Apple Sider Vinegar: ಆಪಲ್ ಸೈಡರ್ ವಿನೆಗರ್ ಅತಿಯಾದ ಸೇವನೆ ಯಾವ ಕಾಯಿಲೆಗೆ ಕಾರಣವಾಗುತ್ತದೆ?

ಆಪಲ್ ಸೈಡರ್ ವಿನೆಗರ್ ನಿಮ್ಮ ದೇಹವು ಅನೇಕ ರೋಗಗಳ ವಿರುದ್ಧ ಹೋರಾಡುತ್ತದೆ. ಆದರೆ ಆಪಲ್ ಸೈಡರ್ ವಿನೆಗರ್ ಕೂಡ ಕೆಲವು ಅನಾನುಕೂಲತೆಗಳನ್ನು ಹೊಂದಿವೆ. ಇದರ ಹೆಚ್ಚು ಮತ್ತು ತಪ್ಪಾದ ರೀತಿ ಸೇವಿಸಿದರೆ ಕೆಟ್ಟ ಪರಿಣಾಮ ಬೀರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಆಪಲ್ ಸೈಡರ್ ವಿನೆಗರ್ (Apple Sider Vinegar) ಅನ್ನು ತುಂಬಾ ಜನರು (People) ಅನೇಕ ಅಗತ್ಯತೆಗಳಿಗೆ ಮನೆಗಳಲ್ಲಿ (Home) ಬಳಕೆ ಮಾಡುತ್ತಾರೆ. ಇದು ಸೇಬಿನ ರಸದಿಂದ (Apple Juice) ತಯಾರಿಸಿದ ವಿನೆಗರ್ ಆಗಿದೆ. ಇದನ್ನ ಆಹಾರದಲ್ಲಿ ಬಳಕೆ ಮಾಡುವುದು ಖಾದ್ಯಗಳ ರುಚಿ ಹೆಚ್ಚಿಸುತ್ತದೆ. ಜೊತೆಗೆ ವ್ಯಕ್ತಿಯ ಆರೋಗ್ಯಕ್ಕೂ ಉತ್ತಮ ಎಂದು ಹೇಳಲಾಗುತ್ತದೆ. ಆಪಲ್ ಸೈಡರ್ ವಿನೆಗರ್ ನ್ನು ಅನೇಕ ಪದಾರ್ಥಗಳಿಗೆ ಮತ್ತು ವಿಷಯಗಳಲ್ಲಿ ಇದನ್ನು ಬಳಸುತ್ತಾರೆ. ಹಾಗಾಗಿ ಆಪಲ್ ಸೈಡರ್ ವಿನೆಗರ್ ನ್ನು ಶಕ್ತಿಯುತ ಪಾನೀಯ ಎಂದು ಕರೆಯುತ್ತಾರೆ. ವಿಟಮಿನ್ ಗಳ ಜೊತೆ ಹಲವು ರೀತಿಯ ಪೋಷಕಾಂಶಗಳೂ ಆಪಲ್ ಸೈಡರ್ ವಿನೆಗರ್  ನಲ್ಲಿವೆ.

    ಆಪಲ್ ಸೈಡರ್ ವಿನೆಗರ್ ಪ್ರಯೋಜನಗಳು

    ಆಪಲ್ ಸೈಡರ್ ವಿನೆಗರ್ ನಿಮ್ಮ ದೇಹವು ಅನೇಕ ರೋಗಗಳ ವಿರುದ್ಧ ಹೋರಾಡುತ್ತದೆ. ಆಪಲ್ ಸೈಡರ್ ವಿನೆಗರ್ ರಕ್ತದ ಸಕ್ಕರೆ ಮಟ್ಟ, ತೂಕ ಕಡಿಮೆ ಮಾಡಲು, ಕೆಟ್ಟ ಕೊಲೆಸ್ಟ್ರಾಲ್ , ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ರಕ್ತದೊತ್ತಡ , ಸಂಧಿವಾತ ನೋವು ಕಡಿಮೆ ಮಾಡಲು ಮತ್ತು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

    ಆಪಲ್ ಸೈಡರ್ ವಿನೆಗರ್ ಕೂಡ ಕೆಲವು ಅನಾನುಕೂಲತೆಗಳನ್ನು ಹೊಂದಿವೆ. ಇದರ ಹೆಚ್ಚು ಮತ್ತು ತಪ್ಪಾದ ರೀತಿ ಸೇವಿಸಿದರೆ ಕೆಟ್ಟ ಪರಿಣಾಮ ಬೀರುತ್ತದೆ. ಆಪಲ್ ಸೈಡರ್ ವಿನೆಗರ್ ಅನ್ನು ಸರಿಯಾಗಿ ಬಳಸುವುದು ಹೇಗೆ? ಮತ್ತು ಆಪಲ್ ಸೈಡರ್ ವಿನೆಗರ್ ಯಾವ ಐದು ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ತಿಳಿಯಿರಿ.

    ಇದನ್ನೂ ಓದಿ: ದೀರ್ಘಕಾಲ ಕುಳಿತುಕೊಳ್ಳುತ್ತೀರಾ? ಉಬ್ಬಿರುವ ರಕ್ತನಾಳ ಸಮಸ್ಯೆ ಬರದಂತೆ ಇರಲಿ ಎಚ್ಚರ

    ಗ್ಯಾಸ್ಟ್ರೋಪರೆಸಿಸ್ ಗೆ ಕಾರಣವಾಗುತ್ತದೆ

    ಆಪಲ್ ಸೈಡರ್ ವಿನೆಗರ್ ಹೊಟ್ಟೆ ತುಂಬಿದ ಭಾವನೆ ಉಂಟು ಮಾಡುತ್ತದೆ. ದೀರ್ಘ ಕಾಲದವರೆಗೆ ಹಸಿವನ್ನು ನಿಯಂತ್ರಿಸುತ್ತದೆ. ಏಕೆಂದರೆ ಇದು ಕಡಿಮೆ ಕ್ಯಾಲೊರಿ ಸೇವಿಸಲು ಸಹಾಯ ಮಾಡುತ್ತದೆ. ಆದರೆ ಇದು ಗ್ಯಾಸ್ಟ್ರೋಪರೆಸಿಸ್ಗೆ ಕಾರಣವಾಗಬಹುದು. ಈ ಸ್ಥಿತಿಯಲ್ಲಿ ಕಿಬ್ಬೊಟ್ಟೆಯ ರಕ್ತನಾಳಗಳು ಸರಿಯಾಗಿ ಕೆಲಸ ಮಾಡಲ್ಲ.

    ಇದು ಹೊಟ್ಟೆ ಖಾಲಿ ಮಾಡಲು ಸಾಧ್ಯವಾಗಲ್ಲ. NCBI ವರದಿಯ ಪ್ರಕಾರ, ಈ ಸ್ಥಿತಿಯು ಸಾಮಾನ್ಯವಾಗಿ ಟೈಪ್ 1 ಮಧುಮೇಹ ಹೊಂದಿರುವ ರೋಗಿಗಳಲ್ಲಿ ಕಂಡು ಬರುತ್ತದೆ. ಆಪಲ್ ಸೈಡರ್ ವಿನೆಗರ್ ಸೇವನೆ ರೋಗ ಲಕ್ಷಣಗಳನ್ನು ಹದಗೆಡಿಸುತ್ತದೆ. ಎದೆಯುರಿ, ಉಬ್ಬುವುದು ಮತ್ತು ವಾಕರಿಕೆ ಉಂಟಾಗುತ್ತದೆ.

    ದಂತ ಕ್ಷಯ

    ಆಪಲ್ ಸೈಡರ್ ವಿನೆಗರ್ ಸೇವನೆಯು ದಂತಕ್ಷಯ ಉಂಟು ಮಾಡುತ್ತದೆ. ಹಲ್ಲುಗಳು ಹಳದಿಯಾಗುವುದು, ಆಮ್ಲಗಳು ಹಲ್ಲುಗಳ ಸೂಕ್ಷ್ಮತೆ ಹೆಚ್ಚಿಸುತ್ತದೆ.

    ಪೊಟ್ಯಾಸಿಯಮ್ ಮಟ್ಟ ಕಡಿಮೆ ಮತ್ತು ಮೂಳೆಯ ನಷ್ಟ

    ಕಡಿಮೆ ಮಟ್ಟದ ಪೊಟ್ಯಾಸಿಯಮ್ ಹೈಪೋಕಾಲೆಮಿಯಾ ಉಂಟು ಮಾಡುತ್ತದೆ. ಇದು ಆಪಲ್ ಸೈಡರ್ ವಿನೆಗರ್ನ ಅತಿಯಾದ ಸೇವನೆಯಿಂದ ಆಗುತ್ತದೆ. ಇದು ಮೂಳೆ ಖನಿಜ ಸಾಂದ್ರತೆ ಕಡಿಮೆ ಮಾಡುತ್ತದೆ. ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಮೂಳೆ ಮುರಿಯುವ ಅಪಾಯ ಹೆಚ್ಚಿಸುತ್ತದೆ.

    ಚರ್ಮದ ಕಿರಿಕಿರಿ

    ಚರ್ಮವನ್ನು ಆರೋಗ್ಯಕರವಾಗಿಸುವ ಆಪಲ್ ಸೈಡರ್ ವಿನೆಗರ್, ಚರ್ಮವನ್ನು ಸುಡಬಹುದು. ಅದರ ಬಲವಾದ ಆಮ್ಲೀಯ ಗುಣದಿಂದಾಗಿ ಮತ್ತು ನೇರವಾಗಿ ಮುಖಕ್ಕೆ ಹಚ್ಚುವುದರಿಂದ ಆಗುತ್ತದೆ.

    ಗಂಟಲಿನ ಕಿರಿಕಿರಿ ಮಾಡುತ್ತದೆ

    ಆಪಲ್ ಸೈಡರ್ ವಿನೆಗರ್ ಅನ್ನನಾಳವನ್ನು ಸುಡುವ ಸಾಮರ್ಥ್ಯ ಹೊಂದಿದೆ. ವಿನೆಗರ್‌ನ ಕಠಿಣ ಆಮ್ಲೀಯತೆಯು ಗಂಟಲಿಗೆ ಕಿರಿಕಿರಿ ಉಂಟು ಮಾಡುತ್ತದೆ.

    ಆಪಲ್ ಸೈಡರ್ ವಿನೆಗರ್ ಸೇವನೆಯ ಸರಿಯಾದ ಮಾರ್ಗ ಯಾವುದು?

    ಸಣ್ಣ ಪ್ರಮಾಣದಲ್ಲಿ ಆಪಲ್ ಸೈಡರ್ ವಿನೆಗರ್ ಸೇವಿಸಲು ಪ್ರಾರಂಭಿಸಿ. ದಿನಕ್ಕೆ ಗರಿಷ್ಟ 2 ಟೇಬಲ್ಸ್ಪೂನ್ ಆಪಲ್ ಸೈಡರ್ ವಿನೆಗರ್ ಹಾಗೂ 30 ಮಿಲಿ ನೀರನ್ನು ಬೆರೆಸಿ ನಿಮ್ಮ ಸೇವನೆಯನ್ನು ಕ್ರಮೇಣ ಹೆಚ್ಚಿಸಿ. ವಿನೆಗರ್ ಅನ್ನು ನೀರು ಹಾಗೂ ಜ್ಯೂಸ್ ಜೊತೆ ಬೆರೆಸಿ ಸೇವಿಸಿ.

    ಇದನ್ನೂ ಓದಿ: ಚರ್ಮದ ವಿವಿಧ ಭಾಗಗಳಲ್ಲಿ ತುರಿಕೆ! ಇದಕ್ಕೇನು ಪರಿಹಾರ?

    ನೀವು ಗ್ಯಾಸ್ಟ್ರೋಪರೆಸಿಸ್ ಹೊಂದಿದ್ದರೆ, ಆಪಲ್ ಸೈಡರ್ ವಿನೆಗರ್ ಸೇವನೆ ಮಾಡಬೇಡಿ. ಇಲ್ಲವೇ ಕೇವಲ 1 ಟೀಚಮಚ ಆಪಲ್ ಸೈಡರ್ ವಿನೆಗರ್ ಹಾಗೂ 5 ಮಿಲಿ ನೀರಿನಲ್ಲಿ ಅಥವಾ ಸಲಾಡ್ ಜೊತೆ ಸೇವಿಸಿ. ನೇರವಾಗಿ ಚರ್ಮದ ಮೇಲೆ ಬಳಸಬೇಡಿ.
    Published by:renukadariyannavar
    First published: