Papaya And Health: ಪಪ್ಪಾಯಿ ತಿಂದ ಬಳಿಕ ಇವುಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ

ಪಪ್ಪಾಯಿಯಲ್ಲಿ ಕಂಡು ಬರುವ ಪಪೈನ್ ಕಿಣ್ವವು ಅಲರ್ಜಿಯ ವಿರುದ್ಧ ಹೋರಾಡುತ್ತದೆ ಮತ್ತು ಗಾಯ ಗುಣಪಡಿಸಲು ಸಹಾಯ ಮಾಡುತ್ತದೆ. ಅನೇಕ ಪ್ರಯೋಜನಗಳ ಹೊರತಾಗಿಯೂ ಪಪ್ಪಾಯಿ ಸೇವನೆಯು ಆರೋಗ್ಯಕ್ಕೆ ಹಾನಿಕರವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹಣ್ಣುಗಳು (Fruits) ಸಾಕಷ್ಟು ಪೋಷಕಾಂಶಗಳಿಂದ ಕೂಡಿರುತ್ತವೆ. ವಿವಿಧ (Verity) ರೀತಿಯ ಹಣ್ಣುಗಳು ವಿವಿಧ ರೀತಿಯಲ್ಲಿ ಆರೋಗ್ಯ ಪ್ರಯೋಜನ (Health Benefits) ನೀಡುತ್ತವೆ. ಅದರಲ್ಲಿ ಪಪ್ಪಾಯಿ (Papaya) ಹಣ್ಣು ಕೂಡ ಒಂದು. ಪಪ್ಪಾಯಿ ಹಣ್ಣು ಸಾಮಾನ್ಯವಾಗಿ ಆರೋಗ್ಯಕ್ಕೆ ಅನೇಕ ವಿಧಗಳಲ್ಲಿ ಪ್ರಯೋಜನ ನೀಡುತ್ತದೆ. ಪಪ್ಪಾಯಿ ಸೇವನೆ ಮಾಡುವುದರಿಂದ ಆಗುವ ಪ್ರಯೋಜನಗಳಲ್ಲಿ ಮುಖ್ಯ ಹಾಗೂ ಪ್ರಮುಖ ಪ್ರಯೋಜನವೆಂದರೆ ಅದು ತೂಕ ಇಳಿಸಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ. ಜೊತೆಗೆ ಮಧುಮೇಹ ನಿಯಂತ್ರಣ ಮಾಡುತ್ತದೆ. ಕೊಬ್ಬು, ಕಾರ್ಬೋಹೈಡ್ರೇಟ್‌, ವಿಟಮಿನ್ ಸಿ, ಎ, ಇ, ಬಿ, ಖನಿಜ, ಪ್ರೋಟೀನ್ ಮತ್ತು ಡಯೆಟರಿ ಫೈಬರ್‌ ಗಳಂತಹ ಅನೇಕ ರೀತಿಯ ಪೋಷಕಾಂಶಗಳು ಪಪ್ಪಾಯಿಯಲ್ಲಿ ಹೇರಳವಾಗಿ ಕಂಡು ಬರುತ್ತವೆ.

    ಪ್ರತಿದಿನ ಪಪ್ಪಾಯಿ ಸೇವನೆ ಮಾಡಿ

    ಅಷ್ಟೇ ಅಲ್ಲದೇ ಆಲ್ಫಾ, ಬೀಟಾ, ಕ್ಯಾರೋಟಿನ್ ಮತ್ತು ಲುಟೀನ್ ಎಂಬ ಆ್ಯಂಟಿ ಆಕ್ಸಿಡೆಂಟ್‌ ಗಳೂ ಇದರಲ್ಲಿ ಸಮೃದ್ಧವಾಗಿವೆ. ಪಪ್ಪಾಯಿಯಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ 60 ಮತ್ತು ಆಹಾರದಲ್ಲಿ ಫೈಬರ್ ಇರುವುದ್ರಿಂದ, ಫಿಟ್‌ನೆಸ್ ತಜ್ಞರು ಪ್ರತಿದಿನ ಪಪ್ಪಾಯಿ ಸೇವನೆ ಮಾಡಲು ಶಿಫಾರಸು ಮಾಡುತ್ತಾರೆ.

    ಪಪ್ಪಾಯಿಯಲ್ಲಿ ಕಂಡು ಬರುವ ಪಪೈನ್ ಕಿಣ್ವವು ಅಲರ್ಜಿಯ ವಿರುದ್ಧ ಹೋರಾಡುತ್ತದೆ ಮತ್ತು ಗಾಯ ಗುಣಪಡಿಸಲು ಸಹಾಯ ಮಾಡುತ್ತದೆ. ಅನೇಕ ಪ್ರಯೋಜನಗಳ ಹೊರತಾಗಿಯೂ ಪಪ್ಪಾಯಿ ಸೇವನೆಯು ಆರೋಗ್ಯಕ್ಕೆ ಹಾನಿಕರವಾಗಿದೆ.

    ಇದನ್ನೂ ಓದಿ: ಈಸ್ಟ್ರೊಜೆನ್ ಹಾರ್ಮೋನ್ ಮಟ್ಟ ಹೆಚ್ಚಾದರೆ ಯಾವ ಸಮಸ್ಯೆ ಉಂಟಾಗುತ್ತದೆ?

    ಪಪ್ಪಾಯಿ ತಿಂದ ನಂತರ ಯಾವ ಪದಾರ್ಥ ಸೇವಿಸಬಾರದು?

    ಫಿಟ್ನೆಸ್ ಗುರು ಮತ್ತು ಸಮಗ್ರ ತಜ್ಞ ಮಿಕ್ಕಿ ಮೆಹ್ತಾ ಅವರು ಪಪ್ಪಾಯಿ ಯಾವ ಪದಾರ್ಥಗಳೊಂದಿಗೆ ಸೇವನೆ ಮಾಡುವುದು ವಿಷದಂತಹ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ. ಈ ಪದಾರ್ಥಗಳ ಜೊತೆ ಪಪ್ಪಾಯಿ ಸೇವನೆ ಮಾಡುವುದರಿಂದ ಆರೋಗ್ಯ ಚೆನ್ನಾಗಿ ಇರುತ್ತದೆ. ಮತ್ತು ಪಪ್ಪಾಯಿ ಬಹಳಷ್ಟು ಪ್ರಯೋಜನ ಪಡೆಯುತ್ತದೆ. ಹೀಗಾಗಿ ಪಪ್ಪಾಯಿ ತಿಂದ ನಂತರ ಮೊಸರು, ನಿಂಬೆ ಮತ್ತು ಕಿತ್ತಳೆಯಂತಹ ಪದಾರ್ಥ ಸೇವನೆ ಮಾಡಬೇಡಿ.

    ನಿಂಬೆ ಜೊತೆ ಪಪ್ಪಾಯಿ ಸೇವನೆ ಮಾಡಬೇಡಿ

    ಪಪ್ಪಾಯಿ ಮತ್ತು ನಿಂಬೆ ಒಟ್ಟಿಗೆ ಸೇವಿನೆ ಮಾಡುವುದು ಒಳ್ಳೆಯದಲ್ಲ. ನೀವು ಸಲಾಡ್‌ನಲ್ಲಿ ಪಪ್ಪಾಯಿ ಸೇವನೆ ಮಾಡಿದರೆ ಅದಕ್ಕೆ ನಿಂಬೆ ರಸ ಸೇರಿಸಬೇಡಿ. ಇದು ವಿಷ ಆಗುವ ಸಾಧ್ಯತೆಯಿದೆ. ನಿಂಬೆ ಮತ್ತು ಪಪ್ಪಾಯಿ ಒಟ್ಟಿಗೆ ಸೇವನೆ ಮಾಡುವುದು ಹಿಮೋಗ್ಲೋಬಿನ್ ಮಟ್ಟದಲ್ಲಿ ಅಸಮತೋಲನಕ್ಕೆ ಕಾರಣ ಆಗಬಹುದು. ಮತ್ತು ವ್ಯಕ್ತಿಯು ರಕ್ತಹೀನತೆಗೆ ಬಲಿ ಆಗಬಹುದು. ಹೀಗಾಗಿ ಪಪ್ಪಾಯಿ ಮತ್ತು ನಿಂಬೆಯನ್ನು ಒಟ್ಟಿಗೆ ಸೇವನೆ ಮಾಡದಿರುವುದು ಉತ್ತಮ.

    ಮೊಸರಿನ ಜೊತೆ ಪಪ್ಪಾಯಿ ಸೇವನೆ ಮಾಡಬೇಡಿ

    ಮೊಸರು ತಣ್ಣಗಿದ್ದರೆ ಪಪ್ಪಾಯಿ ಬಿಸಿ ಆಗಿರುತ್ತದೆ. ಹಾಗಾಗಿ ಪಪ್ಪಾಯಿ ತಿಂದ ತಕ್ಷಣ ಮೊಸರು ತಿನ್ನುವುದನ್ನು ತಪ್ಪಿಸಿ. ನೀವು ಪಪ್ಪಾಯಿ ತಿಂದ ನಂತರ ಒಂದು ಅಥವಾ ಎರಡು ಗಂಟೆಗಳ ನಂತರ ಮಾತ್ರ ಮೊಸರು ಸೇವನೆ ಮಾಡಿ. ಶೀತ ಮತ್ತು ಬಿಸಿ ಸಂಯೋಜನೆಯು ನಿಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಮತ್ತು ನೀವು ಅನಾರೋಗ್ಯಕ್ಕೆ ಒಳಗಾಗಬಹುದು.

    ಪಪ್ಪಾಯಿ ಮತ್ತು ಕಿತ್ತಳೆ ಒಟ್ಟಿಗೆ ಸೇವಿಸಬೇಡಿ

    ಕಿತ್ತಳೆ ಕೂಡ ಹುಳಿ ಆಗಿರುತ್ತದೆ. ಹಣ್ಣಿನ ಸಲಾಡ್‌ ನಲ್ಲಿ ಕಿತ್ತಳೆ ಮತ್ತು ಪಪ್ಪಾಯಿ ಒಟ್ಟಿಗೆ ಸೇವನೆ ಮಾಡಬಾರದು. ಇದು ವಿಷದಂತೆ ವರ್ತಿಸಿ. ನಿಮ್ಮ ಆರೋಗ್ಯ ಹಾಳು ಮಾಡುತ್ತದೆ. ಹಾಗಾಗಿ ಕಿತ್ತಳೆಯನ್ನು ಯಾವತ್ತಿಗೂ ಪಪ್ಪಾಯಿ ಸೇವನೆ ಮಾಡಬಾರದು.

    ಟೊಮೆಟೊ ಜೊತೆ ಪಪ್ಪಾಯಿ ಸೇವನೆ ಮಾಡಬೇಡಿ

    ಪಪ್ಪಾಯಿ ಮತ್ತು ಟೊಮೆಟೊ ಸಂಯೋಜನೆಯು ಉತ್ತಮವೆಂದು ಪರಿಗಣಿಸಲು ಆಗುವುದಿಲ್ಲ. ಇವೆರಡನ್ನು ಒಟ್ಟಿಗೆ ಸೇವಿಸುವುದು ವಿಷಕಾರಿ. ಹಾಗಾಗಿ ಇದು ಪಪ್ಪಾಯಿ ಮತ್ತು ಟೊಮೆಟೊ ಒಟ್ಟಿಗೆ ಸೇವನೆ ಮಾಡಬಾರದು.

    ಇದನ್ನೂ ಓದಿ: ಕೂದಲ ಆರೈಕೆಗೆ ಕಡಲೆ ಹಿಟ್ಟಿನ ಹೇರ್ ಮಾಸ್ಕ್; ತಯಾರಿಸೋದು ಹೇಗೆ?

    ಪಪ್ಪಾಯಿ ಮತ್ತು ಕಿವಿ ಜೊತೆ ಸೇವನೆ ಮಾಡಬೇಡಿ

    ಕಿವಿಯನ್ನು ಹುಳಿ ಹಣ್ಣು ಎಂದು ಪರಿಗಣಿಸಲಾಗಿದೆ. ಪಪ್ಪಾಯಿ ಮತ್ತು ಕಿವಿ ಹಣ್ಣು ಸೇವಿಸುವುದು ಆರೋಗ್ಯಕ್ಕೆ ಹಾನಿಕರ. ಹಾಗಾಗಿ ಎರಡು ಹಣ್ಣುಗಳನ್ನು ಒಟ್ಟಿಗೆ ಸೇವಿಸಬೇಡಿ.
    Published by:renukadariyannavar
    First published: