ಪಪ್ಪಾಯಿ ಹಣ್ಣನ್ನು (Papaya) ಆರೋಗ್ಯಕ್ಕೆ (Health) ತುಂಬಾ ಪ್ರಯೋಜನಕಾರಿ (Benefits) ಎಂದು ನಂಬಲಾಗಿದೆ. ತೂಕ ಇಳಿಕೆಯಿಂದ (Weight Loss) ಹಿಡಿದು, ಋತುಚಕ್ರ ಸಮಸ್ಯೆ (Menstruation Problem) ಪರಿಹಾರದವರೆಗೆ ಪಪ್ಪಾಯಿ ಹಣ್ಣನ್ನು ತಿನ್ನಲಾಗುತ್ತದೆ. ಪಪ್ಪಾಯಿ ಹಣ್ಣು ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಪಪ್ಪಾಯಿ ಹಣ್ಣಿನ ಜೊತೆಗೆ ಅದರ ಎಲೆ ಮತ್ತು ಬೀಜಗಳು ಅನೇಕ ರೋಗಗಳ ವಿರುದ್ಧ ಹೋರಾಟ ಮಾಡುತ್ತವೆ. ಜೊತೆಗೆ ಪಪ್ಪಾಯಿ ಹಣ್ಣು ದೇಹಕ್ಕೆ ರಕ್ಷಣೆಯಾಗಿ ಕೆಲಸ ಮಾಡುತ್ತದೆ. ಪಪ್ಪಾಯಿ ಹಣ್ಣನ್ನು ಹಸಿಯಾಗಿಯೂ ತಿನ್ನಬಹುದು. ಇಲ್ಲವೇ ಮಾಗಿದ ಮೇಲೆ ಅಂದ್ರೆ ಹಣ್ಣಾದ ನಂತರವೂ ಸಹ ನೀವು ತಿನ್ನಬಹುದು. ಬಹುತೇಕರು ಪಪ್ಪಾಯಿ ಹಣ್ಣನ್ನು ಇತರೆ ಹಣ್ಣುಗಳ ಸಲಾಡ್ ಜೊತೆ ತಿನ್ನುತ್ತಾರೆ.
ಪಪ್ಪಾಯಿ ಹಣ್ಣಿನಿಂದಾಗುವ ಪ್ರಯೋಜನಗಳು
ಪಪ್ಪಾಯಿ ಹಣ್ಣನ್ನು ನೀವು ಯಾವ ರೂಪದಲ್ಲಿ ತಿಂದರೆ ಆರೋಗ್ಯಕ್ಕೆ ಉತ್ತಮ ಎಂದು ನೀವು ಅಂದುಕೊಂಡಿರಬಹುದು. ನೀವು ಪಪ್ಪಾಯಿ ಹಣ್ಣನ್ನು ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಇ ಮತ್ತು ವಿಟಮಿನ್ ಕೆ ಸೇರಿ ಹಲವು ಪೋಷಕಾಂಶಗಳು ಸೇರಿವೆ.
ಪಪ್ಪಾಯಿಯಲ್ಲಿ ಕ್ಯಾಲೋರಿ, ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್, ಪ್ರೋಟೀನ್ ಮತ್ತು ಫೈಬರ್ ಹಾಗೂ ಅಗತ್ಯ ಪೋಷಕಾಂಶಗಳು ಇವೆ. ಪಪ್ಪಾಯಿ ತಿನ್ನೋದು ಆರೋಗ್ಯಕ್ಕೆ ಸಾಕಷ್ಟು ಲಾಭಗಳನ್ನು ತಂದು ಕೊಡುತ್ತದೆ.
ಪಪ್ಪಾಯಿ ಹಣ್ಣು ಅದರ ಪೌಷ್ಟಿಕಾಂಶ ಮತ್ತು ಔಷಧೀಯ ಗುಣಗಳಿಂದ ಹೆಚ್ಚು ಸಮೃದ್ಧವಾಗಿದೆ. ತಜ್ಞರು ಪಪ್ಪಾಯಿ ಹಣ್ಣನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಜೀರ್ಣಾಂಗ ರೋಗ, ಮಧುಮೇಹ, ಕ್ಯಾನ್ಸರ್, ಹೃದ್ರೋಗ, ಪ್ಲೇಟ್ಲೆಟ್ ಗಳನ್ನು ಹೆಚ್ಚಿಸುತ್ತದೆ.
ಜೊತೆಗೆ ಇದು ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುತ್ತದೆ. ಹಾಗೆಯೇ ಅತಿಯಾಗಿ ಪಪ್ಪಾಯಿತಿಂದರೆ ಹಲವು ಅನಾನುಕೂಲತೆ ಉಂಟು ಮಾಡುವ ಸಾಧ್ಯತೆಯೂ ಇದೆ.
ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಪಪ್ಪಾಯಿ ತಿಂದರೆ ಯಾವೆಲ್ಲಾ ಅಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದನ್ನು ಇಲ್ಲಿ ನೋಡೋಣ.
ಅತಿಯಾಗಿ ಪಪ್ಪಾಯಿ ತಿಂದರೆ ಫುಡ್ ಪೈಪ್ ಗೆ ಹಾನಿ ಉಂಟಾಗುತ್ತದೆ
ವೆಬ್ ಮೆಡ್ ಹೇಳುವ ಪ್ರಕಾರ, ಬಲಿಯದ ಅಂದರೆ ಹಸಿ ಪಪ್ಪಾಯಿ ತಿನ್ನುವುದರಿಂದ ಫುಡ್ ಪೈಪ್ ಹಾನಿಗೀಡಾಗುತ್ತದೆ. ಯಾಕಂದ್ರೆ ಇದರಲ್ಲಿ ಲ್ಯಾಟೆಕ್ಸ್ ಪಪೈನ್ ಎಂಬ ಅಂಶ ಇದೆ.
ಇದು ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು ಮತ್ತು ಕೊಬ್ಬು ಒಡೆಯಲು ಕೆಲಸಕ್ಕೆ ಸಹಾಯ ಮಾಡುತ್ತದೆ. ಆದರೆ ಇದರ ಅತಿಯಾದ ತಿಂದರೆ ಗಂಟಲಿನ ಆಹಾರ ಪೈಪ್ ಗೆ ಹಾನಿ ಮಾಡುತ್ತದೆ.
ಪಪ್ಪಾಯಿಯ ಅತಿಯಾಗಿ ತಿಂದರೆ ಅತಿಸಾರ ಸಮಸ್ಯೆ ಉಂಟು ಮಾಡುತ್ತದೆ
ಪಪ್ಪಾಯಿಯ ಅತಿಯಾಗಿ ತಿಂದರೆ ಅತಿಸಾರ ಸಮಸ್ಯೆ ಉಂಟು ಮಾಡುತ್ತದೆ. ನೀವು ಹೆಚ್ಚು ಪಪ್ಪಾಯಿ ತಿಂದರೆ ಅತಿಸಾರ ಸಮಸ್ಯೆ ಉಂಟಾಗುತ್ತದೆ. ಇದು ಹೆಚ್ಚಿನ ಫೈಬರ್ ಅಂಶದ ಕಾರಣದಿಂದ ಆಗುತ್ತದೆ. ಇದು ವಿರೇಚಕವಾಗಿ ಕೆಲಸ ಮಾಡುತ್ತದೆ.
ಆಹಾರವನ್ನು ವೇಗವಾಗಿ ಇದು ಜೀರ್ಣಿಸಿಕೊಳ್ಳಲು ಮತ್ತು ಮಲ ಮೃದುವಾಗಿಸಲು ಸಹಕಾರಿ. ಜೊತೆಗೆ ಇದು ಮಲಬದ್ಧತೆ ಸಮಸ್ಯೆ ಸರಿ ಮಾಡುತ್ತದೆ. ಆದರೆ ಅತಿಸಾರ ಸಮಸ್ಯೆ ಸಾಧ್ಯತೆ ಹೆಚ್ಚು ಮಾಡುತ್ತದೆ.
ಮಧುಮೇಹ ಔಷಧದ ಜೊತೆಗೆ ಪಪ್ಪಾಯಿ ತಿನ್ನಬೇಡಿ
ವರದಿ ಪ್ರಕಾರ ಪಪ್ಪಾಯಿ ಮಧುಮೇಹ ವಿರೋಧಿ ಗುಣ ಹೊಂದಿದೆ. ಇದು ರಕ್ತದ ಹೆಚ್ಚಿದ ಸಕ್ಕರೆ ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಇದನ್ನು ಮಧುಮೇಹ ಔಷಧ ಜೊತೆ ತಿಂದರೆ ಕಡಿಮೆ ರಕ್ತದ ಸಕ್ಕರೆ ಸಮಸ್ಯೆಯ ಅಪಾಯ ಉಂಟಾಗುತ್ತದೆ.
ಪಪ್ಪಾಯಿ ಗರ್ಭಪಾತಕ್ಕೂ ಕಾರಣವಾಗುತ್ತದೆ
ಗರ್ಭಿಣಿಯರಿಗೆ ಪಪ್ಪಾಯಿ ಆರೋಗ್ಯಕರವಲ್ಲ. ಇದರಲ್ಲಿರುವ ಪಾಪೈನ್ ಮತ್ತು ಚೈಮೊಪೈನ್ ಗರ್ಭಾಶಯವನ್ನು ಸಂಕುಚಿತಗೊಳಿಸುತ್ತದೆ. ಇದು ಗರ್ಭಪಾತ, ಅಕಾಲಿಕ ಹೆರಿಗೆ, ಭ್ರೂಣವನ್ನು ಬೆಂಬಲಿಸುವ ಪ್ರಮುಖ ಪೊರೆಗಳನ್ನು ದುರ್ಬಲಗೊಳಿಸುವ ಅಪಾಯವಿದೆ.
ಇದನ್ನೂ ಓದಿ: ತೂಕ ಇಳಿಕೆಯಿಂದ ಸಂಧಿವಾತ ಸಮಸ್ಯೆಗೂ ಪರಿಹಾರ, ಹೇಗೆ ಅಂತೀರಾ? ಇಲ್ಲಿದೆ ವಿವರ
ಒಂದು ದಿನದಲ್ಲಿ ಎಷ್ಟು ಪಪ್ಪಾಯಿ ತಿನ್ನಬೇಕು?
ತಜ್ಞರು ದಿನಕ್ಕೆ 100 ಗ್ರಾಂನಿಂದ 120 ಗ್ರಾಂ ಪಪ್ಪಾಯಿ ಮಾತ್ರ ತಿನ್ನುವಂತೆ ಸೂಚಿಸುತ್ತಾರೆ. ಪಪ್ಪಾಯಿ ಎಲೆಗಳ ರಸವನ್ನು ಪ್ರತಿದಿನ 6 ಚಮಚ ಮಾತ್ರ ತಿನ್ನಿ. ತಿನ್ನುವ 4 ಗಂಟೆಗಳ ಮೊದಲು ಅಥವಾ ನಂತರ ಪಪ್ಪಾಯಿ ತಿನ್ನಿ,
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ