• Home
  • »
  • News
  • »
  • lifestyle
  • »
  • Panty Liners: ಸೋಂಕು ತಡೆಗಟ್ಟಲು ಸಹಾಯ ಮಾಡುತ್ತೆ ಮಹಿಳೆಯರ ಈ ಪ್ಯಾಂಟಿ ಲೈನರ್

Panty Liners: ಸೋಂಕು ತಡೆಗಟ್ಟಲು ಸಹಾಯ ಮಾಡುತ್ತೆ ಮಹಿಳೆಯರ ಈ ಪ್ಯಾಂಟಿ ಲೈನರ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Panty Liners Benefits: ಸ್ತ್ರೀ ಜನನಾಂಗದ ಅಂಗಗಳ ಸುರಕ್ಷತೆ ಮತ್ತು ಆರೋಗ್ಯಕ್ಕೆ ಪ್ಯಾಂಟಿಲೈನರ್‌ಗಳು ತುಂಬಾ ಉಪಯುಕ್ತವಾಗಿವೆ. ಅವುಗಳನ್ನು ಬಳಸುವುದರಿಂದ ಸೋಂಕನ್ನು ತಪ್ಪಿಸುವುದು ಸುಲಭ ಎಂಬುದು ನೆನಪಿಡಿ.

  • Share this:

ಮಹಿಳೆಯರಲ್ಲಿ (Women)  ಸಾಮಾನ್ಯವಾಗಿ ಯೋನಿ ಡಿಸ್ಚಾರ್ಜ್ ಆಗುತ್ತದೆ. ಆದರೆ, ಹಲವಾರು ಮಹಿಳೆಯರಿಗೆ ಆರೋಗ್ಯಕ್ಕೆ (Health) ಯೋನಿ ಡಿಸ್ಚಾರ್ಜ್ ಒಳ್ಳೆಯದು ಎಂದು ಹಲವಾರು ಜನರಿಗೆ ಗೊತ್ತಿಲ್ಲ. ಈ ಸ್ರವಿಸುವಿಕೆಯು ಯೋನಿಯನ್ನು ಸ್ವಚ್ಛಗೊಳಿಸುತ್ತದೆ. ಆದರೂ, ಕೆಲವೊಮ್ಮೆ, ಈ ಸ್ರವಿಸುವಿಕೆಯು ಹೆಚ್ಚಾಗುತ್ತದೆ. ಇದು ಅಪಾಯ ಎನ್ನುತ್ತಾರೆ ವೈದ್ಯರು. ಇದು ಕ್ಯಾಂಡಿಡಿಯಾಸಿಸ್ ಅಥವಾ ಯೀಸ್ಟ್ ಸೋಂಕಿನಿಂದ ಉಂಟಾಗುತ್ತದೆ ಎನ್ನುತ್ತಾರೆ. ಕ್ಯಾಂಡಿಡಾ ಶಿಲೀಂಧ್ರವು ಅತಿಯಾಗಿ ಉತ್ಪತ್ತಿಯಾದಾಗ ಇದು ಸಂಭವಿಸುತ್ತದೆ. ಇತರ ಶಿಲೀಂಧ್ರಗಳಂತೆ, ಈ ಶಿಲೀಂಧ್ರವು ಹೆಚ್ಚಿನ ಆರ್ದ್ರತೆ ಇರುವ ಪ್ರದೇಶಗಳಲ್ಲಿ ಬೆಳೆಯುತ್ತದೆ. ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಈ ನೋವು ತೀವ್ರಗೊಳ್ಳುತ್ತದೆ ಮತ್ತು ಅದನ್ನು ಹೋಗಲಾಡಿಸುವುದು ಕಷ್ಟವಾಗುತ್ತದೆ. 


ಪ್ಯಾಂಟಿ ಲೈನರ್ ಪ್ರಯೋಜನಗಳು ಹಲವಾರು


ಇದಕ್ಕೆ ಪ್ಯಾಂಟಿಲೈನರ್‌ಗಳನ್ನು ಬಳಸುವುದು ಪರಿಣಾಮಕಾರಿ ಪರಿಹಾರವಾಗಿದೆ. ಯೋನಿ ಸೋಂಕನ್ನು ತಡೆಗಟ್ಟಲು ಪ್ಯಾಂಟಿಲೈನರ್‌ಗಳು ಉಪಯುಕ್ತವಾಗಿವೆ.  “ಪ್ಯಾಂಟಿಲೈನರ್‌ಗಳು ಸೋಂಕನ್ನು ತಡೆಯುವುದಿಲ್ಲ, ಆದರೆ ಯೋನಿಯನ್ನು ರಕ್ಷಿಸಲು ಮತ್ತು ಅದರ ತೇವವನ್ನು ಕಡಿಮೆ ಮಾಡಲು ಇದನ್ನು ಬಳಸಲಾಗುತ್ತದೆ. ಇದು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ.


ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಪ್ಯಾಂಟಿಲೈನರ್‌ಗಳು ಲಭ್ಯವಿವೆ. ತೆಳುವಾದ, ವಿಷಕಾರಿಯಲ್ಲದ ಪ್ಯಾಂಟಿಲೈನರ್‌ಗಳನ್ನು ನಿಮಗೆ ಇಷ್ಟಬಂದ ರೀತಿ ಬಳಸಬಹುದು. ಇದು ಚರ್ಮದ ದದ್ದುಗಳು ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. "ವಿಷಕಾರಿಯಲ್ಲದ ಅಂದರೆ ರಾಸಾಯನಿಕಗಳಿಲ್ಲದ ಪ್ಯಾಂಟಿಲೈನರ್‌ಗಳನ್ನು ಬಳಸುವುದು ಯೋನಿಯಲ್ಲಿ ಸರಿಯಾದ pH ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ" ಎಂದು ಹೇಳಲಾಗುತ್ತದೆ.


ಪ್ಯಾಂಟಿಲೈನರ್​ಗಳು ಮಹಿಳೆಯರಿಗೆ ಬಹಳ ಮುಖ್ಯ. ಆದರೆ ಯಾವುದು ಉತ್ತಮ ಎಂದು ನಿರ್ಧರಿಸುವುದು ಕಷ್ಟ. ಆದ್ದರಿಂದ ನೀವು ಹತ್ತಿ, ಮರುಬಳಕೆ ಮಾಡಬಹುದಾದ ವಸ್ತುಗಳಿಂದ ಮಾಡಿದ, ಪರಿಸರ ಸ್ನೇಹಿ ಪ್ಯಾಂಟಿಲೈನರ್‌ಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಬಹುದು ಎಂದು ಸಹ ತಜ್ಞರು ಮಾಹಿತಿ ನೀಡುತ್ತಾರೆ.


ಪ್ಯಾಂಟಿಲೈನರ್​ಗಳು ಸಹ ಸೋಂಕನ್ನು ಉಂಟುಮಾಡುತ್ತವೆ ಎಂದು ಅನೇಕ ಮಹಿಳೆಯರು ಭಾವಿಸುತ್ತಾರೆ.  ಆದರೆ ಇದು ಖಂಡಿತವಾಗಿಯೂ ತಪ್ಪು. ಪ್ಯಾಂಟಿಲೈನರ್‌ಗಳು ಯೋನಿ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸುರಕ್ಷಿತವಾಗಿ, ಸ್ವಚ್ಛವಾಗಿ ಮತ್ತು ಶುಷ್ಕವಾಗಿರಿಸಲು ಸಹಾಯ ಮಾಡುತ್ತದೆ.


ಯಾವ ರೀತಿ ಇದು ಸಹಾಯ ಮಾಡುತ್ತದೆ


ಯೋನಿ ಸ್ರವಿಸುವಿಕೆಯು, ಯೋನಿಯನ್ನು ಎಲ್ಲಾ ಸಮಯದಲ್ಲೂ ತೇವವಾಗಿರಿಸುತ್ತದೆ. ಇದು ಬ್ಯಾಕ್ಟೀರಿಯಾದ ಸೋಂಕಿಗೆ ಕಾರಣವಾಗುತ್ತದೆ. ಪ್ಯಾಂಟಿಲೈನರ್‌ಗಳು ಆ ಪ್ರದೇಶವನ್ನು ಒಣಗಿಸುತ್ತವೆ ಮತ್ತು ಸೋಂಕಿನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.


ಇದನ್ನೂ ಓದಿ: ದೀಪಾವಳಿಗೆ ಸೂಪರ್ ಸ್ಟೈಲಿಂಗ್ ಟಿಪ್ಸ್ ನಿಮಗಾಗಿ, ಹೀಗೆ ರೆಡಿಯಾಗಿ


ಪ್ಯಾಂಟಿಲೈನರ್‌ಗಳನ್ನು ಬಳಸುವುದರಿಂದ, ನಿಮ್ಮ ಒಳ್ಳೆಯ ಪ್ಯಾಂಟಿಗೆ ಹಾನಿಯಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಅನುಕೂಲತೆ, ಸುರಕ್ಷತೆ ಮತ್ತು ಆರೋಗ್ಯ ಎಲ್ಲದಕ್ಕೂ ಈ ಪ್ಯಾಂಟಿ ಲೈನರ್​ಗಳು ಬಹಳ ಉಪಯುಕ್ತ.




ಕೆಲವು ಮಹಿಳೆಯರು ವಿಪರೀತವಾಗಿ ಬೆವರುವ ಸಮಸ್ಯೆ ಹೊಂದಿರುತ್ತಾರೆ. ನಿರಂತರವಾಗಿ ಓಡಬೇಕಾದ ದೈಹಿಕ ಶ್ರಮದ ಕೆಲಸ ಮಾಡುವ ಮಹಿಳೆಯರು ಹೆಚ್ಚು ಬೆವರುತ್ತಾರೆ.  ಅಂತಹ ಸಮಯದಲ್ಲಿ ಪ್ಯಾಂಟಿಲೈನರ್​ಗಳು ಬಹಳಷ್ಟು ಸಹಾಯ ಮಾಡುತ್ತವೆ. ಇದರ ಸಹಾಯದಿಂದ ಬೆವರು ಹೀರಿಕೊಳ್ಳುವ ಮೂಲಕ ಕೆಟ್ಟ ವಾಸನೆಯನ್ನು ತಡೆಯಬಹುದು.


ಯೋನಿ ಡಿಸ್ಚಾರ್ಜ್ ಹೆಚ್ಚಾಗಿ ಮುಟ್ಟಿನ ಮೊದಲು ಮತ್ತು ನಂತರ ಉಂಟಾಗುತ್ತದೆ. ಇದರಿಂದ ಅನೇಕ ಮಹಿಳೆಯರಿಗೆ ಕಷ್ಟವಾಗುತ್ತದೆ. ಪ್ಯಾಂಟಿಲೈನರ್‌ಗಳನ್ನು ಬಳಸುವುದರಿಂದ ಯೋನಿ ತೇವಾಂಶ ಕಡಿಮೆಯಾಗುತ್ತದೆ. ಅದೇ ಸಮಯದಲ್ಲಿ, ಇದು ಯೋನಿಯ ಒಣಗಲು ಬಿಡುವುದಿಲ್ಲ. ಇದು ನೈಸರ್ಗಿಕವಾಗಿ pH ಮಟ್ಟವನ್ನು ಸಮತೋಲನಗೊಳಿಸುತ್ತದೆ.


ಇದನ್ನೂ ಓದಿ: ಗೋಧಿ ಚಪಾತಿಯೊಂದೇ ಅಲ್ಲ, ಮೊಳಕೆ ಒಡೆದ ಗೋಧಿ ತಿಂದರೂ ಆರೋಗ್ಯಕ್ಕೆ ಒಳ್ಳೆಯದು


ಸ್ತ್ರೀ ಜನನಾಂಗದ ಅಂಗಗಳ ಸುರಕ್ಷತೆ ಮತ್ತು ಆರೋಗ್ಯಕ್ಕೆ ಪ್ಯಾಂಟಿಲೈನರ್‌ಗಳು ತುಂಬಾ ಉಪಯುಕ್ತವಾಗಿವೆ. ಅವುಗಳನ್ನು ಬಳಸುವುದರಿಂದ ಸೋಂಕನ್ನು ತಪ್ಪಿಸುವುದು ಸುಲಭ ಎಂಬುದು ನೆನಪಿಡಿ.

Published by:Sandhya M
First published: