Over Sleeping: ನೀವು ತುಂಬಾ ಹೊತ್ತು ನಿದ್ದೆ ಮಾಡ್ತೀರಾ? ಅದು ನಿಮ್ಮ ಪ್ರಾಣಕ್ಕೇ ಕುತ್ತು ಎಚ್ಚರ!

ಸುದೀರ್ಘ ನಿದ್ದೆ ಮಾಡುವವರಿಗೆ ಅನೇಕ ಕಾಯಿಲೆಗಳು ಬರುತ್ತವೇ ಎಂದು ಅಮೆರಿಕಾದಲ್ಲಿ ನಡೆದ ಅಧ್ಯಾಯನದಿಂದ ತಿಳಿದು ಬಂದಿದೆ. ಹೆಚ್ಚು ನಿದ್ರೆ ಮಾಡುವುದು ತುಂಬಾ ಕಡಿಮೆ ನಿದ್ರೆಯಂತೆಯೇ ಅನಾರೋಗ್ಯಕರವಾಗಿರುತ್ತದೆ. ಹೆಚ್ಚು ನಿದ್ರೆ ಮಾಡುವ ಜನರು ಅಧಿಕ ರಕ್ತದೊತ್ತಡ ಮತ್ತು ಸ್ಟ್ರೋಕ್ ಗೆ ಒಳಗಾಗುತ್ತಾರಂತೆ. ಅದರಿಂದ ಅವರು ಸಾವನ್ನಪ್ಪುವ ಸಾಧ್ಯತೆಯೂ ಇರುತ್ತೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮನುಷ್ಯನಿಗೆ ನಿದ್ದೆ (Sleep) ತುಂಬಾ ಮುಖ್ಯ. ಒಬ್ಬ ಮನುಷ್ಯ 6 ರಿಂದ 8 ತಾಸುಗಳ ಕಾಲ ಆದ್ರೂ ಮಲಗಿ ವಿಶ್ರಾಂತಿ (Rest) ಮಾಡಬೇಕು. ನಮ್ಮ ದೇಹವು ಒಂದು ಯಂತ್ರವಿದ್ದಂತೆ, ದಿನ ಪೂರ್ತಿ ನಮ್ಮ ಕಣ್ಣು, ಕಾಲು, ಕೈ, ಕಿವಿ, ನಾಲಿಗೆ, ಮೆದುಳು, ಹೃದಯ ಬಡಿತ, ತೀವ್ರ ರಕ್ತ ಸಂಚಲನೆ, ಹೆಚ್ಚು ಉಸಿರಾಡುವ ಶ್ವಾಸಕೋಶ, ಹೀಗೆ ಇತರ ಪ್ರಮುಖ ದೇಹದ ಭಾಗಗಳಿಗೆ ವಿಶ್ರಾಂತಿ ಬಹುಮುಖ್ಯವಾಗಿ ಅವಶ್ಯಕತೆ ಇರುತ್ತದೆ. ಅದಕ್ಕೆ ನಿದ್ದೆ ಮಾಡಬೇಕಾಗುತ್ತೆ. ಸುದೀರ್ಘ ನಿದ್ದೆ ಮಾಡುವವರಿಗೆ ಅನೇಕ ಕಾಯಿಲೆಗಳು ಬರುತ್ತವೇ ಎಂದು ಅಮೆರಿಕಾ (America)ದಲ್ಲಿ ನಡೆದ ಅಧ್ಯಾಯನದಿಂದ ತಿಳಿದು ಬಂದಿದೆ. ಹೆಚ್ಚು ನಿದ್ರೆ ಮಾಡುವುದು ತುಂಬಾ ಕಡಿಮೆ ನಿದ್ರೆಯಂತೆಯೇ ಅನಾರೋಗ್ಯಕರವಾಗಿರುತ್ತದೆ. ಹೆಚ್ಚು ನಿದ್ರೆ ಮಾಡುವ ಜನರು ಅಧಿಕ ರಕ್ತದೊತ್ತಡ (High blood pressure) ಮತ್ತು ಸ್ಟ್ರೋಕ್ (Stroke) ಗೆ ಒಳಗಾಗುತ್ತಾರಂತೆ. ಅದರಿಂದ ಅವರು ಸಾವನ್ನಪ್ಪುವ ಸಾಧ್ಯತೆಯೂ ಇರುತ್ತೆ.

ಸುದೀರ್ಘ ನಿದ್ದೆಯಿಂದ ಗಂಭೀರ ಆರೋಗ್ಯ ಸಮಸ್ಯೆ!
ವಯಸ್ಕ ಮನುಷ್ಯರೊಬ್ಬರು ಆರೋಗ್ಯವಾಗಿರುವ 6 ರಿಂದ 8 ತಾಸು ನಿದ್ದೆ ಮಾಡಿದ್ರೆ ಸಾಕು. ಆದ್ರೆ ಕೆಲವೊಬ್ಬರು ತುಂಬಾ ನಿದ್ದೆ ಮಾಡ್ತಾರೆ. ಹಾಸಿಗೆಯನ್ನು ಬಿಟ್ಟು ಮೇಲೆ ಎದ್ದೋಳೋದೇ ಇಲ್ಲ. ಅಂತವರಿಗೊಂದು ಎಚ್ಚರಿಕೆಯ ಗಂಟೆ. ಆ ರೀತಿ ಮಲಗುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ತಿಳಿದು ಬಂದಿದೆ.

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಜರ್ನಲ್‍ನ, ಹೊಸ ವಿಶ್ಲೇಷಣೆಯ ಪ್ರಕಾರ, ಸರಾಸರಿ ಹೆಚ್ಚು ನಿದ್ರೆ ಮಾಡುವ ಜನರು ಅಧಿಕ ರಕ್ತದೊತ್ತಡ ಮತ್ತು ಸ್ಟ್ರೋಕ್ ಹೊಂದುವ ಅಪಾಯ ಹೊಂದಿರುತ್ತಾರೆ. ಅದು ಅವರ ಸಾವಿಗೂ ಕಾರಣವಾಗಬಹುದು ಎಂದು ತಿಳಿದು ಬಂದಿದೆ.

ಪಾಶ್ರ್ವವಾಯು, ರಕ್ತದೊತ್ತಡ!
ಚೀನಾದ ಹುನಾನ್‍ನಲ್ಲಿರುವ ಸೆಂಟ್ರಲ್ ಸೌತ್ ಯೂನಿವರ್ಸಿಟಿಯ ಜೆರಿಯಾಟ್ರಿಕ್ ಸಂಶೋಧಕರು ಯುಕೆ ಯಲ್ಲಿ ಸುಮಾರು 360,000 ಜನರ ನಿದ್ರೆಯ ಅಭ್ಯಾಸಗಳು ಮತ್ತು ವೈದ್ಯಕೀಯ ಇತಿಹಾಸಗಳನ್ನು ವಿಶ್ಲೇಷಿಸಿದ್ದಾರೆ. ಹೆಚ್ಚಿನ ದಿನಗಳಲ್ಲಿ ಚಿಕ್ಕನಿದ್ರೆ ಮಾಡುವವರು ಶೇ. 24ರಷ್ಟು ಪಾಶ್ರ್ವವಾಯು ಕಾಯಿಲೆಗೆ ತುತ್ತಾಗಿದ್ದಾರಂತೆ. ಕಾಲಾಂತರದಲ್ಲಿ ಅದು ರಕ್ತದೊತ್ತಡಕ್ಕೆ ತಿರುಗಿದೆಯಂತೆ.

60 ವರ್ಷ ಮೇಲ್ಪಟ್ಟವರು ಹೆಚ್ಚು ನಿದ್ದೆ ಮಾಡಬಾರದು
60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಹೆಚ್ಚು ನಿದ್ರಿಸುವುದು ತೊಂದರೆದಾಯಕವಾಗಿದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಹೆಚ್ಚು ನಿದ್ದೆ ಅಧಿಕ ರಕ್ತದೊತ್ತಡವನ್ನು ಉಂಟು ಮಾಡುತ್ತದೆಯಂತೆ.

ಇದನ್ನೂ ಓದಿ: Sleeping Tips: ನಿಮಗೆ ನಿದ್ದೆ ಬರ್ತಿಲ್ವಾ? ಈ ರೀತಿ ಮಾಡಿ, ಆಯಾಗಿ ಮಲಗಿಕೊಳ್ಳಿ

ಅಕಾಲಿಕ ಮರಣದ ಅಪಾಯ
ಈ ಹಿಂದೆ, ಬಿಎಂಸಿ ಪಬ್ಲಿಕ್ ಹೆಲ್ತ್ ಜರ್ನಲ್‍ನಲ್ಲಿ ಪ್ರಕಟವಾದ ಒಂದು ಅಧ್ಯಯದ ಪ್ರಕಾರ, ಪ್ರತಿ ರಾತ್ರಿ ಹತ್ತು ಗಂಟೆಗಳಿಗಿಂತ ಹೆಚ್ಚು ಅಥವಾ ಆರು ಗಂಟೆಗಳಿಗಿಂತ ಕಡಿಮೆ ಕಾಲ ನಿದ್ರಿಸುವುದು ಅಕಾಲಿಕ ಮರಣದ ಅಪಾಯವನ್ನು ಹೆಚ್ಚಿಸಬಹುದು ಎಂದು ತಿಳಿದು ಬಂದಿದೆ.

ಹೆಚ್ಚು ನಿದ್ದೆ ಮಾಡುವುದರಿಂದ ಆಗುವ ಅನಾನುಕೂಲಗಳು

ಹೃದಯ ಸಮಸ್ಯೆ
ಎಂಟು ಗಂಟೆಗಳಿಗಿಂತ ಹೆಚ್ಚು ನಿದ್ದೆ ಮಾಡುವವರಲ್ಲಿ ಪರಿಧಮನಿಯ ಹೃದಯ ಕಾಯಿಲೆ ಬರುವ ಸಾಧ್ಯತೆ ಎರಡು ಪಟ್ಟು ಹೆಚ್ಚು ಎಂದು ಸಂಶೋಧನೆ ಒಂದು ಹೇಳಿದೆ.

ತೀವ್ರ ತಲೆನೋವು
ದೀರ್ಘಕಾಲ ನಿದ್ರಿಸುವುದು ಮೆದುಳಿನ ಮೇಲೆ ಅದರ ವಿರುದ್ಧ ಪರಿಣಾಮ ಬೀರುತ್ತದೆ. ಇದು ನಿಮಗೆ ತೀವ್ರ ತಲೆನೋವಿನ ಸಮಸ್ಯೆ ಉಂಟು ಮಾಡುತ್ತದೆ.

ಇದನ್ನೂ ಓದಿ: Over Sleeping Problem: ಅತಿಯಾಗಿ ನಿದ್ದೆ ಮಾಡಿದ್ರೆ ಈ ಆರೋಗ್ಯ ಸಮಸ್ಯೆ ಗ್ಯಾರಂಟಿ

ಖಿನ್ನತೆ ಸಮಸ್ಯೆ
ದೀರ್ಘಕಾಲ ನಿದ್ದೆ ಮಾಡುವುದರಿಂದ ಖಿನ್ನತೆ ಸಮಸ್ಯೆ ಕಾಡಬಹುದು. ಇದರ ಜೊತೆಗೆ ನೀವು ಒತ್ತಡವನ್ನು ಸಹ ಎದುರಿಸಬೇಕಾಗಬಹುದು.

ಬೊಜ್ಜು ಹೆಚ್ಚಾಗುತ್ತದೆ
ನೀವು ನಿದ್ದೆ ಮಾಡುವಾಗ, ನಿಮ್ಮ ದೈಹಿಕ ಚಟುವಟಿಕೆಯು ಸಂಪೂರ್ಣವಾಗಿ ಕಡಿಮೆ ಆಗುತ್ತದೆ. ನಿಮ್ಮ ದೇಹದಲ್ಲಿನ ಕ್ಯಾಲೋರಿಗಳು ಹೆಚ್ಚಾಗುವ ಕಾರಣದಿಂದಾಗಿ ಬೊಜ್ಜು ಹೆಚ್ಚುತ್ತದೆ. ದೀರ್ಘಾವಧಿಯ ಅತಿಯಾದ ನಿದ್ದೆ ದೇಹ ಮತ್ತು ಮನಸ್ಸಿನ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರುತ್ತದೆ.
Published by:Savitha Savitha
First published: