Sudha Murthy: ಮಕ್ಕಳ ಬೆಳವಣಿಗೆಗೆ ಸುಧಾಮೂರ್ತಿಯವರು ಹೇಳಿರುವ ಮಾತುಗಳು

 ಸುಧಾಮೂರ್ತಿ

ಸುಧಾಮೂರ್ತಿ

Sudha Murthy parenting advices: ಪೋಷಕರಾಗಿರಲಿ ಅಥವಾ ಇನ್ಯಾರದೋ ಸಂಬಂಧ ಆಗಿರಲಿ. ಯಾವುದೇ ಸಂದರ್ಭದಲ್ಲಿ ಪರಸ್ಪರ ಗೌರವ ಪ್ರೀತಿ ಅಭಿಮಾನ ಎನ್ನುವುದು ಮುಖ್ಯ.. ಅದರಲ್ಲೂ ಪೋಷಕರು ತಮ್ಮ ಮಕ್ಕಳ ಮೇಲೆ ಅತಿಯಾದ ಪ್ರೀತಿ ಅಭಿಮಾನ ತೋರಿ ಅವರಿಗೆ ಉಸಿರುಗಟ್ಟಿಸುವಂತಹ ವಾತಾವರಣ ನಿರ್ಮಾಣ ಮಾಡುವುದು ಸರಿಯಲ್ಲ.

ಮುಂದೆ ಓದಿ ...
  • Share this:

ಪ್ರತಿಯೊಂದು ಮಗುವೂ (Children) ವಿಭಿನ್ನ. ನಮ್ಮ ಹೂದೋಟದ ವಿಶಿಷ್ಟ ಬಣ್ಣ(Color), ವಾಸನೆ, ಆಕಾರಗಳ ಕುಸುಮಗಳಿದ್ದಂತೆ (Flowers). ಅವು ಅರಳಿ ಕಂಪು ಸೂಸಬೇಕಾ ದರೆ ತಂದೆ-ತಾಯಿಯರ (Parents) ಜತೆಗೆ ಶಿಕ್ಷಕರು (Teacher) ಜವಾಬ್ದಾ ರಿಯುತವಾಗಿ ನಡೆದುಕೊಳ್ಳಬೇಕು. ಗಿಡದ ಬೇರು ಚಿಗುರೊಡೆಯಲು ಹೇಗೆ ಸುತ್ತಲಿನ ತೇವಭರಿತ ಪೋಷಕಸಹಿತ ಮಣ್ಣು ಕಾರಣೀಭೂತವಾಗುತ್ತದೆಯೋ ಅದೇ ರೀತಿಯಲ್ಲಿ ಹೆತ್ತವರು, ಶಿಕ್ಷಕರು, ನೆರೆಯವರು ಮಕ್ಕಳ ಸರ್ವ ತೋಮುಖ ಬೆಳವಣಿಗೆಗೆ ಬೇಕಾದ ಸಾರವನ್ನು ಚಿಕ್ಕ ವಯಸ್ಸಿನಲ್ಲಿಯೇ ನೀಡುವುದು ಮುಖ್ಯ. ಬಾಲ್ಯದ ಹೊಂಬೆಳಕು ಪಸರಿಸಲು ಇಂಬುನೀಡಬೇಕು. ಹೀಗಾಗಿ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ (Parents) ನಡೆದುಕೊಳ್ಳುವ ರೀತಿ ಅವರ ಸಂಪೂರ್ಣ ಜೀವನದ ದಿಕ್ಕನ್ನೇ ಬದಲಿಸಿದೆ. ಹಾಗಿದ್ರೆ ಉತ್ತಮ ಜವಾಬ್ದಾರಿಯುತ ಪೋಷಕರು ಮಕ್ಕಳ ಬೆಳವಣಿಗೆಯಲ್ಲಿ ಯಾವ ರೀತಿಯ ಪಾತ್ರವಹಿಸಬೇಕು ಎಂಬುದನ್ನು ಲೇಖಕಿ ಚಿಂತಕಿ ಹಾಗೂ ಸಮಾಜ ಸುಧಾರಕಿ ಸುಧಾಮೂರ್ತಿಯವರು (Sudha Murthy) ಏನು ಹೇಳುತ್ತಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.


ಶ್ರೀಮತಿ ಸುಧಾ ಮೂರ್ತಿ… ಈ ಹೆಸರಿನಲ್ಲಿಯೇ ಅದೇನೋ ಒಂದು ಆಕರ್ಷಣೆ ಇದೆ.  ಕನ್ನಡ ಮಣ್ಣಿನ ಕುವರಿ, ಅಸಾಮಾನ್ಯ ಸಾಧಕಿ  ಇವರು. ಇದರ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್‌ನ ಖ್ಯಾತ ಬರಹಗಾರ್ತಿ, ಸಮಾಜಸೇವಕಿಯೂ ಆಗಿರುವ ಸುಧಾ ಮೂರ್ತಿಯವರು ಜನಿಸಿದ್ದು 19ನೇ ಆಗಸ್ಟ್‌ 1950ರಂದು. ಅವರು ಜನಸಾಮಾನ್ಯನ ಏಳಿಗೆಗಾಗಿ ಹಲವು ಸಂಘ ಸಂಸ್ಥೆಗಳೊಂದಿಗೆ ದುಡಿದವರು. ಇನ್ಫೋಸಿಸ್‌  ಪ್ರತಿಷ್ಠಾನದ  ಮೂಲಕ, ಸಮಾಜ ಸೇವೆಯೊಂದಿಗೆ, ಜನ ಸಾಮಾನ್ಯರ ಸಮಸ್ಯೆಗಳಿಗೆ ಮಿಡಿದವರು ಅವರು. ಇಂತಹ ಸುಧಾಮೂರ್ತಿಯವರು ತಮ್ಮ ಮಾತುಗಳ ಮೂಲಕ ಹಲವಾರು ಜನರಿಗೆ ಮಾರ್ಗದರ್ಶನ ನೀಡಿದ್ದಾರೆ.


ಇವರ ಮಾತುಗಳು ಪ್ರತಿಯೊಬ್ಬರ ಬದುಕಿಗೂ ದಾರಿದೀಪವಾಗಿದೆ.. ಇದ್ರೆ ಸುಧಾಮೂರ್ತಿಯವರು ಉತ್ತಮ ಮಕ್ಕಳ ಉತ್ತಮ ಬೆಳವಣಿಗೆಗಾಗಿ ಹೇಳಿರುವ ಮಾತುಗಳು ಏನು ಎನ್ನುವುದನ್ನು ನೋಡೋಣ..


ಇದನ್ನೂ ಓದಿ: ಅಮ್ಮಂದಿರ ಗಮನಕ್ಕೆ: ಮಕ್ಕಳಿಗೆ ಬಾಟೆಲ್ ನಲ್ಲಿ ಹಾಲು ಕೊಡ್ತೀರಾ?


ನಿಮ್ಮ ಮಕ್ಕಳ ಇಷ್ಟವನ್ನು ಆಯ್ಕೆ ಮಾಡಿ: ಬಹುತೇಕ ಪೋಷಕರು ತಮ್ಮ ಮಕ್ಕಳಿಗೆ ಏನು ಇಷ್ಟ ಎಂದು ಕೇಳುವ ಮೊದಲೇ ಅವರಿಗೆ ಇಷ್ಟವಾದ ವಸ್ತುಗಳನ್ನು ತೆಗೆದುಕೊಂಡು ಮಕ್ಕಳಿಗೆ ಬಲವಂತವಾಗಿ ಕೊಡಲು ಪ್ರಯತ್ನಿಸುತ್ತಾರೆ.


ಬೆಳೆಯುವ ಮಕ್ಕಳಿಗೆ ತಮ್ಮ ವಸ್ತುಗಳನ್ನು ಆರಿಸುವ ಬಗ್ಗೆ ಅರಿವು ಇಲ್ಲ ಎಂಬ ಕಲ್ಪನೆಯಿಂದ ಮಕ್ಕಳಲ್ಲಿನ ಸ್ವಾತಂತ್ರ್ಯವನ್ನು ಬಾಲ್ಯದಲ್ಲಿಯೇ ಪೋಷಕರು ಕಿತ್ತುಕೊಳ್ಳುತ್ತಾರೆ. ಹೀಗಾಗಿ ನಿಮ್ಮ ಮಕ್ಕಳಿಗೆ ವಸ್ತುಗಳನ್ನು ಆಯ್ಕೆ ಮಾಡಲು ಬಿಡಿ ನಿಮ್ಮ ಅಭಿಪ್ರಾಯ ಹಾಗೂ ಆಸಕ್ತಿಯನ್ನು ಅವರ ಮೇಲೆ ಹೇರಬೇಡಿ ಎಂದು ಸುಧಾಮೂರ್ತಿಯವರು ಅಭಿಪ್ರಾಯಪಡುತ್ತಾರೆ. .


ಸಂಬಂಧ ಉಸಿರುಗಟ್ಟಿಸದಂತಿರಲಿ: ಯಾವುದೇ ಸಂಬಂಧಕ್ಕೆ ಅದರದೇ ಆದ ಮಹತ್ವವಿದೆ.. ಅದು ಪೋಷಕರಾಗಿರಲಿ ಅಥವಾ ಇನ್ಯಾರದೋ ಸಂಬಂಧ ಆಗಿರಲಿ. ಯಾವುದೇ ಸಂದರ್ಭದಲ್ಲಿ ಪರಸ್ಪರ ಗೌರವ ಪ್ರೀತಿ ಅಭಿಮಾನ ಎನ್ನುವುದು ಮುಖ್ಯ.


ಅದರಲ್ಲೂ ಪೋಷಕರು ತಮ್ಮ ಮಕ್ಕಳ ಮೇಲೆ ಅತಿಯಾದ ಪ್ರೀತಿ ಅಭಿಮಾನ ತೋರಿ ಅವರಿಗೆ ಉಸಿರುಗಟ್ಟಿಸುವಂತಹ ವಾತಾವರಣ ನಿರ್ಮಾಣ ಮಾಡುವುದು ಸರಿಯಲ್ಲ. ಹೀಗಾಗಿ ಸುಧಾಮೂರ್ತಿಯವರು ಹೇಳುವಂತೆ, ನಿಮ್ಮ ಮಗುವಿಗೆ ಕೆಲವು ಪದಾರ್ಥಗಳನ್ನು ತಿನ್ನಲು ಇಷ್ಟವಿಲ್ಲದಿದ್ದರೆ, ಸ್ವಲ್ಪ ಸಮಯದವರೆಗೆ ಅವುಗಳನ್ನು ಹಾಗೇ ಬಿಡಿ.


ಬಲವಂತವಾಗಿ ತಿನ್ನುವಂತೆ ಮಾಡಬೇಡಿ. ಅವರು ಬಯಸಿದಾಗ ಅದನ್ನು ತಿನ್ನಲು ಬಿಡಿ. ಅವರೇ ಯಾವಾಗ ತಿನ್ನಬೇಕೆಂದು ನಿರ್ಧರಿಸಲಿ. ಹೀಗೆ ಹವ್ಯಾಸ ವಿದ್ಯಾಭ್ಯಾಸ, ಉದ್ಯೋಗ ಎಲ್ಲಾ ವಿಚಾರದಲ್ಲೂ ಅವರ ಆಯ್ಕೆಗೆ ಮೊದಲ ಆದ್ಯತೆಯಿರಲಿ.


ಮಕ್ಕಳ ಮೇಲೆ ಮಾತ್ರ ಗಮನ ಹರಿಸಬೇಡಿ: ಮಕ್ಕಳನ್ನು ಬೆಳೆಸುವ ರೀತಿಗೆ ಹೆಚ್ಚು ಮಹತ್ವ ನೀಡುವ ಅಗತ್ಯವಿದ್ದರೂ, ಅವರ ಮೇಲೆ ಒತ್ತಡ ಹೇರುವುದನ್ನು ಮಾಡಬಾರದು. ಇದು ಮಗುವಿನ ಸ್ವಂತ ಪ್ರತಿಭೆಯನ್ನು ಗಮನಿಸುವ ಸಾಮರ್ಥ್ಯವನ್ನು ನಿಗ್ರಹಿಸುತ್ತದೆ.


ಸಂದರ್ಶನವೊಂದರಲ್ಲಿ ಸುಧಾಮೂರ್ತಿ, ಪೋಷಕರು ಯಾವಾಗಲೂ ಮಕ್ಕಳ ಮೇಲೆ ಗಮನ ಕೇಂದ್ರೀಕರಿಸಬೇಡಿ ಎಂದು ಕಿವಿಮಾತು ಹೇಳಿದರು. ಮಕ್ಕಳಿಗೆ ಎಲ್ಲವನ್ನೂ ಪದೇ ಪದೇ ಹೇಳುವ ಬದಲು ಟಿವಿ ಅಥವಾ ಫೋನ್ ಸ್ವಿಚ್ ಆಫ್ ಮಾಡಿ ಮತ್ತು ನೀವೇ ಓದಲು ಕುಳಿತುಕೊಳ್ಳಿ. ಮಕ್ಕಳು ಇದನ್ನೇ ಅನುಸರಿಸುತ್ತಾರೆ.


ಇದನ್ನೂ ಓದಿ: ಯಾವಾಗ್ಲೂ ಟೆನ್ಶನ್, ಮೂಡ್​ ಆಫ್; ಮಾನಸಿಕ ಆರೋಗ್ಯ ಕೆಡಿಸೋ ಡೇಂಜರಸ್ ಅಭ್ಯಾಸಗಳಿವು


ಸರಳವಾಗಿ ಬದುಕುವುದನ್ನು ಕಲಿಸಿ: ತಮ್ಮ ಜೀವನದಲ್ಲಿ ಸರಳತೆಯನ್ನು ಅನುಸರಿಸುತ್ತಾ ಬಂದಿರುವ ಸುಧಾಮೂರ್ತಿಯವರು ತಮ್ಮ ಮಕ್ಕಳಿಗೆ ಸರಳತೆಯ ಕಲಿಸಿ ಬೆಳೆಸಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಬದುಕಿನಲ್ಲಿ ಸರಳತೆಯಿಂದ ಬದುಕುವುದನ್ನು ಕಲಿಸಿದ್ರೆ ಮುಂದೊಂದು ದಿನ ಅವರು ಎತ್ತರದ ಸ್ಥಾನಕ್ಕೆ ಹೋಗುತ್ತಾರೆ ಎನ್ನುವ ಮಾತುಗಳನ್ನು ಹೇಳುತ್ತಾರೆ.

First published: