ಆರೋಗ್ಯ (Health) ಪಡೆಯಲು ನೀವು ಆರೋಗ್ಯಕರ ಉಪಹಾರ (Breakfast) ಸೇವಿಸುವುದು (Eating) ತುಂಬಾ ಮುಖ್ಯ. ಬೆಳಗಿನ (Morning) ಉಪಾಹಾರದಲ್ಲಿ ಹುರಿದ ಮತ್ತು ಕರಿದ ಪದಾರ್ಥ ತಿನ್ನುವುದು ಆರೋಗ್ಯಕ್ಕೆ ಉತ್ತಮವಲ್ಲ ಎಂದು ಹೇಳುವುದನ್ನು ನೀವು ಕೇಳಿರಬಹುದು. ನೀವು ಬಯಸಿದರೆ, ಪನೀರ್ ರೆಸಿಪಿ ನೀವು ಸೇವಿಸಬಹುದು. ಪನೀರ್ (Paneer) ನಲ್ಲಿ ಹಲವು ವಿಧದ ರೆಸಿಪಿ ನೀವು ಟ್ರೈ ಮಾಡಬಹುದು. ಇದು ನಿಮಗೆ ಉತ್ತಮ ಆಯ್ಕೆಯಾಗಿದೆ. ಪನೀರ್ ಹೆಚ್ಚಿನ ಪ್ರೋಟೀನ್ ಯುಕ್ತ ಆಹಾರ. ಹಾಗಾಗಿ ಬೆಳಗಿನ ಉಪಾಹಾರದಲ್ಲಿ ಕಾಟೇಜ್ ಚೀಸ್ ತಿನ್ನುವ ಮೂಲಕ, ನೀವು ದಿನವಿಡೀ ಶಕ್ತಿ ಪಡೆಯಬಹುದು. ಪನೀರ್ ಸೇವನೆ ದೀರ್ಘಕಾಲದ ಹಸಿವಾಗದಂತೆ ತಡೆಯುತ್ತದೆ.
ಏಕೆಂದರೆ ಪನೀರ್ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಾಲಿನಿಂದ ತಯಾರಿಸಿದ ವಸ್ತುಗಳಲ್ಲಿ ಪೋಷಕಾಂಶಗಳು ಹೇರಳವಾಗಿ ಇರುತ್ತವೆ. ಇದು ದೇಹಕ್ಕೆ ಶಕ್ತಿ ನೀಡುತ್ತದೆ. ಕಾಟೇಜ್ ಚೀಸ್ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಪೌಷ್ಟಿಕ ಚೀಸ್ ಸೇವನೆ ಮೂಳೆಗಳನ್ನು ಬಲಪಡಿಸುತ್ತದೆ.
ಕಾಟೇಜ್ ಚೀಸ್ ಸೇವನೆ ತೂಕ ಇಳಿಸಲು ತುಂಬಾ ಪರಿಣಾಮಕಾರಿ. ನೀವು ಬೆಳಗಿನ ಉಪಾಹಾರದಲ್ಲಿ ಪನೀರ್ ಚಿಲ್ಲಾ ತಯಾರಿಸಿ ಸೇವಿಸಬಹುದು. ಹಾಗಾದ್ರೆ ಇಂದು ನಾವು ಪನೀರ್ ಚಿಲ್ಲಾ ರೆಸಿಪಿ ಬಗ್ಗೆ ತಿಳಿಯೋಣ.
ಇದನ್ನೂ ಓದಿ: ಥೈರಾಯ್ಡ್ನಿಂದಾಗಿ ನಿಮ್ಮ ತೂಕ ಹೆಚ್ಚುತ್ತಿದೆಯೇ? ಹಾಗಾದ್ರೆ ಈ ಪದಾರ್ಥಗಳನ್ನು ಸೇವಿಸಿ
ಪನೀರ್ ಚಿಲ್ಲಾ ರೆಸಿಪಿ
ಬೇಕಾಗುವ ಪದಾರ್ಥಗಳು
1/2 ಕಪ್ ತೊಳೆದ ಹೆಸರುಬೇಳೆ
1/4 ಟೀಸ್ಪೂನ್ ಇಂಗು
4 ಲವಂಗ
ಬೆಳ್ಳುಳ್ಳಿ 1/2 ಕಪ್
ಪನೀರ್ 1/4 ಕಪ್
ಹಸಿರು ಕೊತ್ತಂಬರಿ
2 ಹಸಿರು ಮೆಣಸಿನಕಾಯಿ
1/2 ಟೀಸ್ಪೂನ್ ಚಾಟ್ ಮಸಾಲಾ
ಉಪ್ಪು
ಎಣ್ಣೆ / ಬೆಣ್ಣೆ- ರುಚಿಗೆ ತಕ್ಕಂತೆ
ಪನೀರ್ ಚಿಲ್ಲಾ ಮಾಡುವ ವಿಧಾನ:
ಪನೀರ್ ಚಿಲ್ಲಾ ಮಾಡಲು ಮೊದಲು ಹೆಸರು ಬೇಳೆಯನ್ನು ರಾತ್ರಿಯಿಡೀ ನೆನೆಸಿ. ಈಗ ಪನೀರ್ ತುರಿ ಮತ್ತು ಹಸಿರು ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ ನುಣ್ಣಗೆ ಕತ್ತರಿಸಿ. ಈಗ ನೆನೆಸಿದ ಉದ್ದಿನಬೇಳೆ, 1/2 ಕಪ್ ನೀರು, ಶುಂಠಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಉಪ್ಪನ್ನು ಗ್ರೈಂಡರ್ ಜಾರ್ನಲ್ಲಿ ರುಬ್ಬಿ.
ಒಂದು ಪಾತ್ರೆಯಲ್ಲಿ ಪೇಸ್ಟ್ ತೆಗೆದುಕೊಂಡು ಇಂಗು ಮಿಶ್ರಣ ಮಾಡಿ. ಪ್ರತ್ಯೇಕ ಪಾತ್ರೆಯಲ್ಲಿ ತುರಿದ ಪನೀರ್, ನುಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಚಾಟ್ ಮಸಾಲಾ ಮತ್ತು ಉಪ್ಪನ್ನು ಬೆರೆಸಿ ಸ್ಟಫಿಂಗ್ ತಯಾರಿಸಿ. ಈಗ ಮಧ್ಯಮ ಉರಿಯಲ್ಲಿ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ.
ಈಗ ಹೆಸರು ಬೇಳೆ ಪೇಸ್ಟ್ ನ್ನು ಚಮಚದ ಸಹಾಯದಿಂದ ಹರಡಿ. ಒಂದು ಬದಿ ಹುರಿದ ನಂತರ, ಚಿಲ್ಲಾವನ್ನು ಇನ್ನೊಂದು ಬದಿಗೆ ತಿರುಗಿಸಿ. ಮತ್ತು ಚಮಚದ ಸಹಾಯದಿಂದ ಚಿಲ್ಲಾದ ಸುತ್ತಲೂ ಎಣ್ಣೆ ಹರಡಿ. ಚಿಲ್ಲಾವನ್ನು ಎರಡೂ ಬದಿಗಳಿಂದ ಚೆನ್ನಾಗಿ ಬೇಯಿಸಿ.
ನಿಗದಿತ ಸಮಯದ ನಂತರ ಗ್ಯಾಸ್ ಆಫ್ ಮಾಡಿ. ಒಂದು ತಟ್ಟೆಯಲ್ಲಿ ಚಿಲ್ಲಾ ತೆಗೆದುಕೊಂಡು ಅದನ್ನು 2 ಸ್ಪೂನ್ ಸ್ಟಫಿಂಗ್ನೊಂದಿಗೆ ಹರಡಿ. ನಂತರ ಚಿಲ್ಲಾವನ್ನು ಮಧ್ಯದಿಂದ ಮಡಿಸಿ. ರುಚಿಯಾದ ಪನೀರ್ ಚಿಲ್ಲಾ ರೆಡಿ. ಇದನ್ನು ಚಟ್ನಿ ಅಥವಾ ಸಾಸ್ನೊಂದಿಗೆ ಸವಿಯಿರಿ.
ಇದನ್ನೂ ಓದಿ: ಅಧಿಕ ರಕ್ತದೊತ್ತಡ ಸಮಸ್ಯೆ ಕಡಿಮೆ ಮಾಡಲು ನೀರನ್ನು ಹೀಗೆ ಕುಡಿಯಬೇಕಂತೆ
ಪನೀರ್ ಚಿಲ್ಲಾ ಸೇವನೆಯ ಪ್ರಯೋಜನಗಳು
ಬೆಳಗಿನ ಉಪಾಹಾರದಲ್ಲಿ ಪನೀರ್ ತಿನ್ನುವುದರಿಂದ ನಿಮ್ಮ ಹೃದಯದ ಆರೋಗ್ಯ ಸುಧಾರಿಸುತ್ತದೆ. ಪನೀರ್ನಲ್ಲಿರುವ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳು ದೇಹ ಪೋಷಿಸುತ್ತದೆ. ಆರೋಗ್ಯಕರ ಕೊಬ್ಬು ದೇಹದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಉತ್ತಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆ ಅಪಾಯ ತಪ್ಪಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ