ಕಾಲಿನಲ್ಲಿ ಹೀಗಾಗ್ತಿದ್ರೆ ಏನೋ ಸಣ್ಣ ಸಮಸ್ಯೆ ಅಂದ್ಕೊಂಡು ಸುಮ್ಮನಾಗ್ಬೇಡಿ, ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್​ಗೂ ಹೀಗೇ ಆಗುತ್ತೆ ಜೋಪಾನ!

ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಲಕ್ಷಣಗಳು ಕಾಲುಗಳಲ್ಲಿ ಗೋಚರಿಸುತ್ತವೆ. ಇದರಿಂದ ಈ ಕ್ಯಾನ್ಸರ್ ಅನ್ನು ಕಂಡು ಹಿಡಿಯಬಹುದು. ಇವು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ ಲಕ್ಷಣಗಳು ಆಗಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕ್ಯಾನ್ಸರ್ (Cancer) ಒಂದು ಮಾರಣಾಂತಿಕ ಕಾಯಿಲೆ (Deadly Disease) ಆಗಿದೆ. ಕ್ಯಾನ್ಸರ್ ನಲ್ಲಿ ಹಲವು ವಿಧದ (Different) ಕ್ಯಾನ್ಸರ್ ನ್ನು ನಾವು ನೋಡುತ್ತೇವೆ. ಕ್ಯಾನ್ಸರ್ ಕಾಯಿಲೆಗೆ ಶಾಶ್ವತ ಚಿಕಿತ್ಸೆ (Treatment) ಇಲ್ಲ. ಈ ಮಾರಣಾಂತಿಕ ಕಾಯಿಲೆಯಿಂದಾಗಿ, ದೇಹದ (Body) ಜೀವಕೋಶಗಳು ಕ್ರಮೇಣ ನಾಶವಾಗುತ್ತ ಹೋಗುತ್ತವೆ. ಮತ್ತು ನಂತರ ಕ್ರಮೇಣ ಅಂಗಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತ ಹೋಗುತ್ತವೆ. ಕ್ಯಾನ್ಸರ್ ಕಾಯಿಲೆಯನ್ನು ಸಕಾಲದಲ್ಲಿ ಪತ್ತೆ ಹಚ್ಚಿದರೆ ಮಾತ್ರ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಸಾಧ್ಯ. ಹಲವಾರು ರೀತಿಯ ಕ್ಯಾನ್ಸರ್‌ಗಳಿವೆ. ಇದರಲ್ಲಿ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಕೂಡ ಇದ್ದು, ಇದು ತುಂಬಾ ಅಪಾಯಕಾರಿ.

  ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ನ್ನು ಕಂಡು ಹಿಡಿಯುವುದು ತುಂಬಾ ಕಷ್ಟ

  ಇತ್ತೀಚೆಗೆ ತಜ್ಞರು, ಹೊಟ್ಟೆಯ ಕೆಳಭಾಗದ (ಮೇದೋಜೀರಕ ಗ್ರಂಥಿ) ಹಿಂಭಾಗದ ಅಂಗದಲ್ಲಿ ಉಂಟಾಗುವ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ನ ಲಕ್ಷಣಗಳ ಬಗ್ಗೆ ಹೇಳಿದ್ದಾರೆ. ಮೇದೋಜ್ಜೀರಕ ಗ್ರಂಥಿಯು ದೇಹದೊಳಗೆ ತುಂಬಾ ಇದೆ ಎಂಬುದು ತಜ್ಞರ ಅಭಿಪ್ರಾಯ. ಆದ್ದರಿಂದ ಪ್ರಾರಂಭದಲ್ಲಿ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ನ್ನು ಕಂಡು ಹಿಡಿಯುವುದು ತುಂಬಾ ಕಷ್ಟ.

  ಕಾಲುಗಳಲ್ಲಿ ಗೋಚರಿಸುತ್ತವೆ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಲಕ್ಷಣಗಳು

  ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಲಕ್ಷಣಗಳು ಕಾಲುಗಳಲ್ಲಿ ಗೋಚರಿಸುತ್ತವೆ. ಇದರಿಂದ ಈ ಕ್ಯಾನ್ಸರ್ ಅನ್ನು ಕಂಡು ಹಿಡಿಯಬಹುದು. ಇವು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ ಲಕ್ಷಣಗಳು ಆಗಿವೆ. ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ರಕ್ತವನ್ನು ಹೈಪರ್-ಕೋಗ್ಯುಲೇಟಿವ್ ಹಂತ ತಲುಪುವಂತೆ ಮಾಡುವ ಸಾಮರ್ಥ್ಯ ಹೊಂದಿದೆ.

  ಇದನ್ನೂ ಓದಿ: ನಿಮ್ಮ ತ್ವಚೆಯ ಗುಣ ಯಾವುದು? ಈ ತರದ ಸ್ಕಿನ್ ಇದ್ದೋರು ತೆಂಗಿನೆಣ್ಣೆ ಬಳಸೋ ಮುನ್ನ ಎಚ್ಚರ ವಹಿಸಿ

  ಕಾಲಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ

  ಇದು ರಕ್ತ ಹೆಪ್ಪುಗಟ್ಟುವಿಕೆ ಪ್ರಾರಂಭವಾಗುವ ಹಂತ. ಯಾರಲ್ಲಾದರೂ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಬಂದರೆ, ಅವನ ಕಾಲಿನಲ್ಲಿ ರಕ್ತ ಹೆಪ್ಪುಗಟ್ಟಲು ಶುರುವಾಗುತ್ತದೆ. ಮತ್ತು ಇದು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಮತ್ತು ಇದು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ನ ಮೊದಲ ಲಕ್ಷಣವಾಗಿದೆ.

  ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಹಂತವನ್ನು ಡೀಪ್ ಸಿರೆ ಥ್ರಂಬೋಸಿಸ್ (ಡಿವಿಟಿ) ಎಂದು ಕರೆಯುತ್ತಾರೆ. ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಕ್ಯಾನ್ಸರ್ ನ ಲಕ್ಷಣಗಳು ನೋವು, ಊತ, ಪಾದಗಳ ಕೆಂಪು ಮತ್ತು ಬೆಚ್ಚಗಿನ ಪಾದಗಳನ್ನು ಒಳಗೊಂಡಿರುತ್ತದೆ.

  ರಕ್ತ ಹೆಪ್ಪುಗಟ್ಟುವಿಕೆಯು ಶ್ವಾಸಕೋಶ ತಲುಪುವುದು

  ಕೆಲವು ಸಂದರ್ಭಗಳಲ್ಲಿ, ರಕ್ತ ಹೆಪ್ಪುಗಟ್ಟುವಿಕೆಯು ಶ್ವಾಸಕೋಶವನ್ನು ಸಹ ತಲುಪುತ್ತದೆ. ಇದು ಉಸಿರಾಟದ ತೊಂದರೆಗೆ ಕಾರಣವಾಗಬಹುದು. ಈ ಸ್ಥಿತಿಯನ್ನು ಪಲ್ಮನರಿ ಎಂಬಾಲಿಸಮ್ (PE) ಎಂದು ಕರೆಯುತ್ತಾರೆ. ಮತ್ತು ಇದು ಸಾವಿನ ಅಪಾಯ ಹೆಚ್ಚಿಸುತ್ತದೆ.

  ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕಂಡು ಬಂದರೆ, ಅವರಿಗೆ ಕ್ಯಾನ್ಸರ್ ಇದೆ ಎಂದು ಅರ್ಥವಲ್ಲ. ಅನೇಕ ಬಾರಿ ರಕ್ತ ಹೆಪ್ಪುಗಟ್ಟುವಿಕೆ ಇತರ ಕಾರಣಗಳಿಂದಲೂ ಉಂಟಾಗುತ್ತದೆ. ಇತ್ತೀಚಿನ ಸಂಶೋಧನೆ ಪ್ರಕಾರ, ಸುಮಾರು 70 ಪ್ರತಿಶತ ಜನರಿಗೆ ತಮ್ಮ ರಕ್ತದಲ್ಲಿ ಹೆಪ್ಪುಗಟ್ಟುವಿಕೆ ಇದೆ ಎಂಬ ಸಂಗತಿಯೇ ತಿಳಿದಿರುವುದಿಲ್ಲ.

  ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅತ್ಯಂತ ಅಪಾಯಕಾರಿ

  ಯುರೋಪಿಯನ್ ಕ್ಯಾನ್ಸರ್ ರೋಗಿಗಳ ಒಕ್ಕೂಟದ (ECPC) ಪ್ರಕಾರ, ರೋಗಿಗಳಲ್ಲಿ ಅರಿವಿನ ಕೊರತೆಯಿಂದಾಗಿ DVT ಅಪಾಯವು ಹೆಚ್ಚಾಗುತ್ತಿದೆ. ಮೇಯೊ ಕ್ಲಿನಿಕ್‌ನ ಪ್ಯಾಂಕ್ರಿಯಾಸ್ ಡಿಸೀಸ್ ಗ್ರೂಪ್‌ನ ನಿರ್ದೇಶಕ ಡಾ. ಶಾಂತಿ ಸ್ವರೂಪ್ ವೇಗ್ ಪ್ರಕಾರ, ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಚಿಕಿತ್ಸೆಗೆ ನೀಡಲು ತುಂಬಾ ಕಷ್ಟ.

  DVT ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಅನ್ನು ಹೆಚ್ಚು ಅಪಾಯಕಾರಿ ಮಾಡುತ್ತದೆ. ಈ ಕಾಯಿಲೆಯ ರೋಗಿಗಳಲ್ಲಿ ಕೇವಲ 5 ಪ್ರತಿಶತದಷ್ಟು ಮಾತ್ರ ಬದುಕುಳಿಯುತ್ತಾರೆ. ಆಧುನಿಕ ಚಿಕಿತ್ಸೆಯಿಂದಾಗಿ, ಈ ಪ್ರಮಾಣವು 7 ಪ್ರತಿಶತದವರೆಗೆ ಇರುತ್ತದೆ.

  ಇದನ್ನೂ ಓದಿ: ಮೇಕೆ ಹಾಲು ಕುಡಿದರೆ ಗ್ಯಾಸ್ಟ್ರಿಕ್ ಇರಲ್ಲ, ಮಕ್ಕಳಿಗೆ ಕೊಟ್ಟರೆ ಸಿಗೋ ಆರೋಗ್ಯ ಲಾಭಗಳಿವು

  ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ ಲಕ್ಷಣಗಳು

  ತೂಕ ನಷ್ಟ ಮತ್ತು ಹೊಟ್ಟೆ ನೋವಿನಂತಹ ಲಕ್ಷಣಗಳು ಗೋಚರಿಸುವುದಿಲ್ಲ. ಇದರಿಂದಾಗಿ ಅದನ್ನು ಕಂಡು ಹಿಡಿಯುವುದು ಕಷ್ಟ. ಸಾಮಾನ್ಯವಾಗಿ ಈ ರೀತಿಯ ಕ್ಯಾನ್ಸರ್ ಇರುವವರಲ್ಲಿ ಅಜೀರ್ಣ ಮತ್ತು ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಅಂದರೆ ಅಸಿಡಿಟಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
  Published by:renukadariyannavar
  First published: