• Home
  • »
  • News
  • »
  • lifestyle
  • »
  • Panchatantra Stories: ದುಷ್ಟ ಬುದ್ದಿ ತೋರಿಸಿದ ಹಾವಿಗೆ ಬುದ್ದಿ ಕಲಿಸಿದ ಬಾತುಕೋಳಿ, ಮಕ್ಕಳಿಗಾಗಿ ಪಂಚತಂತ್ರ ಕಥೆ

Panchatantra Stories: ದುಷ್ಟ ಬುದ್ದಿ ತೋರಿಸಿದ ಹಾವಿಗೆ ಬುದ್ದಿ ಕಲಿಸಿದ ಬಾತುಕೋಳಿ, ಮಕ್ಕಳಿಗಾಗಿ ಪಂಚತಂತ್ರ ಕಥೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Panchatantra Stories for Kids: ನೀವು ಗಾದೆಯನ್ನು ನೀವು ಮಕ್ಕಳಿಗೆ ಹೇಳಿದರೆ ಸುಲಭವಾಗಿ ಅರ್ಥವಾಗುವುದಿಲ್ಲ, ಆದರೆ ಒಂದು ಸುಂದರ ಕಥೆಯ ಮೂಲಕ ಹೇಳುವುದು ನಿಮಗೆ ಸಹ ಬಹಳ ಸುಲಭ.

  • Share this:

ಅತಿ ಆಸೆ ಗತಿಗೇಡು ಅಥವಾ ಆಸೆಯೇ ದುಃಖಕ್ಕೆ ಮೂಲ ಎನ್ನುವ ಗಾದೆಯನ್ನು ನಾವು ಕೇಳಿರುತ್ತೇವೆ. ಈ ಗಾದೆಗಳು ಎಲ್ಲಾ ರೀತಿಯಲ್ಲಿ ಬಹುತೇಕ ಎಲ್ಲಾ ಸಮಯಕ್ಕೆ (Time)  ಸೂಕ್ತವಾಗುತ್ತದೆ. ನೀವು ಗಾದೆಯನ್ನು ನೀವು ಮಕ್ಕಳಿಗೆ (Children) ಹೇಳಿದರೆ ಸುಲಭವಾಗಿ ಅರ್ಥವಾಗುವುದಿಲ್ಲ, ಆದರೆ ಒಂದು ಸುಂದರ ಕಥೆಯ (Story) ಮೂಲಕ ಹೇಳುವುದು ನಿಮಗೆ ಸಹ ಬಹಳ ಸುಲಭ. ಅದರಲ್ಲೂ ಪ್ರಾಣಿಗಳ ಕಥೆಯ ಮೂಲಕ ನೀವು ಮಕ್ಕಳಿಗೆ (Children) ನೀತಿಪಾಠಗಳನ್ನು ಹೇಳಬಹುದು. ಇವತ್ತು ನಾವು ಹೇಳುತ್ತಿರುವ ಕಥೆ 2 ಬಾತುಕೋಳಿಗಳು ಹಾಗೂ ಹಾವು ಮತ್ತು ಹದ್ದಿನ ಕಥೆಯಾಗಿದೆ. ಹೇಗೆ ದುಷ್ಟ ಹಾವಿಗೆ (Snake) ಹದ್ದು ಮತ್ತು ಬಾತುಕೋಳಿಗಳು ಬುದ್ದಿ ಕಲಿಸುತ್ತವೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ.


ಬಾತುಕೋಳಿಗಳ ಕಥೆ ಇದು


ಒಂದು ದಟ್ಟವಾದ ಕಾಡು, ಹಚ್ಚ ಹಸಿರಿನಿಂದ ತುಂಬಿರುವ ಆ ಕಾಡಿನಲ್ಲಿ ಒಂದು ದೊಡ್ಡ ನದಿ.  ಆ ನದಿಗೆ ಒಂದು ಬಾತುಕೋಳಿಗಳ ದಂಡೇ ನೀರು ಕುಡಿಯಲು ಬರುತ್ತಿದ್ದವು. ಆ ಗುಂಪಿನಲ್ಲಿ ಡ್ರೇಕ್ ಮತ್ತು ಡಕ್ ಎನ್ನುವ ಜೋಡಿ ಇದ್ದವು.  ಈ ನದಿಗೆ ಕೇವಲ ಬಾತುಕೋಳಿಗಳಲ್ಲದೇ ಕಾಡಿನ ಹಲವಾರು ಪ್ರಾಣಿಗಳು ಸಹ  ನೀರು ಕುಡಿಯಲು ಬರುತ್ತಿದ್ದವು. ಹೀಗೆ ಒಂದು ದಿನ ಡ್ರೇಕ್ 2 ಮೊಟ್ಟೆಗಳನ್ನು ಹಾಕುತ್ತದೆ.  ಈ ಜೋಡಿ ತಮ್ಮ ಮೊಟ್ಟೆಗಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿರುತ್ತಾರೆ. ಈ ನಡುವೆ, ಅಲ್ಲಿಯೇ ಸ್ವಲ್ಪ ದೂರದಲ್ಲಿದ್ದ ಮರದ ಬುಡದಲ್ಲಿ ಒಂದು ಹಾವಿನ ಹುತ್ತವಿತ್ತು. ಆ ಹುತ್ತದಲ್ಲಿ ವಾಸವಿದ್ದ ಹಾವು ಈ ಪ್ರಾಣಿಗಳನ್ನು ಗಮನಿಸುತ್ತಿತ್ತು.


ಹಾಗೆಯೇ, ಈ ಮೊಟ್ಟೆಯನ್ನು ಸಹ ಅದು ನೋಡುತ್ತಿತ್ತು. ಅದನ್ನು ನೋಡಿ ಮನಸ್ಸಿನಲ್ಲಿಯೇ ಈ 2 ಮೊಟ್ಟೆಗಳು ಸಿಕ್ಕರೆ ಎಷ್ಟು ಚೆನ್ನಾಗಿರುತ್ತದೆ ಎಂದುಕೊಂಡು, ಹೇಗಾದರೂ ಅದನ್ನು ತಿನ್ನಬೇಕು ಎನ್ನುವ ಉಪಾಯ ಮಾಡುತ್ತಿತ್ತು.  ಹೀಗಿರುವಾಗ ಸಂಜೆಯ ಸಮಯಕ್ಕೆ ಬಾತುಕೋಳಿಗಳ ತಂಡ ನೀರು ಕುಡಿಯಲು ಬರುತ್ತದೆ. ಈ ಡ್ರೇಕ್ ಮತ್ತು ಡಕ್ ಅನ್ನು ನೋಡಿ, ಬೆಳಗ್ಗೆಯಿಂದ ಮೊಟ್ಟೆಗಳನ್ನು ನೋಡಿಕೊಳ್ಳುತ್ತಿದ್ದೀರಾ, ಹಸಿವಾಗುವುದಿಲ್ಲವೇ ಎಂದು ಕೇಳುತ್ತವೆ. ಆಗ, ಈ ಜೋಡಿ ಹಸಿವಾಗುತ್ತಿದೆ, ಆದರೆ ಮೊಟ್ಟೆಗಳನ್ನು ಯಾರು ನೋಡಿಕೊಳ್ಳುವುದು ಎಂದು ಯೋಚನೆ ಮಾಡುತ್ತವೆ.


ಇದನ್ನೂ ಓದಿ: ವಾರದಲ್ಲಿ ಒಮ್ಮೆ ಈ ಆಹಾರಗಳನ್ನು ಮಿಸ್ ಮಾಡದೇ ತಿನ್ನಿ, ಆಮೇಲ್ ಮ್ಯಾಜಿಕ್ ನೋಡಿ


ಮೊಟ್ಟೆ ತಿಂದ ದುಷ್ಟ ಹಾವು


ಆಗ ಡಕ್, ಇಲ್ಲಿ ಏನು ಆಗುವುದಿಲ್ಲ, ನಾವು ರಾತ್ರಿಯೊಳಗೆ ವಾಪಸ್​ ಬರೋಣ ಎಂದು ಕರೆದುಕೊಂಡು ಹೋಗುತ್ತದೆ. ಹೀಗೆ ಡ್ರೇಕ್ ಮತ್ತು ಡಕ್ ಹೋಗುವುದನ್ನ ಗಮನಿಸಿದ ಹಾವು ಖುಷಿಯಿಂದ ಮೊಟ್ಟೆಯ ಬಳಿ ಬರುತ್ತದೆ. 2 ಮೊಟ್ಟೆಯನ್ನು ತಿಂದು, ಹುತ್ತದ ಒಳಗೆ ಹೋಗಿ ಮಲಗುತ್ತದೆ.  ಮರಳಿ ಬಂದ ಡ್ರೇಕ್ ಮತ್ತು ಡಕ್​ ಮೊಟ್ಟೆಗಳು ಇಲ್ಲದಿರುವುದನ್ನ ನೋಡಿ ತುಂಬಾ ಬೇಸರ ಮಾಡಿಕೊಳ್ಳುತ್ತವೆ. ಇದನ್ನು ಯಾರು ತಿಂದಿರುವುದು ಎಂಬುದನ್ನ ಕಂಡು ಹಿಡಿಯಲು ಉಪಾಯ ಮಾಡೋಣ ಎಂದು ನಿರ್ಧರಿಸುತ್ತವೆ.




ಹೀಗಿರುವಾಗ 2 ದಿನದ ನಂತರ ಮತ್ತೆ ಡ್ರೇಕ್ 2 ಮೊಟ್ಟೆ ಹಾಕುತ್ತದೆ. ಅದನ್ನು ಸಹ ಬಹಳ ನಾಜೂಕಾಗಿ ಕಾಪಾಡುತ್ತವೆ. ಮತ್ತೆ ಸಂಜೆ ಇಬ್ಬರು ಹಸಿವಾಗುತ್ತಿದೆ ಏನು ಮಾಡುವುದು ಎಂದು ಯೋಚಿಸಿ, ಮೊಟ್ಟೆಯ ಮೇಲೆ ಹುಲ್ಲು ಹಾಕಿ ಹೋಗುತ್ತವೆ. ಆದರೆ, ಇದನ್ನು ಸಹ ಗಮನಿಸಿದ ಹಾವು, ಮತ್ತೆ ಬಂದು 2 ಮೊಟ್ಟೆಗಳನ್ನು ತಿನ್ನುತ್ತದೆ. ಇದನ್ನು ನದಿಯ ಹತ್ತಿರದಲ್ಲಿದ್ದ ಮರದ ಬದಿಯಲ್ಲಿ ನಿಂತು ಬಾತುಕೋಳಿಗಳು ನೋಡುತ್ತಿರುತ್ತವೆ. ಆದರೆ, ಮೊಟ್ಟೆಯ ಬಳಿ  ಹೋದಾಗ ಮೊಟ್ಟೆ ಇರುವುದಿಲ್ಲ.


ಇದನ್ನು ಮಾಡುತ್ತಿರುವುದು ಹಾವು ಎಂದು ತಿಳಿಯುತ್ತದೆ.  ಏನು ಮಾಡಬೇಕು ಎಂದು ಯೋಚನೆ ಮಾಡುತ್ತಿರುವಾಗ, ಅಲ್ಲಿಗೆ ಹದ್ದು ಸಹ ಬಂದು ನೀರು ಕುಡಿಯುತ್ತಿರುತ್ತದೆ. ಆಗ, ಡೆಕ್​ ಹದ್ದಿನ ಬಳಿ ಹೋಗಿ ಹಾವು ಮಾಡುತ್ತಿರುವ ಕೆಟ್ಟ ಕೆಲಸದ ಬಗ್ಗೆ ಹೇಳುತ್ತದೆ. ಆಗ ಹದ್ದು ನನಗೆ ಹಾವು ಎಂದರೆ ಬಹಳ ಇಷ್ಟ. ಅಲ್ಲದೇ, ಈ ರೀತಿ ಕೆಟ್ಟ ಬುದ್ದಿ ಮಾಡುತ್ತಿದೆ ಎಂದರೆ ನಾನು ಸುಮ್ಮನೆ ಬಿಡುವುದಿಲ್ಲ. ನಾನು ನಿಮಗೆ ಸಹಾಯ ಮಾಡುತ್ತೇನೆ, ಸರಿಯಾಗಿ ಬುದ್ದಿ ಕಲಿಸುತ್ತೇನೆ ಎನ್ನುತ್ತದೆ.


ಇದನ್ನೂ ಓದಿ: ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು - ಈ ಕಥೆಯ ಸಾರ ಬಹಳ ಸುಂದರ


ಹದ್ದಿನ ಸಹಾಯದಿಂದ ಬುದ್ದಿ ಕಲಿಸಿದ ಬಾತುಕೋಳಿಗಳು


ಮತ್ತೆ 2 ದಿನ ಬಿಟ್ಟು ಡ್ರೇಕ್ 2 ಮೊಟ್ಟೆಗಳನ್ನು ಹಾಕುತ್ತದೆ. ಅಲ್ಲದೇ, ಹಾವಿಗೆ ಕಾಣುವ ರೀತಿ ಮೊಟ್ಟೆಯನ್ನು ಅಲ್ಲಿಯೇ ಬಿಟ್ಟು ಹೋಗುತ್ತವೆ. ಹೋಗಿ ಅವು ಮರದ ಹಿಂದಿನ ಬದಿಯಲ್ಲಿ ಅಡಗಿ ನಿಲ್ಲುತ್ತವೆ. ಹೀಗಿರುವಾಗ ಹಾವು ಬಹಳ ಖುಷಿಯಿಂದ ಮೊಟ್ಟೆಯನ್ನು ತಿನ್ನಲು ಬರುತ್ತದೆ. ಆಗ , ಮರದ ಮೇಲೆ ಕುಳಿತಿದ್ದ ಹದ್ದು ಹಾರಿ ಬಂದು ಹಾವನ್ನು ಕಚ್ಚಿಕೊಂಡು ಹೋಗುತ್ತದೆ. ನಂತರ ಬೆಟ್ಟದ ಮೇಲೆ ಹೋಗಿ ಅಲ್ಲಿದ್ದ 3 ಹದ್ದುಗಳ ಜೊತೆ ಚುಚ್ಚಿ ಚುಚ್ಚಿ ಸಾಯಿಸಿ, ಹಾವನ್ನು ತಿನ್ನುತ್ತದೆ.  ಈ ಕಡೆ ತಮ್ಮ ಮೊಟ್ಟೆಗಳು ಉಳಿದ ಖುಷಿಯಲ್ಲಿ ಡ್ರೇಕ್ ಹಾಗೂ ಡಕ್ ಹದ್ದಿಗೆ ಧನ್ಯವಾದ ತಿಳಿಸುತ್ತದೆ. ಹಾವು ಅತಿ ಆಸೆ ಮಾಡಿ, ದುಷ್ಟ ಬುದ್ದಿ ತೋರಿಸದಿದ್ದರೆ ಇಂದು ಜೀವಂತವಾಗಿರುತ್ತಿತ್ತು.

Published by:Sandhya M
First published: