ಹಣೆ ಬರಹಕ್ಕೆ ಹೊಣೆ ಯಾರು ಎನ್ನುವ ಗಾದೆಯನ್ನು ನಾವೆಲ್ಲರೂ ಕೇಳಿರುತ್ತೇವೆ. ನಮ್ಮ ಹಣೆಯಲ್ಲಿ ಆ ದೇವರು (God) ಏನು ಬರೆದಿರುತ್ತಾನೋ ಅದೇ ಆಗುವುದು ಎಂಬುದನ್ನ ನಾವು ಮರೆಯಬಾರದು. ಅದನ್ನು ಬದಲಾಯಿಸುವುದು ಯಾರೂ ಕೈನಲ್ಲಿಯೂ ಸಾಧ್ಯವಿಲ್ಲ. ಅದಕ್ಕೆ ಸೂಕ್ತವಾಗುವ ಕಥೆಯೊಂದು (Story) ಇಲ್ಲಿದೆ. ಬಹಳ ವರ್ಷಗಳ ಹಿಂದೆ ಸುವರ್ಣಗಿರಿ ಎಂಬ ರಾಜ್ಯ ಇತ್ತು, ಆ ರಾಜ್ಯವನ್ನು ಚಂದ್ರಸೇನ ಎಂಬ ಅದ್ಭುತ ಮಹಾರಾಜ ಆಳ್ವಿಕೆ ಮಾಡುತ್ತಿದ್ದ. ಈ ರಾಜನ (King) ಬಗ್ಗೆ ಜನರಿಗೆ ಯಾವುದೇ ಬೇಸರವಾಗಲಿ, ದೂರು ಆಗಲಿ ಇರಲಿಲ್ಲ. ಬಹಳ ಚೆನ್ನಾಗಿ ರಾಜ್ಯಭಾರ ಮಾಡುತ್ತಿದ್ದ ಎಂದರೆ ತಪ್ಪಿಲ್ಲ.
ರಾಜನ ಆಳ್ವಿಕೆಯಲ್ಲಿ ಸಂತೋಷವಾಗಿದ್ದ ಜನ
ಇನ್ನು ಈ ಚಂದ್ರಸೇನ ದಾನ, ಧರ್ಮ, ಪೂಜೆ ಪುನಸ್ಕಾರಗಳಿಗೆ ಬಹಳ ಪ್ರಸಿದ್ಧನಾಗಿದ್ದ. ರಾಜನಿಗೆ ಪ್ರಜೆಗಳ ಬಗ್ಗೆ ಕಾಳಜಿ ಎಷ್ಟಿತ್ತು ಎಂದರೆ ನನ್ನ ರಾಜ್ಯದಲ್ಲಿ ಬಡವರು ಇರಬಾರದು, ಎಲ್ಲರೂ ಸುಖವಾಗಿ ಸಂತೋಷದಿಂದ ಬಾಳ್ವೆ ನಡೆಸಬೇಕು ಎನ್ನುವ ಆಸೆ ಹೊಂದಿದ್ದ. ಅಲ್ಲದೇ, ತನ್ನ ಪ್ರಜೆಗಳನ್ನು ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿ ನೀಡುತ್ತಿದ್ದ. ಅವರ ಬಗ್ಗೆ ಕಾಳಜಿ ವಹಿಸಿದ್ದ. ಜನರ ಕಷ್ಟಗಳನ್ನು ನೋಡಿ, ಅದನ್ನು ನಿವಾರಿಸುವಲ್ಲಿ ಎಂದಿಗೂ ಸೋತಿರಲಿಲ್ಲ.
ಇನ್ನು ರಾಜ ವಾರದಲ್ಲಿ 3 ದಿನ ಸಂಜೆಯ ವೇಳೆ ಮಂತ್ರಿ ಸುಗುಣಾನಂದನೊಡನೆ ವಾಯು ವಿಹಾರಕ್ಕೆ ಹೋಗುತ್ತಿದ್ದ, ಜನರ ಕಷ್ಟ-ಸುಖವನ್ನು ಅರಿತುಕೊಳ್ಳುವ ಕೆಲಸ ಮಾಡುತ್ತಿದ್ದ. ಒಂದು ದಿನ ಹೀಗೆ ಮಂತ್ರಿಯ ಜೊತೆ ವಾಕಿಂಗ್ ಹೋಗುವಾಗ ಸಂಜೆಯ ಸಮಯವಾಗಿತ್ತು, ಪೂರ್ತಿ ಕತ್ತಲಾಗಿತ್ತು. ಹಾಗಾಗಿ ರಾಜ ಮಂತ್ರಿಗೆ, ಮಂತ್ರಿಗಳೇ ಬೇಗ ರಾಜಧಾನಿ ಹೋಗೋಣ, ಕತ್ತಲಾಗಿದೆ. ಕುದುರೆಯನ್ನು ವೇಗವಾಗಿ ಓಡಿಸಿ ಎಂದು ಆದೇಶ ನೀಡುತ್ತಾನೆ. ಆದರೆ ಸ್ವಲ್ಪ ದೂರ ಹೋಗುತ್ತಿದ್ದಂತೆ ರಾಜನಿಗೆ ಒಂದು ವಿಚಿತ್ರ ಕಾಣಿಸುತ್ತದೆ.
ಆಗ ರಾಜನು ಕುದುರೆಯನ್ನು ನಿಲ್ಲಿಸಿ, ಮಂತ್ರಿಗೆ, ನೋಡಿ ತುಂಬಾ ಕತ್ತಲಾಗಿದ್ದರು ಆ ವ್ಯಕ್ತಿ ಮನೆಯ ಮುಂದೆ ತೋಟದ ಕೆಲಸ ಮಾಡುತ್ತಿದ್ದಾನೆ. ಆತನ ಯಾರು? ಇಷ್ಟು ಚಳಿ ಇದ್ದರೂ ಸಹ ಅದನ್ನು ಲೆಕ್ಕಿಸದೇ ತುಂಡುಬಟ್ಟೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಆ ಮಹಾ ಪುರುಷ ಯಾರು ಎಂದು ಕೇಳುತ್ತಾನೆ.
ಇದನ್ನೂ ಓದಿ: ಭಾರತದ ಸುಂದರ ಕ್ರಿಸ್ಮಸ್ ಮಾರ್ಕೆಟ್ಗಳಿಗೆ ಒಮ್ಮೆ ವಿಸಿಟ್ ಮಾಡಿ
ರಾಜನ ಮಾತಿಗೆ ಉತ್ತರಿಸಿದ ಮಂತ್ರಿಯು, ಆತ ಶೇಷ ಶರ್ಮ ಎನ್ನುವ ಪ್ರಖಾಂಡ ಪಂಡಿತನಾಗಿದ್ದು, ಬಹಳ ಕಷ್ಟಪಟ್ಟು ಕೆಲಸ ಮಾಡುವ ವ್ಯಕ್ತಿ ಎನ್ನುತ್ತಾನೆ. ಇದಕ್ಕೆ ರಾಜ ನಮ್ಮ ರಾಜ್ಯದಲ್ಲಿ ಯಾವುದೇ ವ್ಯಕ್ತಿಯೂ ಈ ರೀತಿ ಕಷ್ಟ ಪಡಬಾರದು. ಜನರು ಸುಖವಾಗಿ ಬಾಳಬೇಕು. ಹಾಗಾಗಿ ಈ ವ್ಯಕ್ತಿಯನ್ನು ಅರಮನೆಗೆ ಕರೆಸಿ, ಏನು ಬೇಕೋ ಅದನ್ನು ಕೊಡಿ ಎಂದು ಮಂತ್ರಿಗೆ ಆದೇಶ ನೀಡುತ್ತಾನೆ.
ರಾಜನ ಈ ಆದೇಶ ಕೇಳಿದ ಮಂತ್ರಿ, ಕ್ಷಮಿಸಿ ಮಹಾರಾಜ ಆತ ದೊಡ್ಡ ಸ್ವಾಭಿಮಾನಿ, ಯಾರಿಂದಲೂ ಎಂದಿಗೂ ಸಹಾಯ ಬಯಸುವುದಿಲ್ಲ. ಕೆಲಸ ಮಾಡಿಯೇ ತನ್ನ ಕುಟುಂಬವನ್ನು ಸಾಕುತ್ತಿದ್ದಾನೆ ಎಂದು ಹೇಳುತ್ತಾನೆ. ಇದಕ್ಕೆ ರಾಜ ನಾವು ಒಂದು ಉಪಾಯ ಮಾಡೋಣ ಎಂದು ಹೇಳುತ್ತಾನೆ.
ಹಣೆ ಬರಹಕ್ಕೆ ಹೊಣೆ ಯಾರು
ಹೀಗಿರುವಾಗ ಮರುದಿನ ಆ ಶೇಷ ವರ್ಮಾನ ತೋಟದಲ್ಲಿ ಒಂದು ಚೀಲ ಸಿಗುತ್ತದೆ, ಅದರಲ್ಲಿ ಚಿನ್ನದ ನಾಣ್ಯಗಳಿದ್ದವು. ಇದನ್ನು ನೋಡಿದ ವರ್ಮಾ, ಆ ಚೀಲದ ಸಮೇತ ರಾಜನ ಬಳಿ ಬಂದು ಮಹಾಪ್ರಭು ನನ್ನ ಮನೆಯ ತೋಟದಲ್ಲಿ ಚಿನ್ನದ ನಾಣ್ಯಗಳಿರುವ ಈ ಚೀಲ ನನಗೆ ಸಿಕ್ಕಿದೆ, ಇದು ಯಾರದ್ದು ಎಂದು ನನಗೆ ಗೊತ್ತಿಲ್ಲ. ನನ್ನದಲ್ಲ. ಹಾಗಾಗಿ ಇದು ಯಾರ ಸ್ವತ್ತು ಎಂದು ವಿಚಾರಿಸಿ ಅವರಿಗೆ ತಲುಪಿಸಿ ಎಂದು ಮನವಿ ಮಾಡಿಕೊಳ್ಳುತ್ತಾನೆ.
ಇನ್ನೇನು ಶೇಷವರ್ಮಾ ಹೊರಡಬೇಕು ಎನ್ನುವಾಗ, ರಾಜ ಈ ಚೀಲ ಯಾರದ್ದೇ ಆಗಿರಲಿ, ನಿಮ್ಮ ತೋಟದಲ್ಲಿ ಸಿಕ್ಕಿದೆ, ಹಾಗಾಗಿ ಅದನ್ನು ನೀವೇ ಇಟ್ಟುಕೊಳ್ಳಿ. ಅದನ್ನು ಬಳಸಿ ಎನ್ನುತ್ತಾನೆ. ಆದರೆ ಇದಕ್ಕೆ ಶೇಷವರ್ಮಾ ಒಪ್ಪುವುದಿಲ್ಲ. ಅಲ್ಲದೇ, ನಮ್ಮ ತೋಟಕ್ಕೆ ಪ್ರತಿದಿನ ಹಲವಾರು ಪ್ರಾಣಿ ಹಾಗೂ ಪಕ್ಷಿಗಳು ಬರುತ್ತವೆ. ಅದನ್ನು ನಾವು ನಮ್ಮದು ಎಂದು ಹೇಳಲು ಆಗುವುದಿಲ್ಲ. ಹಾಗೆಯೇ, ನಮ್ಮ ತೋಟದಲ್ಲಿ ಹಲವಾರು ಜನರು ಹಣ್ಣು ಹಾಗೂ ಹಂಪಲು ತಿಂದು ಹೋಗುತ್ತಾರೆ. ಅವರೆಲ್ಲಾ ನಮ್ಮವರಾಗುತ್ತಾರೆಯೇ ಎಂದು ಪ್ರಶ್ನೆ ಮಾಡುತ್ತಾನೆ.
ಇದನ್ನೂ ಓದಿ: ಮನೆಯಲ್ಲಿ ವಾಸ್ತು ದೋಷ ನಿವಾರಿಸಲು ಇಲ್ಲಿದೆ ಸಿಂಪಲ್ ಟಿಪ್ಸ್
ನನ್ನ ಹಣೆಯಲ್ಲಿ ಏನು ಬರೆದಿದೆಯೋ ಅದು ನನಗೆ ಸಿಕ್ಕಿದೆ. ನನಗೆ ದೇವರು ಕೊಟ್ಟಿರುವುದರಿಂದ ನಾನು ಸುಖವಾಗಿದ್ದೇನೆ. ಹಾಗಾಗಿ ಈ ಹಣ ನನ್ನದಲ್ಲ, ಯಾರದ್ದು ಎಂದು ವಿಚಾರಿಸಿ ವಾಪಾಸ್ ಕೊಡಿ ಎಂದು ಬೇಡಿಕೊಳ್ಳುತ್ತಾನೆ. ಇದನ್ನು ನೋಡಿದ ಮಂತ್ರಿ ಮಹಾರಾಜ ಯಾರ ಹಣೆಬರಹ ಬದಲಾಯಿಸಲು ಬರೆದ ಆ ಬ್ರಹ್ಮನಿಂದಲೇ ಸಾಧ್ಯವಿಲ್ಲ ಎಂದು ಸುಮ್ಮನಾಗುತ್ತಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ