು

Parenting Tips: ಮಕ್ಕಳನ್ನು ಸ್ವಾಭಿಮಾನಿಯನ್ನಾಗಿ ಬೆಳೆಸುವುದು ಹೇಗೆ? ಪೋಷಕರು ತಿಳಿದಿರಲೇಬೇಕಾದ ವಿಷ್ಯ ಇದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಕ್ಕಳು ತಮ್ಮಲ್ಲಿ ಏನಾದರೂ ದೋಷವಿದೆ ಎಂದು ಅಂದುಕೊಳ್ಳುವುದು ಸಹಜವಾಗಿದೆ. ತರಗತಿಯ ವಾತಾವರಣ,  ಸಹಪಾಠಿಗಳ ಗೇಲಿ ಇದಕ್ಕೆ ಕಾರಣವಾಗಿರಬಹುದು. ಈ ನಕರಾತ್ಮಕ ಯೋಚನೆಯನ್ನು ಪೋಷಕರಾದವರು ನಿವಾರಿಸಬೇಕು.

  • Trending Desk
  • 4-MIN READ
  • Last Updated :
  • Share this:

    ಮಕ್ಕಳು (Children) ಪ್ರಬುದ್ಧರಾದಂತೆ ತಮ್ಮ ಮಾತಾಪಿತರನ್ನೇ (Parents) ಹೆಚ್ಚು ಆಶ್ರಯಿಸಿಕೊಂಡಿರುತ್ತಾರೆ. ಆದರ್ಶವಾಗಿ ಆತ್ಮವಿಶ್ವಾಸವನ್ನಾಗಿ (Confidence) ಮಾತಾ ಪಿತರನ್ನೇ ಆಧರಿಸಿಕೊಂಡಿರುತ್ತಾರೆ. ಓದಿನ ವಿಷಯದಿಂದ ಹಿಡಿದು ಕ್ರೀಡೆ, ವಿವಿಧ ರೀತಿಯ ಕಲಾತ್ಮಕತೆಗಳು, ತಾವು ಮಾಡುವ ಚಟುವಟಿಕೆಗಳು ಹೀಗೆ ಒಂದಿಲ್ಲೊಂದು ರಂಗದಲ್ಲಿ ಸೋಲು ಕಾಣಿಸಿದಾಗ ಅವರು ಮೊದಲು ಸಂಪರ್ಕಿಸುವುದೇ ತಮ್ಮ ಪೋಷಕರನ್ನು ಎಂದು ಲೇಖಕಿ ತಿಳಿಸಿದ್ದಾರೆ. ಈ ಸಮಯದಲ್ಲಿ ಪೋಷಕರು ಮಕ್ಕಳಿಗೆ ಒತ್ತಾಸೆಯಾಗಿ ನಿಲ್ಲಬೇಕು ಹಾಗೂ ತಾವು ಅವರೊಡನೆ ಇದ್ದೇವೆ ಎಂಬ ಅರಿವನ್ನು ಅವರಲ್ಲಿ ಮೂಡಿಸಬೇಕು. ಮಗು ಕ್ರೀಡೆಯಲ್ಲಿ ಹಿಂದಿದೆ ಎಂಬಂತಹ ಸಮಯದಲ್ಲಿ ಅವರಿಗೆ ಮಾನಸಿಕ ಸ್ಥೈರ್ಯವನ್ನು ನೀಡಬೇಕು ಹಾಗೂ ಅವರಿಗೆ ತರಬೇತಿ ಮತ್ತು ಅದನ್ನು ಅವರು ಸಾಧಿಸಬಹುದು ಎಂಬ ಬೆಂಬಲವನ್ನು ನೀಡುವ ಮೂಲಕ ಕ್ರೀಡೆಯಲ್ಲಿ ಅವರನ್ನು ಉತ್ತಮರನ್ನಾಗಿ ರೂಪಿಸಬಹುದು.


    ಮಾತಾ ಪಿತರೇ ಮಕ್ಕಳಿಗೆ ಉತ್ತಮ ಮಾರ್ಗದರ್ಶಕರು


    ಹೀಗೆ ಮಕ್ಕಳು ಯಾವ ಕ್ಷೇತ್ರದಲ್ಲಿ ಹಿಂದಿದ್ದಾರೆಯೋ ಆ ಕ್ಷೇತ್ರದಲ್ಲಿ ಅವರನ್ನು ಮುನ್ನುಗ್ಗುವಂತೆ ಮಾಡಲು ಮಾತಾ ಪಿತರೇ ನೆರವಾಗಬೇಕು ಎಂಬುದು ಲೇಖಕಿ ಹೇಳುವ ಮಾತಾಗಿದೆ. ಸಣ್ಣ ಸಣ್ಣ ವಿಧಾನಗಳಲ್ಲಿಯೇ ಅವರಿಗೆ ಧೈರ್ಯವನ್ನು ನೀಡುತ್ತಾ ಅವರನ್ನು ಉತ್ತಮರು ಎಂಬಂತೆ ರೂಪಿಸುವ ಜವಬ್ದಾರಿ ಮಾತಾ ಪಿತರದ್ದು ಎಂಬುದು ಲೇಖಕಿಯ ಮಾತಾಗಿದೆ. ಮಕ್ಕಳು ಯಾವುದಾದರೂ ಕ್ಷೇತ್ರದಲ್ಲಿ ಹಿನ್ನಡೆ ಸಾಧಿಸುತ್ತಿದ್ದಾರೆ ಎಂದಾದಲ್ಲಿ ಅವರಿಗೆ ನಿರಾಶೆ ಹಾಗೂ ದುಃಖ ಉಂಟಾಗುವು ಸಹಜ ಈ ಸಮಯದಲ್ಲಿ ನಾವು ಅವರಂತೆ ಅಸಹಾಯಕರಾಗಬಾರದು ಎಂಬುದು ಲೇಖಕಿಯ ಮಾತಾಗಿದೆ. ಮಕ್ಕಳು ತಮ್ಮ ಆತ್ಮಸ್ಥೈರ್ಯವನ್ನು ರೂಪಿಸಿಕೊಳ್ಳಬೇಕು ಎಂದಾದಲ್ಲಿ ಅದಕ್ಕೆ ಉತ್ತಮ ಬೆಂಬಲವನ್ನು ನಾವೇ ಒದಗಿಸಬೇಕು ಎಂದು ಸ್ವತಃ ತಾಯಿಯೂ ಕೂಡ ಆಗಿರುವ ಲೇಖಕಿ ತಿಳಿಸುತ್ತಾರೆ.




    ಮಕ್ಕಳಲ್ಲಿ ನಕಾರಾತ್ಮಕ ಯೋಚನೆ ಬರದಂತೆ ನೋಡಿಕೊಳ್ಳಿ


    ಮಕ್ಕಳು ಯಾವುದಾದರೂ ವಿಷಯದಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ ಎಂದಾದಲ್ಲಿ ಅಂತಹ ನಕಾರಾತ್ಮಕ ಯೋಚನೆಯನ್ನು ಅವರ ಮನಸ್ಸಿನಿಂದ ತೆಗೆದುಹಾಕಬೇಕು ಎಂದು ಲೇಖಕಿ ಸಲಹೆ ನೀಡುತ್ತಾರೆ. ಮಕ್ಕಳ ಮಾತುಗಳನ್ನು ಆಲಿಸುವುದು ಅವರಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅನುಮತಿಸುವುದು ಹಾಗೂ ಅವರ ಕಾಳಜಿಯನ್ನು ಅಂಗೀಕರಿಸುವುದು ಮುಖ್ಯವಾಗಿದೆ.


    ತಾವು ಸಾಧಿಸಬಲ್ಲರು ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿ


    ಮಕ್ಕಳು ತಮ್ಮಲ್ಲಿ ಏನಾದರೂ ದೋಷವಿದೆ ಎಂದು ಅಂದುಕೊಳ್ಳುವುದು ಸಹಜವಾಗಿದೆ. ತರಗತಿಯ ವಾತಾವರಣ,  ಸಹಪಾಠಿಗಳ ಗೇಲಿ ಇದಕ್ಕೆ ಕಾರಣವಾಗಿರಬಹುದು. ನಕರಾತ್ಮಕ ಯೋಚನೆ ಹಾಗೂ ತನ್ನ ಬಗ್ಗೆಯೇ ಕರುಣೆ ತೋರಿಕೊಳ್ಳುವುದು ಎರಡು ಭಿನ್ನ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ. ತನ್ನ ಮೇಲೆ ಕರುಣೆ ತೋರಿದಾಗ ವ್ಯಕ್ತಿ ಸಾಮಾನ್ಯವಾಗಿ ತನ್ನ ಸಮಸ್ಯೆಗಳಿಗೆ ತಾನು ಕಾರಣವಲ್ಲ ಎಂಬುದನ್ನು ಅರಿತುಕೊಳ್ಳುತ್ತಾನೆ ಬದಲಿಗೆ ತಪ್ಪಿಗೆ ವಿಶ್ವವನ್ನು ದೂಷಿಸುತ್ತಾನೆ. ನಕರಾತ್ಮಕ ಚಿಂತೆ ಸಮಯದಲ್ಲಿ ತನ್ನನ್ನು ತಾನೇ ದೂಷಿಸಿಕೊಳ್ಳುತ್ತಾನೆ. ಹೀಗಿದ್ದಾಗ ಮಕ್ಕಳಲ್ಲಿ ಸಾಧ್ಯವಾದಷ್ಟು ನಕಾರಾತ್ಮಕ ಚಿಂತೆಯನ್ನು ಹೋಗಲಾಡಿಸಬೇಕು ಎಂದು ಲೇಖಕಿ ಸಲಹೆ ನೀಡಿದ್ದಾರೆ. ಮಕ್ಕಳು ಇಂತಹ ಅಂಶಗಳನ್ನು ತೋರ್ಪಡಿಸಿದಾಗ ಅವರ ಜೊತೆ ಪೋಷಕರು ಇದ್ದಾರೆ ಎಂಬುದನ್ನು ಮನದಟ್ಟು ಮಾಡಿಸಬೇಕು ಹಾಗೂ ಈ ಸಮಸ್ಯೆಗೆ ಪರಿಹಾರವನ್ನು ಮಕ್ಕಳೊಂದಿಗೆ ಸೇರಿ ಪರಿಹರಿಸಿ ಎಂದು ಲೇಖಕಿ ಸಲಹೆ ನೀಡಿದ್ದಾರೆ. ಇದು ಅವರಲ್ಲಿ ಸ್ವಾಭಿಮಾನವನ್ನು ಉಂಟುಮಾಡುತ್ತದೆ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಲು ನೆರವಾಗುತ್ತದೆ ಎಂದು ಹೇಳಿದ್ದಾರೆ.


    ಮಕ್ಕಳಲ್ಲಿ ಆತ್ಮಾವಲೋಕನ ಮೂಡಿಸುವುದು


    ಗ್ಯಾನ್‌ಲಿಂಕ್‌ನ ಸಿಇಒ ಮನೀಶಾ ಭಾರ್ಗವ ದೆಹಲಿ ಮೂಲದವರಾಗಿದ್ದು 2 ವರ್ಷ, 3 ವರ್ಷ ಹಾಗೂ 13 ಹರೆಯದ ಮಕ್ಕಳ ತಾಯಿಯಾಗಿದ್ದಾರೆ. ತಮ್ಮ ಮೇಲೆಯೇ ಅಪನಂಬಿಕೆಗಳುಂಟಾದಾಗ ಈ ಮಕ್ಕಳಲ್ಲಿ ಅದನ್ನು ಹೋಗಲಾಡಿಸಲು ಬೇರೆ ಬೇರೆ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಎಂಬುದನ್ನು ಲೇಖಕಿ ಮನೀಶಾ ಅವರ ಮೂಲಕ ತೋರಿಸಿದ್ದಾರೆ. ಮನೀಶಾ ಅವರ ಒಂಭತ್ತರ ಹರೆಯದ ಮಗ ತಾಯಿ ದೋಸೆ ಎರೆಯುತ್ತಿರುವುದನ್ನು ನೋಡಿ ತಾನು ಮಾಡಬೇಕೆಂದು ಹೇಳುತ್ತಾನೆ. ಇದಕ್ಕೆ ಒಪ್ಪಿಗೆ ನೀಡಿದ ಮನೀಶಾ ಮಗನಿಗೆ ದೋಸೆ ಎರೆಯಲು ಅನುಮತಿಸುತ್ತಾರೆ. ಮನೀಶಾರ ಮಗ ಹಲವಾರು ಬಾರಿ ದೋಸೆ ಹುಯ್ಯಲು ಪ್ರಯತ್ನಿಸುತ್ತಾನೆ ಆದರೆ ಅವನಿಗೆ ಅಮ್ಮನಂತೆ ದೋಸೆ ಹುಯ್ಯಲು ಆಗುವುದೇ ಇಲ್ಲ ಆಗ ನಿರಾಶೆಗೊಂಡ ಮನೀಶಾರ ಪುತ್ರ ತನ್ನಿಂದ ಇದೇಕೆ ಸಾಧ್ಯವಾಗುತ್ತಿಲ್ಲ ತನ್ನಿಂದ ಇದು ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಬಂದನು ಎಂದು ಮನೀಶಾ ಹೇಳುತ್ತಾರೆ.




    ವಿಫಲರಾದಾಗ ಮಕ್ಕಳಲ್ಲಿ ಧೈರ್ಯ ತುಂಬುವುದು


    ಆದರೆ ತನ್ನ ಮಗನ ವಿಫಲತೆಗೆ ದೈರ್ಯದ ಹುರುಪು ತುಂಬಿದ ತಾಯಿ ಮನೀಶಾ ಜೊತೆಯಾಗಿ ನಾವಿಬ್ಬರೂ ದೋಸೆ ಮಾಡೋಣ ಎಂದು ತಿಳಿಸುತ್ತಾರೆ. ಮಗನಿಗೆ ದೋಸೆ ಹುಯ್ಯುವ ಸರಿಯಾದ ವಿಧಾನವನ್ನು ತಿಳಿಸಿಕೊಟ್ಟರು ಹಾಗೂ ಹಲವಾರು ಪ್ರಯತ್ನಗಳ ನಂತರ ಮಗು ಅದರಲ್ಲಿ ಯಶಸ್ವಿಯಾಯಿತು. ಈ ಸಮಯದಲ್ಲಿ ಮಗನನ್ನು ಕರೆದು ಆತನಿಗೆ ತಿಳಿಹೇಳಿದ ಮನೀಶಾ ಮೊದಲ ಪ್ರಯತ್ನದಲ್ಲಿ ಯಾರೂ ಪರಿಪೂರ್ಣರಾಗುವುದಿಲ್ಲ ಪರಿಪೂರ್ಣತೆ ಪಡೆಯಬೇಕು ಎಂದಾದಲ್ಲಿ ಹಲವಾರು ಬಾರಿ ಪ್ರಯತ್ನಿಸಬೇಕು ಎಂಬ ಕಿವಿಮಾತು ಹೇಳುತ್ತಾರೆ.


    ಮಕ್ಕಳೊಂದಿಗೆ ಸೇರಿ ಕೆಲಸ ಮಾಡುವುದು


    ಮನೀಶಾ ಭಾರ್ಗವ್ ಮಗನೊಂದಿಗೆ ಜೊತೆಯಾಗಿ ಕೆಲಸ ಮಾಡೋಣ ಎಂದು ಹೇಳಿದಾಗ ಮಗನಿಗೆ ಹೊಸ ಹುರುಪು ಹಾಗೂ ಧೈರ್ಯ ಬಂದಿತು ಎಂಬುದನ್ನು ಹೇಳುತ್ತಾರೆ. ಯಾವುದೇ ವಿಷಯದಲ್ಲಿ ಪರಿಪೂರ್ಣತೆಯನ್ನು ಪಡೆಯಬೇಕು ಎಂದರೆ ಸಾಕಷ್ಟು ಅಭ್ಯಾಸ ನಡೆಸಬೇಕು ಎಂಬುದನ್ನು ತನ್ನ ಮಗ ತಿಳಿದುಕೊಂಡನು ಎಂಬುದು ಮನೀಶಾ ಅವರ ಮಾತಾಗಿದೆ. ದೋಸೆ ಹುಯ್ಯುವುದರಲ್ಲಿ ಮಗನು ಯಶಸ್ವಿಯಾದನು ಎಂಬುದಕ್ಕಿಂತ ಆತನಿಗೆ ತಾನು ಅವಕಾಶ ನೀಡಿದೆ ಹಾಗೂ ಮಾರ್ದರ್ಶನವನ್ನು ನೀಡಿದೆ ಮತ್ತು ತನ್ನ ಮಗ ತನ್ನನ್ನು ಹೆಚ್ಚು ನಂಬಿದ್ದನು ಎಂಬ ಅಂಶವನ್ನು ಮನೀಶಾ ಇಲ್ಲಿ ತಿಳಿಸಿದ್ದಾರೆ.


    ಮಗುವು ಯಾವುದಾದರೂ ವಿಷಯದಲ್ಲಿ ನಿಮ್ಮ ನೆರವನ್ನು ಬಯಸಿದರೆ ಅದನ್ನು ಪರಿಪೂರ್ಣ ಮನಸ್ಸಿನಿಂದ ಮಾಡಿ ಎಂದು ಮನೀಶಾ ಸಲಹೆ ನೀಡಿದ್ದಾರೆ. ಅವರ ಮೇಲೆ ಕೋಪಮಾಡಿಕೊಳ್ಳುವುದು ಅವರನ್ನು ಕೈಲಾಗದವನು ಎಂದು ದೂಷಿಸುವುದು ಮಾಡಬಾರದು ಎಂದು ತಿಳಿಸುತ್ತಾರೆ.


    ಆತ್ಮವಿಶ್ವಾಸವನ್ನು ನಿರ್ಮಿಸುವುದು ದೀರ್ಘ ಸಮಯದ ಪ್ರಕ್ರಿಯೆ ಹಾಗೂ ನಿರಂತರವಾದುದು


    ಇದಕ್ಕೆ ಉತ್ತಮ ಉದಾಹರಣೆಯನ್ನು ನೀಡುವ ಲೇಖಕಿ ಪುಣೆನಿವಾಸಿ ಗೃಹಿಣಿಯಾದ ವೀಣಾ ಮಹೇಶ್ ದೃಷ್ಟಾಂತವನ್ನು ತೆಗೆದುಕೊಂಡಿದ್ದಾರೆ. ವೀಣಾರಿಗೆ 15 ರ ಹರೆಯದ ಮಗಳು ಹಾಗೂ 12 ರ ಹರೆಯದ ಮಗನಿದ್ದಾನೆ. ಇಬ್ಬರೂ ವಿಭಿನ್ನ ಸ್ವಭಾವದ ಮಕ್ಕಳು ಎಂದು ತಿಳಿಸಿರುವ ವೀಣಾ, ಮಗಳು ಮನೆಯಲ್ಲಿ ಹಾಗೂ ಹೊರಗೆ ಕೂಡ ಧೈರ್ಯವಂತೆ ಹಾಗೂ ಆತ್ಮವಿಶ್ವಾಸದ ಗಣಿಯಾಗಿದ್ದರೆ ಮಗ ಆತ್ಮವಿಶ್ವಾಸವನ್ನು ಪಡೆದುಕೊಳ್ಳುವಲ್ಲಿ ಹಿಂದಿದ್ದ ಎಂದು ತಿಳಿಸುತ್ತಾರೆ.




    ಮಕ್ಕಳಿಗೆ ಸಮಾನ ಪ್ರೀತಿ ನೀಡುವುದು


    ವೀಣಾರ ಹುಟ್ಟುಹಬ್ಬದ ಸಮಯದಲ್ಲಿ ಮಗ ತಮಗಾಗಿ ಕಾರ್ಡ್ ಮಾಡಿರುವುದನ್ನು ಈಗಲೂ ಆಕೆ ನೆನಪಿಸಿಕೊಳ್ಳುತ್ತಾರೆ. ಆತ ತನ್ನ ಅಕ್ಕನಿಗಿಂತ ಚೆನ್ನಾಗಿ ಕಾರ್ಡ್ ಅನ್ನು ಮಾಡಿಲ್ಲ ಎಂಬುದೇ ಆತನ ಮನಸ್ಸನ್ನು ಕೊರೆಯುತ್ತಿತ್ತು. ಆ ಸಮಯದಲ್ಲಿ ಮಗನಿಗೆ ಪ್ರೀತಿಯಿಂದ ತಿಳಿಹೇಳಿದ ತಾಯಿ ವೀಣಾ, ನಿನ್ನದು ಹಾಗೂ ನಿನ್ನ ಅಕ್ಕನ ಶೈಲಿ ರೀತಿ ನೀತಿ ಬೇರೆ ಬೇರೆ ಎಂದು ತಿಳಿಸುತ್ತಾರೆ. ನನಗೆ ದ್ರಾಕ್ಷಿಯು ಇಷ್ಟ ಮಾವಿನ ಹಣ್ಣು ಇಷ್ಟ. ಹಾಗೆಯೇ ನೀನು ಇಷ್ಟ ಅಕ್ಕನೂ ಇಷ್ಟ ಎಂದು ವೀಣಾ ಮಗನಿಗೆ ತಿಳಿಸುತ್ತಾರೆ. ನನ್ನ ಮೇಲಿನ ಪ್ರೀತಿ ಇಬ್ಬರ ಮೇಲೂ ಸಮಾನವಾಗಿರುತ್ತದೆ ಎಂದು ಮಗನಿಗೆ ತಿಳಿಹೇಳುತ್ತಾರೆ.


    ಆತ್ಮವಿಶ್ವಾಸ ಮೂಡಿಸುವುದು ನಿರಂತರ ಪ್ರಕ್ರಿಯೆ


    ಮಗುವಿಗೆ ಆತ್ಮವಿಶ್ವಾಸ ಮೂಡಿಸುವುದು ನಿರಂತರ ಪ್ರಕ್ರಿಯೆ ಎಂದು ಹೇಳುವ ವೀಣಾ ಮಹೇಶ್, ನಿರಂತರವಾಗಿ ಮಗನಿಗೆ ಪ್ರೋತ್ಸಾಹ ನೀಡುತ್ತಿದ್ದೇನೆ ಹಾಗೂ ನಮ್ಮ ಮನೆಯ ಪ್ರತಿಯೊಬ್ಬರೂ ಮಗನಿಗೆ ಆತ್ಮವಿಶ್ವಾಸ ಮೂಡಿಸಿದವರೇ ಎಂದು ತಿಳಿಸಿದ್ದಾರೆ. ಇಬ್ಬರು ಮಕ್ಕಳಿಗೂ ಸಮಾನ ರೀತಿಯಲ್ಲಿ ನಾವೆಲ್ಲರೂ ಪ್ರೀತಿಯನ್ನು ನೀಡಿದ್ದೇವೆ ಎಂದು ತಿಳಿಸಿರುವ ವೀಣಾ ಇಬ್ಬರ ನಡುವೆ ಸ್ಪರ್ಧೆ ಹಾಗೂ ಪೈಪೋಟಿಗೆ ಅವಕಾಶವೇ ಇರಲಿಲ್ಲ ಜಗಳಗಳು ಅವರ ನಡುವೆ ಉಂಟಾಗುತ್ತಿದ್ದರೂ ಇಬ್ಬರ ನಡುವೆ ಪ್ರೀತಿಗೆ ಏನೂ ಬರವಿರಲಿಲ್ಲ ಎಂಬುದು ವೀಣಾ ಮಾತಾಗಿದೆ.


    ಮಕ್ಕಳೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಿ


    ಮಕ್ಕಳಿಗೆ ತಾಳ್ಮೆಯಿಂದ ಪ್ರೀತಿಯಿಂದ ಅವರಲ್ಲಿರುವ ಹಿಂಜರಿಕೆಯನ್ನು ದೂರಾಗಿಸಬೇಕು ಎಂಬುದು ಲೇಖಕಿಯ ಸಲಹೆಯಾಗಿದೆ. ಈ ಎರಡೂ ನಿದರ್ಶನಗಳನ್ನು ನೀಡುವ ಮೂಲಕ ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ಹೇಗೆ ಬೆಳೆಸಬೇಕು ಎಂಬ ಸಲಹೆಯನ್ನು ನೀಡಿದ್ದಾರೆ. ತನಗೆ ಸಾಧ್ಯವಿಲ್ಲ ಹಾಗೂ ತಾನು ಯಾವುದಕ್ಕೂ ಅರ್ಹನಲ್ಲ ಎಂಬುದಾಗಿ ಮಕ್ಕಳ ಮನಸ್ಸಿನಲ್ಲಿ ಬರುವ ಮಾತುಗಳನ್ನು ಪೋಷಕರು ಪ್ರೀತಿಯ ಮಾರ್ಗದಲ್ಲಿ ನಿವಾರಿಸಬೇಕು ಎಂದು ಲೇಖಕಿ ಸಲಹೆ ನೀಡಿದ್ದಾರೆ.

    Published by:Kavya V
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು