ಹಾಲು (Milk) ನಮ್ಮ ಆಹಾರದ (Food) ಪ್ರಮುಖ ಭಾಗ (Part) ಆಗಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು (Diary Products) ಹಲವು ರೀತಿಯಲ್ಲಿ ಪ್ರತಿದಿನ ಸೇವನೆ ಮಾಡಲಾಗುತ್ತದೆ. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ದೇಹಕ್ಕೆ (Body) ಕ್ಯಾಲ್ಸಿಯಂ (Calcium) ಒದಗಿಸಲು ಹಾಲು ಕುಡಿಯಬೇಕು. ಹಾಲನ್ನು ದಿನನಿತ್ಯ ಸೇವಿಸುವ ಅನೇಕ ವಸ್ತುಗಳಲ್ಲಿ ಬಳಕೆ ಮಾಡಲಾಗುತ್ತದೆ. ಹಾಲು ಕುಡಿದರೆ ಸಾಕಷ್ಟು ಪ್ರಯೋಜನಗಳಿವೆ. ಹಾಗಂತ ಹಾಲನ್ನು ಅತಿಯಾಗಿ ಸೇವಿಸದರೆ ಹಲವು ಆರೋಗ್ಯ ಅನಾನುಕೂಲತೆಗಳು ಉಂಟಾಗುತ್ತವೆ. ಹಾಲನ್ನು ಉತ್ತಮ ಹಾಗೂ ಸಂಪೂರ್ಣ ಆಹಾರ ಎಂದು ಪರಿಗಣಿಸಲಾಗುತ್ತದೆ. ಯಾಕಂದ್ರೆ ಹಾಲು ದೇಹದ ಉತ್ತಮ ಕಾರ್ಯ ಚಟುವಟಿಕೆಗೆ ಬೇಕಾದ ಅಗತ್ಯ ಪೋಷಕಾಂಶವಾಗಿದೆ.
ಹಾಲಿನಲ್ಲಿರುವ ಪೋಷಕಾಂಶಗಳು
ಹಾಲಿನಲ್ಲಿ ಹಲವು ಪೋಷಕಾಂಶಗಳಿವೆ. ಅವುಗಳಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ 2, ವಿಟಮಿನ್ ಬಿ 12, ಪೊಟ್ಯಾಸಿಯಂ, ರಂಜಕ, ವಿಟಮಿನ್ ಎ ಮತ್ತು ವಿಟಮಿನ್ ಡಿ ಇದೆ.
ಹೆಚ್ಚು ಹಾಲು ಕುಡಿದರೆ ಯಾವ ಕೆಟ್ಟ ಪರಿಣಾಮ ಉಂಟಾಗುತ್ತದೆ?
ನಿಯಮಿತವಾಗಿ ಸೀಮಿತ ಪ್ರಮಾಣದಲ್ಲಿ ಹಾಲು ಕುಡಿದರೆ ಆರೋಗ್ಯಕ್ಕೆ ಪ್ರಯೋಜನ ಸಿಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮೂಳೆ ಮತ್ತು ಹಲ್ಲುಗಳು ಬಲಿಷ್ಠವಾಗುತ್ತವೆ. ಕೂದಲು ಮತ್ತು ಚರ್ಮದ ಆರೋಗ್ಯ ಚೆನ್ನಾಗಿರುತ್ತದೆ.
ಒತ್ತಡ ಮತ್ತು ತೂಕ ಕಡಿಮೆ ಆಗುತ್ತದೆ. ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಉತ್ತಮ ನಿದ್ರೆ ಮಾಡಬಹುದು. ಆದರೆ ಹಾಲನ್ನು ಹೆಚ್ಚು ಸೇವಿಸಿದರೆ ಅದು ಕೆಟ್ಟ ಪರಿಣಾಮ ಬೀರುತ್ತದೆ.
ಮೂಳೆ ನಷ್ಟ
ಹಾಲನ್ನು ನಿಯಮಿತವಾಗಿ ಸೀಮಿತ ಪ್ರಮಾಣಕ್ಕಿಂತ ಹೆಚ್ಚು ಕುಡಿದರೆ ಮೂಳೆಗಳಿಗೆ ಹಾನಿಯಾಗುತ್ತದೆ. ಹಸುವಿನ ಹಾಲು ಕುಡಿದರೆ ಮೂಳೆಗಳು ದುರ್ಬಲವಾಗಬಹುದು ಎಂದು ಪೇಟಾದ ವರದಿ ಹೇಳಿದೆ. ಪ್ರಾಣಿ ಪ್ರೋಟೀನ್‌ಗಳು ಒಡೆದಾಗ ಆಮ್ಲ ಉತ್ಪಾದನೆಯಾಗುತ್ತದೆ. ಇದುನ್ನು ತಟಸ್ಥಗೊಳಿಸಲು ಮತ್ತು ಹೊರ ಹಾಕಲು ದೇಹವು ಹಾಲಿನಲ್ಲಿರುವ ಕ್ಯಾಲ್ಸಿಯಂ ಬಳಸುತ್ತದೆ. ಹೀಗಾಗಿ ತೊಂದರೆ ಆಗುತ್ತದೆ.
ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ
ಒಂದು ಅಧ್ಯಯನದ ಪ್ರಕಾರ, ಹಾಲು ಮತ್ತು ಇತರ ಡೈರಿ ಉತ್ಪನ್ನಗಳ ಅಧಿಕ ಸೇವನೆಯು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಉಂಟು ಮಾಡುತ್ತದೆ. ಹೆಚ್ಚಿನ ಕೊಬ್ಬಿನ ಹಾಲು, ಇತರೆ ಡೈರಿ ಉತ್ಪನ್ನಗಳು ಅಥವಾ ಚೀಸ್ ಸೇವನೆಯು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ.
ಸ್ತನ ಕ್ಯಾನ್ಸರ್ ಅಪಾಯ
ಹಾಲು, ಪನೀರ್ ಮತ್ತು ಇತರೆ ಡೈರಿ ಉತ್ಪನ್ನಗಳಲ್ಲಿ ಕೊಬ್ಬಿನಂಶ ಹೆಚ್ಚು. ಇವುಗಳ ಸೇವನೆಯು ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ.
ಸ್ಯಾಚುರೇಟೆಡ್ ಕೊಬ್ಬು ಹೃದಯ ಕಾಯಿಲೆ ಅಪಾಯ ಹೆಚ್ಚಿಸುತ್ತದೆ
ಹಾಲು ಮತ್ತು ಇತರೆ ಡೈರಿ ಉತ್ಪನ್ನಗಳು ಅಪಧಮನಿಗಳನ್ನು ನಿರ್ಬಂಧಿಸುವ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿವೆ. ಸ್ಯಾಚುರೇಟೆಡ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇರುವ ಆಹಾರಗಳು ಹೃದ್ರೋಗದ ಅಪಾಯ ಹೆಚ್ಚಿಸುತ್ತವೆ.
ಲ್ಯಾಕ್ಟೋಸ್ ಅಸಹಿಷ್ಣುತೆ
ಲ್ಯಾಕ್ಟೋಸ್ ಅಸಹಿಷ್ಣುತೆ ಜೀರ್ಣಕಾರಿ ಸಮಸ್ಯೆ. ದೇಹವು ಲ್ಯಾಕ್ಟೋಸ್ ಅನ್ನು ಜೀರ್ಣಿಸಿಕೊಳ್ಳಲು ಸಾಧ್ಯ ಆಗದಿರುವ ಸ್ಥಿತಿ ಇದು. ಲ್ಯಾಕ್ಟೋಸ್ ಅಸಹಿಷ್ಣುತೆ ಅಲರ್ಜಿ ಉಂಟು ಮಾಡಬಹುದು. ವಯಸ್ಸಾದಂತೆ ಈ ಸಾಮರ್ಥ್ಯ ಕಡಿಮೆಯಾಗಬಹುದು. ಲ್ಯಾಕ್ಟೋಸ್ ಅಸಹಿಷ್ಣುತೆ ಹೊಟ್ಟೆಯ ತೊಂದರೆ, ಅತಿಸಾರ ಮತ್ತು ಗ್ಯಾಸ್ ಉಂಟು ಮಾಡುತ್ತದೆ.
ಇದನ್ನೂ ಓದಿ: ಸ್ತ್ರೀಯರ ಎದೆಯ ಮೇಲೆ ದದ್ದುಗಳು ಉಂಟಾಗುವುದೇಕೆ? ಇದಕ್ಕೆ ಪರಿಹಾರ ಏನು?
ಹಾಲು ಪ್ರೋಟೀನ್ ಮತ್ತು ಮಧುಮೇಹ ಹಸುವಿನ ಹಾಲು ಟೈಪ್ 1 ಮಧುಮೇಹದ ಅಪಾಯ ಹೆಚ್ಚಿಸುತ್ತದೆ. ಹಸುವಿನ ಹಾಲು ಮತ್ತು ಹಾಲಿನ ಉತ್ಪನ್ನಗಳ ಅತಿಯಾದ ಬಳಕೆಯಿಂದ ಮೊಡವೆ, ಅಂಡಾಶಯದ ಕ್ಯಾನ್ಸರ್, ಅಲರ್ಜಿ, ತೂಕ ಹೆಚ್ಚಳವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ