Onion ತಿಂದ್ರೆ ಆರೋಗ್ಯಕ್ಕೆ ಒಳ್ಳೆಯದಂತೆ! ಉಳ್ಳಾಗಡ್ಡಿಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಈರುಳ್ಳಿ ಸೇವನೆಯು ಅನೇಕ ಮಾರಣಾಂತಿಕ ರೋಗಗಳನ್ನು ದೂರವಿಡುವುದರ ಜೊತೆಗೆ ನಮ್ಮ ದೇಹವನ್ನು ಪೋಷಿಸಲು ಸಹಾಯ ಮಾಡುವ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಬನ್ನಿ ಈರುಳ್ಳಿ ಸೇವನೆಯು ನಮ್ಮ ಆರೋಗ್ಯಕ್ಕೆ ಯಾವ ರೀತಿಯ ಪ್ರಯೋಜನಗಳನ್ನು ಒದಗಿಸುತ್ತದೆ ಅಂತ ನೋಡೋಣ.

ಈರುಳ್ಳಿ

ಈರುಳ್ಳಿ

  • Share this:
ಕೆಲವೊಬ್ಬರು ಬೆಳಿಗ್ಗೆ ಉಪಾಹಾರ (Breakfast) ಏನೇ ಮಾಡಿದರೂ ಅದರಲ್ಲಿ ಸ್ವಲ್ಪ ಈರುಳ್ಳಿ ಹಾಕಿದರೇನೇ ಅವರ ಮನಸ್ಸಿಗೆ ಒಂದು ರೀತಿಯ ಸಮಾಧಾನ ಅಂತ ಹೇಳಬಹುದು. ಇನ್ನೂ ಕೆಲವರು ಊಟದ (Lunch) ಜೊತೆಗೆ ಹಸಿ ಈರುಳ್ಳಿಯನ್ನು (Onion) ತಿನ್ನುವುದನ್ನು ಸಹ ನಾವು ನೋಡಿರುತ್ತೇವೆ. ಹೀಗೆ ಈರುಳ್ಳಿ ತಿನ್ನುವುದರಿಂದ ಏನೆಲ್ಲಾ ಆರೋಗ್ಯಕರ ಪ್ರಯೋಜನಗಳು ಇವೆ ಗೊತ್ತೇ? ಈರುಳ್ಳಿಯನ್ನು ನೀವು ಅನೇಕ ರೂಪಗಳಲ್ಲಿ ತಿನ್ನಬಹುದು. ಬೆಳಿಗ್ಗೆ ಮಾಡಿಕೊಳ್ಳುವ ಉಪಾಹಾರದ ಒಗ್ಗರಣೆಯಲ್ಲಿ ಹಾಕಿಕೊಳ್ಳಬಹುದು ಮತ್ತು ಮಧ್ಯಾಹ್ನ (Afternoon) ಮತ್ತು ರಾತ್ರಿ (Night) ಮಾಡಿಕೊಳ್ಳುವ ಪಲ್ಯ ಮತ್ತು ಸಾರಿನಲ್ಲಿಯೂ ಸಹ ಹಾಕಿಕೊಳ್ಳಬಹುದು. ಹೀಗೆ ಒಟ್ಟಿನಲ್ಲಿ ಈರುಳ್ಳಿ ನಮ್ಮ ಹೊಟ್ಟೆಗೆ ಸೇರಿದರೆ ಒಳ್ಳೆಯದಂತೆ.

ಈರುಳ್ಳಿ ಸೇವನೆಯು ಅನೇಕ ಮಾರಣಾಂತಿಕ ರೋಗಗಳನ್ನು ದೂರವಿಡುವುದರ ಜೊತೆಗೆ ನಮ್ಮ ದೇಹವನ್ನು ಪೋಷಿಸಲು ಸಹಾಯ ಮಾಡುವ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಬನ್ನಿ ಈರುಳ್ಳಿ ಸೇವನೆಯು ನಮ್ಮ ಆರೋಗ್ಯಕ್ಕೆ ಯಾವ ರೀತಿಯ ಪ್ರಯೋಜನಗಳನ್ನು ಒದಗಿಸುತ್ತದೆ ಅಂತ ನೋಡೋಣ.

ಈರುಳ್ಳಿಯ ಆರೋಗ್ಯಕರ ಪ್ರಯೋಜನಗಳು ಹೀಗಿವೆ:

1. ಈರುಳ್ಳಿ ಸೇವನೆಯು ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ
ನಿಯಮಿತವಾಗಿ ನೀವು ಈರುಳ್ಳಿಯನ್ನು ತಿನ್ನುವುದು ನಿಮ್ಮ ಹೃದಯದ ಆರೋಗ್ಯವನ್ನು ಚೆನ್ನಾಗಿ ಇರಿಸುತ್ತದೆ. ಈರುಳ್ಳಿಯಲ್ಲಿರುವ ಗಂಧಕ ಸಂಯುಕ್ತಗಳು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಗಟ್ಟಲು ಸಹ ಸಹಾಯ ಮಾಡುತ್ತದೆ. ಇಷ್ಟೇ ಅಲ್ಲದೆ ಈರುಳ್ಳಿಯ ಸೇವನೆಯು ಹೃದಯ ಕಾಯಿಲೆಗಳು ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Hair Fall: ತಲೆಗೂದಲು ಹೆಚ್ಚು ಉದುರುತ್ತಿದ್ಯಾ- ತಡೆಯೋಕೆ ಇಲ್ಲಿದೆ ನಿಮಗೆ ಸಿಂಪಲ್ ಟಿಪ್ಸ್

2. ಈರುಳ್ಳಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ
ಈರುಳ್ಳಿಯಲ್ಲಿರುವ ಅನೇಕ ಸಂಯುಕ್ತಗಳು ಕ್ಯಾನ್ಸರ್ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುವ ರಾಸಾಯನಿಕಗಳನ್ನು ಹೊಂದಿರುತ್ತವೆ. ಈರುಳ್ಳಿ ಕ್ವೆರ್ಸೆಟಿನ್ ಎಂಬ ಪೋಷಕಾಂಶದಿಂದ ತುಂಬಿರುತ್ತದೆ, ಇದು ಕ್ಯಾನ್ಸರ್ ಉಂಟು ಮಾಡುವ ಅಂಶಗಳನ್ನು ನಿಲ್ಲಿಸುತ್ತದೆ ಮತ್ತು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುತ್ತದೆ. ಶ್ವಾಸಕೋಶದ ಕ್ಯಾನ್ಸರ್ ಉಂಟಾಗುವ ಅಪಾಯವನ್ನು ಕಡಿಮೆ ಮಾಡುವ ಕ್ವೆರ್ಸೆಟಿನ್ ಸಮೃದ್ಧ ಆಹಾರವನ್ನು ಆರೋಗ್ಯ ತಜ್ಞರು ಸಹ ಅನುಮೋದಿಸುತ್ತಾರೆ.

3. ಈರುಳ್ಳಿ ಮಧುಮೇಹವನ್ನು ನಿಯಂತ್ರಿಸುತ್ತದೆ
ಸಾವಯವ ಗಂಧಕ ಮತ್ತು ಕ್ವೆರ್ಸೆಟಿನ್ ಸಂಯುಕ್ತಗಳೆರಡೂ ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಆ ಮೂಲಕ ಟೈಪ್ 2 ಮಧುಮೇಹದ ಅಪಾಯವನ್ನು ಸಹ ಇದು ಕಡಿಮೆ ಮಾಡುತ್ತದೆ ಎಂದು ಹೇಳಬಹುದು.



4. ಈರುಳ್ಳಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಈರುಳ್ಳಿಯಲ್ಲಿ ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿದ್ದು, ಇದು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಫ್ರೀ ರಾಡಿಕಲ್ ಗಳಿಂದ ಉಂಟಾಗುವ ಆಕ್ಸಿಡೇಟಿವ್ ಒತ್ತಡದ ಅಪಾಯವನ್ನು ಸಹ ಇದು ಕಡಿಮೆ ಮಾಡುತ್ತದೆ.

ಇದನ್ನೂ ಓದಿ:  Common Heart Disease: ಸಾಮಾನ್ಯವಾಗಿ ಬರುವ ಹೃದಯ ಖಾಯಿಲೆಗಳಿವು; ಮಿಸ್ ಮಾಡ್ದೇ ಓದಿ

5. ಅಲ್ಝೈಮರ್ ಮತ್ತು ಬುದ್ಧಿಮಾಂದ್ಯತೆ ಅಪಾಯ ಕಡಿಮೆ ಮಾಡುತ್ತದೆ
ಈರುಳ್ಳಿ ಸೇವನೆ ಅಲ್ಝೈಮರ್ ಮತ್ತು ಬುದ್ಧಿಮಾಂದ್ಯತೆಯಂತಹ ರೋಗಗಳ ಅಪಾಯ ಕಡಿಮೆ ಮಾಡುತ್ತದೆ ಮತ್ತು ಉತ್ಕರ್ಷಣ ನಿರೋಧಕಗಳು ಸಸ್ಯಗಳಿಂದ ಬರುವ ಫ್ಲೇವನಾಯ್ಡ್ ಗಳು ಎಂಬ ಸಂಯುಕ್ತವನ್ನು ಈರುಳ್ಳಿಗಳು ಒಳಗೊಂಡಿರುತ್ತವೆ.

6. ಈರುಳ್ಳಿ ಮೂಳೆ ಸಾಂದ್ರತೆಯನ್ನು ಹೆಚ್ಚಿಸುತ್ತದೆ
ಈರುಳ್ಳಿ ಮೂಳೆಯ ಆರೋಗ್ಯವನ್ನು ಬಲಪಡಿಸಲು ಮತ್ತು ಹೆಚ್ಚಿಸಲು ಸಹಾಯ ಮಾಡುತ್ತದೆ. ಋತುಬಂಧದ ನಂತರದ ಮಹಿಳೆಯರಿಗೆ ಅವರ ಮೂಳೆ ಖನಿಜ ಸಾಂದ್ರತೆ ಮತ್ತು ಉತ್ಕರ್ಷಣ ನಿರೋಧಕ ಚಟುವಟಿಕೆಯನ್ನು ಸುಧಾರಿಸಲು ವೈದ್ಯರು ಈರುಳ್ಳಿ ಸಮೃದ್ಧ ಆಹಾರವನ್ನು ಶಿಫಾರಸು ಮಾಡುತ್ತಾರೆ. ಹೀಗೆ ಈರುಳ್ಳಿ ನಮಗೆ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ.
Published by:Ashwini Prabhu
First published: