• Home
  • »
  • News
  • »
  • lifestyle
  • »
  • Panchatantra Story: ಕಷ್ಟ ಬಂದಾಗ ಜಾಣ್ಮೆಯಿಂದ ಎದುರಿಸಬೇಕು, ಈ 3 ಮೀನುಗಳ ಕಥೆ ಕೇಳಿ

Panchatantra Story: ಕಷ್ಟ ಬಂದಾಗ ಜಾಣ್ಮೆಯಿಂದ ಎದುರಿಸಬೇಕು, ಈ 3 ಮೀನುಗಳ ಕಥೆ ಕೇಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Weekend Entertainment: ಒಂದು ಸರೋವರದಲ್ಲಿ ಮೂರು ಮೀನುಗಳು ಇರುತ್ತದೆ. ಆ ಮೂರು ಮೀನುಗಳು ಉತ್ತಮ ಸ್ನೇಹಿತರಾಗಿದ್ದವು. ಮೊದಲ ಮೀನು ಬಹಳ ಚುರುಕಾಗಿತ್ತು. ಎಲ್ಲಾವನ್ನು ಗ್ರಹಿಸಿ, ಅದಕ್ಕೆ ತಕ್ಷಣವೇ ಪರಿಹಾರ ಪಡೆಯುವ ಗುಣ ಅದರಲ್ಲಿತ್ತು.

  • Share this:

ಪ್ರತಿಯೊಬ್ಬರ ಜೀವನದಲ್ಲಿ (Life) ಕಷ್ಟಗಳ (Struggles) ಸಾಮಾನ್ಯವಾಗಿ ಬರುತ್ತದೆ. ಹಾಗೆಯೇ ಹಲವಾರು ಬದಲಾವಣೆಗಳನ್ನು ಸಹ ಅನುಭವಿಸಬೇಕಾಗುತ್ತದೆ. ಬದಲಾವಣೆಗಳು (Changes) ಬಂದಾಗ ಅದಕ್ಕೆ ತಕ್ಕಂತೆ ಒಗ್ಗಿಕೊಳ್ಳಬೇಕು. ನಾವು ಯಾವಾಗಲೂ ಬದಲಾವಣೆಗೆ ತೆರೆದುಕೊಳ್ಳಬೇಕು ಮತ್ತು ಅದಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು. ಅಪಾಯ ಬಂದಾಗ ಪಾರಾಗಲು ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ನಮ್ಮ ಅದೃಷ್ಟ ಸರಿಯಿಲ್ಲ ಎಂದು ಹಳಿದುಕೊಂಡು ಕುಳಿತರೆ ಏನೂ ಮಾಡಲು ಆಗುವುದಿಲ್ಲ. ಬೇರೆಯವರ ಸಲಹೆ ಪಡೆಯಬೇಕು ಅಥವಾ ನಾವೇ ಪ್ರಯತ್ನ ಮಾಡಬೇಕು. ಈ ರೀತಿ ಸಮಸ್ಯೆಗಳನ್ನು ಎದುರಿಸಲು ನಮಗೆ ನಮ್ಮ ನೀತಿ ಪಾಠಗಳು ಸಹಾಯ ಮಾಡುತ್ತದೆ. ಅದರಲ್ಲೂ ಮಕ್ಕಳಿಗೆ (Children) ಮೊದಲಿನಿಂದಲೂ ಈ ನೀತಿ ಕಥೆಗಳನ್ನು (nithi Kathegalu) ಹೇಳುವುದು ಅವರಿಗೆ ಮುಂದಿನ ಜೀವನದಲ್ಲಿ ಕಷ್ಟಗಳನ್ನು ಎದುರಿಸಲು ಸಹಾಯ ಮಾಡುತ್ತದೆ.  


ಕಷ್ಟ ಬಂದಾಗ ಎದುರಿಸಬೇಕು


ನಾವೆಲ್ಲರೂ ಮಕ್ಕಳಿದ್ದಾಗ ಪಂಚತಂತ್ರದ ಕಥೆಗಳನ್ನು ಕೇಳಿ ಬೆಳೆದಿದ್ದೇವೆ. ಕಥೆಯ ಮೂಲಕ ಜೀವನದ ಪಾಠಗಳನ್ನು ಹೇಳಿಕೊಡುವ ಈ ಕತೆಗಳು ಇಂದಿನ ಸಮಾಜಕ್ಕೆ ನಿಜಕ್ಕೂ ಒಪ್ಪುತ್ತದೆ.  ಅಪಾಯ ಬಂದಾಗ ಪಾರಾಗಲು ಏನು ಮಾಡಬೇಕು ಎಂಬುದನ್ನ ನೀವು ಮಕ್ಕಳಿಗೆ ಒಂದು ಸುಂದರ ಕಥೆಯ ಮೂಲಕ ಹೇಳಬೇಕು. ಈ ವೀಕೆಂಡ್​ ನೀವು ಪಂಚತಂತ್ರದ ಈ ಕಥೆ ಹೇಳಿ.




ಒಂದು ಸರೋವರದಲ್ಲಿ ಮೂರು ಮೀನುಗಳು ಇರುತ್ತದೆ. ಆ ಮೂರು ಮೀನುಗಳು ಉತ್ತಮ ಸ್ನೇಹಿತರಾಗಿದ್ದವು. ಮೊದಲ ಮೀನು ಬಹಳ ಚುರುಕಾಗಿತ್ತು. ಎಲ್ಲಾವನ್ನು ಗ್ರಹಿಸಿ, ಅದಕ್ಕೆ ತಕ್ಷಣವೇ ಪರಿಹಾರ ಪಡೆಯುವ ಗುಣ ಅದರಲ್ಲಿತ್ತು. ಎರಡನೇಯದಕ್ಕೆ ತೊಂದರೆಯಿಂದ ಹೊರಬರುವ ಮಾರ್ಗವನ್ನು ಹೇಗೆ ಕಂಡುಹಿಡಿಯುವುದು ಎಂದು ತಿಳಿದಿತ್ತು. ಹಾಗಾಗಿ ಯಾವುದೇ ಕಷ್ಟ ಬಂದರೂ ಹೆದರದೇ ಎದುರಿಸುತ್ತತ್ತು. ಆದರೆ ಮೂರನೆಯದು ಕೆಟ್ಟ ಮತ್ತು ದ್ವೇಷದ ಗುಣಗಳನ್ನು ಹೊಂದಿತ್ತು.


ಅಲ್ಲದೇ, ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳದೇ ಜೀವನ ಸಾಗಿಸುತ್ತಿತ್ತು. ಅಲ್ಲದೇ, ಎಲ್ಲದಕ್ಕೂ ಅದೃಷ್ಟವನ್ನು ಬೈಯುವ ಗುಣ ಇತ್ತು. ಹೀಗೆ ದಿನಗಳು ಕಳೆದ ನಂತರ ಒಂದು ದಿನ ಆ ಸರೋವರದಲ್ಲಿ ಮೀನು ಹಿಡಿಯುವ ಬಗ್ಗೆ ಮೀನುಗಾರ ಪ್ಲ್ಯಾನ್​ ಮಾಡುತ್ತಿದ್ದ. ಆತನ ಮಾತುಗಳನ್ನು ಮೊದಲ ಮೀನು ಕೇಳಿಸಿಕೊಂಡಿತ್ತು.  ಅವನ ಮಾತು ಕೇಳಿ ಮುಂಬರುವ ಅಪಾಯವನ್ನು ಅರಿತುಕೊಂಡು  ಮೊದಲ ಮೀನು ತನ್ನ ಸ್ನೇಹಿತರಿಗೆ ಇದನ್ನು ಹೇಳಿ, ಮೊದಲು ಸರೋವರದಿಂದ ಹೊರಹೋಗುವಂತೆ ಎಚ್ಚರಿಕೆ ನೀಡಿತು.




ಇದನ್ನೂ ಓದಿ: ಜೀವನದಲ್ಲಿ ಆಯ್ಕೆ ಮಾಡುವಾಗ ಹೀಗೂ ಯೋಚನೆ ಮಾಡ್ಬೇಕು, ಮಕ್ಕಳಿಗೆ ಹೇಳಿ ಈ ನೀತಿ ಕಥೆ


ಸೋಮಾರಿ ಮೂರನೇ ಮೀನು


ಇದನ್ನು ಕೇಳಿದ ಎರಡನೆ ಮೀನು, “ನಾನು ಈ ಸರೋವರದಿಂದ ಹೊರ ಹೋಗಲು ಇಷ್ಟ ಪಡುವುದಿಲ್ಲ. ನಾನು ಇಲ್ಲಿಯೇ ಇರುತ್ತೇನೆ ಮತ್ತು ನಾನು ಸಿಕ್ಕಿಬಿದ್ದರೆ ಅದರಿಂದ ಹೇಗಾದರೂ ಮಾಡಿ ಹೊರ ಬರುವ ದಾರಿ ಕಂಡುಕೊಳ್ಳುತ್ತೇನೆ ಎಂದು ಹೆದರದೇ ಹೇಳಿತು. ಇನ್ನು ಮೂರನೆಯ ಮೀನು, “ನನಗೆ ಹೊರಗೆ ಹೋಗಲು ಇಷ್ಟವಿಲ್ಲ. ನಾನು ಇಲ್ಲಿಯೇ ಇರುತ್ತೇನೆ ಮತ್ತು ನಾನು ಸಿಕ್ಕಿ ಬಿದ್ದರೆ ನನ್ನ ಹಣೆ ಬರಹ ಎಂದು ತಿಳಿದುಕೊಳ್ಳುತ್ತೇನೆ. ಸಾವು ಬಂದರೆ ಬರಲಿ ಎಂದು” ಹೇಳುತ್ತದೆ.




ಈ ಮಾತುಗಳ್ನು ಕೇಳಿದ ಮೊದಲ ಮೀನು, ತನ್ನ ಜೀವ ಉಳಿಸಿಕೊಳ್ಳುವ ಕಾರಣದಿಂದ ತನ್ನನು ತಾನೂ ರಕ್ಷಿಸಿಕೊಳ್ಳಲು ಹೊರಬಂದಿತು. 2 ಮಿನುಗಳು ಅದೇ ಸರೋವರದಲ್ಲಿ ಇದ್ದವು. ಹೀಗಿರುವಾಗ, ಮಾರನೇ ದಿನ ಮೀನುಗಾರ ಮೀನುಗಳನ್ನು ಹಿಡಿಯಲು ಬಲೆ ಬೀಸಿದಾಗ, ಅಲ್ಲಿದ್ದಉಳಿದ ಎರಡು ಮೀನುಗಳು ಬಲೆಗೆ ಬಿದ್ದವು.


ಇದನ್ನೂ ಓದಿ: ಸೊಳ್ಳೆ ಓಡಿಸೋಕೆ ಈ ಬತ್ತಿ ಬಳಸಿ ಆರೋಗ್ಯ ಸಮಸ್ಯೆ ತಂದುಕೊಳ್ಳಬೇಡಿ




ಆದರೆ ಬಹಳ ಜಾಣ್ಮೆಯನ್ನು ಹೊಂದಿದ್ದ ಈ ಎರಡನೆ ಮೀನು ಸತ್ತಂತೆ ನಟಿಸಿತು. ಇದರಿಂದಮೀನುಗಾರ ಅದನ್ನು ಕೆರೆಯಲ್ಲಿಯೇ ಬಿಟ್ಟ. ಹೀಗೆ ಎರಡನೇ ಮೀನು ಜಾಣತನದಿಂದ ತಪ್ಪಿಸಿಕೊಂಡಿತು. ಈ ಸೋಮಾರಿ ಮೂರನೆಯ ಮೀನು ಏನೂ ಮಾಡದೆ ಸಿಕ್ಕಿಬಿದ್ದು ಸತ್ತಿತು.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು