HOME » NEWS » Lifestyle » PALLAVI BARNWAL SEXUAL WELLNESS QUESTIONS AND ANSWER ZP

Sexual wellness: ಅನೈತಿಕ ಸಂಬಂಧವನ್ನು ತೊಡೆದು ಹಾಕುವ ಬಗ್ಗೆ ಒಂದಷ್ಟು ಮಾಹಿತಿ

ಲೈಂಗಿಕ ಸಂಬಂಧದಲ್ಲಿ ಪಾಲುದಾರನ ವರ್ತನೆಯು ಸಾಮಾನ್ಯವಾಗಿ ಸಾಮಾಜಿಕ ನಂಬಿಕೆಗಳು ಮತ್ತು ನಿರೀಕ್ಷೆಗಳಿಂದ ಪ್ರಭಾವಿತವಾಗಿರುತ್ತದೆ. ಉದಾಹರಣೆಗೆ, ಒಬ್ಬ ಮಹಿಳೆ ಈ ಹಿಂದೆ ಒಂದಕ್ಕಿಂತ ಹೆಚ್ಚು ಪುರುಷರೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದರೆ ನಮ್ಮ ಸಮಾಜ ಕೆಟ್ಟದಾಗಿ ನೋಡುತ್ತದೆ.

news18-kannada
Updated:December 29, 2020, 8:29 PM IST
Sexual wellness: ಅನೈತಿಕ ಸಂಬಂಧವನ್ನು ತೊಡೆದು ಹಾಕುವ ಬಗ್ಗೆ ಒಂದಷ್ಟು ಮಾಹಿತಿ
ಸಾಂದರ್ಭಿಕ ಚಿತ್ರ
  • Share this:
ಪ್ರಶ್ನೆ: ನಮ್ಮ ಸಮಾಜದಲ್ಲಿ ನಾವು ಯಾರಿಗೂ ಹಾನಿಯಾಗದಂತೆ ಮತ್ತು ಅದು ಜನರಿಗೆ ಸ್ವೀಕಾರಾರ್ಹವಾದ ರೀತಿಯಲ್ಲಿ ಲೈಂಗಿಕ ಬಯಕೆಯ ಬಗ್ಗೆ ಹೆಚ್ಚು ಮುಕ್ತವಾಗಿದ್ದರೆ, ನಮ್ಮ ಸುತ್ತಲೂ ರೂಪುಗೊಳ್ಳುವ ಅನೈತಿಕ ಸಂಬಂಧಗಳನ್ನು ನಾವು ತೊಡೆದುಹಾಕಬಹುದೇ?

ಇದು ಖಂಡಿತವಾಗಿಯೂ ಆಶಾವಾದಿ ಮತ್ತು ಪ್ರಗತಿಪರ ದೃಷ್ಟಿಕೋನವಾಗಿದೆ. ಆದರೆ ಅನೈತಿಕ ಸಂಬಂಧವು ಸಾಮಾನ್ಯವಾಗಿ ಸಂಬಂಧಗಳಲ್ಲಿನ ಅಸಮತೋಲನದಿಂದ ಉದ್ಭವಿಸುತ್ತದೆ. ಇದರಲ್ಲಿ ಒಬ್ಬ ಇತರೆ ಸಂಗಾತಿ ಕಂಡುಕೊಳ್ಳುವ ಮೂಲಕ ತಪ್ಪಿಸಿಕೊಳ್ಳುತ್ತಾನೆ. (ಮತ್ತು ಕೆಲವು ಸಂದರ್ಭಗಳಲ್ಲಿ ಇಬ್ಬರೂ ಪರಸ್ಪರ ಕೆಟ್ಟವರಾಗಿರುತ್ತಾರೆ). ಅನೇಕ ವಿಷಯಗಳು ಇದಕ್ಕೆ ಕಾರಣವಾಗಿವೆ. ಇವು ಪಿತೃಪ್ರಭುತ್ವದ ವಿಷಯಗಳು ಅಥವಾ ಸ್ವಾಭಿಮಾನ ಅಥವಾ ಸ್ವ-ಮೌಲ್ಯವನ್ನು ಅರ್ಥಮಾಡಿಕೊಳ್ಳದಂತಹ ವೈಯಕ್ತಿಕವಾಗಿರಬಹುದು. ಲೈಂಗಿಕ ಆಸೆಗಳನ್ನು ಸಮಾಜವು ಅಂಗೀಕರಿಸುವುದರಿಂದ ಈ ಅಸಮತೋಲನವನ್ನು ಉಂಟುಮಾಡುವ ವಿಷಯಗಳನ್ನು ಸ್ವಲ್ಪ ಮಟ್ಟಿಗೆ ನಿವಾರಿಸಬಹುದು.

ಲೈಂಗಿಕ ಸಂಬಂಧದಲ್ಲಿ ಪಾಲುದಾರನ ವರ್ತನೆಯು ಸಾಮಾನ್ಯವಾಗಿ ಸಾಮಾಜಿಕ ನಂಬಿಕೆಗಳು ಮತ್ತು ನಿರೀಕ್ಷೆಗಳಿಂದ ಪ್ರಭಾವಿತವಾಗಿರುತ್ತದೆ. ಉದಾಹರಣೆಗೆ, ಒಬ್ಬ ಮಹಿಳೆ ಈ ಹಿಂದೆ ಒಂದಕ್ಕಿಂತ ಹೆಚ್ಚು ಪುರುಷರೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದರೆ ನಮ್ಮ ಸಮಾಜ ಸೂಳೆ ಎಂದು ಸಂಭೋಧಿಸುತ್ತದೆ. ಈ ಲೈಂಗಿಕ ಪಕ್ಷಪಾತದಿಂದಾಗಿ, ಮಹಿಳೆ ತನ್ನ ಸಂಬಂಧಗಳನ್ನು ಯಾರಿಗೂ ತಿಳಿಯದಂತೆ ಅನೈತಿಕತೆಯಲ್ಲೇ ಮುಂದುವರೆಸಬಹುದು. ಹಾಗೆಯೇ ಲೈಂಗಿಕ ಆಯ್ಕೆಗಳಿಂದ ಭಿನ್ನವಾದ ಆಯ್ಕೆಯನ್ನು ಹೊಂದಿರುವ ಮನುಷ್ಯನು ತನ್ನ ಸಂಗಾತಿ ತನ್ನ ವಾಸ್ತವತೆಯನ್ನು ಬಹಿರಂಗಪಡಿಸಬಹುದೆಂಬ ಭಯದಿಂದ ಅನೈತಿಕ ಸಂಬಂಧಗಳಲ್ಲಿ ಮುಂದುವರಿಯುವಂತೆ ಒತ್ತಡ ಹೇರಬಹುದು. ವಿವಾಹಪೂರ್ವ ಲೈಂಗಿಕತೆಯ ಮೇಲಿನ ನಿಷೇಧ ಅಥವಾ ಅದಕ್ಕೆ ಸಂಬಂಧಿಸಿದ ಭಯವು ಮಹಿಳೆಯರ ಮತ್ತು ಪುರುಷರ ಅಸ್ತಿತ್ವವನ್ನು ಕಡಿಮೆ ಮಾಡುತ್ತದೆ. ಇದನ್ನೇ ನಮ್ಮ ಸಮಾಜ ಒಂದು ಅಸ್ತ್ರವಾಗಿ ಬಳಸಿಕೊಂಡಿತು.

ದಂಪತಿಗಳು ಅನೈತಿಕ ಸಂಬಂಧದಲ್ಲಿರಲು ಅನೇಕ ಕಾರಣಗಳಿವೆ. ಆದರೆ ಸಮಾಜವು ಲೈಂಗಿಕತೆಯ ಮುಕ್ತ ದೃಷ್ಟಿಕೋನವನ್ನು ಅಳವಡಿಸಿಕೊಂಡರೆ ಮತ್ತು ಒಪ್ಪಿಕೊಂಡರೆ ಅದನ್ನು ನಿವಾರಿಸಬಹುದು. ಇದಾಗ್ಯೂ ಎಲ್ಲಾ ಅನೈತಿಕ ಸಂಬಂಧಗಳು ಕೊನೆಗೊಳ್ಳಬೇಕಾದರೆ, ತನ್ನನ್ನು ಪ್ರೀತಿಸುವುದರಲ್ಲಿ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಉತ್ತಮ ವ್ಯವಸ್ಥೆ, ಮೂಲಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕು.
Youtube Video

ಜನರು ತಮ್ಮ ಸಂಬಂಧವನ್ನು ಅವರು ಇರುವ ಸಂಬಂಧದಿಂದ ನಿರ್ಧರಿಸಲಾಗುವುದಿಲ್ಲ ಎಂದು ತಿಳಿದುಕೊಳ್ಳಲು ಪ್ರಾರಂಭಿಸಬೇಕು. ನಿಮ್ಮನ್ನು ಅಳುವಂತೆ ಮಾಡುವ ಮತ್ತು ನಿಮಗೆ ನಿದ್ರೆ ನೀಡುವ ವ್ಯಕ್ತಿಯು ಅಂತಹ ಜನರಿಲ್ಲದೆ ಸಂತೋಷವಾಗಿರಬಹುದು. ನೀವು ಒಳ್ಳೆಯವರು ಮತ್ತು ಜನರು ನಿಮ್ಮನ್ನು ಪ್ರೀತಿಸುತ್ತಾರೆ. ಹೃದಯದ ನಿಜವಾದ ಒಡನಾಡಿ ಎಂದು ಕರೆಯುವಂತಹ ಯಾವುದೇ ವಸ್ತು ಈ ಜಗತ್ತಿನಲ್ಲಿ ಇಲ್ಲ. ಹೀಗಾಗಿ ನಿಮ್ಮನ್ನು ಪೂರ್ಣಗೊಳಿಸಲು ನಿಮಗೆ ಇನ್ನೊಬ್ಬ ವ್ಯಕ್ತಿಯ ಅಗತ್ಯವಿಲ್ಲ. ಹಾಗೆಯೇ ಜೀವನದಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ನಿಮ್ಮನ್ನು ಹೆಚ್ಚು ಪ್ರೀತಿಸುವುದು.



ಲೇಖನ- ಪಲ್ಲವಿ ಬರ್ನವಾಲ್
First published: December 29, 2020, 8:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories