Papad Dosa: ದಿನ ದೋಸೆ ತಿಂದು ಬೋರ್ ಆಗಿದ್ಯಾ? ಹಾಗಿದ್ರೆ ಈ ಪಾಪಡ್ ದೋಸೆ ಟ್ರೈ ಮಾಡಿ ನೋಡಿ

ಬಹುತೇಕರಿಗೆ ವಾರವಿಡೀ ಅಡುಗೆ ಮಾಡಿ ಬೋರ್ ಆಗಿ ವಾರಾಂತ್ಯದಲ್ಲಿ ಸ್ವಲ್ಪ ಮಟ್ಟಿನ ವಿಶ್ರಾಂತಿ ಸಿಕ್ಕರೆ ಸಾಕು ಅಂತ ಅನ್ನಿಸುವುದು ಸಹಜ. ಈ ವಾರಾಂತ್ಯದಲ್ಲಿ ನೀವು ಈ ಪಾಪಡ್ ದೋಸೆಯನ್ನು ಮಾಡಿಕೊಂಡು ತಿಂದರೆ ಅದರ ಮಜಾನೇ ಬೇರೆ ಆಗಿರುತ್ತದೆ.

ಪಾಪಡ್ ದೋಸೆ

ಪಾಪಡ್ ದೋಸೆ

  • Share this:
ನಾವು ದಕ್ಷಿಣ ಭಾರತಿಯರಿಗೆ ಬೆಳಿಗ್ಗೆಯ ಉಪಾಹಾರದಲ್ಲಿ (Breakfast) ಇಡ್ಲಿ, ದೋಸೆ, ವಡೆ ಮತ್ತು ಉಪ್ಪಿಟ್ಟು ಇಂತಹ ತಿಂಡಿಗಳು ಬೇಕು. ಇಂತಹ ಉಪಾಹಾರವಿಲ್ಲದೆ ನಮ್ಮ ಬೆಳಿಗ್ಗೆ (Morning) ಪರಿಪೂರ್ಣವಾಗುವುದಿಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಬಹುತೇಕ ಮನೆಗಳಲ್ಲಿ ಈ ಇಡ್ಲಿ ಮತ್ತು ದೋಸೆಯನ್ನು ಎಷ್ಟೊಂದು ಬೇರೆ ಬೇರೆ ರೀತಿಯಲ್ಲಿ ಮಾಡಿಕೊಂಡು ತಿನ್ನುತ್ತಾರೆ ಎಂದರೆ ಅವರಿಗೆ ವಾರದಲ್ಲಿ ನಾಲ್ಕೈದು ದಿನಗಳ ಕಾಲ ಇವೆರಡನ್ನೇ ಉಪಾಹಾರದಲ್ಲಿ ತಿನ್ನಿ ಎಂದು ಹೇಳಿದರೂ ಸಹ ಬೋರ್ (Bore) ಆಗುವುದಿಲ್ಲ. ದೋಸೆಯಲ್ಲಿಯೇ ಅನೇಕ ರೀತಿಯ ದೋಸೆಗಳನ್ನು (Dosa) ಮಾಡಿಕೊಂಡು ತಿಂದು ನಿಮಗೆ ಹಾಗೊಂದು ವೇಳೆ ಬೋರ್ ಆಗಿದ್ದರೆ, ಈ ದೋಸೆಯನ್ನು ಒಮ್ಮೆ ಟ್ರೈ ಮಾಡಿ ನೋಡಿ. ಇದನ್ನು ನೀವು ತ್ವರಿತವಾಗಿಯೂ ಮಾಡಿಕೊಳ್ಳಬಹುದು ಮತ್ತು ತಿನ್ನಲು ತುಂಬಾನೇ ಸ್ವಾದಿಷ್ಟಕರವಾಗಿರುತ್ತದೆ.

ಪಾಪಡ್ ದೋಸೆ
ಅದರಲ್ಲೂ ಬಹುತೇಕರಿಗೆ ವಾರವಿಡೀ ಅಡುಗೆ ಮಾಡಿ ಬೋರ್ ಆಗಿ ವಾರಾಂತ್ಯದಲ್ಲಿ ಸ್ವಲ್ಪ ಮಟ್ಟಿನ ವಿಶ್ರಾಂತಿ ಸಿಕ್ಕರೆ ಸಾಕು ಅಂತ ಅನ್ನಿಸುವುದು ಸಹಜ. ಈ ವಾರಾಂತ್ಯದಲ್ಲಿ ನೀವು ಈ ಪಾಪಡ್ ದೋಸೆಯನ್ನು ಮಾಡಿಕೊಂಡು ತಿಂದರೆ ಅದರ ಮಜಾನೇ ಬೇರೆ ಆಗಿರುತ್ತದೆ.

ಕೆಲವು ವರ್ಷಗಳಿಂದ, ಜನರು ಕೆಲವು ಪದಾರ್ಥಗಳನ್ನು ಬದಲಾಯಿಸುವ ಮೂಲಕ ಸಾಂಪ್ರದಾಯಿಕ ದೋಸೆಯನ್ನು ತ್ವರಿತವಾಗಿ ತಯಾರಿಸುವ ಮಾರ್ಗಗಳನ್ನು ಕಂಡು ಕೊಂಡಿದ್ದಾರೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅದಕ್ಕಾಗಿಯೇ ಇಂದು ನಾವು ಬೇಸನ್ ದೋಸೆ, ಲೌಕಿ ದೋಸೆ, ಸೂಜಿ ದೋಸೆ ಮತ್ತು ಹೆಚ್ಚಿನದನ್ನು ಹೊಂದಿದ್ದೇವೆ.

ಕುನಾಲ್ ಕಪೂರ್ ಅವರ ಸ್ಪೆಷಲ್ ರೆಸಿಪಿ
ಈ ಪಟ್ಟಿಗೆ ಇನ್ನೊಂದು ಹೊಸ ರೀತಿಯ ದೋಸೆಯನ್ನು ನೀವು ಸೇರಿಸಿಕೊಳ್ಳಬಹುದು. ಇಲ್ಲಿ ನಾವು ಪಾಪಡ್ ಎಂದರೆ ಹಪ್ಪಳ ದೋಸೆಯನ್ನು ಸಹ ಹೊಂದಿದ್ದೇವೆ. ಈ ಸೃಜನಶೀಲ ಪಾಕವಿಧಾನವನ್ನು ನಮಗೆ ಹೇಳಿ ಕೊಟ್ಟೋರು ಬಾಣಸಿಗ ಕುನಾಲ್ ಕಪೂರ್ . ಬಾಣಸಿಗ ಕುನಾಲ್ ಆಗಾಗ್ಗೆ ಅನನ್ಯ ಪಾಕವಿಧಾನಗಳನ್ನು ಪರಿಚಯಿಸುತ್ತಾ ಇರುತ್ತಾರೆ. ಈ ಪಾಪಡ್ ದೋಸೆಯನ್ನು ನೀವು ಕೇವಲ 20 ನಿಮಿಷಗಳಿಗಿಂತಲೂ ಕಡಿಮೆ ಸಮಯದಲ್ಲಿ ಸಿದ್ಧ ಮಾಡಿಕೊಳ್ಳಬಹುದು.

ಇದನ್ನೂ ಓದಿ: Morning Breakfast: ಬೆಳಗಿನ ತಿಂಡಿಗೆ ಗರಿಗರಿಯಾಗಿ, ರುಚಿಯಾಗಿ ಮಾಡಿ ಗೋಧಿ ದೋಸೆ! ರೆಸಿಪಿ ಇಲ್ಲಿದೆ ಓದಿ

ನೀವು ಈ ಹಪ್ಪಳ ದೋಸೆಯನ್ನು ಮಾಡಿದ ನಂತರ, ಇದಕ್ಕೆ ಪೂರಕವಾಗಿ ಹಚ್ಚಿಕೊಂಡು ತಿನ್ನಲು ಯಾವುದಾದರೂ ಚಟ್ನಿ ಬೇಕಲ್ಲವೇ? ಈ ವಿಭಿನ್ನ ರೀತಿಯ ದೋಸೆಯ ರುಚಿಯನ್ನು ಇನ್ನಷ್ಟು ಹೆಚ್ಚು ಮಾಡಿಕೊಳ್ಳಲು ಅನೇಕ ರೀತಿಯ ಚಟ್ನಿಗಳು ಮತ್ತು ಸಾಂಬಾರ್ ಅನ್ನು ಮಾಡಿಕೊಂಡು ತಿನ್ನಬಹುದು.

ಈ ಪಾಕವಿಧಾನವನ್ನು ಬೆಳಗಿನ ಉಪಾಹಾರಕ್ಕಾಗಿ ತಯಾರಿಸುವುದು ಉತ್ತಮ. ದಿನದ ಯಾವುದೇ ಸಮಯದಲ್ಲಿಯೂ ನಿಮಗೆ ಹಸಿವಾದಾಗ ನೀವು ಈ ದೋಸೆಯನ್ನು ಮಾಡಿಕೊಂಡು ತಿನ್ನಬಹುದು. ಆದ್ದರಿಂದ, ತಡ ಮಾಡದೆ ಮತ್ತು ಸ್ವಲ್ಪವೂ ಕಾಯದೆ, ಈ ರುಚಿಕರವಾದ ಹಪ್ಪಳ ದೋಸೆಯ ಪಾಕವಿಧಾನವನ್ನು ನಾವು ನೋಡಿ ಬರೋಣ ಬನ್ನಿ.

ಪಾಪಡ್ ದೋಸೆ ಎಂದರೆ ಹಪ್ಪಳ ದೋಸೆಯ ರೆಸಿಪಿ ಹೀಗಿದೆ ನೋಡಿ:
ಈ ಗರಿಗರಿಯಾದ ಹಪ್ಪಳ ದೋಸೆಯನ್ನು ತಯಾರಿಸುವ ವಿಧಾನವೆಂದರೆ ನೀವು ಮೊದಲಿಗೆ 10 ಹಪ್ಪಳಗಳನ್ನು ತೆಗೆದುಕೊಂಡು ಒಂದು ಬೌಲ್ ನಲ್ಲಿ ನೀರು ತುಂಬಿದ ಬಟ್ಟಲಿನಲ್ಲಿ ನೆನೆಸಿಡಿ. ಅದು ಒದ್ದೆಯಾಗಲು ಮತ್ತು ಮೃದುವಾಗಲು ಸ್ವಲ್ಪ ಸಮಯದವರೆಗೆ ಕಾಯಿರಿ.

ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ಮಾಡಿ ಕ್ಯಾರೆಟ್ ರೈಸ್, ಸಖತ್ ಟೇಸ್ಟಿ

ನಂತರ ಅದನ್ನು ಆ ನೀರಿನಿಂದ ಹೊರ ತೆಗೆಯಿರಿ ಮತ್ತು ಒದ್ದೆಯಾದ ಹಪ್ಪಳವನ್ನು ಬ್ಲೆಂಡರ್ ನಲ್ಲಿ ಹಾಕಿ. ಅದರಿಂದ ಒಂದು ರೀತಿಯ ನಯವಾದ ಪೇಸ್ಟ್ ಅನ್ನು ತಯಾರಿಸಿಕೊಳ್ಳಿರಿ. ನಂತರ ಒಂದು ಪ್ಯಾನ್ ಅನ್ನು ಬಿಸಿ ಮಾಡಿ, ಅದರ ಮೇಲೆ ಸ್ವಲ್ಪ ಎಣ್ಣೆಯನ್ನು ಸೇರಿಸಿ ಮತ್ತು ಈ ಮಿಶ್ರಣದ ಒಂದು ಲೋಟವನ್ನು ಅದರ ಮೇಲೆ ದುಂಡಗೆ ಸುರಿಯಿರಿ. ಇದನ್ನು ಎರಡೂ ಬದಿಗಳಿಂದ ಬೇಯಲು ಬಿಡಿ ಮತ್ತು ಸ್ವಲ್ಪ ಸಮಯದ ನಂತರ ಹೊರ ತೆಗೆದು ತಟ್ಟೆಗೆ ಹಾಕಿಕೊಂಡು ಚಟ್ನಿ ಮತ್ತು ಸಾಂಬಾರ್ ನೊಂದಿಗೆ ಆನಂದಿಸಿ.
Published by:Ashwini Prabhu
First published: