ಉದ್ದವಾದ, ದಟ್ಟವಾದ ಕೂದಲು (Hair Care) ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ.. ಆದ್ರೆ ಇಂದಿನ ಕಾಲದಲ್ಲಿ ಯಾರನ್ನು ಕೇಳಿದ್ರೂ ಕೂದಲಿನ ಸಮಸ್ಯೆ (Hair Problem) ಅಂತಾರೆ. ಕೂದಲು ಉದುರುವುದು, ತೆಳ್ಳಗಾದ ಕೂದಲು, ಕೂದಲಿನ ಬೆಳವಣಿಗೆ ಕುಂಠಿತವಾಗುವುದು, ಅಕಾಲಿಕವಾಗಿ ಕೂದಲು ಬೆಳ್ಳಗಾಗುವುದು, ತಲೆ ಹೊಟ್ಟು, ನೆತ್ತಿಯಲ್ಲಿ ತುರಿಕೆ ಹೀಗೆ ಕೂದಲಿನ ಸಮಸ್ಯೆ ಹೇಳುತ್ತಲೇ ಹೋಗುತ್ತಾರೆ. ಈ ಸಮಸ್ಯೆಗಳಿಗೆಲ್ಲ ಮನೆಯಲ್ಲೇ (home Remedies) ಪರಿಹಾರವಿದೆ. ನಮ್ಮ ಮನೆಯಲ್ಲೇ ಇರುವ ಸಾಮಗ್ರಿಗಳಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ನಿಮಗೆಲ್ಲ ಗೊತ್ತಿರೋ ಹಾಗೆ ಕೂದಲಿಗೆ ಈರುಳ್ಳಿ (onion) ತುಂಬಾನೇ ಒಳ್ಳೆಯದು.
ಅದನ್ನು ನಿಯಮಿತವಾಗಿ ಹಚ್ಚುತ್ತ ಬಂದಲ್ಲಿ ಸಾಕಷ್ಟು ಕೂದಲಿನ ಸಮಸ್ಯೆಗಳು ಬಗೆಹರಿಯುತ್ತವೆ. ಈರುಳ್ಳಿ ರಸವನ್ನು ತೆಗೆದು ಹಾಗೆಯೇ ಕೂದಲಿಗೆ ಹಚ್ಚುವುದು ಒಂದು ವಿಧಾನವಾದರೆ ಅದರ ಎಣ್ಣೆಯನ್ನು ತಯಾರಿಸಿ ಕೂದಲಿಗೆ ಹಚ್ಚಿಕೊಳ್ಳುವುದು ಇನ್ನೊಂದು ವಿಧಾನ.
ಈರುಳ್ಳಿ ಎಣ್ಣೆಯ ಪ್ರಯೋಜನಗಳು
ಈರುಳ್ಳಿ ಕೂದಲಿಗೆ ಒಳ್ಳೆಯದು ಅಂತ ಹೇಳ್ತಾರೆ. ಅದರಲ್ಲೂ ಈರುಳ್ಳಿ ಎಣ್ಣೆಯಿಂದ ಅನೇಕ ಪ್ರಯೋಜನಗಳಿವೆ. ಇದು ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ ಅಲ್ಲದೆ, ಕೂದಲಿನ ಬೆಳವಣಿಗೆ, ತಲೆಹೊಟ್ಟು ನಿವಾರಣೆ, ನೆತ್ತಿಯಲ್ಲಿ ತುರಿಕೆ ಸಮಸ್ಯೆ ಇದ್ದರೆ ಅದನ್ನೂ ಈರುಳ್ಳಿ ಎಣ್ಣೆ ನಿವಾರಿಸುತ್ತದೆ.
ಈರುಳ್ಳಿ ಎಣ್ಣೆ ತಯಾರಿಸುವುದು ಹೇಗೆ?
ಬೇಕಾಗುವ ಸಾಮಗ್ರಿಗಳು
2 ಈರುಳ್ಳಿ
2 ಚಮಚ ಮೆಂತೆ
2 ಚಮಚ ಕಪ್ಪು ಜೀರಿಗೆ
200ml ಕೊಬ್ಬರಿ ಎಣ್ಣೆ
ಮಾಡುವ ವಿಧಾನ: ಒಂದು ಮಿಕ್ಸರ್ ಜಾರ್ ಗೆ ಮೆಂತೆ ಕಾಳು ಹಾಗೂ ಕಪ್ಪು ಜೀರಿಗೆಯನ್ನು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಇದಾದ ಮೇಲೆ ಈರುಳ್ಳಿಯನ್ನು ಸಣ್ಣಗೆ ಕಟ್ ಮಾಡಿ ಅದನ್ನೂ ಆ ಜಾರಿಗೆ ಹಾಕಿ ರುಬ್ಬಿಕೊಳ್ಳಿ. ಮೇಲೆ ಹೇಳಲಾದ ಕೊಬ್ಬರಿ ಎಣ್ಣೆಯಲ್ಲಿ ಸ್ವಲ್ಪ ಎಣ್ಣೆ (50ml) ಇಟ್ಟುಕೊಂಡು ಮಿಕ್ಕ ಎಣ್ಣೆಯನ್ನು ಈ ಮಿಶ್ರಣಕ್ಕೇ ಮತ್ತೆ ಸೇರಿಸಿ ಮತ್ತೆ ರುಬ್ಬಿ.
ಇದನ್ನೂ ಓದಿ: ಕಡಿಮೆ ಖರ್ಚಲ್ಲಿ ಕ್ರಿಸ್ಮಸ್ ಟ್ರೀ ಮಾಡೋದು ಹೇಗೆ? ಹೀಗಿರಲಿ ನಿಮ್ಮ ಮನೆ ಅಲಂಕಾರ
ನಂತರದಲ್ಲಿ ಒಂದು ದಪ್ಪ ತಳದ ಕಡಾಯಿ ತೆಗೆದುಕೊಂಡು ಗ್ಯಾಸ್ ಮೇಲಿಡಿ. ಅದಕ್ಕೆ ಮಿಕ್ಕ ಕೊಬ್ಬರಿ ಎಣ್ಣೆಯನ್ನು ಹಾಕಿ ಬಿಸಿಯಾಗಲು ಬಿಡಿ. ನಂತರ ರುಬ್ಬಿಕೊಂಡ ಈರುಳ್ಳಿ ಪೇಸ್ಟ್ ಅನ್ನು ಹಾಕಿ ತಿರುವುತ್ತಿರಿ. ಎಣ್ಣೆ ಚೆನ್ನಾಗಿ ಕಾಯುತ್ತದೆ ಅಲ್ಲದೇ ನೊರೆ ಬರಲು ಆರಂಭವಾಗುತ್ತದೆ.
ಬಣ್ಣ ಬದಲಾಗುವವರೆಗೂ ನಿಧಾನವಾಗಿ ತಿರುವುತ್ತಿರಿ. ಎಣ್ಣೆಯ ಬೂದು ಬಣ್ಣದಿಂದ ಕಪ್ಪು ಬಣ್ಣವಾಗುವವರೆಗೂ ಕಾಯಿಸಬೇಕು. ನೊರೆಯೆಲ್ಲ ಹೋಗಿ ಎಣ್ಣೆ ತೇಲಲು ಶುರುವಾಯಿತೆಂದರೆ ನಿಮ್ಮ ಆನಿಯನ್ ಆಯಿಲ್ ರೆಡಿಯಾಯ್ತು ಅಂತ ಅರ್ಥ. ಈ ಎಣ್ಣೆಯು ತಣಿದ ಮೇಲೆ ನೀವು ಇದನ್ನು ಬಾಟಲ್ ಗೋ ಅಥವಾ ಬೌಲ್ಗೋ ಹಾಕಿಟ್ಟುಕೊಂಡು ಬಳಸಬಹುದು.
ಈರುಳ್ಳಿ ಎಣ್ಣೆಯನ್ನು ಹೇಗೆ ಬಳಸುವುದು?
ಹಾಗಿದ್ರೆ ಈ ಈರುಳ್ಳಿ ಎಣ್ಣೆಯನ್ನು ಬಳಸುವುದು ಹೇಗೆ ಅನ್ನೋ ಪ್ರಶ್ನೆ ಬರುವುದು ಸಹಜ. ಇದನ್ನು ವಾರಕ್ಕೆರಡು ಬಾರಿ ಕೂದಲಿಗೆ ಹಚ್ಚಿಕೊಳ್ಳಿ. ನೆತ್ತಿಗೆ ಹಚ್ಚಿ ಮಸಾಜ್ ಮಾಡಿಕೊಳ್ಳಿ.
2-3 ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ ಮೈಲ್ಡ್ ಶಾಂಪೂವಿನ ಜೊತೆಗೆ ಉಗುರುಬೆಚ್ಚಗಿನ ನೀರಿನಲ್ಲಿ ನಿಮ್ಮ ಕೂದಲನ್ನು ತೊಳೆದುಕೊಳ್ಳಿ.
ಒಟ್ಟಾರೆ ಕೂದಲಿನ ಸಮಸ್ಯೆಗಳಿಗೆ ಈರುಳ್ಳಿ ಒಂದೊಳ್ಳೆಯ ಪರಿಹಾರ ಅನ್ನೋದು ಮಾತ್ರ ನಿಜ. ಅನೇಕರಿಗೆ ಈರುಳ್ಳಿ ಎಣ್ಣೆ ಬಳಸೋದ್ರಿಂದ ಉದುರುವ ಕೂದಲಿನ ಸಮಸ್ಯೆಗೆ ಮುಕ್ತಿ ಸಿಕ್ಕಿದೆ.
ಇದನ್ನೂ ಓದಿ: ಕೇವಲ ಈ 5 ಟಿಪ್ಸ್ ಫಾಲೋ ಮಾಡಿದ್ರೆ ಉದ್ದ ಕೂದಲು ನಿಮ್ಮದಾಗುತ್ತೆ
ಬೇರೆ ಬೇರೆ ರೀತಿಯ ಕೂದಲಿನ ಎಣ್ಣೆಗಾಗಿ ಎಷ್ಟೆಷ್ಟೋ ಹಣವನ್ನು ಖರ್ಚು ಮಾಡುತ್ತೇವೆ. ಅದರ ಬದಲು ಮನೆಯಲ್ಲೇ ಇರುವ ಪದಾರ್ಥಗಳಿಂದ ಆರಾಮಾಗಿ ಮಾಡಬಹುದಾದ ಈರುಳ್ಳಿ ಎಣ್ಣೆಯನ್ನು ನೀವೂ ಕೂಡ ಟ್ರೈ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ