HOME » NEWS » Lifestyle » PARENT SHOULD THINK ON CHILDREN ANGRY ISSUE STG SESR

Parenting: ಮಗು ಯಾವಾಗಲೂ ಸಿಡುಕುತ್ತಾ? ಹಾಗಾದರೆ ಇದು ಚಿಂತಿಸಬೇಕಾದ ಸಂಗತಿಯೇ!

ಮಗುವಿನ ಸಿಡಿಮಿಡಿ ನಿರಂತರವಾಗಿದ್ದರೆ, ಅವರು ಎದುರಿಸುತ್ತಿರುವ ಸಮಸ್ಯೆ ಏನು ಎಂಬುದನ್ನು ಅವರ ವರ್ತನೆಗಳೇ ಸೂಚಿಸುತ್ತಿರುತ್ತವೆ.

Trending Desk
Updated:June 9, 2021, 6:02 PM IST
Parenting: ಮಗು ಯಾವಾಗಲೂ ಸಿಡುಕುತ್ತಾ? ಹಾಗಾದರೆ ಇದು ಚಿಂತಿಸಬೇಕಾದ ಸಂಗತಿಯೇ!
ಮಗುವಿನ ಸಿಡಿಮಿಡಿ ನಿರಂತರವಾಗಿದ್ದರೆ, ಅವರು ಎದುರಿಸುತ್ತಿರುವ ಸಮಸ್ಯೆ ಏನು ಎಂಬುದನ್ನು ಅವರ ವರ್ತನೆಗಳೇ ಸೂಚಿಸುತ್ತಿರುತ್ತವೆ.
  • Share this:

ಮಕ್ಕಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸರಿಯಾದ ಪದಗಳು ಸಿಗದೆ ಸಿಡುಕು, ಕಿರಿಕಿರಿ ಮುಂತಾದ ವರ್ತನೆಗಳ ಮೂಲಕ ಅದನ್ನು ತೋರಿಸುತ್ತಾರೆ. ನಿಮ್ಮ ಮಕ್ಕಳು ಕಿರಿಕಿರಿ ಮಾಡುವುದಕ್ಕೆ ಏನು ಕಾರಣ ಎಂಬುದರ ಕುರಿತು ಹಲವಾರು ಪೋಷಕರು ಆತಂಕಕ್ಕೆ ಒಳಗಾಗುತ್ತಾರೆ.  ಸಿಡಿಮಿಡಿ ಮತ್ತು ಕಿರಿಕಿರಿ ಮಕ್ಕಳು ಬೆಳೆಯುವ ಹಂತದಲ್ಲಿ ಅತ್ಯಂತ ಸಾಮಾನ್ಯ. ಆ ವಿಷಯದಲ್ಲಿ ನಾವು ದೊಡ್ಡವರು ಕೂಡ ಕಡಿಮೆಯಿಲ್ಲ ಬಿಡಿ. ದೊಡ್ಡವರಿಗೆ ತಮ್ಮ ಅಸಮಧಾನ ಮತ್ತು ಸಿಟ್ಟನ್ನು ಹೊರ ಹಾಕಲು ಹಲವಾರು ವಿಧಾನಗಳಿವೆ. ಆದರೆ ಮಕ್ಕಳು ಹಾಗಲ್ಲ, ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸರಿಯಾದ ಪದಗಳು ಸಿಗದೆ, ಸಿಡುಕು, ಕಿರಿಕಿರಿ ಮುಂತಾದ ವರ್ತನೆಗಳ ಮೂಲಕ ಅದನ್ನು ತೋರಿಸುತ್ತವೆ. ಕೆಲವು ಹೆತ್ತವರು ಅದನ್ನು ಅರ್ಥ ಮಾಡಿಕೊಂಡರೆ, ಇನ್ನು ಕೆಲವು ತಮ್ಮ ಮಗು ಹೀಗ್ಯಾಕೆ ಆಡುತ್ತಿದೆ ಎಂಬುದನ್ನು ತಿಳಿಯುವುದರಲ್ಲಿ ಅಸಫಲರಾಗುತ್ತಾರೆ. ನಿಮ್ಮ ಮಕ್ಕಳು ಕಿರಿಕಿರಿ ಮಾಡುವುದಕ್ಕೆ ಏನು ಕಾರಣ ಎಂಬುದರ ಕುರಿತು ಒಂದಿಷ್ಟು ಮುಖ್ಯ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.


ಮಕ್ಕಳಲ್ಲಿ ಸಿಡಿಮಿಡಿ ಮತ್ತು ಕಿರಿಕಿರಿಗೆ ಕಾರಣಗಳೇನು?



ಬೆಳವಣಿಗೆಯ ಹಂತದಲ್ಲಿ ಮಕ್ಕಳಲ್ಲಿ ಹಲವಾರು ಬದಲಾವಣೆಗಳು ಆಗುತ್ತವೆ. ಮಕ್ಕಳಲ್ಲಿ ಸಿಡಿಮಿಡಿ ಮತ್ತು ಕಿರಿಕಿರಿಗಳು ಆ ಬದಲಾವಣೆಗಳ ಒಂದು ಭಾಗ ಅಷ್ಟೆ. ಆದಾಗ್ಯೂ ಅವರಲ್ಲಿ ಕಿರಿಕಿರಿ ಉಂಟಾಗಲು ಅನೇಕ ಕಾರಣಗಳಿರಬಹುದು. ಮಗುವಿಗೆ ತನಗೆ ಬೇಕಾದದ್ದು ಸಿಗದಿದ್ದಾಗ ಅಥವಾ ಯಾರೂ ತನ್ನ ಕಡೆ ಗಮನ ಕೊಡುತ್ತಿಲ್ಲ ಎಂದು ಮಗುವಿಗೆ ಅನಿಸಿದಾಗ ಅದಕ್ಕೆ ಕಿರಿಕಿರಿ ಆಗಬಹುದು. ಮಕ್ಕಳಲ್ಲಿ ಶಿಸ್ತನ್ನು ಬೆಳೆಸಬೇಕು ಎಂಬ ಕಾರಣಕ್ಕೆ ಹೆತ್ತವರು ಹೆಚ್ಚಿನ ಸಂದರ್ಭದಲ್ಲಿ ಅವರ ಬೇಡಿಕೆಗಳಿಗೆ ಬೆಲೆ ಕೊಡುವುದಿಲ್ಲ. ಅದು ಕೆಲವೊಮ್ಮೆ ಮಗುವಿನ ಮನಸ್ಸಲ್ಲಿ ಅಪಾರ್ಥ ಅಥವಾ ಕೋಪ ಮೂಡಲು ಕಾರಣವಾಗಬಹುದು. ಮಕ್ಕಳ ವಿಷಯಕ್ಕೆ ಬಂದಾಗ, ಹೆಚ್ಚಿನ ಕೋಪದ ಸಂಗತಿಗಳು ಅವರ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೂ ಸಂಬಂಧಿಸಿರಬಹುದು.


ಯಾವಾಗ ಚಿಂತಿಸಬೇಕು?
ಅಪರೂಪಕ್ಕೆ ಮಗು ಸಿಡಿಮಿಡಿಗೊಳ್ಳುತ್ತಿದ್ದರೆ ಚಿಂತಿಸಬೇಕಿಲ್ಲ, ಆದರೆ ಅದು ನಿರಂತರವಾದರೆ ಖಂಡಿತಾ ತಜ್ಞರನ್ನು ಕಾಣಬೇಕು. ಮಗುವಿನ ಕೋಪಕ್ಕೆ, ಅಪೊಸಿಶನಲ್ ಡೆಫಿಶಿಯಂಟ್ ಡಿಸಾರ್ಡರ್, ಡಿಸ್ರಪ್ಟಿವ್ ಮೂಡ್ ಡಿಸ್ರೆಗ್ಯುಲೇಶನ್ ಡಿಸಾರ್ಡರ್ ಮತ್ತು ಕಂಡಕ್ಟ್ ಡಿಸಾರ್ಡರ್ ಕಾರಣವಾಗಿರಬಹುದು.


ಅಪೊಸಿಶನಲ್ ಡೆಫಿಶಿಯಂಟ್ ಡಿಸಾರ್ಡರ್, ಕೋಪ ಮತ್ತು ಕಿರಿಕಿರಿ ಮನಸ್ಥಿತಿಯ ಮಾದರಿಯಾಗಿದ್ದು, ಮಕ್ಕಳ ಅವಿಧೇಯ ವರ್ತನೆ ಆರು ಅಥವಾ ಅದಕ್ಕಿಂತ ಹೆಚ್ಚು ತಿಂಗಳು ಮುಂದುವರೆಯಬಹುದು.ಡಿಸ್ರಪ್ಟಿವ್ ಮೂಡ್ ಡಿಸ್ರೆಗ್ಯುಲೇಶನ್ ಡಿಸಾರ್ಡರ್, ಸದಾ ಕೋಪ ಅಥವಾ ಖಿನ್ನತೆಯ ಮನಸ್ಥಿತಿ.ಕಂಡಕ್ಟ್ ಡಿಸಾರ್ಡರ್ ಎಂದರೆ, ಬೆದರಿಸುವ ಮೂಲಕ ಬೇರೆಯವರಿಗೆ ತೊಂದರೆ ಕೊಡುವುದು ಮತ್ತು ಕದಿಯುವುದು.


ನಿಮ್ಮ ಮಗುವಿನ ಸಿಡಿಮಿಡಿ ಚಿಂತಿಸುವಂತಹ ಸಂಗತಿಯೇ ಎಂಬುದನ್ನು ಅರ್ಥ ಮಾಡಿಸುವ ಸಂಕೇತಗಳು ಮಗುವಿನ ಸಿಡಿಮಿಡಿ ನಿರಂತರವಾಗಿದ್ದರೆ, ಅವರು ಎದುರಿಸುತ್ತಿರುವ ಸಮಸ್ಯೆ ಏನು ಎಂಬುದನ್ನು ಅವರ ವರ್ತನೆಗಳೇ ಸೂಚಿಸುತ್ತಿರುತ್ತವೆ.

ಇದನ್ನು ಓದಿ: ಧರಿಸುವ ಚಪ್ಪಲಿಯ ಹಿಂದೆ ಕೂಡ ಇದೆ ವೈಜ್ಞಾನಿಕ ಸತ್ಯಗಳು..!

ಉದಾಹರಣೆಗೆ, ಯಾವುದೇ ಮಿತಿಯಿಲ್ಲದೆ ನಿಮ್ಮ ಮಗುವಿನಲ್ಲಿ ಕೋಪ ಮತ್ತು ಆಕ್ರಮಣಶೀಲತೆ ಕಂಡು ಬಂದರೆ ಅದನ್ನು ಖಂಡಿತಾ ನಿರ್ಲಕ್ಷಿಸುವಂತಿಲ್ಲ. ಅದು ನಿರಂತರವಾದರೆ ಖಂಡಿತಾ ತಜ್ಞರನ್ನು ಸಂಪರ್ಕಿಸಲೇಬೇಕು.


ಮಕ್ಕಳಲ್ಲಿ ಆಕ್ರಮಣಶೀಲತೆ ಮತ್ತು ಕಿರಿಕಿರಿಯನ್ನು ತಡೆಯುವುದು ಹೇಗೆ?
ನಿಮ್ಮ ಮಗುವಿನ ಸಮಸ್ಯೆಯನ್ನು ನಿವಾರಿಸಬೇಕು ಎಂದರೆ, ಮೊದಲ ಅವರ ಆ ರೀತಿಯ ವರ್ತನೆಗೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಬೇಕು. ಆ ಬಳಿಕ ಅವರ ಸಿಟ್ಟು ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಮಾರ್ಗ ಹುಡುಕಬೇಕು. ಅವರ ಸಿಟ್ಟಿನ ಮೂಲ ಕಾರಣವನ್ನು ಅವರಿಗೆ ಅರ್ಥ ಮಾಡಿಸಲು ಪ್ರಯತ್ನಿಸಿ, ಅದನ್ನು ಅವರಷ್ಟಕ್ಕೆ ಅರ್ಥ ಮಾಡಿಕೊಳ್ಳಲು ಸಮಯ ಕೊಡಿ. ಅವರ ಜೊತೆ ಸಂವಹನಕ್ಕೆ ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳಿ.


ಜೊತೆಗೆ ಮಕ್ಕಳು ಕಿರಿಕಿರಿ ಮಾಡಿದಾಗ ನೀವು ವರ್ತಿಸುವ ರೀತಿಯಲ್ಲಿ ಬದಲಾವಣೆ ತಂದುಕೊಳ್ಳಿ. ಅವರಿಗೆ ಶಿಕ್ಷೆ ಕೊಡುವ ಬದಲು ಅವರು ಒಳ್ಳೆಯ ಕೆಲಸ ಮಾಡಿದಾಗ ಬಹುಮಾನ ಕೊಡುವುದನ್ನು ರೂಢಿ ಮಾಡಿಕೊಳ್ಳಿ. ಅವರ ಜೊತೆ ಸಾಧ್ಯವಾದಷ್ಟು ಸಮಯ ಕಳೆಯಿರಿ.


Published by: Seema R
First published: June 9, 2021, 6:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories