ವಿಟಮಿನ್ ಮಾತ್ರೆಗಳನ್ನು ಸೇವಿಸುವ ಮುನ್ನ ಎಚ್ಚರ
-ನ್ಯೂಸ್ 18 ಕನ್ನಡ
ದೇಹದಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾದರೆ ಅನಾರೋಗ್ಯದ ಸಮಸ್ಯೆಗಳು ಕಂಡು ಬರುತ್ತದೆ. ಒಬ್ಬ ವ್ಯಕ್ತಿಯ ದೇಹದಲ್ಲಿ ವಿಟಮಿನ್ ಅಂಶದಲ್ಲಿ ಏರುಪೇರಾಗುವುದು ಸಾಮಾನ್ಯ. ಹೀಗಾಗಿ ಪೋಷಕಾಂಶದ ಕೊರತೆ ಕಂಡು ಬಂದರೆ ವೈದ್ಯರೇ ವಿಟಮಿನ್ ಮಾತ್ರೆಗಳನ್ನು ನಿಯಮಿತ ಅವಧಿವರೆಗೆ ತೆಗೆದುಕೊಳ್ಳಲು ಸೂಚಿಸುತ್ತಾರೆ. ಆದರೆ ಕೆಲವರು ಯಾವುದೇ ಸಲಹೆಗಳಿದ್ದೆ ವಿಟಮಿನ್ ಮಾತ್ರೆಗಳನ್ನು ಸೇವಿಸುತ್ತಾರೆ. ಇದು ಅತ್ಯಂತ ಅಪಾಯಕಾರಿ ಎಂದು ಇತ್ತೀಚಿನ ಸಂಶೋಧನೆಯೊಂದು ಕಂಡು ಕೊಂಡಿದೆ. ದೇಹದಲ್ಲಿ ವಿಟಮಿನ್ ಎ ಪ್ರಮಾಣವು ಹೆಚ್ಚಾದರೆ ಮೂಳೆಗಳು ಸವೆತಕ್ಕೊಳಗಾಗುತ್ತದೆ. ಇದರಿಂದ ಎಲುಬುಗಳು ದುರ್ಬಲಗೊಂಡು ಮುರಿತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅಧ್ಯಯನ ತಂಡ ತಿಳಿಸಿದೆ.
ಮಾಂಸ, ಡೈರಿ ಉತ್ಪನ್ನಗಳು, ತರಕಾರಿಗಳಲ್ಲಿ ವಿಟಮಿನ್ ಎ ಅಂಶವು ಅಧಿಕ ಪ್ರಮಾಣದಲ್ಲಿರುತ್ತದೆ. ಈ ಆಹಾರಗಳನ್ನು ದಿನ ನಿತ್ಯ ಸೇವಿಸುವುದರಿಂದ ಕೂಡ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಿಕೊಳ್ಳಬಹುದು. ಆದರೆ ಇದರ ಅರಿವಿನ ಕೊರತೆ ಮತ್ತು ಇತ್ತೀಚಿನ ಜೀವನ ಶೈಲಿಯಲ್ಲಿ ವಿಟಮಿನ್ ಮಾತ್ರೆಗಳ ಮೊರೆ ಹೋಗುವವರೇ ಹೆಚ್ಚು.
ಈ ಕುರಿತು ಇಲಿಗಳ ಮೇಲೆ ಅಧ್ಯಯನ ನಡೆಸಲಾಗಿದೆ. ಇಲ್ಲಿ ಇಲಿಗಳಿಗೆ ವಿಟಮಿನ್ ಎ ಡೋಸ್ಗಳನ್ನು ನೀಡಲಾಗಿತ್ತು. ಈ ವೇಳೆ ಕೇವಲ ಎಂಟು ದಿನಗಳಲ್ಲೇ ಇಲಿಗಳ ಮೂಳೆಗಳು ದುರ್ಬಲವಾಗಿರುವುದು ಕಂಡು ಬಂದಿದೆ. ಹೀಗಾಗಿ ಇದೇ ಪ್ರಮಾಣದ ವಿಟಮಿನ್ ಎ ಮಾತ್ರೆಗಳನ್ನು ಸೇವಿಸುವ ಮನುಷ್ಯರ ಎಲುಬುಗಳ ಮೇಲೆ ಕೂಡ ಪರಿಣಾಮ ಬೀರಲಿದೆ ಎಂದು ಸಂಶೋಧಕರು ಶಿಫಾರಸ್ಸು ಮಾಡಿದೆ.ದೇಹದಲ್ಲಿ ವಿಟಮಿನ್ ಅಂಶಗಳ ಕೊರತೆಯಿಂದ ವಿಟಮಿನ್ ಎ ಮಾತ್ರೆಗಳ ಮೊರೆ ಹೋಗುತ್ತಾರೆ. ಆದರೆ ಇದರ ಅತಿಯಾದ ಸೇವನೆಯಿಂದ ಮೂಳೆಗಳು ದುರ್ಬಲಗೊಳ್ಳುತ್ತದೆ. ಅಲ್ಲದೆ ಇದರಿಂದ ಅನಾರೋಗ್ಯದ ಅಪಾಯ ಕೂಡ ಹೆಚ್ಚುತ್ತದೆ ಎಂದು ಈ ಅಧ್ಯಯನದಿಂದ ತಿಳಿದು ಬಂದಿದೆ. ವಿಟಮಿನ್ ಎ ಕೊರತೆಯನ್ನು ಸಾಮಾನ್ಯವಾಗಿ ನಾವು ಸೇವಿಸುವ ಸಮತೋಲಿತ ಆಹಾರದಿಂದ ನೀಗಿಸಿಕೊಳ್ಳಬಹುದು. ಇದಕ್ಕಾಗಿ ಪೌಷ್ಟಿಕಾಂಶವಿರುವ ಆಹಾರಗಳನ್ನು ಸೇವಿಸಬೇಕಾಗುತ್ತದೆ ಎಂದು ಎಂದು ಪ್ರೊಫೆಸರ್ ಉಲ್ಫ್ ಲೆರ್ನರ್ ತಿಳಿಸಿದ್ದಾರೆ.
ವಿಟಮಿನ್ ಎ ಮಾತ್ರೆಗಳ ಅಲ್ಪಾವಧಿಯಲ್ಲಿ ಅತಿಯಾಗಿ ಸೇವನೆಯಿಂದ ಒಂದು ಅಥವಾ ಎರಡು ವಾರಗಳ ಅಂತರದಲ್ಲಿ ಮೂಳೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತೋರಿಸಿದೆ. ಇದರಿಂದ ಸ್ನಾಯುಗಳು ಬಲವನ್ನು ಕಳೆದುಕೊಳ್ಳುವ ಅಪಾಯವು ಹೆಚ್ಚಾಗಿರುತ್ತದೆ. ಒವರ್ಡೋಸ್ ವಿಟಮಿನ್ ಎ ಮಾತ್ರೆಗಳನ್ನು ಬಳಸಿ ಈ ಅಧ್ಯಯನ ನಡೆಸಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಈ ಅಧ್ಯಯನದ ಪ್ರಕಾರ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳಲೇ ಬೇಕಾದ ಅತ್ಯವಶ್ಯಕವಿದ್ದರೆ ಮಾತ್ರ ವೈದ್ಯರ ಸಲಹೆ ಪಡೆದು ಸೇವಿಸಬಹುದು. ವಿಟಮಿನ್ ಪೌಷ್ಟಿಕಾಂಶ ಹೆಚ್ಚಾಗಿರುವ ಆಹಾರಗಳಿಂದಲೇ ದೇಹದಲ್ಲಿ ವಿಟಮಿನ್ ಸಮತೋಲನವನ್ನು ಮಾಡುವುದು ಉತ್ತಮ ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.

Loading...
Loading...