• Home
  • »
  • News
  • »
  • lifestyle
  • »
  • Health Care: ಕಿತ್ತಳೆ ಹಣ್ಣಂತೆ ಕಾಣುತ್ತೆ, ಆದರೆ ಕಿತ್ತಳೆ ಹಣ್ಣು ಅಲ್ಲ! ಕಿನ್ನೋ ಫ್ರೂಟ್ಸ್‌ನ ಆರೋಗ್ಯ ಪ್ರಯೋಜನ ಹೀಗಿವೆ

Health Care: ಕಿತ್ತಳೆ ಹಣ್ಣಂತೆ ಕಾಣುತ್ತೆ, ಆದರೆ ಕಿತ್ತಳೆ ಹಣ್ಣು ಅಲ್ಲ! ಕಿನ್ನೋ ಫ್ರೂಟ್ಸ್‌ನ ಆರೋಗ್ಯ ಪ್ರಯೋಜನ ಹೀಗಿವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾರುಕಟ್ಟೆಯಲ್ಲಿ ಕಿನ್ನೋ ಹಣ್ಣಿನ ಬೆಲೆ ಕಿತ್ತಳೆ ಹಣ್ಣಿಗಿಂತ ಕಡಿಮೆಯಿದೆ. ಆದರೆ ಕಿನ್ನೋ ಹಣ್ಣು ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ. ಕಿತ್ತಳೆಗಿಂತ ಹೆಚ್ಚು ಆರೋಗ್ಯ ಲಾಭ ನೀಡುತ್ತದೆ ಕಿನ್ನೋ ಹಣ್ಣು. ಅಂದ ಹಾಗೇ ಕಿತ್ತಳೆ ಹಣ್ಣು ಮತ್ತು ಕಿನ್ನೋ ಹಣ್ಣು ಎರಡೂ ಸಿಟ್ರಸ್ ಹಣ್ಣುಗಳು ಆಗಿವೆ.

ಮುಂದೆ ಓದಿ ...
  • Share this:

    ಕಿತ್ತಳೆಯಂತೆ (Orange) ಕಾಣುವ ಕಿನ್ನೋ (Kinnow) ಎಂಬ ಹಣ್ಣಿನ (Fruit) ಬಗ್ಗೆ ಕೆಲವರಿಗೆ ಗೊತ್ತಿರಬಹುದು, ಇನ್ನು ಕೆಲವರಿಗೆ ಕಿನ್ನೋ ಹಣ್ಣಿನ ಬಗ್ಗೆ ಗೊತ್ತಿರದೇ ಇರಬಹುದು. ಕಿತ್ತಳೆಯನ್ನೇ ಹೋಲುವ ಕಿನ್ನೋ ಹಣ್ಣನ್ನು ಕಿನು ಎಂದೂ ಕರೆಯುತ್ತಾರೆ. ಕಿನು ಹಣ್ಣು ಕಿಂಗ್ ಮತ್ತು ವಿಲೋ ಲೀಫ್ ಎಂಬ ಎರಡು ಸಿಟ್ರಸ್ (Citrus) ತಳಿಯಿಂದ ರಚಿಸಲಾದ ಹೈಬ್ರಿಡ್ ಹಣ್ಣು ಆಗಿದೆ. ಇದು ಕಿತ್ತಳೆ ಹಣ್ಣಿಗಿಂತ ಹೆಚ್ಚು ರಸಭರಿತ ಆಗಿದೆ. ಕಿನ್ನೋ ಹಣ್ಣನ್ನು ಹೆಚ್ಚಾಗಿ ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ ಮತ್ತು ಹರಿಯಾಣದಲ್ಲಿ ಬೆಳೆಯುತ್ತಾರೆ. ಅದಾಗ್ಯೂ ಕಿನು ಹಣ್ಣನ್ನು ಹಲವು ಕಡೆಗಳಲ್ಲಿ ಹಲವು ಹೆಸರುಗಳಿಂದ ಕರೆಯುತ್ತಾರೆ.


    ಕಿನ್ನೋ ಹಣ್ಣಿನ ಆರೋಗ್ಯ ಪ್ರಯೋಜನಗಳು


    ಮಾರುಕಟ್ಟೆಯಲ್ಲಿ ಕಿನ್ನೋ ಹಣ್ಣಿನ ಬೆಲೆ ಕಿತ್ತಳೆ ಹಣ್ಣಿಗಿಂತ ಕಡಿಮೆಯಿದೆ. ಆದರೆ ಕಿನ್ನೋ ಹಣ್ಣು ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ. ಕಿತ್ತಳೆಗಿಂತ ಹೆಚ್ಚು ಆರೋಗ್ಯ ಲಾಭ ನೀಡುತ್ತದೆ ಕಿನ್ನೋ ಹಣ್ಣು. ಅಂದ ಹಾಗೇ ಕಿತ್ತಳೆ ಹಣ್ಣು ಮತ್ತು ಕಿನ್ನೋ ಹಣ್ಣು ಎರಡೂ ಸಿಟ್ರಸ್ ಹಣ್ಣುಗಳು ಆಗಿವೆ.


    ಕಿತ್ತಳೆ ಮತ್ತು ಕಿನ್ನೋ ಹಣ್ಣಿನಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ ಎಂಬುದನ್ನು ನೋಡುವುದಾದ್ರೆ, ಕಿತ್ತಳೆ ಮತ್ತು ಕಿನ್ನೋ ಎರಡರಲ್ಲೂ ವಿಟಮಿನ ಸಿ ಹೇರಳವಾಗಿದೆ. ಎರಡೂ ಸಿಟ್ರಸ್ ಹಣ್ಣುಗಳೇ ಆಗಿವೆ. ಆದರೆ ಕಿತ್ತಳೆ ಹಣ್ಣಿಗಿಂತ ಅಥವಾ ಇತರೆ ಯಾವುದೇ ಸಿಟ್ರಸ್ ಹಣ್ಣುಗಳಿಗಿಂತ 2.5 ಪಟ್ಟು ಹೆಚ್ಚು ಕ್ಯಾಲ್ಸಿಯಂ ಅಂಶವು ಕಿನ್ನು ಹಣ್ಣಿನಲ್ಲಿ ಕಂಡು ಬರುತ್ತದೆ ಅಂತಾರೆ ತಜ್ಞರು.




    ಇಂತಹ ವೇಳೆ ಕಿನ್ನೋ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡಿದ್ರೆ ಬಲವಾದ ಮೂಳೆಗಳು ಹಾಗೂ ಸದೃಢ ಆರೋಗ್ಯಕ್ಕೆ ಇದು ಸಹಕಾರಿ ಆಗಿದೆ.


    ಯಾವೆಲ್ಲಾ ಪೋಷಕಾಂಶಗಳು ಕಿನ್ನು ಹಣ್ಣಿನಲ್ಲಿ ಇವೆ?


    ರಿಸರ್ಚ್ ಗೇಟ್ ವರದಿ ಪ್ರಕಾರ, ನಿರ್ದಿಷ್ಟ ಜೀವಸತ್ವ ಮತ್ತು ಖನಿಜಗಳು ಕಿನ್ನೋ ಹಣ್ಣಿನಲ್ಲಿ ಕಂಡು ಬರುತ್ತವೆ. ಸೋಡಿಯಂ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ತಾಮ್ರ ಹಾಗೂ ಕಿನ್ನೋ ಜೈವಿಕ ಸಕ್ರಿಯ ಘಟಕಗಳ ಶ್ರೀಮಂತ ಮೂಲ ಆಗಿದೆ.


    ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣಕ್ಕೆ ಕಿನ್ನು ಸಹಕಾರಿ


    ವಿಟಮಿನ್ ಸಿ ಹೇರಳವಾಗಿರುವ ಕಿನ್ನು ಹೃದ್ರೋಗ ಅಪಾಯ ಕಡಿಮೆ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ಗಳ ಮಟ್ಟ ನಿಯಂತ್ರಿಸುತ್ತದೆ. ಕಿನ್ನೋವನ್ನು ನಿಯಮಿತವಾಗಿ ಸೇವಿಸಿದರೆ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ.


    ಅಜೀರ್ಣ ಸಮಸ್ಯೆ ನಿವಾರಿಸಲು ಸಹಕಾರಿ


    ಕಿನ್ನೋ ಹಣ್ಣು ಜೀರ್ಣಾಂಗ ವ್ಯವಸ್ಥೆಯ ಮೇಲೆ ಯಾವುದೇ ಒತ್ತಡ ಉಂಟು ಮಾಡುವುದಿಲ್ಲ. ಇದು ಜೀರ್ಣಕ್ರಿಯೆಗೆ ಸಹಕಾರಿ. ದುರ್ಬಲ ಜೀರ್ಣಕ್ರಿಯೆ, ಅಜೀರ್ಣ ಸಮಸ್ಯೆ, ಆಮ್ಲೀಯತೆ, ಮಲಬದ್ಧತೆ ಸಮಸ್ಯೆ ಎದುರಿಸುತ್ತಿದ್ದರೆ ಕಿನ್ನುವನ್ನು ಆಹಾರದಲ್ಲಿ ಸೇರಿಸಿ. ದಿನಕ್ಕೆ ಎರಡು ಹಣ್ಣು ಸೇವನೆ ಮಾಡಬಹುದು.


    ಸಾಂದರ್ಭಿಕ ಚಿತ್ರ


    ಕಿನ್ನೋ ಕ್ಯಾನ್ಸರ್ ವಿರೋಧಿ ಮತ್ತು ಎಚ್ಐವಿ ವಿರೋಧಿ ಗುಣ ಹೊಂದಿದೆ


    ಪಂಜಾಬ್ ತೋಟಗಾರಿಕೆ ಪೋಸ್ಟ್ ಹಾರ್ವೆಸ್ಟ್ ಟೆಕ್ನಾಲಜಿ ಸೆಂಟರ್ ಪ್ರಕಾರ, ಕಿನ್ನೋ ಹಣ್ಣನ್ನು ಕ್ಯಾನ್ಸರ್ ವಿರೋಧಿ ಮತ್ತು ಎಚ್ ಐವಿ ವಿರೋಧಿ ಗುಣಲಕ್ಷಣ ಹೊಂದಿರುವ ಹಣ್ಣು ಎಂದು ಕರೆಯಲಾಗುತ್ತದೆ. ಈ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಕ್ಯಾನ್ಸರ್ ಸಾಧ್ಯತೆ ಕಡಿಮೆ ಮಾಡುತ್ತವೆ. ಎಚ್‌ಐವಿ ಅಪಾಯ ಕಡಿಮೆ ಮಾಡುತ್ತದೆ.


    ಕರುಳಿನ ಆರೋಗ್ಯ ಕಾಪಾಡುತ್ತದೆ


    ಕಳಪೆ ಆಹಾರ ಸೇವನೆಯಿಂದ ಕರುಳಿನ ಹೊರ ಪದರವು ದಪ್ಪವಾಗುತ್ತದೆ. ಇದು ಕರುಳು ಸರಿಯಾಗಿ ಕೆಲಸ ಮಾಡಲು ತೊಂದರೆ ಉಂಟು ಮಾಡುತ್ತದೆ. ಕಿನ್ನೋ ಹಣ್ಣು ಸೇವನೆ ಕರುಳಿನ ಕೆಲಸದ ಅಡ್ಡಿಯನ್ನು ತೆಗೆದು ಹಾಕುತ್ತದೆ.


    ಇದನ್ನೂ ಓದಿ: ಚಳಿಗಾಲದಲ್ಲಿ ಮೂಲಂಗಿಯನ್ನು ಈ ರೀತಿ ಸಂಗ್ರಹಿಸಿಡಿ, ಇಲ್ಲವಾದರೆ ರುಚಿ ಕೆಡುತ್ತೆ


    ಮೂಳೆಗಳು ಬಲಗೊಳ್ಳುತ್ತವೆ


    ಮೂಳೆ ಆರೋಗ್ಯಕ್ಕೆ ಕಿನ್ನೋ ಸಹಕಾರಿ. ವಿಟಮಿನ್ ಸಿ ಸಮೃದ್ಧ ಕಿನ್ನೋ ಸೇವನೆಯು ಕೀಲು ಮತ್ತು ಮೂಳೆಗಳ ಆರೋಗ್ಯ ಕಾಪಾಡುತ್ತದೆ.

    Published by:renukadariyannavar
    First published: