ನಿಮ್ಮ ಆಧಾರ್ - ಪ್ಯಾನ್ ಕಾರ್ಡ್​ಗಳು ಲಿಂಕ್ ಆಗಿಲ್ಲವೇ? ಇಲ್ಲದಿದ್ದರೆ ಅಮಾನ್ಯವಾಗುತ್ತೆ..!

PAN-Aadhaar cards link: ನಿಮ್ಮ ಮೊಬೈಲ್​ನಲ್ಲಿ UIDPAN ಎಂದು ಟೈಪ್ ಮಾಡಿ ಸ್ಪೇಸ್ ಕೊಟ್ಟು 12 ಡಿಜಿಟ್ ಆಧಾರ್ ನಂಬರ್ ನಮೂದಿಸಿ.

zahir | news18-kannada
Updated:September 22, 2019, 4:22 PM IST
ನಿಮ್ಮ ಆಧಾರ್ - ಪ್ಯಾನ್ ಕಾರ್ಡ್​ಗಳು ಲಿಂಕ್ ಆಗಿಲ್ಲವೇ? ಇಲ್ಲದಿದ್ದರೆ ಅಮಾನ್ಯವಾಗುತ್ತೆ..!
Adhaar-pan
  • Share this:
ಪ್ಯಾನ್ ಕಾರ್ಡ್​ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಈ ಸಂಖ್ಯೆಗಳ ಜೋಡಣೆಗೆ ಸೆಪ್ಟೆಂಬರ್ 30, 2019 ಕೊನೆಯ ದಿನವಾಗಿದ್ದು, ಆದಷ್ಟು ಬೇಗ ಆನ್​ಲೈನ್ ಮೂಲಕ ಅಥವಾ ಕರೆ ಮಾಡಿ ನಿಮ್ಮ ಆಧಾರ್-ಪ್ಯಾನ್ ಸಂಖ್ಯೆಯನ್ನು ಲಿಂಕ್ ಮಾಡಿಕೊಳ್ಳಿ.

ನೀವಿನ್ನೂ ಆಧಾರ್-ಪ್ಯಾನ್ ಲಿಂಕ್ ಮಾಡಿಲ್ವಾ? ಹಾಗಿದ್ರೆ ಈ ಕೆಳಗಿನಂತೆ ಲಿಂಕ್ ಮಾಡಿ.

-ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್​ಸೈಟ್​ಗೆ www.incometaxindiaefiling.gov.in ಲಾಗಿನ್ ಆಗಿ.

-ನಂತರ ಅಲ್ಲಿ ನೀಡಲಾಗಿರುವ ಲಿಂಕ್ ಆಧಾರ್‌ ಎಂಬ ಬಟನ್‌ ಕ್ಲಿಕ್‌ ಮಾಡಿ.

-ಇದಾದ ಮೇಲೆ ನಿಮ್ಮ ಆಧಾರ್ ಸಂಖ್ಯೆಯನ್ನು ಎಂಟರ್ ಮಾಡಿ.

-ಆ ನಂತರ ನಿಮ್ಮಹೆಸರು, ಜನ್ಮ ದಿನಾಂಕ ಇತ್ಯಾದಿಗಳನ್ನು ತಪ್ಪಿಲ್ಲದೇ ನಮೂದಿಸಿ.

-ಬಳಿಕ ಕ್ಯಾಪ್ಚಾ ಕೋಡ್ ನಮೂದಿಸಿ ಸಬ್​ಮಿಟ್ ಬಟನ್ ಕ್ಲಿಕ್ ಮಾಡಿದರೆ ಸಾಕು.-ಇದಾದ ಮೇಲೆ UIDAI ನಿಂದ ವೆರಿಫಿಕೇಶನ್‌ ಆದ ಬಳಿಕ ಆಧಾರ್‌-ಪ್ಯಾನ್‌ ಲಿಂಕ್‌ ಆಗಲಿದೆ.

ಇದನ್ನೂ ಓದಿ: 1 ಲಕ್ಷದೊಳಗೆ ಖರೀದಿಸಬಹುದಾದ ಅತ್ಯಾಕರ್ಷಕ ಆರು ಬೈಕುಗಳ ಪಟ್ಟಿ ಇಲ್ಲಿದೆ

ಇನ್ನು ಮೆಸೇಜ್ ಮೂಲಕ ಕೂಡ ಆಧಾರ್-ಪ್ಯಾನ್ ಲಿಂಕ್ ಮಾಡಬಹುದು:
ನಿಮ್ಮ ಮೊಬೈಲ್​ನಲ್ಲಿ UIDPAN ಎಂದು ಟೈಪ್ ಮಾಡಿ ಸ್ಪೇಸ್ ಕೊಟ್ಟು 12 ಡಿಜಿಟ್ ಆಧಾರ್ ನಂಬರ್ ನಮೂದಿಸಿ. ಆ ಬಳಿಕ ಸ್ಪೇಸ್ ಕೊಟ್ಟು 10 ಡಿಜಿಟ್ ಪ್ಯಾನ್ ನಂಬರ್ ನಮೂದಿಸಿ. ಈ ಎಸ್​ಎಂಎಸ್​ ಅನ್ನು ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್​ನಿಂದ 567678 ಅಥವಾ 56161 ನಂಬರ್​ಗೆ ಕಳುಹಿಸಿದರೆ ಆಧಾರ್-ಪ್ಯಾನ್ ಸಂಖ್ಯೆಗಳು ಲಿಂಕ್ ಆಗುತ್ತವೆ.

ವಿಶೇಷ ಸೂಚನೆ: ಆಧಾರ್ ಕಾರ್ಡ್ ನಂಬರ್ ಹಾಗೂ ಪ್ಯಾನ್ ಕಾರ್ಡ್​ ಸಂಖ್ಯೆಯನ್ನು ಲಿಂಕ್ ಮಾಡಲು ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದೆ. ಇದರೊಳಗೆ ಈ ಕಾರ್ಡ್​ಗಳನ್ನು ಜೋಡಣೆ ಮಾಡಿಕೊಳ್ಳದಿದ್ದರೆ ನಿಮ್ಮ ಪ್ಯಾನ್ ಕಾರ್ಡ್​ ಅಮಾನ್ಯಗೊಳ್ಳಲಿದೆ.

ಇದನ್ನೂ ಓದಿ:  ಮತ್ತೊಮ್ಮೆ ಮಾದಕ ಮೈಮಾಟದಿಂದ ಪಡ್ಡೆಗಳ ನಿದ್ದೆಗೆಡಿಸಿದ ಸನ್ನಿ ಲಿಯೋನ್ 
First published:September 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading