ನಮಗೆ ಕೆಲವೊಂದು ಬಾರಿ ಸಣ್ಣ ಸಣ್ಣ (Small) ಸೂಚನೆಗಳ ಮೂಲಕ ಮುಂಬರುವ ಅಪಾಯದ ಬಗ್ಗೆ ಸುಳಿವು ಸಿಗುತ್ತದೆ. ಆದರೆ ಅದನ್ನು ನಾವು ನಿರ್ಲಕ್ಷ್ಯ ಮಾಡುತ್ತೇವೆ. ಅದರಲ್ಲೂ ದುಷ್ಟರ ವಿಚಾರದಲ್ಲಿ ನಾವು ಮಾಡುವ ಸಣ್ಣ ತಪ್ಪು (Mistake) ಅಥವಾ ಅವರನ್ನ ಹತ್ತಿರ ಇಟ್ಟುಕೊಳ್ಳುವುದು ಅಪಾಯಕ್ಕೆ ಕಾರಣ ಎಂಬುದನ್ನ ನಾವು ಮರೆಯುತ್ತೇವೆ. ನಾವು ಮಕ್ಕಳಿಗೆ (Children) ಸಹ ಇದನ್ನು ಹೇಳಿಕೊಡಬೇಕು. ಅಪಾಯದ ಸೂಚನೆ ಇದ್ದಾಗ ಅಥವಾ ನಮಗೆ ಯಾರಾದರೂ ಸೂಕ್ತವಲ್ಲ ಎನಿಸಿದಾಗ ಅವರಿಂದ ದೂರ ಇರಲು ಸಲಹೆ ನೀಡಬೇಕು. ಮಕ್ಕಳಿಗೆ ನೀವು ಇದನ್ನು ಮಾತಿನಲ್ಲಿ ಹೇಳಿದರೆ ಆಗುವುದಿಲ್ಲ, ಕಥೆಯ (Story) ಮೂಲಕ ಹೇಳಬೇಕು. ಅದಕ್ಕೆ ಸುಂದರವಾದ ಕಥೆ ಇಲ್ಲಿದೆ.
ಕಾಡಿನಲ್ಲಿತ್ತು ದುಷ್ಟ ಕೂಟ
ಒಂದು ದಟ್ಟವಾದ ಕಾಡು, ಆಡಿನಲ್ಲಿ ಒಂಟೆಯೊಂದು ಬಂದು ಸೇರಿಕೊಂಡಿತ್ತು. ಸಾಮಾನ್ಯವಾಗಿ ಒಂಟೆಗಳು ಮರುಭೂಮಿಯಲ್ಲಿ ಇರುತ್ತವೆ. ಅವುಗಳಿಗೆ ಕಾಡಿನಲ್ಲಿ ಬದುಕಲು ಕಷ್ಟವಾಗುತ್ತದೆ. ಆದರೆ, ಒಂದು ಒಂಟೆ ದಾರಿ ತಪ್ಪಿ ಕಾಡನ್ನು ಸೇರಿಕೊಂಡಿತ್ತು. ಅದೇ ಕಾಡಿನಲ್ಲಿ, ಕಾಡಿನ ರಾಜ ಸಿಂಹ ತನ್ನ ಮೂರು ಸೇವರಾದ ನರಿ, ಕಾಗೆ ಮತ್ತು ಚಿರತೆಯೊಂದಿಗೆ ವಾಸಿಸುತ್ತಿತ್ತು. ಹೀಗಿರುವ ಸಿಂಹದ ಸೇವಕ ನರಿ ಒಂಟೆಯನ್ನು ನೋಡುತ್ತದೆ.
ಈ ಮೂರು ಜನ ಸೇರಿ ಸಿಂಹಕ್ಕೆ ಯಾವಾಗಲೂ ಆಹಾರದ ವ್ಯವಸ್ಥೆ ಮಾಡುತ್ತಿದ್ದವು. ಯಾವಾಗ, ಯಾವ ಪ್ರಾಣಿಯನ್ನು ಸಿಂಹದ ಬಳಿ ಕಳುಹಿಸಬೇಕು ಎಂದು ಅವುಗಳೇ ನಿರ್ಧಾರ ಮಾಡಿದ್ದವು, ಈ ಒಂಟೆಯನ್ನು ಸಹ ಸಿಂಹಕ್ಕೆ ಆಹಾರವಾಗಿ ನೀಡಬೇಕು ಎಂದು ನಿರ್ಧರಿಸಿದ್ದವು. ಒಂಟೆ ಕಾಡಿಗೆ ತಪ್ಪಿಸಿಕೊಂಡು ಬಂದಿರುವ ಬಗ್ಗೆ ಸಹ ಸಿಂಹಕ್ಕೆ ಮಾಹಿತಿ ನೀಡಿದ್ದವು. ಆ ದಿನ ಸಂಜೆ ಸಿಂಹ ಕಾಡಿನಲ್ಲಿ ಒಂದು ಸುತ್ತು ಹಾಕಿ ಬರುವ ಎಂದು ಹೊರಡುತ್ತದೆ. ಆಗ ಕಾಡಿನಲ್ಲಿ ಅಲೆಯುತ್ತಿರುವ ಒಂಟೆಯನ್ನು ನೋಡಿ, ಏನು ಇಲ್ಲಿ ಬಂದಿರುವುದು ಎಂದು ಕೇಳುತ್ತದೆ.
ಅದಕ್ಕೆ ಒಂಟೆಯೂ, ನಾನು ಮರುಭೂಮಿಯಿಂದ ದಾರಿ ತಪ್ಪಿ ಇಲ್ಲಿಗೆ ಬಂದಿದ್ದೇನೆ. ನನ್ನ ಕುಟುಂಬ ಹಾಗೂ ಸ್ನೇಹಿತರು ನನ್ನ ಜೊತೆ ಇಲ್ಲ, ಬಹಳ ನೆನಪಾಗುತ್ತಿದ್ದೆ, ನನಗೆ ಇಲ್ಲಿ ಯಾರೂ ಸ್ನೇಹಿತರೂ ಸಹ ಇಲ್ಲ. ಬಹಳ ಬೇಸರವಾಗುತ್ತಿದೆ ಎಂದು ಸಿಂಹದ ಬಳಿ ತನ್ನ ಕಥೆಯನ್ನು ಹೇಳಿಕೊಳ್ಳುತ್ತದೆ. ಒಂಟೆಯ ಈ ನೋವಿನ ಕಥೆಯನ್ನು ಕೇಳಿ ಸಿಂಹಕ್ಕೆ ಸಂಕಟವಾಗುತ್ತದೆ.
ಇದನ್ನೂ ಓದಿ: ಒಬ್ಬರಿಗೆ ಸಹಾಯ ಮಾಡಿದ್ರೆ ಎಂದಿಗೂ ಕೆಟ್ಟದಾಗಲ್ಲ, ಪಾರಿವಾಳ-ಇರುವೆಯ ಸುಂದರ ಕಥೆ
ಅದಕ್ಕೆ ಸರಿ ನೀನು ಇಷ್ಟ ಬಂದಷ್ಟು ಸಮಯ ಇಲ್ಲಿರು, ಏನೇ ಸಮಸ್ಯೆ ಇದ್ದರೂ ನನಗೆ ಹೇಳು ಎಂದು ಸಾಂತ್ವನ ಹೇಳಿ, ಸಹಾಯ ಹಸ್ತ ನೀಡುತ್ತದೆ. ಇದನ್ನು ಕೇಳಿ ಒಂಟೆಗೆ ಬಹಳ ಸಂತೋಷವಾಗುತ್ತದೆ. ಸಾಮಾನ್ಯವಾಗಿ ಸಿಂಹ ಯಾವುದೇ ಪ್ರಾಣಿ ಕಂಡರೂ ಹಸಿವಾಗಿದ್ದರೆ, ಅದರ ಮೇಲೆ ಹಾರಿ ಸಾಯಿಸದೇ ಬಿಡುವುದಿಲ್ಲ. ಆದರೆ, ಒಂಟೆಯನ್ನು ಹಾಗೆಯೇ ಬಿಟ್ಟಿದ್ದು ನಿಜಕ್ಕೂ ಆಶ್ಚರ್ಯಕರ. ಒಂಟೆ ಸಹ ಸಿಂಹದ ಮಾತನ್ನು ನಂಬಿತು.
ಸಿಂಹವನ್ನು ನಂಬಿದ ಒಂಟೆ
ಸಿಂಹ ಗುಹೆ ಸೇರಿದಾಗ ನರಿ, ಕಾಗೆ ಹಾಗೂ ಚಿರತೆ ಬಂದು ಇವತ್ತು ನಿಮಗೆ ಆಹಾರಕ್ಕೆ ಒಂಟೆ, ಹಾಗಾಗಿ ಒಂಟೆಯನ್ನೇ ತಿನ್ನಿ ಎಂದು ಹೆಳುತ್ತವೆ. ಅದಕ್ಕೆ ಸಿಂಹ ಇಲ್ಲ ಇಲ್ಲ ಪಾಪ ಒಂಟೆ ದಾರಿ ತಪ್ಪಿ ಬಂದಿದೆ, ಕೆಲ ಸಮಯ ಕಾಡಿನಲ್ಲಿ ಇದ್ದು ಹೋಗಲಿ ಎಂದು ಹೇಳುತ್ತದೆ. ಆದರೆ, ಈ ಮೂವರು ಮಾತ್ರ ಹಾಗೆ ಆಗುವುದಿಲ್ಲ, ಇಂದು ಬೇರೆ ಯಾವುದೇ ಆಹಾರವಿಲ್ಲ. ಹಾಗಾಗಿ ನೀವು ಒಂಟೆಯನ್ನು ತಿನ್ನಬೇಕು ಎಂದು ಹೇಳುತ್ತವೆ.
ಇದನ್ನು ಕೇಳಿ ಸಿಂಹ ಸಹ ನಿಮಿಷವೂ ಯೋಚನೆ ಮಾಡದೇ ಒಂಟೆಯ ಮೇಲೆ ಹಾರಿ, ಅದನ್ನು ಸಾಯಿಸುತ್ತದೆ. ಒಂಟೆ ಬಹಳ ನಂಬಿದ್ದ ಸಿಂಹ ಕೈಗೊಡುತ್ತದೆ. ಸಿಂಹವನ್ನು ನಂಬಿದ್ದು ತಪ್ಪೇ ಎನ್ನುವುದು ಸಹ ಬಹಳ ಮುಖ್ಯ.
ಇದನ್ನೂ ಓದಿ: ಮಣ್ಣಿನಿಂದ ಬಂಗಾರ ಪಡೆದ ವ್ಯಕ್ತಿಯ ಕಥೆ, ದುಡಿಮೆಯೇ ದೈವ
ಈ ಕಥೆ ಕೇವಲ ಒಂದು ಉದಾಹರಣೆ ಅಷ್ಟೇ, ನಾವು ಸಹ ಸಣ್ಣ ಸೂಚನೆಗಳನ್ನು ಸಹ ನೆಗ್ಲೆಕ್ಟ್ ಮಾಡಿಕೊಳ್ಳಬಾರದು. ಮಕ್ಕಳಿಗೂ ಸಹ ಯಾವುದೇ ಅಪಾಯ ಅನಿಸಿದರೆ ಅಥವಾ ಅನಾಮಿಕ ವ್ಯಕ್ತಿಗಳನ್ನು ನಂಬಬಾರದು ಎಂದು ಹೇಳಿಕೊಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ