ಪ್ರತಿಯೊಬ್ಬರೂ ಚಳಿಗಾಲದಲ್ಲಿ (Winter) ಚಹಾ (Tea) ಕುಡಿಯಲು ಮನಸ್ಸು ಮಾಡ್ತಾರೆ. ತಂಪಾದ ವಾತಾವರಣದಲ್ಲಿ (Cold Weather) ದಿನಕ್ಕೆ ಎರಡರಿಂದ ಮೂರು ಹೊತ್ತು ಚಹಾ ಬೇಕು ಕುಡಿಯಬೇಕು ಅನ್ನಿಸುತ್ತೆ. ಬಿಸಿ ಮತ್ತು ಸ್ಟ್ರಾಂಗ್ ಚಹಾ ಸೇವನೆ ಇಡೀ ದಿನದ ದಣಿವು, ಆಯಾಸ ಹಾಗೂ ಒತ್ತಡ ನಿವಾರಿಸುತ್ತದೆ ಎಂದು ನಂಬಲಾಗಿದೆ. ಅದರಲ್ಲೂ ಚಹಾದಲ್ಲಿ ಹಸಿ ಶುಂಠಿ ಸೇರಿಸುವುದು ಆರೋಗ್ಯ ಪ್ರಯೋಜನ ಮತ್ತು ಚಹಾದ ರುಚಿ ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಶುಂಠಿ ಚಹಾದ (Ginger Tea) ಸೇವನೆಯ ಮಜವೇ ಬೇರೆ. ಹೀಗಾಗಿ ಜನರು ಶುಂಠಿ ಚಹಾ ಹೆಚ್ಚು ಕುಡಿಯಲು ಮನಸ್ಸು ಮಾಡ್ತಾರೆ.
ಅತಿಯಾಗಿ ಶುಂಠಿ ಚಹಾ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ!
ಆದರೆ ಶುಂಠಿ ಚಹಾವನ್ನು ದಿನದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಕುಡಿಯುವುದು ಆರೋಗ್ಯದ ಮೇಲೆ ಕೆಲವು ಅಡ್ಡ ಪರಿಣಾಮ ಬೀರುತ್ತದೆ. ಶುಂಠಿಯನ್ನು ಎಷ್ಟು ಸೇವಿಸಬೇಕು ಮತ್ತು ಶುಂಠಿ ಚಹಾವನ್ನು ಎಷ್ಟು ಬಾರಿ ಕುಡಿಯಬೇಕು ಎಂಬ ಮಾಹಿತಿಯಿಲ್ಲದೇ ಜನರು ಶುಂಠಿ ಚಹಾ ಕುಡಿಯುತ್ತಾರೆ. ಇದು ಟ್ರೆಂಡ್ ಆಗಿದೆ.
ಶುಂಠಿ ಪ್ರಯೋಜನಗಳು ಹಲವು. ಆದರೆ ಅತಿಯಾಗಿ ಸೇವಿಸಿದರೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಸಾಮಾನ್ಯ ಮನುಷ್ಯ ದಿನಕ್ಕೆ 5 ಗ್ರಾಂ ಶುಂಠಿ ಸೇವನೆ ಮಾಡಬಹುದು ಅಂತಾರೆ ವೈದ್ಯರು. ಒಂದು ಕಪ್ ಚಹಾದಲ್ಲಿ 500 ಮಿಗ್ರಾಂ ಅಥವಾ 1/4 ಟೀಸ್ಪೂನ್ ಶುಂಠಿ ಹಾಕಬಹುದು.
ಯಾರು ಯಾವ ಪ್ರಮಾಣದಲ್ಲಿ ಶುಂಠಿ ಸೇವನೆ ಮಾಡಬೇಕು?
ಸಾಮಾನ್ಯ ವ್ಯಕ್ತಿಯು ಗರಿಷ್ಠ 5 ಗ್ರಾಂ ಶುಂಠಿ ಸೇವಿಸಬಹುದು. ಗರ್ಭಿಣಿಯರು - 2.5 ಗ್ರಾಂ, ಹೈಪೊಗ್ಲಿಸಿಮಿಕ್ ರೋಗಿ 3 ಗ್ರಾಂ, ಕೆಟ್ಟ ಜೀರ್ಣಕ್ರಿಯೆ ಇರುವವರು 1.2 ಗ್ರಾಂ, ತೂಕ ನಷ್ಟಕ್ಕೆ 1 ಗ್ರಾಂ ಸೇವನೆ ಮಾಡುವುದು ಆರೋಗ್ಯಕರ ಆಯ್ಕೆಯಾಗಿದೆ.
ಆಮ್ಲೀಯತೆ ಉಂಟಾಗುತ್ತದೆ
ಹೆಚ್ಚು ಶುಂಠಿ ಸೇವಿಸಿದರೆ ಅದು ಆಮ್ಲೀಯತೆ ಉಂಟು ಮಾಡುತ್ತದೆ. ದೇಹದಲ್ಲಿ ಅಧಿಕ ಆಮ್ಲ ರೂಪುಗೊಳ್ಳಲು ಇದು ಕಾರಣವಾಗುತ್ತದೆ. ಆಮ್ಲೀಯತೆ, ನಂತರ ಅನೇಕ ಇತರೆ ರೋಗಗಳು ಉಂಟಾಗುತ್ತವೆ.
ರಕ್ತದೊತ್ತಡ ಸಮಸ್ಯೆ ಹೆಚ್ಚಿಸುತ್ತದೆ
ಅಧಿಕ ರಕ್ತದೊತ್ತಡ, ಕಡಿಮೆ ರಕ್ತದೊತ್ತಡ ಇರುವವರಿಗೆ ಹೆಚ್ಚು ಶುಂಠಿ ಸೇವನೆ ಮಾಡವುದು ಅಡ್ಡ ಪರಿಣಾಮ ಬೀರುತ್ತದೆ. ರಕ್ತವನ್ನು ತೆಳುಗೊಳಿಸುತ್ತದೆ.
ಸಕ್ಕರೆ ರೋಗಿಗಳು ಶುಂಠಿ ಅತಿಯಾದ ಸೇವನೆ ತಪ್ಪಿಸಿ
ಶುಂಠಿಯ ಸೇವನೆ ರಕ್ತದ ಸಕ್ಕರೆಯ ಮಟ್ಟ ಸಹ ಕಡಿಮೆ ಮಾಡುತ್ತದೆ. ಹಾಗಾಗಿ ಸಕ್ಕರೆ ರೋಗಿಗಳು ವಿಶೇಷವಾಗಿ ಶುಂಠಿಯ ಅತಿಯಾದ ಸೇವನೆ ತಪ್ಪಿಸಿ. ಇದು ರಕ್ತದ ಸಕ್ಕರೆ ಮಟ್ಟ ಹಠಾತ್ ಕಡಿಮೆ ಮಾಡಲು ಹೈಪೊಗ್ಲಿಸಿಮಿಯಾಕ್ಕೆ ಕಾರಣವಾಗುತ್ತದೆ.
ನಿದ್ರೆ ಬರುವುದಿಲ್ಲ
ರಾತ್ರಿ ಶುಂಠಿ ಚಹಾ ಸೇವಿಸಿದರೆ ಅದು ನಿದ್ರಾಹೀನತೆ ಸಮಸ್ಯೆ ಉಂಟು ಮಾಡಬಹುದು. ನಂತರ ರಾತ್ರಿಯಿಡೀ ನಿದ್ದೆ ಮಾಡುವ ವ್ಯಾಯಾಮವನ್ನು ಮಾಡುತ್ತಿರಿ. ಟೀಗೆ ಹೆಚ್ಚು ಶುಂಠಿ ಸೇರಿಸಿ ಕುಡಿದರೆ ಅದು ಎದೆಯಲ್ಲಿ ಸುಡುವ ಸಂವೇದನೆ, ಎದೆಯುರಿ ಉಂಟು ಮಾಡುತ್ತದೆ. ಜೀರ್ಣಕ್ರಿಯೆ ತೊಂದರೆಯಾಗುತ್ತದೆ.
ಗರ್ಭಿಣಿಯರಿಗೆ ಒಳ್ಳೆಯದಲ್ಲ
ಅರ್ಧ ಕಪ್ ಗಿಂತ ದಿನವೂ ಹೆಚ್ಚು ಶುಂಠಿ ಚಹಾ ಕುಡಿಯುವ ಗರ್ಭಿಣಿಯರಿಗೆ ಇದು ಹಾನಿಕಾರಕ. ಗರ್ಭಿಣಿಯರಲ್ಲಿ ಹೊಟ್ಟೆ ನೋವು, ಸಂಕೋಚನ ಉಂಟು ಮಾಡಬಹುದು.
ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಒದಗಿಸಲು ಈ ಸೂಪರ್ ಫುಡ್ ಸೇವಿಸಿ
ಜೀರ್ಣಾಂಗವ್ಯೂಹ ಸಮಸ್ಯೆಗಳು
ಖಾಲಿ ಹೊಟ್ಟೆಯಲ್ಲಿ ಶುಂಠಿ ಟೀ ಕುಡಿದರೆ ಜಠರ-ಕರುಳಿನ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಅತಿಯಾಗಿ ಶುಂಠಿ ಸೇವನೆ ಮಾಡಬೇಡಿ. ಮಿತವಾಗಿ ಶುಂಠಿ ಚಹಾ ಕುಡಿಯುವುದು ಉತ್ತಮ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ