• Home
  • »
  • News
  • »
  • lifestyle
  • »
  • Weekend Story: ಒಬ್ಬರಿಗೆ ಸಹಾಯ ಮಾಡಿದ್ರೆ ಎಂದಿಗೂ ಕೆಟ್ಟದಾಗಲ್ಲ, ಪಾರಿವಾಳ-ಇರುವೆಯ ಸುಂದರ ಕಥೆ

Weekend Story: ಒಬ್ಬರಿಗೆ ಸಹಾಯ ಮಾಡಿದ್ರೆ ಎಂದಿಗೂ ಕೆಟ್ಟದಾಗಲ್ಲ, ಪಾರಿವಾಳ-ಇರುವೆಯ ಸುಂದರ ಕಥೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Panchatantra Stories for Kids: ಮಕ್ಕಳಿಗೆ ಪಾಠಗಳನ್ನು ಅಥವಾ ನೀತಿಗಳನ್ನು ಹೇಳಲು ಸುಲಭವಾದ ಮಾರ್ಗ ಎಂದರೆ ಕಥೆಗಳು. ಬೇರೆಯವರಿಗೆ ಸಹಾಯ ಮಾಡಿದರೆ, ನಮಗೂ ಮರಳಿ ಒಳ್ಳೆಯದೇ ಆಗುತ್ತದೆ ಇಲ್ಲೊಂದು ಕಥೆ ಇದೆ.

  • Share this:

ನಾವು ಹಲವಾರಿ ಬಾರಿ ದೊಡ್ಡವರು (Elders) ಹೇಳಿರುವುದನ್ನ ಕೇಳಿರುತ್ತೇವೆ. ಯಾರಿಗಾದರೂ ಸಹಾಯ (Help) ಮಾಡುವುದು ನಮಗೆ ಸಹ ಲಾಭವಿದೆ. ನಮಗೆ ಅವರಿಂದ ಮತ್ತೆ ಸಹಾಯವಾಗದಿದ್ದರೂ ಸಹ ಬೇರೆಯವರಿಂದ, ಬೇರೆ ರೀತಿಯಲ್ಲಿ ಸಹಾಯ (Help) ಆಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ನಾವು ಸರಿಯಾಗಿ ಗಮನಿಸಿದರೆ ನಮ್ಮ ಸುತ್ತಲೂ ನಮಗೆ ಅರಿವಿಲ್ಲದೇ, ಈ ರೀತಿಯ ಘಟನೆಗಳು (Incident) ಸಹ ನಡೆದಿರುತ್ತದೆ. ನಮ್ಮ ಜೀವನದಲ್ಲಿ ಸಹ ಆಗಿರುತ್ತದೆ. ಆದರೆ ನಾವು ಅದನ್ನು ಗಮನಿಸಿರುವುದಿಲ್ಲ. ಹಾಗೆಯೇ, ನಾವು ಬೇರೆಯವರಿಗೆ ಸಹಾಯ ಮಾಡಬೇಕು ಎಂದು ನಮ್ಮ ಮಕ್ಕಳಿಗೆ ಸಹ ಹೇಳಬೇಕು. ಪೋಷಕರಾಗಿ ಮಕ್ಕಳಿಗೆ ಒಳ್ಳೆಯ ಪಾಠ ಹೇಳಿಕೊಡುವುದು ನಮ್ಮ ಕರ್ತವ್ಯ. ಮಕ್ಕಳಿಗೆ ಪಾಠಗಳನ್ನು ಅಥವಾ ನೀತಿಗಳನ್ನು ಹೇಳಲು ಸುಲಭವಾದ ಮಾರ್ಗ ಎಂದರೆ ಕಥೆಗಳು. ಬೇರೆಯವರಿಗೆ ಸಹಾಯ ಮಾಡಿದರೆ, ನಮಗೂ ಮರಳಿ ಒಳ್ಳೆಯದೇ ಆಗುತ್ತದೆ ಇಲ್ಲೊಂದು ಕಥೆ ಇದೆ.


ಮತ್ತೊಬ್ಬರಿಗೆ ಸಹಾಯ ಮಾಡಿದರೆ ಪ್ರತಿಫಲ ಸಿಕ್ಕೇ ಸಿಗುತ್ತದೆ


ನಾವೆಲ್ಲರೂ ಮಕ್ಕಳಿದ್ದಾಗ ಪಂಚತಂತ್ರದ ಕಥೆಗಳನ್ನು ಕೇಳಿ ಬೆಳೆದಿದ್ದೇವೆ. ಕಥೆಯ ಮೂಲಕ ಜೀವನದ ಪಾಠಗಳನ್ನು ಹೇಳಿಕೊಡುವ ಈ ಕತೆಗಳು ಇಂದಿನ ಸಮಾಜಕ್ಕೆ ನಿಜಕ್ಕೂ ಒಪ್ಪುತ್ತದೆ. ಅಪಾಯ ಬಂದಾಗ ಪಾರಾಗಲು ಏನು ಮಾಡಬೇಕು ಎಂಬುದನ್ನ ನೀವು ಮಕ್ಕಳಿಗೆ ಒಂದು ಸುಂದರ ಕಥೆಯ ಮೂಲಕ ಹೇಳಬೇಕು. ಈ ವೀಕೆಂಡ್ ನೀವು ಪಂಚತಂತ್ರದ ಈ ಕಥೆ ಹೇಳಿ.




ಇದು ಪಾರಿವಾಳ ಹಾಗೂ ಒಂದು ಇರುವೆಯ ಕಥೆಯಾಗಿದ್ದು, ಸಹಾಯ ಹೇಗೆ ಜೀವ ಉಳಿಸಿತು ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಇನ್ಯಾವುದು ಇಲ್ಲ.


ಇದನ್ನೂ ಓದಿ: ತಲೆಸ್ನಾನ ಮಾಡಿ ಮಲಗುವ ಅಭ್ಯಾಸವಿದ್ರೆ ಈ ಸಮಸ್ಯೆಗಳು ಬರಬಹುದು ಎಚ್ಚರ


ಒಂದು ದೊಡ್ಡ ಕಾಡು, ಆ ಕಾಡಿನಲ್ಲಿ ಒಂದು ಇರುವೆ ಹಾಗೂ ಪಾರಿವಾಳ ಸಹ ವಾಸವಾಗಿದ್ದವು. ಆ ಕಾಡಿನಲ್ಲಿ ಪ್ರಶಾಂತವಾಗಿ ಹರಿಯುವ ಪುಟ್ಟ ಕೊಳ. ಆ ಕೊಳವೇ ಕಾಡಿನಲ್ಲಿರುವ ಪ್ರಾಣಿಗಳಿಗೆ ನೀರಿನ ಮೂಲ. ಬಹುತೇಕ ಎಲ್ಲಾ ಪ್ರಾಣಿಗಳು ಒಂದು ಸಮಯದಲ್ಲಿ ಬಂದು ನೀರು ಕುಡಿದು ಹೋಗುತ್ತಿದ್ದವು. ಹೀಗೆ ಇರುವೆ ಸಹ ಅಲ್ಲಿಗೆ ನೀರು ಕುಡಿಯಲು ಬಂದಿತ್ತು. ಆದರೆ ಆ ಸಮಯದಲ್ಲಿ ಬೇರೆ ಯಾವುದೇ ಪ್ರಾಣಿಗಳು ಇರಲಿಲ್ಲ.


ಇರುವೆ ಕೊಳದ ಬಳಿ ನೀರು ಕುಡಿಯುತ್ತಿರುವಾಗ ಜೋರಾಗಿ ಗಾಳಿ ಬೀಸುತ್ತದೆ. ಆ ಗಾಳಿಗೆ ಕೊಳದಲ್ಲಿ ಸ್ವಲ್ಪ ಜೋರಾಗಿಯೇ ನೀರು ಹರಿಯುತ್ತದೆ. ಕಾಡಿನ ಕೊಳದ ಬಳಿ ಗಾಳಿಯನ್ನು ತಡೆಯುವ ಬೇರೆ ವಸ್ತುವಿರದ ಕಾರಣ ಪುಟ್ಟ ಕೊಳದಲ್ಲಿ ಸಹ ಅಲೆಯ ಏಳುತ್ತದೆ. ಅಲ್ಲದೇ, ಇರುವೆ ಬಹಳ ಚಿಕ್ಕ ಪ್ರಾಣಿಯಾಗಿರುವುದರಿಂದ ಸಣ್ಣ ಗಾಳಿ ಸಹ ಅವುಗಳಿಗೆ ಸಮಸ್ಯೆ ಆಗುತ್ತದೆ. ಈ ಜೋರಾದ ಗಾಳಿಯ ಕಾರಣದಿಂದ ನೀರು ಕುಡಿಯುತ್ತಿದ್ದ ಇರುವೆ ಕೊಳದ ಮಧ್ಯ ಭಾಗಗಕ್ಕೆ ಹೋಗುತ್ತದೆ.


ಇರುವೆ ಸಹಾಯ ಮಾಡಿದ ಪಾರಿವಾಳ


ಹೊರಗೆ ಬರಲಾಗದೇ ಮುಳುಗಲು ಆರಂಭಿಸುತ್ತದೆ. ಆಗ ಸಹಾಯಕ್ಕೆ ಕೂಗುತ್ತದೆ. ಕಾಪಾಡಿ, ಕಾಪಾಡಿ ಎಂದು. ಆದರೆ ಸುತ್ತಲೂ ಯಾರೂ ಇರುವುದಿಲ್ಲ. ಹೀಗಿರುವಾಗ ಅಲ್ಲಿಯೇ ಇದ್ದ ಮರದ ಬಳಿ ಪಾರಿವಾಳವೊಂದು ಬಂದು ಕೂರುತ್ತದೆ. ಅದಕ್ಕೆ ಕೊಳದಲ್ಲಿ ಸಿಕ್ಕಿಕೊಂಡಿರುವ ಇರುವೆ ಕಾಣುತ್ತದೆ.


ಪರದಾಡುತ್ತಿರುವ ಇರುವೆ ನೋಡಿ ಪಾರಿವಾಳ ಮರದ ಒಂದು ಎಲೆಯನ್ನು ಕಿತ್ತು ಕೊಳದ ಮಧ್ಯೆಕ್ಕೆ ಹಾಕುತ್ತದೆ. ಅದರ ಮೇಲೆ ಹತ್ತಿದ ಇರುವೆಯೂ , ಎಲೆಯ ಸಹಾಯದಿಂದ ದಡವನ್ನು ಸೇರುತ್ತದೆ. ಎಲೆಯನ್ನು ಹಾಕಿ ತನ್ನ ಜೀವ ಕಾಪಾಡಿದ ಪಾರಿವಾಳಕ್ಕೆ ಧನ್ಯವಾದವಾದ ಹೇಳುತ್ತದೆ.


ಸ್ವಲ್ಪ ನೀರು ಕುಡಿದು ಇರುವೆ ಅಲ್ಲಿಂದ ಹೊರಡುತ್ತದೆ. ಸ್ವಲ್ಪ ಮುಂದೆ ಹೋಗುತ್ತಿದ್ದಂತೆ, ಅದಕ್ಕೆ ಬೇಡ ಒಬ್ಬ ಕಾಣಿಸುತ್ತಾನೆ. ಅವನು ತನ್ನ ಗುರಿಯನ್ನು ಪಾರಿವಾಳದ ಮೇಲೆ ಇಟ್ಟಿರುವುದನ್ನ ಇರುವೆ ನೋಡುತ್ತದೆ. ಇವನು ಪಾರಿವಾಳವನ್ನು ಬೇಟೆ ಆಡಲು ಬಂದಿದ್ದಾನೆ ಎಂದು ತಿಳಿದು ಏನಾದರೂ ಮಾಡಿ ಪಾರಿವಾಳವನ್ನು ಕಾಪಾಡಬೇಕು ಎಂದು ನಿರ್ಧರಿಸುತ್ತದೆ.


ಇದನ್ನೂ ಓದಿ: ಚಂದ್ರ ಗ್ರಹಣದ ನಂತರ ಈ ಆಹಾರಗಳನ್ನು ಸೇವನೆ ಮಾಡಬೇಕಂತೆ


ಒಂದು ಉಪಾಯ ಮಾಡಿದ ಇರುವೆ, ಕ್ಷಣವೂ ತಡ ಮಾಡದೇ ಆ ಬೇಟೆಗಾರನ ಕಾಲಿಗೆ ಹೋಗು ಕಚ್ಚುತ್ತದೆ. ಇರವೆ ಕಚ್ಚಿದ ಹೊಡೆತಕ್ಕೆ ಬೇಟೆಗಾರ ಜೋರಾಗಿ ಕೂಗುತ್ತಾನೆ. ಅವನ ಕೂಗು ಕೇಳಿ ಎಚ್ಚರಗೊಂಡ ಪಾರಿವಾಳ ಅಲ್ಲಿಂದ ಹಾರಿ ಹೋಗುತ್ತದೆ.

Published by:Sandhya M
First published: