• Home
  • »
  • News
  • »
  • lifestyle
  • »
  • Pain: ನೋವಿನಿಂದಲೂ ಇದೆ ಹಲವು ಪ್ರಯೋಜನ!

Pain: ನೋವಿನಿಂದಲೂ ಇದೆ ಹಲವು ಪ್ರಯೋಜನ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನೋವು ಎಂಬುದು ಆರೋಗ್ಯ ಕೆಡಬಹುದಾದರ ಮೊದಲ ಸಂಭವನೀಯ ಎಚ್ಚರಿಕೆಯ ಗಂಟೆಯಾಗಿದೆ.

  • News18 Kannada
  • Last Updated :
  • Karnataka, India
  • Share this:

ನೋವು (Pain) ಎಂದಾಕ್ಷಣ ಎಲ್ಲರಿಗೂ ಒಂದು ರೀತಿಯ ಅಹಿತಕರ ಭಾವನೆ ಮನದಲ್ಲಿ ಮೂಡಿಯೇ ಮೂಡುತ್ತದೆ. ಹೌದು, ಇದು ನಿಜ (True) ಕೂಡ, ಏಕೆಂದರೆ ಯಾರೂ ಸಹ ನೋವು ಬರಬೇಕೆಂದು ಕಿಂಚಿತ್ತೂ ಬಯಸುವುದಿಲ್ಲ. ಆದರೆ, ನೋವು ಒಂದು ರೀತಿಯ ಎಚ್ಚರಿಕೆ (Alert) ಸಹ ಅನ್ನುವುದು ಅಷ್ಟೇ ಸತ್ಯ. ಏಕೆಂದರೆ, ದೇಹದ ಯಾವುದಾದರೂ ಒಂದು ಭಾಗದಲ್ಲಿ ನೋವುಂಟಾದರೆ ಖಂಡಿತವಾಗಿಯೂ ಅದು ದೇಹದಲ್ಲಿ ಎಲ್ಲವೂ ಸರಿಯಿಲ್ಲ ಅನ್ನುವುದನ್ನು ಸೂಚಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ನೋವು ಎಂಬುದು ಆರೋಗ್ಯ (health) ಕೆಡಬಹುದಾದರ ಮೊದಲ ಸಂಭವನೀಯ ಎಚ್ಚರಿಕೆಯ ಗಂಟೆಯಾಗಿದೆ.


ನೋವು ಕೇವಲ ಎಚ್ಚರಿಕೆಯ ಸೂಚನೆಯೆ?


ಆದರೆ, ಒಂದೊಮ್ಮೆ ಯೋಚಿಸಿ ಈ ನೋವು ಎಂಬುದು ನಮ್ಮ ದೇಹಕ್ಕೆ ಒಂದು ಎಚ್ಚರಿಕೆಯ ಸೂಚನೆಯಾಗಿಯಷ್ಟೇ ತನ್ನ ಕಾರ್ಯವೈಖರಿ ಹೊಂದಿದೆಯೆ? ಅಥವಾ ಅದು ಇನ್ನೂ ಹೆಚ್ಚಿನದೇನಾದರೂ ಗುಣಲಕ್ಷಣ ಹೊಂದಿದೆಯೇ? ಈ ಬಗ್ಗೆ ಹಾರ್ವರ್ಡ್ ವೈದ್ಯಕೀಯ ಸಂಶೋಧಕರ ತಂಡವೊಂದು ಅಧ್ಯಯನ ನಡೆಸಿದ್ದು ಅಚ್ಚರಿ ಮೂಡಿಸುವಂತಹ ವಿಷಯ ಒಂದನ್ನು ಕಂಡುಕೊಂಡಿದ್ದಾರೆಂದು ತಿಳಿದುಬಂದಿದೆ. ಅವರು ಈ ಬಗ್ಗೆ ಇಲಿಗಳ ಮೇಲೆ ತಮ್ಮ ಸಂಶೋಧನೆ ನಡೆಸಿದ್ದಾರೆ.


ಏನಿದು ಸಂಶೋಧನೆ?


ಸಂಶೋಧಕರು ಇಲಿಗಳ ಮೇಲೆ ಅಧ್ಯಯನ ನಡೆಸಿದ್ದು ಅದರಲ್ಲಿ ತಿಳಿದುಬಂದ ವಿಷಯವೆಂದರೆ ಇಲಿಗಳ ಗಟ್ಟಿನಲ್ಲಿರುವ (ಕರುಳು) ನೋವಿನ ಅನುಭವ ಹೊಂದಿರುವ ನ್ಯೂರಾನುಗಳು ಸುರಕ್ಷತಾ ಪರದೆಯನ್ನು ವಿಪರೀತ ಪರಿಸ್ಥಿತಿಗಳಲ್ಲಿ ನಿಯಂತ್ರಣದಲ್ಲಿರಿಸುತ್ತವೆ ಹಾಗೂ ಆ ಕ್ರಿಯೆಗೆ ತಡೆ ಉಂಟಾಗದಂತೆ ಕರುಳಿನ ಕೋಶಗಳು ಇನ್ನಷ್ಟು ಮ್ಯೂಕಸ್ ಅನ್ನು ಉತ್ಪತ್ತಿ ಮಾಡಲು ಪ್ರಚೋದಿಸುತ್ತವೆ ಎನ್ನಲಾಗಿದೆ. 'ಸೆಲ್' ಎಂಬ ಜರ್ನಲ್ ನಲ್ಲಿ ಈ ತಿಳುವಳಿಕೆಯನ್ನು ಅಕ್ಟೋಬರ್ 14 ರಂದು ಪ್ರಕಟಿಸಲಾಗಿದೆ.


ಇದೊಂದು ಸಂಕೀರ್ಣ ಪ್ರಕ್ರಿಯೆಯಾಗಿದ್ದು ಇದರಡಿಯಲ್ಲಿ ನ್ಯೂರಾನುಗಳು ಗಾಬ್ಲೆಟ್ ಕೋಶಗಳು ಎಂದು ಕರೆಯಲಾಗುವ ಕರುಳು ಕೋಶಗಳೊಂದಿಗೆ ಒಂದು ರೀತಿಯ ಸಂವಹನ ನಡೆಸುತ್ತವೆ. ಈ ಗಾಬ್ಲೆಟ್ ಕೋಶಗಳು ಹೆಚ್ಚಿನ ಮ್ಯುಕಸ್ ಅನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದ್ದು ಈ ಮೂಲಕ ನ್ಯೂರಾನುಗಳು ನೋವಿನ ಸಂದರ್ಭದಲ್ಲಿ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ಗಾಬ್ಲೆಟ್ ಕೋಶಗಳನ್ನು ಪ್ರಚೋದಿಸುವ ಮೂಲಕ ಮತ್ತಷ್ಟು ಮ್ಯೂಕಸ್ ಉತ್ಪತ್ತಿಯಾಗುವಂತೆ ಮಾಡುವಲ್ಲಿ ಪಾತ್ರವಹಿಸುತ್ತವೆ ಎಂದು ಕಂಡುಕೊಳ್ಳಲಾಗಿದೆ.


ಇದನ್ನೂ ಓದಿ: ಅಣಬೆಗಳು ರುಚಿಯೊಂದೇ ಅಲ್ಲ, ರೋಗ ತಡೆಗಟ್ಟುವ ಮಾಂತ್ರಿಕ ಔಷಧಿಯೂ ಹೌದು!


ನೇರ ಸಂವಹನ


ನಮ್ಮ ಶರೀರದಲ್ಲಿರುವ ಕರುಳುಗಳು ಹಾಗೂ ನಾಳಗಳು ಗಾಬ್ಲೆಟ್ ಕೋಶಗಳಿಂದ ಆವೃತ್ತವಾಗಿರುತ್ತವೆ. ಈ ಗಾಬ್ಲೆಟ್ ಕೋಶಗಳು ಜೆಲ್ ರೀತಿಯಲ್ಲಿರುವ ಮ್ಯೂಕಸ್ ಎಂಬ ಪದಾರ್ಥವನ್ನು ಒಳಗೊಂಡಿರುತ್ತದೆ ಹಾಗೂ ಈ ಮ್ಯೂಕಸ್ ಎಂಬುದು ಕೆಲ ಬಗೆಯ ಸಕ್ಕರೆ ಹಾಗೂ ಪ್ರೋಟೀನುಗಳ ಮಿಶ್ರಣವಾಗಿದೆ. ಯಾವುದಾದರೂ ಆಂತರಿಕ ಭಾಗದಲ್ಲಿ ಏನಾದರೂ ಬೀರುಕು, ಅಥವಾ ಗಾಯವಾದರೆ ಆ ಭಾಗ ಉಬ್ಬದಂತೆ ರಕ್ಷಿಸುವ ಕಾರ್ಯ ಈ ಮ್ಯೂಕಸ್ ಸಹಜವಾಗಿ ಮಾಡುತ್ತಿರುತ್ತದೆ.


ಈಗ ನಡೆದಿರುವ ಸಂಶೋಧನೆಯ ಪ್ರಕಾರ, ನೋವು ಆದ ಸಂದರ್ಭದಲ್ಲಿ ಆ ನೋವನ್ನು ಒಳಗೊಂಡಿರುವ ನ್ಯೂರಾನುಗಳು ಈ ಗಟ್ ಸೆಲ್ ಗಳನ್ನು ಪ್ರಚೋದಿಸುವ ಮುಲಕ ಅವು ಹೆಚ್ಚು ಮ್ಯೂಕಸ್ ಉತ್ಪತ್ತಿ ಮಾಡುವಂತೆ ಪ್ರಚೋದಿಸುತ್ತವೆ ಎಂಬುದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ನ್ಯೂರಾನುಗಳು ಗಟ್ ಸೆಲ್ ಗಳೊಂದಿಗೆ ನೇರ ಸಂವಹನ ನಡೆಸುತ್ತವೆ ಎನ್ನಲಾಗಿದೆ.


ಹಲವು ಪ್ರಯೋಗಗಳು


ಅಷ್ಟಕ್ಕೂ ಈ ತೀರ್ಮಾನಕ್ಕೆ ಬರುವ ಮುಂಚೆ ಸಂಶೋಧಕರು ಹಲವು ಪ್ರಯೋಗಗಳನ್ನು ನಡೆಸಿದರು. ಈ ಸಂದರ್ಭದಲ್ಲಿ ನೋವಿನ ನ್ಯೂರಾನುಗಳ ಕೊರತೆಯಿರುವ ಇಲಿಗಳು ಅತಿ ಕಡಿಮೆ ಪ್ರಮಾಣದಲ್ಲಿ ಈ ಸುರಕ್ಷತಾ ಮ್ಯೂಕಸ್ ಪರದೆಯನ್ನು ಉತ್ಪತ್ತಿ ಮಾಡಿದವು. ಇದನ್ನು ಇನ್ನಷ್ಟು ದೃಢಪಡಿಸಿಕೊಳ್ಳಲು ಸಂಶೋಧಕರು ನೋವಿನ ನ್ಯೂರಾನುಗಳ ಉಪಸ್ಥಿತಿ ಹಾಗೂ ಅನುಪಸ್ಥಿತಿಗಳಲ್ಲಿ ಗಟ್ ಸೆಲ್ ಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ವಿಶ್ಲೇಷಿಸಿದರು.


ಈ ಸಂದರ್ಭದಲ್ಲಿ ಅವರಿಗೆ ತಿಳಿದುಬಂದ ವಿಷಯವೆಂದರೆ ಗಾಬ್ಲೆಟ್ ಸೆಲ್ ಗಳು ಒಂದು ಬಗೆಯ RAMP1 ಎಂಬ ರಿಸೆಪ್ಟರ್ ಗಳನ್ನು ಹೊಂದಿದ್ದು ಅವು ನೋವಿನ ನ್ಯೂರಾನುಗಳು ಹೊರಸೂಸುವ ಸಂಕೇತಗಳಿಗೆ ಪ್ರತಿಕ್ರಯಿಸುತ್ತವೆ ಎಂಬ ವಿಚಾರ. ಮುಂದುವರಿಯುತ್ತ, ನೋವಿನ ನ್ಯೂರಾನುಗಳು ಬಿಡುಗಡೆ ಮಾಡುವ CGRP ಎಂಬ ವಿಶಿಷ್ಟ ರಾಸಾಯನಿಕದೊಂದಿಗೆ RAMP1 ರಿಸೆಪ್ಟರ್ ಗಳು ಸಂಪರ್ಕ ಸಾಧಿಸುತ್ತವೆ ಎಂಬುದು ತಿಳಿದುಬಂದಿದೆ.


ಸಂಶೋಧಕರ ಪ್ರತಿಕ್ರಿಯೆ


"ನಾವು ಇದರಿಂದ ತಿಳಿದಿದ್ದೇನೆಂದರೆ ನೋವು ಎಂಬುದು ಕೇವಲ ನಮಗೆ ಎಚ್ಚರಿಕೆಯ ಸಂದೇಶ ನೀಡುವ ಸೂಚಕವಲ್ಲ, ಬದಲಾಗಿ ಅದು ಇತರೆ ಪ್ರಮುಖ ಪಾತ್ರವನ್ನೂ ಒಳಗೊಂಡಿದೆ. ನಮ್ಮ ಸಂಶೋಧನೆಗಳ ಪ್ರಕಾರ ನೋವಿನ ನ್ಯೂರಾನುಗಳು ಕರುಳುಗಳಲ್ಲಿರುವ ಎಪಿಥಿಲಿಯಲ್ ಅಂಗಾಂಶಗಳೊಂದಿಗೆ ಸಂವಹನ ನಡೆಸುತ್ತವೆ ಹಾಗೂ ಹೆಚ್ಚಿನ ಸುರಕ್ಷತಾ ಪರದೆಯ ವ್ಯವಸ್ಥೆಗೆ ಕೊಡುಗೆ ನೀಡುತ್ತವೆ" ಎಂದು ಹಿರಿಯ ಸಂಶೋಧಕರಾದ ಐಸಾಕ್ ಚ್ಯೂ ವಿವರಿಸುತ್ತಾರೆ.


ಇದನ್ನೂ ಓದಿ: ಧೀರ್ಘಕಾಲ ಆಹಾರ ಸಂರಕ್ಷಿಸಲು ಈ ವಿಧಾನ ಬಳಸಿ


ಅಂದರೆ, ನಮ್ಮ ನರ್ವಸ್ ಸಿಸ್ಟಮ್, ಗಟ್ ನಲ್ಲಿ ಕೇವಲ ನೋವಿನ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುವ ಕಾರ್ಯವನ್ನು ಹೊರತುಪಡಿಸಿ ಅದರ ಸುರಕ್ಷತೆಯ ಬಗ್ಗೆಯೂ ಸಂವಹನ ನಡೆಸುವಂತಹ ಕಾರ್ಯದಲ್ಲಿ ನಿರತವಾಗಿರುತ್ತದೆ ಎಂಬಂಶವು ಇದರಿಂದ ತಿಳಿದು ಬರುತ್ತದೆ ಎಂಬುದಾಗಿ ಐಸಾಕ್ ಹೇಳುತ್ತಾರೆ.


ಇದರ ಹೊರತಾಗಿ ಡಯಟರಿ ಸ್ಥಿತಿಗಳೂ ಸಹ ಈ ಪ್ರಕ್ರಿಯೆಯಲ್ಲಿ ಸಾಕಷ್ಟು ಪ್ರಮುಖ ಪಾತ್ರವಹಿಸುವುದಾಗಿ ಐಸಾಕ್ ಹೇಳುತ್ತಾರೆ. ಏಕೆಂದರೆ, ಅವರು ಇಲಿಗಳಿಗೆ ಮಣಸಿನಲ್ಲಿರುವ ಖಾರದ ಅನುಭವ ಉಕ್ಕಿಸುವಂತಹ ಅಂಶವಾದ ಕ್ಯಾಪ್ಸೈಸಿನ್ ಅನ್ನು ನೀಡಿದಾಗ ಇಲಿಗಳಲ್ಲಿ ನೋವಿನ ನ್ಯೂರಾನುಗಳು ಅತಿ ಕ್ಷಿಪ್ರವಾಗಿ ಸಕ್ರಿಯಗೊಂಡವು ಹಾಗೂ ಆ ಮೂಲಕ ಗಾಬ್ಲೆಟ್ ಸೆಲ್ ಗಳು ತ್ವರಿತವಾಗಿ ಹೆಚ್ಚಿನ ಸುರಕ್ಷತಾ ಮ್ಯೂಕಸ್ ಅನ್ನು ಬಿಡುಗಡೆ ಮಾಡುವಂತೆ ಮಾಡಿತು ಎಂದು ಐಸಾಕ್ ವಿವರಿಸುತ್ತಾರೆ.


ನೋವಿನ ನಿಯಂತ್ರಣ ಎಷ್ಟು ಸರಿ


ಇದೀಗ ಈ ಸಂಶೋಧನೆಯಿಂದ ನೋವನ್ನು ನಿಲ್ಲಿಸುವಂತಹ ಪ್ರಕ್ರಿಯೆ ನಿಜಕ್ಕೂ ಉತ್ತಮವಾದುದೆ ಎಂದು ವಿಮರ್ಶಿಸುವ ವಾತಾವರಣ ಮೂಡಿದಂತಾಗಿದೆ. ಏಕೆಂದರೆ ಸಂಶೋಧಕರ ಪ್ರಯೋಗಗಳಿಂದ ಕೊಲೈಟಿಸ್ ಅನುಭವಿಸದ ಇಲಿಗಳು ಸಾಕಷ್ಟು ಆರೋಗ್ಯ ಹಾನಿಗೆ ಈಡಾಗಿದ್ದವು.


ಇದು ಒಂದು ರೀತಿಯಲ್ಲಿ ಕೊಲೈಟಿಸ್ ಅನುಭವಿಸುತ್ತಿರುವ ಮನುಷ್ಯರಿಗೂ ನೋವನ್ನು ನಿಯಂತ್ರಿಸುವ ಔಷಧ ನೀಡಿದಾಗ ಅದರಿಂದ ಏನಾದರೂ ವಿಷಮ ಸ್ಥಿತಿ ಉದ್ಭವವಾಗಲಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕಾದ ಸಾಧ್ಯತೆಯನ್ನು ಹುಟ್ಟು ಹಾಕಿದೆ ಎಂದರೆ ತಪ್ಪಾಗಲಾರದು.

First published: