Oral Health: ಹಲ್ಲುಜ್ಜುವಾಗ ಈ ತಪ್ಪುಗಳನ್ನು ಮಾಡಬೇಡಿ..!

ಹಲ್ಲುಜ್ಜುವುದು ಎಂದ ಕೂಡಲೇ ದಿನಕ್ಕೆ ಎರಡು ಬಾರಿ ಬ್ರಷ್​ ಮಾಡಿದರೆ ಸಾಕೆಂದಲ್ಲ. ಹಲ್ಲುಜ್ಜುವ ವಿಧಾನ, ಬ್ರಷ್​ ಹಾಗೂ ಟೂತ್​ಪೇಸ್ಟ್​ ಆಯ್ಕೆ ಎಲ್ಲದರ ಬಗ್ಗೆಯೂ ತಿಳಿದುಕೊಂಡಿರಬೇಕು. ಇಲ್ಲವಾದಲ್ಲಿ ಹಲ್ಲು ಹಾಗೂ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆರೋಗ್ಯಕರ ಹಲ್ಲುಗಳು ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ ಮತ್ತು ಒಟ್ಟಾರೆ ಆರೋಗ್ಯದ ಸೂಚಕವಾಗಿದೆ. ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಬಾಯಿಯ ಆರೋಗ್ಯ ಕಾಪಾಡಿಕೊಳ್ಳಲು ಸರಿಯಾದ ಮಾರ್ಗವನ್ನು ಜನರಿಗೆ ತಿಳಿಸಲು ತಜ್ಞರು ಹಲವಾರು ಸಲಹೆಗಳನ್ನು ನೀಡುತ್ತಲೇ ಬಂದಿದ್ದಾರೆ. ಆದರೆ, ಜನರು ಸಲಹೆಗಳನ್ನು ಹೆಚ್ಚು ಅನುಸರಿಸುವುದಿಲ್ಲ. ಇದು ಬಾಯಿಯ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಿಮ್ಮ ಹಲ್ಲುಗಳನ್ನು ಉಜ್ಜಲು ಸರಿಯಾದ ಮಾರ್ಗ ನೀವು ಮೊದಲು ತಿಳಿದುಕೊಳ್ಳಬೇಕು. ಜತೆಗೆ ಸರಿಯಾದ ಮಾರ್ಗಗಳನ್ನು ನಿಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಬೇಕು.

ಸರಿಯಾಗಿ ಹಲ್ಲುಜ್ಜಲು ಸಲಹೆಗಳು: 

* ನಿಮ್ಮ ಬ್ರಷ್ ಅನ್ನು 45 ಡಿಗ್ರಿ ಕೋನದಲ್ಲಿ ಹಿಡಿದುಕೊಳ್ಳಿ. ಹಲ್ಲುಗಳ ಹೊರ ಮೇಲ್ಮೈಯಿಂದ ಪ್ರಾರಂಭಿಸಿ. ಮೇಲೆ ಮತ್ತು ಕೆಳಗೆ ಚೆನ್ನಾಗಿ ಉಜ್ಜಿ.

* ನಿಮ್ಮ ಹಲ್ಲುಗಳ ಒಳ ಮೇಲ್ಮೈಯನ್ನು ಉಜ್ಜಿ ಹಾಗೂ ಒಳ ಭಾಗದ ಮೇಲೆ ಮತ್ತು ಕೆಳಗೆ ಉಜ್ಜಿ ಹಾಗೂ ಯಾವುದೇ ಹಲ್ಲಿನ ಜಾಗವನ್ನು ಬಿಡದೆ ಉಜ್ಜಿ.

* ನಿಮ್ಮ ಜಗಿಯುವ ಹಲ್ಲುಗಳ ಮೇಲ್ಮೈ ಅನ್ನು ಪ್ರತ್ಯೇಕವಾಗಿ ಉಜ್ಜಿ.

* ನೀವು ಹಲ್ಲಿನ ಹಿಂಭಾಗವನ್ನು ಸ್ವಚ್ಛಗೊಳಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

* ನಿಮ್ಮ ನಾಲಿಗೆ ಮತ್ತು ಒಸಡುಗಳನ್ನು ಸ್ವಚ್ಛಗೊಳಿಸಲು ಮರೆಯಬೇಡಿ.

* ಕೊನೆಯದಾಗಿ ಚೆನ್ನಾಗಿ ನೀರಿನಿಂದ ಮುಕ್ಕಳಿಸಿ ತೊಳೆಯಿರಿ

harmful effects of brushing teeth more than 2 times, harmful effects, brushing teeth, healthy lifestyle, health tips, health news telugu, tooth decay, telugu health tips, ಬಾಯಿಯ ಆರೋಗ್ಯ,ಹಲ್ಲಿನ ಆರೋಗ್ಯ, ಹಲ್ಲುಜ್ಜುವುದು, ಬ್ರೆಶ್​ ಮಾಡಿ, ದಿನಕ್ಕೆ ಎಷ್ಟು ಸಲ ಹಲ್ಲುಜ್ಜಬೇಕು ಗೊತ್ತಾ | harmful effects of brushing teeth more than 2 times ae
ಸಾಂದರ್ಭಿಕ ಚಿತ್ರ


ಹಲ್ಲುಜ್ಜುವಾಗ ಆಗುವ ತಪ್ಪುಗಳು

ನಿಮ್ಮ ಟೂತ್​ಪೇಸ್ಟ್​ ಆಯ್ಕೆ ಕುರಿತು ಎಚ್ಚರವಿರಲಿ: ನಿಮಗೆ ಮಾರುಕಟ್ಟೆಯಲ್ಲಿ ವಿವಿಧ ಟೂತ್ ಪೇಸ್ಟ್‌ಗಳು ಸಿಗುತ್ತದೆ. ಆದರೆ, ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು ಟೂತ್ ಪೇಸ್ಟ್ ಆರಿಸಿಕೊಳ್ಳಬೇಕು. ಉದಾಹರಣೆಗೆ, ಹಲ್ಲಿನ ಸೂಕ್ಷ್ಮತೆಯಿಂದ ಬಳಲುತ್ತಿರುವ ಜನರು ಸೂಕ್ಷ್ಮತೆಗೆ ಹೊಂದುವ ಟೂತ್ ಪೇಸ್ಟ್ ಆಯ್ಕೆ ಮಾಡಿಕೊಳ್ಳಬೇಕು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ನೀವು, ನಿಮ್ಮ ದಂತವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇದನ್ನೂ ಓದಿ: BBK8 Winner Manju Pavagada: ಟ್ರೋಫಿ ಗೆದ್ದ ನಂತರ ಶಿವಣ್ಣನನ್ನು ಭೇಟಿ ಮಾಡಿದ ಮಂಜು ಪಾವಗಡ



ನಿಮ್ಮ ನಾಲಿಗೆಯನ್ನು ನೀವು ಸ್ವಚ್ಛಗೊಳಿಸುವುದಿಲ್ಲ: ನಿಮ್ಮ ನಾಲಿಗೆ ನಿಮ್ಮ ಬಾಯಿಯ ಆರೋಗ್ಯದ ಒಂದು ಭಾಗವಾಗಿದೆ ಮತ್ತು ಸಾಮಾನ್ಯವಾಗಿ ಜನರು ಈ ಕ್ರಿಯೆ ಮಾಡುವುದಿಲ್ಲ. ನಾಲಿಗೆಯನ್ನು ತೊಳೆಯುವುದರಿಂದ ನೀವು ಅನೇಕ ರೋಗಗಳನ್ನು ದೂರವಿಡಬಹುದು. ಏಕೆಂದರೆ ನಾಲಿಗೆಯ ಮೇಲ್ಮೈ ಹೆಚ್ಚಾಗಿ ಬ್ಯಾಕ್ಟೀರಿಯಾ ಹೊಂದಿರುತ್ತದೆ. ಅದು ಕೆಟ್ಟ ವಾಸನೆ ಉಂಟುಮಾಡುತ್ತದೆ. ಆದ್ದರಿಂದ, ನಿಮ್ಮ ಹಲ್ಲುಗಳನ್ನು ಉಜ್ಜುವಾಗ ನೀವು ನಾಲಿಗೆಯನ್ನು ಸ್ವಚ್ಛಗೊಳಿಸುತ್ತೀರೆಂದು ಖಚಿತಪಡಿಸಿಕೊಳ್ಳಿ.

ಹಲ್ಲುಜ್ಜುವ ಬ್ರಷ್ ಆಯ್ಕೆನೀವು ಸರಿಯಾದ ಬ್ರಷ್‌ ಆಯ್ಕೆ ಮಾಡದಿದ್ದರೆ, ಅದು ಹಲ್ಲು ನೋವಿಗೆ ಕಾರಣವಾಗುತ್ತದೆ. ಮೂಗೇಟು ಆಗಬಹುದು ಅಥವಾ ವಸಡಲ್ಲಿ ರಕ್ತಸ್ರಾವ ಉಂಟಾಗಬಹುದು. ಸಣ್ಣಗಿರುವ ಮೃದುವಾದ ಬಿರುಸಾದ, ಹೊಂದಿಕೊಳ್ಳುವ ಬ್ರಷ್ ಆರಿಸಿಕೊಳ್ಳಿ. ಇದರಿಂದ ನಿಮ್ಮ ಬಾಯಿಯಲ್ಲಿ ಕಷ್ಟಕರವಾದ ಸ್ಥಳಗಳನ್ನು ತಲುಪಲು ಮತ್ತು ಆಹಾರ ಕಣಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Sonali Bendre: ಮಗನ 16ನೇ ಹುಟ್ಟುಹಬ್ಬಕ್ಕೆ ಅಪರೂಪದ ಫೋಟೋ ಶೇರ್ ಮಾಡುವ ಮೂಲಕ ವಿಶ್​ ಮಾಡಿದ ಸೋನಾಲಿ ಬೇಂದ್ರೆ..!



ಆತುರದ ಹಲ್ಲುಜ್ಜುವಿಕೆ: ನೀವು ಆತುರದಲ್ಲಿ ಹಲ್ಲು ಉಜ್ಜಬಾರದು. ನಿಧಾನವಾಗಿ ಹಲ್ಲು ಉಜ್ಜಬೇಕು. ನಿಮ್ಮ ಹಲ್ಲುಗಳನ್ನು ಉಜ್ಜಲು ಕನಿಷ್ಠ 2 ನಿಮಿಷಗಳನ್ನು ತೆಗೆದುಕೊಳ್ಳಬೇಕು. ನಿನ್ನೆ ರಾತ್ರಿಯ ಆಹಾರ ಕಣಗಳನ್ನು ಸ್ವಚ್ಛಗೊಳಿಸಲು ಸಮಯ ಬೇಕಾಗುತ್ತದೆ ಎಂಬುದನ್ನು ಮರೆಯಬೇಡಿ. ಆದ್ದರಿಂದ ಸೂಕ್ತ ಸಮಯ ತೆಗೆದುಕೊಳ್ಳಿ.

ಒಮ್ಮೆ ಹಲ್ಲುಜ್ಜಿದರೆ ಸಾಕು ಎಂದು ನೀವು ಭಾವಿಸುತ್ತೀರಿ: ದಿನಕ್ಕೆ ಎರಡು ಬಾರಿಯಾದರೂ ಹಲ್ಲುಜ್ಜಲು ವೈದ್ಯರು ಸೂಚಿಸುತ್ತಾರೆ. ಪ್ರತಿದಿನ ತಿರುಗಾಡುವುದರಿಂದ ಬಾಯಿಯಲ್ಲಿ ಬ್ಯಾಕ್ಟೀರಿಯಾ ಶೇಖರಣೆಯಾಗಬಹುದು. ಆದ್ದರಿಂದ ದಿನಕ್ಕೆ 2 ಬಾರಿ ಹಲ್ಲುಜ್ಜುವುದು ಉತ್ತಮ.
Published by:Anitha E
First published: