ಓರಲ್​ ಸೆಕ್ಸ್​ ಎಷ್ಟು ಒಳ್ಳೆಯದು? ಇಲ್ಲಿದೆ ಆಘಾತಕಾರಿ ವಿಷಯ

ಓರ್ವ ವ್ಯಕ್ತಿ ಆರು ಅಥವಾ ಆರಕ್ಕಿಂತ ಹೆಚ್ಚು ಮಹಿಳೆಯರ ಜೊತೆ ಲೈಂಗಿಕ  ಸಂಪರ್ಕ ಹೊಂದಿ, ಅವರ ಜೊತೆ ಓರಲ್​ ಸೆಕ್ಸ್​​ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿಯಂತೆ.

news18
Updated:June 20, 2019, 9:45 PM IST
ಓರಲ್​ ಸೆಕ್ಸ್​ ಎಷ್ಟು ಒಳ್ಳೆಯದು? ಇಲ್ಲಿದೆ ಆಘಾತಕಾರಿ ವಿಷಯ
ಸಾಂದರ್ಭಿಕ ಚಿತ್ರ
news18
Updated: June 20, 2019, 9:45 PM IST
ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಏಡ್ಸ್​​ ಬರುವ ಸಾಧ್ಯತೆ ಇರುತ್ತದೆ ಎಂಬ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೇ. ಏಡ್ಸ್​​ ರೋಗಕ್ಕೆ ಔಷಧ ಕಂಡು ಹಿಡಿಯಲು ವೈದ್ಯ ಲೋಕದಲ್ಲಿ ಈವರೆಗೆ ಸಾಧ್ಯವಾಗಿಲ್ಲ. ಅಚ್ಚರಿ ಎಂದರೆ, ಓರಲ್​ ಸೆಕ್ಸ್​ನಿಂದಲೂ ಅಪಾಯ ಎದುರಾಗುವ ಸಾಧ್ಯತೆ ಇದೆ ಎನ್ನುತ್ತಿದೆ ಹೊಸ ಅಧ್ಯಯನ!

ಅಸುರಕ್ಷಿತ ಲೈಂಗಿಕ ಪ್ರಕ್ರಿಯೆಯಿಂದ ಅಪಾಯ ಎನ್ನುವ ಕಾರಣಕ್ಕೆ ಅನೇಕರು ಓರಲ್​ ಸೆಕ್ಸ್​ಗೆ ಆದ್ಯತೆ ನೀಡುತ್ತಾರೆ. ಆದರೆ, ಇದು ಕೂಡ ಅಪಾಯವಂತೆ. ಅದು ಹೇಗೆ ಎಂಬುದಕ್ಕೆ ಇಲ್ಲಿದೆ ಮಾಹಿತಿ.

ಹ್ಯೂಮನ್​ ಪ್ಯಾಪಿಲೋಮ ವೈರಸ್​ (ಎಚ್​ಪಿವಿ) ಎಂಬುದು ಒಂದು ಕ್ಯಾನ್ಸರ್​ ಕಾರಕ. ಅತಿಯಾಗಿ ಸಿಗರೇಟ್​ ಸೇದುವುದರಿಂದ ಹೇಗೆ ಬಾಯಿ  ಕ್ಯಾನ್ಸರ್​ ಬರುತ್ತದೆಯೋ, ಹಾಗೆಯೇ ಎಚ್​ಪಿವಿ ಇನ್​ಫೆಕ್ಷನ್​ನಿಂದ ಬಾಯಿ ಕ್ಯಾನ್ಸರ್​ ಬರುತ್ತದೆ. ವ್ಯಕ್ತಿಯಲ್ಲಿ ಈ ವೈರಸ್​ ಇರುವ ವಿಚಾರ ಬಹುಬೇಗ ತಿಳಿಯುವುದಿಲ್ಲ.

ಇದನ್ನೂ ಓದಿ: ಲೈಂಗಿಕ ಕ್ರಿಯೆಯ ವಿಚಾರದಲ್ಲಿ ಮಡಿವಂತಿಕೆ ಬೇಡ! ಅದರಿಂದಲೂ ಇದೆ ಲಾಭ

ಬಹುತೇಕ ಪ್ರಕರಣಗಳಲ್ಲಿ ಈ ವೈರಸ್​ ದೇಹ ಪ್ರವೇಶಿಸಿದರೂ ನಮ್ಮ ರಕ್ಷಣಾ ವ್ಯವಸ್ಥೆ ಅದನ್ನು ನಾಶ ಮಾಡಿ ಬಿಡುತ್ತದೆ. ಒಂದೊಮ್ಮೆ ನಾಶವಾಗದಿದ್ದರೆ, ಅದು ಕ್ಯಾನ್ಸರ್​ ಆಗಿ ಮಾರ್ಪಾಡಾಗುತ್ತದೆ. ಓರಲ್​ ಸೆಕ್ಸ್​ ವೇಳೆ ಈ ವೈರಸ್​  ಸಂಗಾತಿಯ ದೇಹ ಪ್ರವೇಶಿಸುವ ಸಾಧ್ಯತೆ ಇರುತ್ತದೆ ಎನ್ನುತ್ತದೆ ಅಧ್ಯಯನ.

ಓರ್ವ ವ್ಯಕ್ತಿ ಆರು ಅಥವಾ ಆರಕ್ಕಿಂತ ಹೆಚ್ಚು ಮಹಿಳೆಯರ ಜೊತೆ ಲೈಂಗಿಕ  ಸಂಪರ್ಕ ಹೊಂದಿ, ಅವರ ಜೊತೆ ಓರಲ್​ ಸೆಕ್ಸ್​​ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿಯಂತೆ. “ಗುಪ್ತಾಂಗಕ್ಕೆ ಬಾಯಿ ಸ್ಪರ್ಶ ಮಾಡುವುದು ಲೈಂಗಿಕ ಪ್ರಕ್ರಿಯೆ ಎಂದು ಪರಿಗಣಿಸಲಾಗುವುದಿಲ್ಲ ಎಂಬುದು ಅನೇಕರ ಭಾವನೆ. ಆದರೆ ಇದು ನಿಜಕ್ಕೂ ಅಪಾಯ” ಎನ್ನುತ್ತಾರೆ ವೈದ್ಯರು.
Loading...

ಒಂದೊಮ್ಮೆ ಎಚ್​ಪಿವಿಯಿಂದ ಕ್ಯಾನ್ಸರ್​ ಉಂಟಾದರೆ ಅದನ್ನು ತಡೆಯಬಹುದು ಎನ್ನುತ್ತದೆ ವೈದ್ಯ ಜಗತ್ತು. “ಎಚ್​ಪಿವಿ ಇಂದ ಕ್ಯಾನ್ಸರ್​ ಉಂಟಾಗಿ ಆರಂಭ ಹಂತದಲ್ಲೇ ಗೊತ್ತಾದರೆ ಅದನ್ನು ತಡೆಯಬಹುದು. ಬಹುತೇಕ ಪ್ರಕರಣಗಳಲ್ಲಿ ರೋಗಿ ಸಂಪೂರ್ಣವಾಗಿ ಗುಣಮುಖರಾಗಿದ್ದಾನೆ” ಎನ್ನುತ್ತಾರೆ ವೈದ್ಯರು. ಆರೋಗ್ಯಕರ ಆಹಾರ ಕ್ರಮ ಹಾಗೂ ಸಿಗರೇಟ್​ನಿಂದ ದೂರವಿದ್ದರೆ ಬಾಯಿ ಕ್ಯಾನ್ಸರ್​ ತಡೆಯಬಹುದಂತೆ.

ಹಾಲಿವುಡ್​ ಹೀರೋ ಮೈಕೆಲ್​ ಡಗ್ಲಾಸ್​ ಕೂಡ ಇದೇ ರೀತಿ ಆರೋಪ ಮಾಡಿದ್ದರು. ಅವರಿಗೆ ಕಾಣಿಸಿಕೊಂಡ ಗಂಟಲು ಕ್ಯಾನ್ಸರ್​ಗೆ ಓರಲ್​ ಸೆಕ್ಸ್​ ಕಾರಣ ಎಂದಿದ್ದರು.

ಇದನ್ನೂ ಓದಿ: ಲೈಂಗಿಕ ಕ್ರಿಯೆ ಮಾಡುವ ಮೊದಲು ಹೀಗೆ ಮಾಡಲೇಬಾರದು!
First published:June 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...