Breakfast Recipe: ಬೆಳಗಿನ ತಿಂಡಿಗೆ ರುಚಿಕರ ಪಾಲಕ್ -ಮೆಂತ್ಯೆ ಸೊಪ್ಪಿನ ರೊಟ್ಟಿ ಮಾಡಿ ಸವಿಯಿರಿ

Palak And Methi Roti: . ಇನ್ನು ಅಕ್ಕಿರೊಟ್ಟಿ ಎಂದರೆ ಪ್ರತಿಯೊಬ್ಬರಿಗೂ ಬಹಳ ಇಷ್ಟ. ರೊಟ್ಟಿ ಮಾಡುವುದರಲ್ಲಿ ಸಹ ಹಲವಾರು ವಿಧಗಳಿದೆ. ಇನ್ನೊಂದು ರುಚಿಕರ ರೊಟ್ಟಿ ಎಂದರೆ ಮೆಂತೆಸೊಪ್ಪು ಮತ್ತು ಪಾಲಕ್ ಸೊಪ್ಪಿನ ರೊಟ್ಟಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತದ(South Indian) ಭಕ್ಷ್ಯಗಳು (Foods)ವಿಭಿನ್ನ ಪಾಕ ಪದ್ಧತಿಯನ್ನು(Food ) ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರ. ನಾವು ಬೆಳಗಿನ ತಿಂಡಿ ವಿಭಿನ್ನವಾಗಿ ಹೇಗೆ ಮಾಡುವುದು ಅಂತ ಯೋಚನೆ ಮಾಡುವುದು ಸಹಜ. ಆದರೆ ಅದಕ್ಕೆ ಉತ್ತರ ನಮ್ಮ ಪಾಕವಿಧಾನದಲ್ಲಿದೆ. ಹಾಗೆಯೇ ನಾವು ಬಳಸುವ ಪದಾರ್ಥಗಳು ಹೆಚ್ಚು ವಿಭಿನ್ನವಾಗಿರುತ್ತದೆಇನ್ನು ಅಕ್ಕಿರೊಟ್ಟಿ ಎಂದರೆ ಪ್ರತಿಯೊಬ್ಬರಿಗೂ ಬಹಳ ಇಷ್ಟ. ರೊಟ್ಟಿ ಮಾಡುವುದರಲ್ಲಿ ಸಹ ಹಲವಾರು ವಿಧಗಳಿದೆ. ಇನ್ನೊಂದು ರುಚಿಕರ ರೊಟ್ಟಿ ಎಂದರೆ ಮೆಂತೆಸೊಪ್ಪು ಮತ್ತು ಪಾಲಕ್ ಸೊಪ್ಪಿನ ರೊಟ್ಟಿ. ಈ ಮೆಂತೆಸೊಪ್ಪು ಮತ್ತು ಪಾಲಕ್ ಸೊಪ್ಪುಗಳನ್ನು ಸೇರಿಸಿ ಮಾಡಿದ ಅಕ್ಕಿರೊಟ್ಟಿಯೂ ಒಂದು ಅತ್ಯಂತ ಆರೋಗ್ಯಕರ.  

ರೊಟ್ಟಿ ಮಾಡಲು ಬೇಕಾಗುವ ಸಾಮಾಗ್ರಿಗಳು

ಅಕ್ಕಿಹಿಟ್ಟು: ಎರಡು ಕಪ್

ಇದನ್ನೂ ಓದಿ: ದೋಸೆ ಜೊತೆಗೆ ಚೆಟ್ಟಿನಾಡ್ ಟೊಮೊಟೊ ಚಟ್ನಿ ಇದ್ರೆ ರುಚಿಯೇ ಬೇರೆ- ನೀವೂ ಟ್ರೈ ಮಾಡಿ

ಮೆಂತೆ ಸೊಪ್ಪು : ಒಂದು ಕಪ್ (ಚಿಕ್ಕದಾಗಿ ಹೆಚ್ಚಿಕೊಳ್ಳಿ)

ಪಾಲಕ್ ಸೊಪ್ಪು: ಒಂದು ಕಪ್ (ಚಿಕ್ಕದಾಗಿ ಹೆಚ್ಚಿಕೊಳ್ಳಿ)

ಸಾಧ್ಯವಾದಷ್ಟು ದಂಟು ಉಪಯೋಗಿಸಬೇಡಿ.

ಜೀರಿಗೆ - ಒಂದು ಚಮಚ

ಕಾಯಿತುರಿ: ಒಂದು ಕಪ್

ಹಸಿಮೆಣಸು: ಮೂರು

ಕೊತ್ತಂಬರಿ ಸೊಪ್ಪು: ಅರ್ಧ ಕಟ್ಟು, ಚಿಕ್ಕದಾಗಿ ಹೆಚ್ಚಿಕೊಳ್ಳಿ.

ಅಡುಗೆ ಎಣ್ಣೆ - ಎರಡು ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ರೊಟ್ಟಿ ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ಮೆಂತೆ ಸೊಪ್ಪು, ಪಾಲಕ್ ಸೊಪ್ಪು, ಜೀರಿಗೆ, ಕಾಯಿತುರಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದಕ್ಕೆ ಅಕ್ಕಿ ಹಿಟ್ಟುಹಾಕಿ ಕಲಸುತ್ತಾ ಹೋಗಿ.

ಅದರ ಮಧ್ಯೆ ನೀವು ಸ್ವಲ್ಪ ಸ್ವಲ್ಪವಾಗಿಯೇ ನೀರು ಸೇರಿಸುತ್ತಾ ಹೋಗಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನೀರು ಹೆಚ್ಚಾಗದಂತೆ ಎಚ್ಚರವಹಿಸಿ, ಹೆಚ್ಚಾದರೆ ತಟ್ಟಲು ಬರುವುದಿಲ್ಲ. ನಂತರ ಈಗ ಒಂದು ಕಾವಲಿಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಚ್ಚಿ ಕಾಯಿಸಿ,

ಇದನ್ನೂ ಓದಿ: ಕುಚ್ಚಲಕ್ಕಿಯಿಂದ ಮಾಡ್ಬಹುದು ಸೂಪರ್ ದೋಸೆ- ಇಲ್ಲಿದ ರೆಸಿಪಿ

ಪ್ಯಾನ್ ಕಾದ ನಂತರ ಪ್ಲಾಸ್ಟಿಕ್ ಹಾಳೆಯ ಮೇಲೆ ಎಣ್ಣೆ ಸವರಿ ರೊಟ್ಟಿಯನ್ನು ತಟ್ಟಿ.  ನಂತರ ಅದನ್ನು ಕಾವಲಿ ಮೇಲೆ ಹಾಕಿ ಚನ್ನಾಗಿ ಬೇಯಿಸಿದರೆ ರುಚಿ ರುಚಿಯಾದ ಸೊಪ್ಪಿನ ರೊಟ್ಟಿ ರೆಡಿ.
Published by:Sandhya M
First published: