• Home
  • »
  • News
  • »
  • lifestyle
  • »
  • Skin Care: ಚರ್ಮದ ಕಾಳಜಿಗೆ ಮನೆಯಲ್ಲೇ ಗ್ಲಿಸರಿನ್ ಮಾಯಿಶ್ಚರೈಸರ್ ಹೀಗೆ ತಯಾರಿಸಿ

Skin Care: ಚರ್ಮದ ಕಾಳಜಿಗೆ ಮನೆಯಲ್ಲೇ ಗ್ಲಿಸರಿನ್ ಮಾಯಿಶ್ಚರೈಸರ್ ಹೀಗೆ ತಯಾರಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮುಖದ ಬಗ್ಗೆ ಕಾಳಜಿ ವಹಿಸುವ ಜನರು ಕೈ ಮತ್ತು ಕಾಲುಗಳ ಚರ್ಮದ ಆರೈಕೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ. ಗ್ಲಿಸರಿನ್ ಮಾಯಿಶ್ಚರೈಸರ್ ಚರ್ಮದ ಕಾಳಜಿಗೆ ಪ್ರಯೋಜನ ನೀಡುತ್ತದೆ. ಇದು ಉತ್ತಮ ಸ್ಕಿನ್ ಕಂಡಿಷನರ್ ಆಗಿ ಕೆಲಸ ಮಾಡುತ್ತದೆ. ಮತ್ತು ಚರ್ಮದಲ್ಲಿ ತೇವಾಂಶ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಮುಂದೆ ಓದಿ ...
  • Share this:

    ಹವಾಮಾನದಲ್ಲಿ (Weather) ಆಗುವ ಎಲ್ಲಾ ರೀತಿಯ ಬದಲಾವಣೆಗಳು (Changes) ಮೊದಲು ಪರಿಣಾಮ (Effects) ಬೀರೋದೇ ವ್ಯಕ್ತಿಯ ಚರ್ಮದ (Skin) ಮೇಲೆ. ಆರೋಗ್ಯಕರ (Health) ಅಂಶಗಳಲ್ಲಿ ಚರ್ಮವೂ ಸಹ ಒಂದು. ಹಾಗಾಗಿ ಚರ್ಮದ ಆರೋಗ್ಯ ಕಾಪಾಡುವುದು ತುಂಬಾ ಮುಖ್ಯ. ಮಳೆಗಾಲ, ಬೇಸಿಗೆ ಹಾಗೂ ಚಳಿಗಾಲ ಯಾವುದೇ ಇರಲಿ ಎಲ್ಲವೂ ಚರ್ಮದ ಮೇಲೆ ಪರಿಣಾಮ ಬೀರುತ್ತವೆ. ಹವಾಮಾನದಲ್ಲಿನ ಬದಲಾವಣೆ ಆದ ಕೆಲ ದಿನಗಳಲ್ಲೇ ಅದರ ಪರಿಣಾಮ ನಿಮ್ಮ ಚರ್ಮದ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಒಣ ಚರ್ಮ, ನಿರ್ಜೀವ ಚರ್ಮ, ಒರಟಾದ ಅಂಗೈಗಳಿಂದ ಜನರು ಹೆಚ್ಚು ತೊಂದರೆ ಅನುಭವಿಸುತ್ತಾರೆ. ಹೆಚ್ಚಿನ ಜನರು ಮುಖದ ಚರ್ಮದ ಬಗ್ಗೆ ಕಾಳಜಿ ವಹಿಸುತ್ತಾರೆ.


    ಹೀಗೆ ಮುಖದ ಬಗ್ಗೆ ಕಾಳಜಿ ವಹಿಸುವ ಜನರು ಕೈ ಮತ್ತು ಕಾಲುಗಳ ಚರ್ಮದ ಆರೈಕೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ. ಗ್ಲಿಸರಿನ್ ಮಾಯಿಶ್ಚರೈಸರ್ ಚರ್ಮದ ಕಾಳಜಿಗೆ ಪ್ರಯೋಜನ ನೀಡುತ್ತದೆ. ಇದರ ಬಗ್ಗೆ ಇಲ್ಲಿ ನಾವು ತಿಳಿಯೋಣ.


    ಗ್ಲಿಸರಿನ್ ಮಾಯಿಶ್ಚರೈಸರ್ ಮಾಡುವುದು ಹೇಗೆ?


    ಗ್ಲಿಸರಿನ್ ಮಾಯಿಶ್ಚರೈಸರ್ ಮಾಡಲು, ಒಂದು ಚಮಚ ಗ್ಲಿಸರಿನ್, ಎರಡು ಚಮಚ ರೋಸ್ ವಾಟರ್, ಒಂದು ಚಮಚ ತೆಂಗಿನ ಎಣ್ಣೆ ಮತ್ತು ಒಂದು ಚಮಚ ಬಾದಾಮಿ ಎಣ್ಣೆ ಬೇಕು. ಬಾದಾಮಿ ಮತ್ತು ತೆಂಗಿನ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ಬಿಸಿ ಮಾಡಿ. ನಂತರ ಇನ್ನೊಂದು ಪಾತ್ರೆಗೆ ಹಾಕಿ ತಣ್ಣಗಾಗಲು ಇಡಿ.


    ಇದನ್ನೂ ಓದಿ: ಮೆಕ್ಕೆಜೋಳ ತಿಂದ್ರೆ ತೂಕ ಇಳಿಸೋದು ಬಹಳ ಸುಲಭವಂತೆ


    ಈ ಮಿಶ್ರಣದ ಉಷ್ಣತೆಯು ಸಾಮಾನ್ಯವಾದ ನಂತರ ಅದಕ್ಕೆ ರೋಸ್ ವಾಟರ್ ಮತ್ತು ಗ್ಲಿಸರಿನ್ ಅನ್ನು ಸೇರಿಸಿ. ಈಗ ಸರಳ ಹಾಗೂ ಪರಿಣಾಮಕಾರಿ ಗ್ಲಿಸರಿನ್ ಮಾಯಿಶ್ಚರೈಸರ್ ಮನೆಯಲ್ಲಿ ಸಿದ್ಧವಾಗಿದೆ. ಫ್ರಿಡ್ಜ್ನಲ್ಲಿ ಶೇಖರಿಸಿಡುವ ಮೂಲಕ ನೀವು ಅದನ್ನು ದೀರ್ಘಕಾಲದವರೆಗೆ ಕೈ ಮತ್ತು ಕಾಲುಗಳ ಆರೈಕೆಗೆ ಬಳಸಿ. ಪ್ರತಿ ರಾತ್ರಿ ಇದರಿಂದ ತನ್ನ ಕೈಗಳಿಗೆ ಮಸಾಜ್ ಮಾಡಿ.


    ಗ್ಲಿಸರಿನ್ ಮಾಯಿಶ್ಚರೈಸರ್ ಪ್ರಯೋಜನಗಳು


    ಆದರೆ ಮನೆಯಲ್ಲಿ ತಯಾರಿಸಿದ ಗ್ಲಿಸರಿನ್ ಮಾಯಿಶ್ಚರೈಸರ್ ನಿಜವಾಗಿ ಪ್ರಯೋಜನಕಾರಿಯೇ? ಇದರ ಬಗ್ಗೆ ಸೆಲೆಬ್ರಿಟಿ ಕಾಸ್ಮೆಟಾಲಜಿಸ್ಟ್ ಡಾ. ಮೋನಿಕಾ ಕಪೂರ್ ಅವರು ಹೀಗೆ ಹೇಳ್ತಾರೆ. ಚರ್ಮಕ್ಕೆ ಗ್ಲಿಸರಿನ್ ಮಾಯಿಶ್ಚರೈಸರ್ ಅದ್ಭುತ ಪ್ರಯೋಜನದ ಬಗ್ಗೆ ಅವರು ಹೇಳಿದ್ದಾರೆ.


    ಡಾ. ಕಪೂರ್ ಹೇಳುವ ಪ್ರಕಾರ, ಗ್ಲಿಸರಿನ್ ಸಾಬೂನು ತಯಾರಿಕೆ ಪ್ರಕ್ರಿಯೆಯ ಉಪ-ಉತ್ಪನ್ನ. ಈ ಸಕ್ಕರೆ ಮತ್ತು ಆಲ್ಕೋಹಾಲ್, ಸಸ್ಯ ಮತ್ತು ಪ್ರಾಣಿ ಮೂಲಗಳಿಂದ ಪಡೆದ ಸಾವಯವ ಸಂಯುಕ್ತವಾಗಿದೆ. ಇದನ್ನು ಸೌಂದರ್ಯ ಮತ್ತು ಔಷಧೀಯ ಉದ್ಯಮಗಳಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ.



    ಗ್ಲಿಸರಿನ್ ವಿಷಕಾರಿಯಲ್ಲದ, ವಾಸನೆಯಿಲ್ಲದ ಮತ್ತು ಬಣ್ಣರಹಿತ, ನೈಸರ್ಗಿಕ ಮಾಯಿಶ್ಚರೈಸರ್ ಆಗಿದೆ. ಇದು ಉತ್ತಮ ಸ್ಕಿನ್ ಕಂಡಿಷನರ್ ಆಗಿ ಕೆಲಸ ಮಾಡುತ್ತದೆ. ಮತ್ತು ಚರ್ಮದಲ್ಲಿ ತೇವಾಂಶ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.


    ಗ್ಲಿಸರಿನ್ ನಿಮ್ಮ ಚರ್ಮಕ್ಕೆ ಹೇಗೆ ಪ್ರಯೋಜನಕಾರಿ?


    ಚರ್ಮವನ್ನು ತೇವ ಮಾಡುತ್ತದೆ


    ಗ್ಲಿಸರಿನ್‌ ನಿಂದ ತಯಾರಿಸಿದ ಕ್ರೀಮ್ ಅನ್ವಯಿಸುವುದು ಕೈಗಳನ್ನು ತೇವಗೊಳಿಸುತ್ತದೆ. ಈ ಕ್ರೀಮ್ ಅನ್ನು ಪ್ರತಿದಿನ ಬಳಕೆ ಮಾಡುವುದರಿಂದ ನಿಮ್ಮ ಕೈಗಳು ಗಾಳಿಯಿಂದ ತೇವಾಂಶ ಹೀರಿಕೊಳ್ಳಲು ಅನುವು ಮಾಡಿ ಕೊಡುತ್ತದೆ.


    ಮಾಯಿಶ್ಚರೈಸರ್ ಅನ್ನು ಹೀರಿಕೊಂಡ ನಂತರ ಒಣ ಚರ್ಮ ಮತ್ತು ಕೈಗಳು ಸಾಫ್ಟ್ ಆಗುತ್ತವೆ. ಗ್ಲಿಸರಿನ್ ಕ್ರೀಮ್ ಹಚ್ಚಿದ ನಂತರ ಸ್ವಲ್ಪ ಸಮಯದ ನಂತರ ನಿಮ್ಮ ಕೈಗಳು ಮೃದು ಆಗುತ್ತವುದನ್ನು ನೀವು ಕಾಣಬಹುದು.


    ಚಿಕಿತ್ಸೆ ಪರಿಣಾಮ


    ಗ್ಲಿಸರಿನ್ ಅನೇಕ ಗುಣ ಹೊಂದಿದೆ. ಇದು ಜೀವಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರಿಂದ ನಿಮಗೆ ತ್ವಚೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ ಅದು ದೂರ ಆಗುತ್ತದೆ. ಗ್ಲಿಸರಿನ್ ಕ್ರೀಮ್ ಅನ್ನು ಪ್ರತಿದಿನ ಬಳಕೆ ಮಾಡುವುದರಿಂದ ಸೋಂಕಿತ ಅಂಗಾಂಶಗಳ ಬೆಳವಣಿಗೆ ನಿಲ್ಲಿಸುತ್ತದೆ.


    ಇದನ್ನೂ ಓದಿ: ದಿನಕ್ಕೊಂದು ಎಸಳು ಬೆಳ್ಳುಳ್ಳಿ ತಿಂದ್ರೆ ಸಾಕು ಲಿವರ್ ಆರೋಗ್ಯ ಚೆನ್ನಾಗಿರುತ್ತೆ


    ಹಾನಿಕಾರಕ ರಾಸಾಯನಿಕಗಳಿಂದ ಚರ್ಮ ರಕ್ಷಿಸುತ್ತದೆ


    ಗ್ಲಿಸರಿನ್ ಮಾಯಿಶ್ಚರೈಸರ್ ಕ್ರೀಮ್‌ ನಲ್ಲಿರುವ ತೆಂಗಿನ ಎಣ್ಣೆಯಿಂದಾಗಿ ಚರ್ಮದ ಹೊರ ಚರ್ಮದ ಪದರವು ದಪ್ಪವಾಗುತ್ತದೆ. ಇದು ರಾಸಾಯನಿಕಗಳು ಚರ್ಮ ತಲುಪುವುದಿಲ್ಲ. ಮತ್ತು ಕೈಗಳ ಚರ್ಮವು ಆರೋಗ್ಯವಾಗುತ್ತದೆ.

    Published by:renukadariyannavar
    First published: