• Home
  • »
  • News
  • »
  • lifestyle
  • »
  • Storytelling: ಅದ್ಭುತ ಸ್ನೇಹಿತರಿದ್ರೆ ಯಾವುದೇ ಕಷ್ಟವನ್ನೂ ಎದುರಿಸಬಹುದಂತೆ, ಪಂಚತಂತ್ರ ಕಥೆ ಕೇಳಿ

Storytelling: ಅದ್ಭುತ ಸ್ನೇಹಿತರಿದ್ರೆ ಯಾವುದೇ ಕಷ್ಟವನ್ನೂ ಎದುರಿಸಬಹುದಂತೆ, ಪಂಚತಂತ್ರ ಕಥೆ ಕೇಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Panchatantra Stories: ಇಂದು ನಾವು ಹೇಳುತ್ತಿರುವ ಕಥೆಯಲ್ಲಿ ಸಹ ಎರಡು ನೀತಿ ಇದೆ. ಒಂದು ಸ್ನೇಹಿತರ ಮಾತನ್ನು ಕೇಳಬೇಕು, ಇನ್ನೊಂದು ಒಗ್ಗಟ್ಟಿನಲ್ಲಿ ಬಲವಿದೆ ಎಂಬುದು. ಇದು ಕೂಡ ಕಾಡಿನಲ್ಲಿರುವ (Forest) ಸ್ನೇಹಿತರ ಕಥೆಯಾಗಿದ್ದು, ನಿಮಗೆ ಬಹಳ ಅಗತ್ಯ ಎನ್ನಬಹುದು.

  • Share this:

ಜೀವನದಲ್ಲಿ (Life) ನಮಗೆ ಸ್ನೇಹಿತರು (Friends) ಬಹಳ ಮುಖ್ಯವಾಗುತ್ತಾರೆ. ಅದರಲ್ಲೂ ಸ್ನೇಹಿತರು ಒಟ್ಟಿಗಿದ್ದರೆ ಯಾವುದೇ ಕಷ್ಟವನ್ನೂ ಸಹ ಗೆದ್ದು ಬರಬಹುದು ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ಅದರಲ್ಲೂ ಪಂಚತಂತ್ರದ ಕಥೆಗಳು (Stories) ನಮಗೆ ಬಹಳಷ್ಟು ಅದ್ಭುತ ನೀತಿಗಳನ್ನು ತಿಳಿಸಿಕೊಡುತ್ತದೆ. ಪ್ರಾಣಿಗಳ ಕಥೆಯ ಮೂಲಕ ಮುಖ್ಯವಾಗಿ ಈ ಕಥೆಗಳು ನಮ್ಮ ಜೀವನದಲ್ಲಿ ನಾವು ರೂಢಿಸಿಕೊಳ್ಳಬೇಕಾದ ವಿಚಾರಗಳನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಇಂದು ನಾವು ಹೇಳುತ್ತಿರುವ ಕಥೆಯಲ್ಲಿ ಸಹ ಎರಡು ನೀತಿ ಇದೆ. ಒಂದು ಸ್ನೇಹಿತರ ಮಾತನ್ನು ಕೇಳಬೇಕು, ಇನ್ನೊಂದು ಒಗ್ಗಟ್ಟಿನಲ್ಲಿ ಬಲವಿದೆ ಎಂಬುದು. ಇದು ಕೂಡ ಕಾಡಿನಲ್ಲಿರುವ (Forest) ಸ್ನೇಹಿತರ ಕಥೆಯಾಗಿದ್ದು, ನಿಮಗೆ ಬಹಳ ಅಗತ್ಯ ಎನ್ನಬಹುದು.


ಕಾಡಿನ ಮೂರು ಸ್ನೇಹಿತರ ಕಥೆ


ಅದು ಒಂದು ದಟ್ಟವಾದ ಕಾಡು, ಅಲ್ಲಿ ಮೂವರು ಸ್ನೇಹಿತರು. ಆಮೆ, ಇಲಿ ಮತ್ತು ಕಾಗೆ. ಆ ಕಾಡಿನಲ್ಲಿ ಒಂದು ಸರೋವರ ಇತ್ತು. ಆ ಸರೋವರದಲ್ಲಿ ಆಮೆ ವಾಸವಾಗಿತ್ತು. ಅಲ್ಲಿಯೇ, ಪಕ್ಕದಲ್ಲಿ ಒಂದು ಮರವಿತ್ತು. ಆ ಮರದಲ್ಲಿ ಗೂಡು ಕಟ್ಟಿಕೊಂಡು ಕಾಗೆ ವಾಸವಾಗಿತ್ತು. ಅಲ್ಲಿಯೇ ಬಿಲದಲ್ಲಿ ಇಲಿ ವಾಸವಾಗಿತ್ತು. ಈ ಮೂವರು ಸರೋವರದ ತಟದಲ್ಲಿ ಭೇಟಿಯಾಗಿ, ಕಷ್ಟ ಸುಖವನ್ನು ಹಂಚಿಕೊಳ್ಳುತ್ತಿದ್ದರು. ಒಂದು ದಿನ ಹೀಗೆ ಹರಟೆ ಹೊಡೆಯುತ್ತಿದ್ದಾಗ, ಜಿಂಕೆಯೊಂದು ಓಡುತ್ತಾ ಬಂದಿತ್ತು. ಜಿಂಕೆ ಬಹಳ ಭಯಗೊಂಡಿತ್ತು. ಇದನ್ನು ನೋಡಿ ಆಮೆ, ಇಲಿ ಹಾಗೂ ಕಾಗೆ ಅಡಗಿಕೊಳ್ಳುತ್ತವೆ. ಆದರೆ, ಸ್ವಲ್ಪ ಸಮಯದ ನಂತರ ಕಾಗೆಗೆ ಯಾವುದೇ ಅಪಾಯವಿಲ್ಲ ಎಂಬುದು ತಿಳಿದ ನಂತರ ಎಲ್ಲರನ್ನೂ ಕರೆಯುತ್ತದೆ. ಇಲ್ಲಿ ಯಾವುದೇ ಅಪಾಯವಿಲ್ಲ ಬನ್ನಿ ಎಂದು ಕರೆಯುತ್ತದೆ.


ನಂತರ ಜಿಂಕೆಯ ಬಳಿ ಬಂದು ಯಾಕಾಗಿ ಹೆದರಿರುವುದು ಎಂದು ಕೇಳುತ್ತವೆ. ಆಗ ಜಿಂಕೆ, ಕಳಿಂಗದ ರಾಜ ಬೇಟೆ ಮಾಡಲು ಕಾಡಿಗೆ ಬಂದಿದ್ದು, ಇಲ್ಲಿಯೇ ಬಿಡಾರ ಹೂಡಿದ್ದಾನೆ. ಅವನ ಇಬ್ಬರು ಸೈನಿಕರು ನನ್ನ ಹಿಂದೆ ಬಿದ್ದಿದ್ದರು. ಅವರಿಂದ ತಪ್ಪಿಸಿಕೊಂಡು ಬಂದಿದ್ದೇನೆ. ನನಗೆ ಇಲ್ಲಿ ಅಡಗಿಕೊಳ್ಳಲು ಅವಕಾಶಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸುತ್ತದೆ. ಆಗ ಕಾಗೆ, ಹೆದರಬೇಡ. ನಾವು ನಿನ್ನ ಸ್ನೇಹಿತರು. ಏನೇ ಇದ್ದರೂ ಹೇಳಿಕೋ, ಯಾವುದೇ ವಿಚಾರವನ್ನು ಮುಚ್ಚಿಡಬಾರದು. ಸ್ನೇಹಿತರ ಬಳಿ ವಿಚಾರವನ್ನು ಮುಚ್ಚಿಡುವುದು ಅಪರಾಧ ಎಂದು ಹೇಳುತ್ತದೆ.
ಹೆದರಿಕೊಂಡ ಆಮೆ, ಸರೋವರ ಬಿಡಲು ನಿರ್ಧಾರ


ಆಗ, ಜಿಂಕೆ ನಾವು ಇಷ್ಟು ಧೈರ್ಯ ಕೊಟ್ಟಿದ್ದೀರಿ. ಹಾಗಾಗಿ ನಾನು ನಿಮಗೆ ಒಂದು ಮುಖ್ಯವಾದ ವಿಚಾರ ಹೇಳಬೇಕು. ಆ ರಾಜನ ಬಿಡಾರದಲ್ಲಿ ಮಾತನಾಡುತ್ತಿರುವುದನ್ನ ಕೇಳಿಕೊಂಡಿದ್ದೇನೆ. ಅವರು, ನಾಳೆ ಸರೋವರದ ಬಳಿ ಬಿಡಾರ ಹೂಡುತ್ತಾರಂತೆ. ಮೀನು ಹಿಡಿಯುವುದು ಅವರ ಉದ್ದೇಶ ಎಂದು ತಿಳಿಸುತ್ತದೆ. ಅಲ್ಲದೇ, ಅರು ಮೀನು ಹಿಡಿಯಲು ಬಲೆ ಬೀಸಿದಾಗ ನಮ್ಮ ಸ್ನೇಹಿತ ಆಮೆ ಬಲೆಗೆ ಸಿಕ್ಕಿ ಹಾಕಿಕೊಂಡರೆ ಏನು ಮಾಡುವುದು ಎಂದು ಹೇಳುತ್ತದೆ. ಇದನ್ನು ಕೇಳಿ ಹೆದರಿಕೊಂಡ ಆಮೆ, ತನ್ನ ರಕ್ಷಣೆಗಾಗಿ ಸರೋವರನ್ನು ಬಿಟ್ಟು ಹೋಗುತ್ತೇನೆ ಎಂದು ಹೇಳುತ್ತದೆ. ಆಗ ಉಳಿದ ಸ್ನೇಹಿತರು. ನೀನು ಬೇರೆ ಕಡೆ ಹೋಗುವುದು ಸೂಕ್ತವಲ್ಲ. ತುಂಬಾ ನಿಧಾನವಾಗಿ ನಡೆಯುವುದರಿಂದ ಅಪಾಯ ಜಾಸ್ತಿ. ಯಾವುದಾದರೂ ಪ್ರಾಣಿ ನಿನ್ನ ತುಳಿಯಬಹುದು ಎಂದು ಹೇಳುತ್ತವೆ.
ಇದನ್ನೂ ಓದಿ: ಏಕಾಗ್ರತೆ ಇಲ್ಲದೇ ಯಾವುದೇ ಕೆಲಸ ಮಾಡಿದ್ರೂ ನೀರಿನಲ್ಲಿ ಹೋಮ ಮಾಡಿದ ಹಾಗೆ, ಬೇತಾಳ ಹೇಳಿದ ನೀತಿ ಕಥೆ


ಸ್ನೇಹಿತರು ಬುದ್ದಿ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಆಮೆ ಇರಲಿಲ್ಲ, ಬೇರೆಡೆ ಹೋಗುತ್ತೇನೆ ಎಂದು ಹೊರಡುತ್ತದೆ. ಆಮೆಯ ಸುರಕ್ಷಿತೆಯ ದೃಷ್ಟಿಯಿಂದ ಈ ಮೂವರು ಕೂಡ ಅದರ ಹಿಂದೆ ಹೋಗುತ್ತವೆ. ಆದರೆ, ಆಮೆಯ ಅದೃಷ್ಟವೇ ಸರಿಯಿಲ್ಲ ಅನಿಸುತ್ತದೆ. ಅಲ್ಲಿಗೆ ಬಂದ ಬೇಟೆಗಾರನೊಬ್ಬ ಆಮೆಯನ್ನು ಎತ್ತಿಕೊಂಡು ಬಲೆಯಲ್ಲಿ ಹಾಕಿಕೊಂಡು ಹೊರಡುತ್ತಾನೆ. ಇದನ್ನು ನೋಡಿ ಇಲಿ,ಕಾಗೆ ಹಾಗೂ ಜಿಂಕೆ ಹೆದರಿಕೊಂಡು, ಏನು ಮಾಡುವುದು ಎಂದು ಯೋಚನೆ ಮಾಡುತ್ತವೆ. ಈ ಸಮಯದಲ್ಲಿ ಕಾಗೆ, ಇಲಿಗೆ  ನೀನು ಬಹಳ ಬುದ್ದಿವಂತ. ಏನಾದರೂ ಉಪಾಯ ಹೇಳು ಎನ್ನುತ್ತದೆ.
ಆಗ, ಇಲಿ ಯೋಚನೆ ಮಾಡಿ, ಸ್ವಲ್ಪ ದೂರ ಹೋಗಿ, ಬೇಟೆಗಾರ ಬರುವ ದಾರಿಯಲ್ಲಿ ಜಿಂಕೆ ಸತ್ತಂತೆ ಮಲಗಲಿ. ಕಾಗೆ, ಅದನ್ನು ಕುಕ್ಕಿ ತಿನ್ನುವಂತೆ ಹಿಂದೆ ಕುಳಿತಿರಲಿ. ಜಿಂಕೆಯನ್ನು ನೋಡಿ, ಆಮೆಯ ಬ್ಯಾಗ್​ ಬಿಟ್ಟು ಬರುತ್ತಾನೆ. ಆಗ, ನಾನು ಬ್ಯಾಗ್ ಅನ್ನು ಕಡಿದು, ಆಮೆಯನ್ನು ಕಾಪಾಡುತ್ತೇನೆ. ಬೇಟೆಗಾರ ಹತ್ತಿರ ಬಂದಾಗ ಜಿಂಕೆ ಓಡಿಹೋಗಲಿ ಎನ್ನುತ್ತದೆ.


ಒಗ್ಗಟ್ಟಿನಲ್ಲಿ ಬಲವಿದೆ


ಈ ಉಪಾಯ ಕೇಳಿ ಜಿಂಕೆ ಸಹ ಸತ್ತಂತೆ ಹೋಗಿ ಮಲಗಿಕೊಳ್ಳುತ್ತದೆ. ಕಾಗೆ, ಕುಕ್ಕುತ್ತಿರುವಂತೆ ಕುಳಿತುಕೊಳ್ಳುತ್ತದೆ. ಇದನ್ನು ನೋಡಿ ಬೇಟೆಗಾರ, ಬಹಳ ಖುಷಿಯಾಗುತ್ತಾನೆ. ಒಂದು ಜೀವಂತ ಆಮೆ ಸಿಕ್ಕಿದೆ, ಈಗ ನೋಡಿದರೆ ಸತ್ತಿರುವ ಜಿಂಕೆ ಸಿಕ್ಕಿದೆ ಎಂದು ಖುಷಿಯಿಂದ ಜಿಂಕೆಯ ಬಳಿ ಹೋಗುತ್ತಾನೆ.


ಇದನ್ನೂ ಓದಿ: ವಯಸ್ಸು ಮುಖ್ಯವಲ್ಲ ಜ್ಞಾನ ಮುಖ್ಯ, ಈ ಕಥೆಯ ಹಿಂದೆ ಅಡಗಿದೆ ಸಾವಿರ ಗೂಡಾರ್ಥ


ಆಮೆಯ ಬ್ಯಾಗ್​ ಅನ್ನು ಅಲ್ಲೆ ಬಿಟ್ಟು, ಹೋದಾಗ ಇಲಿ  ಬ್ಯಾಗ್​ ಅನ್ನು ಕತ್ತರಿಸಿ ಆಮೆಯನ್ನು ಕಾಪಾಡುತ್ತದೆ. ಆಮೆ ಸೇಫ್​ ಆಗಿ ಸರೋವರ ಸೇರುತ್ತದೆ. ನಂತರ ಜಿಂಕೆ ಸಹ ಅಲ್ಲಿಂದ ಓಡಿ ಹೋಗುತ್ತದೆ. ಇದರಿಂದ ಬೇಸರಗೊಂಡ ಬೇಟೆಗಾರ ಆಮೆಯ ಬಳಿ ಬಂದಾಗ , ಖಾಲಿಯಾಗಿರುವುದನ್ನ ನೋಡಿ ಪೆಚ್ಚಾಗಿ ಮನೆಗೆ ಹೋಗುತ್ತಾನೆ. ಈ ಕಡೆ, ಆಮೆ, ಇಲಿ, ಕಾಗೆ, ಜಿಂಕೆ ಸರೋವರದ ಬಳಿ ಸಂತಸದಿಂದ ಕುಣಿಯುತ್ತವೆ. ಆಮೆ ಸಹ ಎಲ್ಲರ ಕ್ಷಮೆ ಕೇಳುತ್ತದೆ.

Published by:Sandhya M
First published: