ಮಳೆಗಾಲದ ಆಹಾರ ಕ್ರಮ ಹೇಗಿರಬೇಕು..? ಉತ್ತಮ ಆರೋಗ್ಯಕ್ಕೆ ಇಲ್ಲಿದೆ ವೈದ್ಯರ ಸಲಹೆ

news18
Updated:June 28, 2018, 3:40 PM IST
ಮಳೆಗಾಲದ ಆಹಾರ ಕ್ರಮ ಹೇಗಿರಬೇಕು..? ಉತ್ತಮ ಆರೋಗ್ಯಕ್ಕೆ ಇಲ್ಲಿದೆ ವೈದ್ಯರ ಸಲಹೆ
news18
Updated: June 28, 2018, 3:40 PM IST
-ನ್ಯೂಸ್ 18 ಕನ್ನಡ

ಮಳೆಗಾಲ ಆರಂಭವಾಗುತ್ತಿದ್ದಂತೆ ಜೀವನ ಶೈಲಿಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಬೇಕಾಗುತ್ತದೆ. ಅದರಲ್ಲೂ ತಿನ್ನುವ ಆಹಾರಗಳ ಬಗ್ಗೆ ಕಾಳಜಿ ವಹಿಸುವುದು ಅತೀ ಮುಖ್ಯ. ಮಾನ್ಸೂನ್ ಗಾಳಿಯಿಂದ ಸೂಕ್ಷ್ಮ ಜೀವಿಗಳು ದೇಹ ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಇದರಿಂದ ಅನಾರೋಗ್ಯಕ್ಕೆ ತುತ್ತಾಗುವ ಸಂಭವ ಕೂಡ ಹೆಚ್ಚಿರುತ್ತದೆ. ಹೀಗಾಗಿ ಮಳೆಗಾಲದಲ್ಲಿ ಸಾಧ್ಯವಾದಷ್ಟು ಬೆಚ್ಚಗೆಯ ಪೌಷ್ಠಿಕ ಆಹಾರವನ್ನು ಆರಿಸಿಕೊಳ್ಳುವುದು ಉತ್ತಮ ಎನ್ನುತ್ತಾರೆ ಫಿಟ್​ನೆಸ್​ ಡಾಕ್ಟರ್ ರೀಮಾ ನಾರಂಗ್. ಯಾವ ಆಹಾರವನ್ನು ಮಳೆಗಾಲದಲ್ಲಿ ಸೇವಿಸಿದರೆ ಉತ್ತಮ ಎಂಬುದಕ್ಕೆ ಕೆಲ ಸಲಹೆಗಳನ್ನು ಅವರು ನೀಡಿದ್ದಾರೆ.

* ಸೂಪ್ : ಮಳೆಗಾಲದಲ್ಲಿ ಚಾಟ್ಸ್​ ಫುಡ್​ ಬದಲಾಗಿ ಸೂಪ್ ಸೇವಿಸುವುದು ಉತ್ತಮ. ಸೂಪ್​ ಕುಡಿಯುವುದರಿಂದ ಜೀರ್ಣಕ್ರಿಯೆ ವ್ಯವಸ್ಥೆ ಉತ್ತಮಗೊಳ್ಳುತ್ತದೆ. ಇದರಲ್ಲಿ ಶುಂಠಿ, ಬೆಳ್ಳುಳ್ಳಿ ಮತ್ತು ಕರಿ ಮೆಣಸು ಮಸಾಲೆ ಸೇರಿಸಿದರೆ ರುಚಿ ಹೆಚ್ಚುವುದಲ್ಲದೆ, ಆರೋಗ್ಯಕ್ಕೂ ಒಳ್ಳೆದು. ದೇಹದ ನಿರ್ಜಲೀಕರಣ ಕ್ರಿಯೆಯನ್ನು ಹೆಚ್ಚಿಸುವ ಸೂಪ್​ ದೇಹಕ್ಕೆ ಬೇಕಾಗುವ ಪೌಷ್ಠಿಕಾಂಶವನ್ನು ಒದಗಿಸುತ್ತದೆ. ಮಳೆಗಾಲದಲ್ಲಿ ಈ ಬೆಚ್ಚನೆಯ ಆಹಾರವನ್ನು ಸೇವಿಸುವುದರಿಂದ ಆಯಾಸ ಮತ್ತು ವಾಕರಿಕೆಯನ್ನು ದೂರ ಮಾಡಬಹುದಾಗಿದೆ.

* ಹಬೆಯಿಂದ ಬೇಯಿಸಿದ ತರಕಾರಿ : ಹಬೆಯ ಮೂಲಕ ಬೇಯಿಸಿದ ತರಕಾರಿಗಳು ಮಳೆಗಾಲದ ಅತ್ಯುತ್ತಮ ಆಹಾರವಾಗಿದೆ. ಸಾಮಾನ್ಯವಾಗಿ ನೀರಿನಲ್ಲಿ ತರಕಾರಿಗಳನ್ನು ಬೇಯಿಸಲಾಗುತ್ತದೆ. ಆದರೆ ನೀರಿನಲ್ಲಿ ತರಕಾರಿಗಳು ಬೇಯಿಸಿದರೆ ವಿಟಮಿನ್ ಸಿ ಪ್ರಮಾಣ ಕಡಿಮೆಯಾಗುತ್ತದೆ. ಸ್ಟೀಮಿಂಗ್ ಪಾತ್ರೆಯಲ್ಲಿ ತರಕಾರಿ ಬೇಯಿಸಿದರೆ ಅದರಲ್ಲಿರುವ ಸೂಕ್ಷ್ಮಾಣು ಜೀವಿಗಳು ಸಾಯುತ್ತದೆ. ಹೀಗಾಗಿ ಮಳೆಗಾಲದಲ್ಲಿ ಕೋಸುಗಡ್ಡೆ, ಅಣಬೆಗಳು, ಕ್ಯಾರೆಟ್ ಮತ್ತು ಟೊಮ್ಯಾಟೊಗಳನ್ನು ಆವಿಯಿಂದ ಬೇಯಿಸಿ ತಿನ್ನುವುದು ಉತ್ತಮ.

* ಸ್ಮೂಥಿಸ್: ಮಳೆಗಾಲ ಆರಂಭವಾಗುತ್ತಿದ್ದಂತೆ ಜ್ಯೂಸ್​ ಕುಡಿಯುವುದನ್ನು ಹೆಚ್ಚಿನವರು ನಿಲ್ಲಿಸುತ್ತಾರೆ. ಇದರ ಬದಲಾಗಿ ದಾಹವಾದಾಗ ಸ್ಮೂಥಿಸ್ ತಯಾರಿಸಿ ಕುಡಿಯುವುದು ಉತ್ತಮ ಎನ್ನುತ್ತಾರೆ ಫಿಟ್​ನೆಸ್ ತಜ್ಞರು. ಹೆಚ್ಚಿನ ಪೌಷ್ಠಿಕಾಂಶವಿರುವ ಸೌತೆಕಾಯಿ, ಕಿತ್ತಲೆ, ಮಾವಿನಹಣ್ಣು, ಟೊಮಾಟೊ ಮುಂತಾದ ಜೈವಿಕ ಆಹಾರಗಳನ್ನು ಬಳಸಿ ಪಾನೀಯ ತಯಾರಿಸಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಈ ಪಾನೀಯಕ್ಕೆ ಕಾಮ ಕಸ್ತೂರಿ ಅಥವಾ ಚಿಯಾ ಬೀಜಗಳನ್ನು ಸೇರಿಸುವುದರಿಂದ ದೇಹ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು.
First published:June 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ