HOME » NEWS » Lifestyle » OXYGEN LEVELS DROPPING AT HOME HOW TO PERFORM PRONE POSITION WHILE WAITING FOR HELP STG LG

ಮನೆಯಲ್ಲಿ ಐಸೋಲೇಟ್ ಆಗಿದ್ದಾಗ ಆಮ್ಲಜನಕ ಮಟ್ಟ ಕಡಿಮೆಯಾಗುತ್ತಿದ್ದರೆ ಉಸಿರಾಟ ಸುಧಾರಿಸಲು ಹೀಗೆ ಮಾಡಿ

ಒಬ್ಬ ವ್ಯಕ್ತಿ ಅಂಗಾತ ಮಲಗಿದಾಗ ಆತನ ಮುಖ, ಎದೆ ಹೊಟ್ಟೆ ಮೇಲ್ಮುಖವಾಗಿರುತ್ತದೆ. ಅಂಗಾತದ ಬದಲಿಗೆ ಬೋರಲಾಗಿ ಮಲಗಿಕೊಳ್ಳುವ ರೀತಿ. ಇಲ್ಲಿ ಮುಖ ಕೆಳಮುಖವಾಗಿದ್ದು, ಎದೆಯ ಭಾಗ ಸ್ವಲ್ಪ ಮೇಲಕ್ಕೆತ್ತಲಾಗುತ್ತದೆ. ಆಗ ಉಸಿರಾಟ ಕ್ರಿಯೆ ಸುಲಭವಾಗುತ್ತದೆ. ಇದನ್ನು ಪ್ರೋನ್ ವೆಂಟಿಲರ್ ವಿಧಾನವೆಂದು ಇದಕ್ಕೆ ಕರೆಯಲಾಗುತ್ತದೆ. ಆ ಮೂಲಕ ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಸುಧಾರಿಸಬಹುದು.

news18-kannada
Updated:April 24, 2021, 1:28 PM IST
ಮನೆಯಲ್ಲಿ ಐಸೋಲೇಟ್ ಆಗಿದ್ದಾಗ ಆಮ್ಲಜನಕ ಮಟ್ಟ ಕಡಿಮೆಯಾಗುತ್ತಿದ್ದರೆ ಉಸಿರಾಟ ಸುಧಾರಿಸಲು ಹೀಗೆ ಮಾಡಿ
ಪ್ರಾತಿನಿಧಿಕ ಚಿತ್ರ
  • Share this:
ಕೋವಿಡ್ 19 ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಹೀಗೆ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಕಾರಣ ಆಕ್ಸಿಜನ್ ಕೊರತೆಯಿಂದ ಇಡೀ ದೇಶ ತತ್ತರಿಸಿ ಹೋಗಿದೆ. ಹಿಂದೆಂದಿಗಿಂತಲೂ ಈ ಬಾರಿ ಉಸಿರಾಟದ ಸಮಸ್ಯೆ ಸಾಮಾನ್ಯ ಲಕ್ಷಣವಾಗಿ ಗೋಚರಿಸುವ ಮೂಲಕ ಹೆಚ್ಚಿನ ರೋಗಿಗಳನ್ನು ಸಂಕಟಕ್ಕೀಡು ಮಾಡಿದೆ. ಐಸಿಎಂಆರ್ ಡಿಜಿ ಡಾ. ಬಲರಾಮ್ ಭಾರ್ಗವ ಅವರು ಸೋಮವಾರ ಮಾತನಾಡಿ, ಮೊದಲ ಮತ್ತು ಎರಡನೇಯ ಅಲೆಯ ಕೋವಿಡ್‌ನಲ್ಲಿ ಸಾವಿನ ಪ್ರಮಾಣದಲ್ಲಿ ಶೇಕಡಾವಾರು ವ್ಯತ್ಯಾಸವಿಲ್ಲ. ಆದರೆ ಈ ಬಾರಿ ಆಮ್ಲಜನಕದ ಅವಶ್ಯಕತೆ ಹೆಚ್ಚಾಗಿದೆ ಎಂದು ಹೇಳಿದರು. ಪ್ರಸ್ತುತ ಕೋವಿಡ್ ಪ್ರಕರಣಗಳ ಸಂಖ್ಯೆ 20 ಲಕ್ಷ ದಷ್ಟಿದೆ. ಟ್ವಿಟ್ಟರ್ ತುಂಬಾ ಆಕ್ಸಿಜನ್ ಗಾಗಿ ಸಂದೇಶಗಳ ಮೂಲಕ ಬೇಡಿಕೆ ಇಡುತ್ತಿದ್ದಾರೆ. ಬಹುತೇಕ ರೋಗಿಗಳು ಹೋಂ ಕ್ವಾರಂಟೈನ್ ಆಗಿದ್ದು, ತಮ್ಮ ಆಕ್ಸಿಜನ್ ಪ್ರಮಾಣದ ಏರಿಕೆ ಮತ್ತು ಇಳಿಕೆಯ ವ್ಯತ್ಯಾಸವನ್ನು ಗುರುತಿಸುತ್ತಿರುವುದು ಸಮಸ್ಯೆ ಇನ್ನಷ್ಟು ಉಲ್ಬಣವಾಗಬಹುದು.

ಏಮ್ಸ್ ಪಾಟ್ನಾ ಕೋವಿಡ್ 19 ಈ ಸಂಬಂಧ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಬಿಡುಗಡೆ ಮಾಡಿದೆ. ಇದರಲ್ಲಿ ಪ್ರೋನ್ ಭಂಗಿಯೂ ರಕ್ತದಲ್ಲಿ ಆಮ್ಲಜನಕ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ ಎಂದು ಒತ್ತಿ ಹೇಳಿದ್ದಾರೆ. ಹಾಗಾದರೆ ಏನಿದು ಪ್ರೋನ್ ಭಂಗಿ?

ಪ್ರೋನ್ ಭಂಗಿಯೂ ದೇಹದ ಒಂದು ಭಂಗಿಯಾಗಿದೆ. ಒಬ್ಬ ವ್ಯಕ್ತಿ ಎದೆಯ ಭಾಗವನ್ನು ಕೆಳಮುಖವಾಗಿ ಮಲಗಿ ಮೇಲಿನ ಭಾಗ ಸ್ವಲ್ಪ ಉಬ್ಬಾಗಿರುವಂತೆ ಮಲಗುವ ಭಂಗಿಯಾಗಿದೆ. ಇನ್ನು ಸುಲಭದಲ್ಲಿ ಹೇಳುವುದಾದರೆ, ಒಬ್ಬ ವ್ಯಕ್ತಿ ಅಂಗಾತ ಮಲಗಿದಾಗ ಆತನ ಮುಖ, ಎದೆ ಹೊಟ್ಟೆ ಮೇಲ್ಮುಖವಾಗಿರುತ್ತದೆ. ಅಂಗಾತದ ಬದಲಿಗೆ ಬೋರಲಾಗಿ ಮಲಗಿಕೊಳ್ಳುವ ರೀತಿ. ಇಲ್ಲಿ ಮುಖ ಕೆಳಮುಖವಾಗಿದ್ದು, ಎದೆಯ ಭಾಗ ಸ್ವಲ್ಪ ಮೇಲಕ್ಕೆತ್ತಲಾಗುತ್ತದೆ. ಆಗ ಉಸಿರಾಟ ಕ್ರಿಯೆ ಸುಲಭವಾಗುತ್ತದೆ. ಇದನ್ನು ಪ್ರೋನ್ ವೆಂಟಿಲರ್ ವಿಧಾನವೆಂದು ಇದಕ್ಕೆ ಕರೆಯಲಾಗುತ್ತದೆ. ಆ ಮೂಲಕ ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಸುಧಾರಿಸಬಹುದು.

ಇದರ ಹಿಂದಿರುವ ವೈಜ್ಞಾನಿಕ ಕಾರಣವನ್ನು ವಿವರಿಸುವಂತೆ ನ್ಯೂಸ್ 18 ಇತ್ತೀಚೆಗೆ ತಜ್ಞರನ್ನು ಕೇಳಿದಾಗ ದೆಹಲಿಯ ಬಿಎಲ್‌ಕೆಸಿ ಸೆಂಟರ್ ಫಾರ್ ಕ್ರಿಟಿಕಲ್ ಕೇರ್‌ನ ಹಿರಿಯ ನಿರ್ದೇಶಕ ಡಾ.ರಾಜೇಶ್ ಪಾಂಡೆ ನ್ಯೂಸ್ 18 ಗೆ ಕೆಲವು ವಿಷಯಗಳನ್ನು ತಿಳಿಸಿದರು.

1 ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ಶಿವತಾಂಡವ ಸ್ತೋತ್ರ ಪಠಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆದ ದೆಹಲಿ ಬಾಲಕ

ಶ್ವಾಸಕೋಶವು ಮುಂಭಾಗ, ಮಧ್ಯ ಮತ್ತು ಹಿಂಭಾಗದಲ್ಲಿ ಮೂರು ಪ್ರದೇಶಗಳನ್ನು ಹೊಂದಿದೆ. ಯಾರಾದರೂ ತಮ್ಮ ಬೆನ್ನು ಕೆಳ ಮುಖವಾಗಿಸಿ, ಕೆಳ ಎದೆಯ ಮೇಲೆ ಮಲಗಿರುವಾಗ ಹಿಂಭಾಗಕ್ಕೆ ರಕ್ತ ಪೂರೈಕೆಯು ಉತ್ತಮವಾಗಿರುತ್ತದೆ. ಮತ್ತು ಮುಂಭಾಗದಲ್ಲಿ ಕಡಿಮೆ ಇರುತ್ತದೆ. ನೀವು ಗಾಳಿಯ ಪರಿಚಲನೆ ಗಮನಿಸಿದರೆ ಹಿಂಭಾಗಕ್ಕೆ ಗಾಳಿಯ ಚಲನೆ ಕಡಿಮೆಯಾಗುತ್ತದೆ. ಇದರಲ್ಲಿ ಬದಲಾವಣೆ ತರಲು ಆ ವ್ಯಕ್ತಿಯನ್ನು ಪ್ರೋನ್ ಭಂಗಿಯಲ್ಲಿ ಇರಿಸಿದಾಗ ಹೃದಯವೂ ಎದೆಯ ಮೂಳೆ ಮೇಲೆ ವಿರಮಿಸುತ್ತದೆ ಮತ್ತು ಆಗ ಶ್ವಾಸಕೋಶ ವಿಸ್ತಾರವಾಗಲು ಸ್ಥಳಾವಕಾಶವಾಗುತ್ತದೆ. ಆಗ ಹಿಂಭಾಗದಲ್ಲಿ ಗಾಳಿ ಚಲನೆ ಹೆಚ್ಚಾಗುತ್ತದೆ. ಜೊತೆಗೆ ರಕ್ತ ಪರಿಚಲನೆ ಸರಾಗವಾಗುತ್ತದೆ. ಆದ್ದರಿಂದ ಉತ್ತಮ ರಕ್ತ ಪರಿಚಲನೆ ಮತ್ತು ಆಮ್ಲಜನಕದ ಕಾರಣದಿಂದ ಸರಾಗ ಉಸಿರಾಟ ಕ್ರಿಯೆ ಆರಂಭವಾಗುತ್ತದೆ.

ಕೋವಿಡ್ 19 ಮೊದಲು ಈ ವಿಧಾನವನ್ನು ತೀವ್ರ ಉಸಿರಾಟದ ಸಮಸ್ಯೆ ಇದ್ದ ರೋಗಿಗಳಿಗೆ, ವೆಂಟಿಲೇಟರ್ ಅಳವಡಿಸಿದ್ದವರಿಗೆ ಅನುಸರಿಸಲಾಗುತ್ತಿತ್ತು. 16 ಗಂಟೆಗಳ ಕಾಲ ಪ್ರೋನ್ ಭಂಗಿಯಲ್ಲಿ ರೋಗಿಗಳನ್ನು ಸುಧಾರಿಸಲು ಪ್ರಯತ್ನಿಸಿದ್ದೇವೆ. ಇದು ಕಾಯಿಲೆ ಪೀಡಿತರ ಮರಣ ಪ್ರಮಾಣವನ್ನು ಗಮನಾರ್ಹವಾಗಿ ತಗ್ಗಿಸಿದೆ ಎಂದು ಅವರು ಹೇಳುತ್ತಾರೆ. ಆದರೂ ಕೂಡ 'ಕೋವಿಡ್ 19 ಗೂ ಮೊದಲು ಇದು ಸಾಮಾನ್ಯವಾಗಿರಲಿಲ್ಲ. ಉಸಿರಾಟದ ಸಮಸ್ಯೆ ಇರುವ ಯಾರಿಗೂ ನಾವು ಇದನ್ನು ಮಾಡುವುದಿಲ್ಲ. ಆದರೆ ಈ ನಿಟ್ಟಿನಲ್ಲಿ ಆಮ್ಲಜನಕ ಪೂರೈಸಲು ಎರಡು ವಿಧಾನ ಅನುಸರಿಸುತ್ತೇವೆ. ವೆಂಟಿಲೇಷನ್ ಕೊಳವೆ ಬಳಸಿ ತ್ವರಿತ ಉಸಿರಾಟವನ್ನು ಹೆಚ್ಚಿಸುವುದು ಒಂದು ವಿಧಾನ. ವೆಂಟಿಲೇಷನ್ ಕೊಳವೆ ಬಿಟ್ಟು ಮಾಸ್ಕ್ ಮೂಲಕ ಆಮ್ಲಜನಕ ಪೂರೈಸುವುದು ಇನ್ನೊಂದು ವಿಧಾನ' ಎಂದು ವಿವರಿಸಿದರು.ವೆಂಟಿಲೇಟರ್‌ನಲ್ಲಿ ತೀವ್ರ ಉಸಿರಾಟದ ಸಮಸ್ಯೆಯಾಗುವಾಗ ರೋಗಿಗಳನ್ನು ಸುಧಾರಿಸಲು ಈ ಪ್ರೋನ್ ಭಂಗಿ ಪ್ರಯೋಜನಕಾರಿಯಾಗಿದೆ. ಪ್ರೋನ್ ವಿಧಾನದಿಂದ ಯಾವುದೇ ನಕಾರಾತ್ಮಕ ಪರಿಣಾಮಗಳಾಗಿಲ್ಲ, ಒಳ್ಳೆಯ ಪರಿಣಾಮಗಳಾಗಿವೆ. ಮನೆಯಲ್ಲಿ ಆಕ್ಸಿಜನ್ ಪ್ರಮಾಣ ತಗ್ಗಿದಾಗ ಮಾತ್ರ ಈ ವಿಧಾನವನ್ನು ಅನುಸರಿಸಲು ತಿಳಿಸಿದ್ದೇವೆ. ರೋಗಿಗಳು ಅಂಬ್ಯುಲೆನ್ಸ್‌ಗಾಗಿ ಕಾಯುವ ಸಮಯದಲ್ಲಿ ಅಥವಾ ವೈದ್ಯಕೀಯ ನೆರವು ದೊರಕುವ ತನಕ ಈ ಪ್ರೋನ್ ಭಂಗಿ ಅನುಸರಿಸಲು ಹೇಳಿದ್ದೇವೆ.

ಪ್ರೋನ್ ಭಂಗಿ ಅನುಸರಿಸುವ ವಿಧಾನವನ್ನು ಈ ಕೆಳಗಿನ ವಿಡಿಯೋದಲ್ಲಿದೆ ನೋಡಿ.

ಸೂಚನೆ: ಪ್ರೋನ್ ವಿಧಾನವು ತಾತ್ಕಲಿಕ ಪರಿಹಾರವಾಗಿದ್ದು, ಆಸ್ಪತ್ರೆ ಅಥವಾ ಆಕ್ಸಿಜನ್ ಸಿಲಿಂಡರ್‌ಗೆ ಪರ್ಯಾಯವಲ್ಲ. ಒಂದು ವೇಳೆ ನಿಮ್ಮ ಆಮ್ಲಜನಕದ ಪ್ರಮಾಣ ತೀರಾ ತಗ್ಗುತ್ತಿದ್ದರೆ, ಕೂಡಲೇ ವೈದ್ಯಕೀಯ ನೆರವು ಪಡೆಯಿರಿ. ನೀವು ಕೋವಿಡ್ 19 ಪಾಸಿಟಿವ್ ಬಂದಿದ್ದು ಅಥವಾ ಲಕ್ಷಣಗಳು ಕಾಣಿಸುತ್ತಿದ್ದರೆ, ಭಾರತೀಯ ವೈದ್ಯಕೀಯ ಸಂಘದ 9 ಮಾರ್ಗದರ್ಶನಗಳನ್ನು ಅನುಸರಿಸಿ.
Published by: Latha CG
First published: April 24, 2021, 1:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories