ಕಣ್ಣುಗಳು (Eyes) ಸಂಪೂರ್ಣ ದೇಹದ ಆರೋಗ್ಯದ (Body Health) ಗುಟ್ಟು ಹೇಳುವ ಅಂಗಗಳಾಗಿವೆ (Parts). ಅಷ್ಟೇ ಅಲ್ಲದೇ ಸೌಂದರ್ಯವನ್ನು (Beauty) ಇಮ್ಮಡಿಗೊಳಿಸುವ ಪ್ರಮುಖ ಅಂಗವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ತುಂಬಾ ಜನರು (People) ದಪ್ಪ ಕನ್ನಡಕ ಧರಿಸುವ ಸ್ಥಿತಿ ಬಂದೊದಗಿದೆ. ಇದು ಸಾಕಷ್ಟು ಬಾರಿ ಕಣ್ಣಿನ ಅಂದವನ್ನು ಮತ್ತು ಮೇಕಪ್ ಮಾಡಲು ಸಾಧ್ಯವಾಗುವುದಿಲ್ಲ. ಮುಖದ ಸೌಂದರ್ಯವನ್ನು ಇಮ್ಮಡಿಗೊಳಿಸುವುದೇ ಕಣ್ಣುಗಳು. ಇಂತಹ ಕಣ್ಣುಗಳ ಆರೈಕೆ ಮಾಡುವುದು ತುಂಬಾ ಮುಖ್ಯ. ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚೆಚ್ಚು ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್, ನೋಡುತ್ತಾ, ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್, ವಿಡಿಯೋ, ವೆಬ್ ಸ್ಟೋರಿಸ್ ನೋಡುತ್ತಾ ಸಮಯ ಕಳೆಯುತ್ತಾರೆ. ಈ ವೇಳೆ ಕಣ್ಣುಗಳು ಹೆಚ್ಚು ಆಯಾಸಗೊಳ್ಳುತ್ತವ.
ಕಣ್ಣುಗಳಲ್ಲಿ ಒತ್ತಡ ಮತ್ತು ಆಯಾಸ ಸಮಸ್ಯೆ
ಗಂಟೆಗಟ್ಟಲೇ ಮೊಬೈಲ್ ನೋಡುವುದು ಕಣ್ಣುಗಳ ಆರೋಗ್ಯ ಹಾಳು ಮಾಡುತ್ತಿದೆ. ಕಣ್ಣಿನಲ್ಲಿ ನೀರು ಬರುವುದು, ಒಣ ಕಣ್ಣಿನ ಸಮಸ್ಯೆ ಮತ್ತು ಒತ್ತಡ, ಆಯಾಸ ಅನುಭವಿಸಲು ಕಾರಣವಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಕಣ್ಣುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ. ಕಣ್ಣುಗಳಲ್ಲಿ ಸಂಭವಿಸುವ ಯಾವುದೇ ಅಸಹಜ ಸಂಗತಿಗಳ ಬಗ್ಗೆ ನಿರ್ಲಕ್ಷ್ಯ ಮಾಡ್ಬೇಡಿ.
ಕಣ್ಣುಗಳ ಊತ, ಕಣ್ಣು ಕೆಂಪಾಗುವುದು ಮತ್ತು ಆಗಾಗ್ಗೆ ಕಣ್ಣೀರು ಹೋಗುವುದು, ಕಣ್ಣು ಮಿಟುಕಿಸದೇ ಮೊಬೈಲ್ ಅಥವಾ ಹೆಚ್ಚು ಕಣ್ಣು ಮಿಟುಕಿಸುವುದು, ನೋಡುವುದು ಈ ಎಲ್ಲಾ ಸಮಸ್ಯೆಗಳು ಕಣ್ಣುಗಳಿಗೆ ಹಾನಿ ಉಂಟು ಮಾಡುತ್ತದೆ. ಜೊತೆಗೆ ಇದು ಅನೇಕ ಗಂಭೀರ ಸಮಸ್ಯೆ ಉಂಟು ಮಾಡುತ್ತದೆ.
ಹಾಗಾಗಿ ಹೆಚ್ಚಿನ ಕಾಳಜಿ ವಹಿಸಿ. ಅದರಲ್ಲೂ ನೀವು ಹೆಚ್ಚು ಕಣ್ಣು ಮಿಟುಕಿಸುವುದು, ವಸ್ತುವನ್ನು ಸ್ವಲ್ಪ ಸಮಯವೂ ತದೇಕ ಚಿತ್ತದಿಂದ ನೋಡಲಾಗದೇ ಹೋದಾಗ ಕಣ್ಣುಗಳ ಸಮಸ್ಯೆ ಇದೆ ಎಂದು ತಿಳಿಯಿರಿ.
ಬಿನಾಯಿನ್ ಎಸೆನ್ಶಿಯಲ್ ಬ್ಲೆಫರೊಸ್ಪಾಸ್ಮ್ ಸಮಸ್ಯೆ
ತಜ್ಞರ ಪ್ರಕಾರ, ಕಣ್ಣು ಮಿಟುಕಿಸುವಾಗ ನೋವು ಉಂಟಾಗುವುದು, ಕಣ್ಣು ತೆರೆಯಲು ಕಷ್ಟವಾಗುವುದು, ಕಣ್ಣುಗಳಲ್ಲಿ ಊತ ಮಸ್ಯೆ, ಸರಿಯಾಗಿ ನೋಡಲು ಸಾಧ್ಯವಾಗದಿರುವುದು ತುಂಬಾ ಗಂಭೀರ ಸಮಸ್ಯೆ ಆಗಿದೆ. ಕಣ್ಣುಗಳ ಸ್ನಾಯುಗಳು ಕುಗ್ಗಿದಾಗ ಈ ಸಮಸ್ಯೆ ಉಂಟಾಗುತ್ತದೆ. ಕಣ್ಣುಗಳು ಹಾನಿಗೊಳಗಾಗುತ್ತವೆ.
. ಬಿನಾಯಿನ ಎಸೆನ್ಶಿಯಲ್ ಬ್ಲೆಫರೊಸ್ಪಾಸ್ಮ ಸಮಸ್ಯೆಯಲ್ಲಿ, ಹುಬ್ಬುಗಳ ಜೊತೆಗೆ ಕಣ್ಣುಗಳ ಸುತ್ತಲಿನ ಸ್ನಾಯುಗಳು ಕೂಡ ಸೆಳೆತ ಸಮಸ್ಯೆಗೆ ತುತ್ತಾಗುತ್ತವೆ. ವ್ಯಕ್ತಿಯ ಎರಡೂ ಕಣ್ಣುಗಳು ಈ ಕಾಯಿಲೆಗೆ ತುತ್ತಾಗುತ್ತವೆ. ಹೆಚ್ಚಾಗಿ ಮಹಿಳೆಯರು ಈ ಸಮಸ್ಯೆ ಎದುರಿಸುತ್ತಾರೆ.
ಕಣ್ಣು ರೆಪ್ಪೆಯ ಮಯೋಕೆಮಿಯಾ ಕಾಯಿಲೆ
ಕಣ್ಣಿನ ರೆಪ್ಪೆಯ ಮಯೋಕೆಮಿಯಾ ಕಾಯಿಲೆ ಉಂಟಾಗಲು ಹೆಚ್ಚು ಕಣ್ಣಿನ ಆಯಾಸ, ಅತಿಯಾದ ಒತ್ತಡ, ಅತಿಯಾದ ಕೆಫೀನ್ ಸೇವನೆ, ನಿದ್ರೆಯ ಕೊರತೆ ಅಥವಾ ಕಂಪ್ಯೂಟರ್ ಹಾಗೂ ಮೊಬೈಲ್ ಅತಿಯಾಗಿ ಬಳಸುವುದರಿಂದ ಕಣ್ಣುಗಳ ಸೆಳೆತ ಉಂಟಾಗುತ್ತದೆ. ಇದು ಕೆಲವು ಗಂಟೆ ಅಥವಾ ಕೆಲವು ದಿನವಿದ್ದು, ತಾನಾಗಿಯೇ ವಾಸಿಯಾಗುತ್ತದೆ.
ಹೆಮಿಫೇಶಿಯಲ್ ಸೆಳೆತ ಸಮಸ್ಯೆ
ಹೆಮಿಫೇಶಿಯಲ್ ಸಮಸ್ಯೆಯು ಕಿರಿಕಿರಿ ಮತ್ತು ಮುಖದ ನರಗಳ ಸಂಕೋಚನ ಸಮಸ್ಯೆಯಿಂದ ಉಂಟಾಗುತ್ತದೆ. ಈ ಕಾಯಿಲೆ ಇದ್ದಾಗ ರೋಗಿಯ ಮುಖದ ಅರ್ಧಭಾಗ ಕುಗ್ಗುತ್ತದೆ ಎನ್ನುತ್ತಾರೆ ತಜ್ಞರು. ಹಾಗಾಗಿ ಮುಖ, ಕೆನ್ನೆ ಮತ್ತು ಬಾಯಿಯ ಸ್ನಾಯುಗಳಲ್ಲಿ ಸೆಳೆತ ಉಂಟಾಗುತ್ತದೆ.
ಹೆಚ್ಚು ಕಣ್ಣು ಮಿಟುಕಿಸುವ ಸಮಸ್ಯೆಗೆ ಕಾರಣಗಳು
ಹೆಚ್ಚು ಒತ್ತಡ, ಕಣ್ಣುಗಳಲ್ಲಿ ಆಯಾಸ, ನಿದ್ರೆ ಸರಿಯಾಗಿ ಆಗದಿರುವುದು, ನಿದ್ರಾಹೀನತೆ ಸಮಸ್ಯೆ, ಕೆಫೀನ್ ಅಥವಾ ಆಲ್ಕೋಹಾಲ್ನ ಅತಿಯಾದ ಸೇವನೆಯು ಕಣ್ಣುಗಳ ಸ್ನಾಯುಗಳು ಸೆಳೆತಕ್ಕೆ ಕಾರಣವಾಗುತ್ತದೆ. ಒಣ ಕಣ್ಣುಗಳ ಸಮಸ್ಯೆಯೂ ಹೆಚ್ಚು ಕಣ್ಣು ಮಿಟುಕಿಸುವ ಸಮಸ್ಯೆಗೆ ಕಾರಣವಾಗಿದೆ. ಜಂಕ್ ಫುಡ್ ಸೇವನೆ, ಕಂಪ್ಯೂಟರ್, ಮೊಬೈಲ್ ಇತ್ಯಾದಿ ಗ್ಯಾಜೆಟ್ಗಳ ಅತಿಯಾದ ಬಳಕೆಯು ಕಣ್ಣುಗಳ ಸಮಸ್ಯೆ ಮತ್ತು ದೌರ್ಬಲ್ಲಯಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ತೂಕ ನಷ್ಟ ಮತ್ತು ಸೊಂಟದ ಗಾತ್ರ ಕಡಿಮೆ ಮಾಡಲು ನಿಮ್ಮ ಆಹಾರದಲ್ಲಿ ಈ ಪದಾರ್ಥ ಸೇರಿಸಿ!
ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆ ಸಾಮಾನ್ಯ. ಕಣ್ಣಿನ ಸೆಳೆತ ತಾನಾಗಿಯೇ ಗುಣವಾಗುತ್ತದೆ. ಈ ಸಮಸ್ಯೆ ಇದ್ದವರು ಕಣ್ಣಿನ ತಜ್ಞರನ್ನು ಸಂಪರ್ಕಿಸಿ. ಸಾಕಷ್ಟು ನಿದ್ರೆ ಮಾಡಿ. ವ್ಯಾಯಾಮ, ಯೋಗ ಮಾಡಿ, ಉತ್ತಮ ಆಹಾರ ಮತ್ತು ಜೀವನಶೈಲಿ ಫಾಲೋ ಮಾಡಿ. ಹೆಚ್ಚು ಹಣ್ಣು ಮತ್ತು ತರಕಾರಿ ಸೇವಿಸಿ. ಸಾಕಷ್ಟು ನೀರು ಕುಡಿಯಬೇಕು. ಗ್ಯಾಜೆಟ್ಗಳ ಬಳಕೆ ಕಡಿಮೆ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ