Onion And Hair Care: ಕೂದಲು, ನೆತ್ತಿಯ ಆರೋಗ್ಯ ಕಾಪಾಡಲು ನಟಿಯರು ಈರುಳ್ಳಿ ರಸ ಬಳಸುವ ಬಗ್ಗೆ ಹೀಗೆ ಹೇಳಿದ್ದಾರೆ!

ಈರಳ್ಳಿ ರಸವನ್ನು ಸರಿಯಾದ ವಿಧಾನದ ಮೂಲಕ ಕೂದಲ ಬುಡಕ್ಕೆ ಅನ್ವಯಿಸಿದರೆ ಇದು ಕೂದಲು ಉದುರುವಿಕೆ ತಡೆದು ನಿಲ್ಲಿಸುತ್ತದೆ. ಮತ್ತು ಹೊಸ ಕೂದಲು ಬೆಳೆಯಲು ಇದು ಅನುಕೂಲ ಮಾಡಿ ಕೊಡುತ್ತದೆ ಎಂದು ತಜ್ಞರು ಸಹ ಹೇಳಿದ್ದಾರೆ. ಈರುಳ್ಳಿ ರಸವು ಕೂದಲಿನ ಬೇರುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
     ಕೂದಲು ಮತ್ತು ನೆತ್ತಿಯ ಆರೋಗ್ಯ (Hair And Scalp Health) ಕಾಪಾಡುವುದು ತುಂಬಾ ಮುಖ್ಯ. ಯಾಕೆಂದರೆ ಇದು ಕೂದಲ ಆರೋಗ್ಯ ಮತ್ತು ಉದುರುವಿಕೆ ತಡೆಯುತ್ತದೆ. ಈರುಳ್ಳಿ ರಸವನ್ನು (Onion Juice) ನೆತ್ತಿಗೆ ಮತ್ತು ಕೂದಲ ಬುಡಕ್ಕೆ ಹಚ್ಚುವುದು ಸಾಕಷ್ಟು ಉತ್ತಮ ಫಲಿತಾಂಶ ನೀಡುತ್ತದೆ. ಹಾಗಾಗಿ ಈರುಳ್ಳಿ ರಸವನ್ನು ತಲೆಗೆ ಹಚ್ಚುವ ಬಗ್ಗೆ ತುಂಬಾ ಜನರು ನಿಮಗೆ ಸಲಹೆ ನೀಡಿರಬಹುದು. ಆದರೆ ಯಾಕೆ ಎಂಬುದು ಸರಿಯಾಗಿ ಗೊತ್ತಿರಲ್ಲ. ಗೊತ್ತಿರೋದು ಕೂದಲು ಉದುರಲ್ಲ ಅನ್ನೋದು ಮಾತ್ರ. ಈರಳ್ಳಿ ರಸವನ್ನು ಸರಿಯಾದ ವಿಧಾನದ ಮೂಲಕ ಕೂದಲ ಬುಡಕ್ಕೆ ಅನ್ವಯಿಸಿದರೆ ಇದು ಕೂದಲು ಉದುರುವಿಕೆ ತಡೆದು ನಿಲ್ಲಿಸುತ್ತದೆ.

    ಹೊಸ ಕೂದಲು ಬೆಳೆಯಲು ಈರುಳ್ಳಿ ರಸ ಹಚ್ಚಿರಿ

    ಮತ್ತು ಹೊಸ ಕೂದಲು ಬೆಳೆಯಲು ಇದು ಅನುಕೂಲ ಮಾಡಿ ಕೊಡುತ್ತದೆ ಎಂದು ತಜ್ಞರು ಸಹ ಹೇಳಿದ್ದಾರೆ. ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ. ಆದರೆ ಇದನ್ನು ನೂರು ಪ್ರತಿಶತ ಖಚಿತವಾಗಿ ಬಳಸುವ ಅನೇಕ ಬಾಲಿವುಡ್ ನಟಿಯರಿದ್ದಾರೆ. ಚಿಕ್ಕಂದಿನಿಂದ ಈಗ ವಯಸ್ಸು ನಲವತ್ತು ದಾಟಿದರೂ ಈರುಳ್ಳಿ ರಸದ ಮೇಲಿನ ಪ್ರೀತಿ ಕಡಿಮೆಯಾಗದೇ ಇರೋಕೆ ಇದರ ಪ್ರಯೋಜನಗಳೇ ಕಾರಣ ಆಗಿದೆ.

    ಬಾಲಿವುಡ್ ನಟಿ ಬಿಪಾಶಾ ಬಸು, ಟ್ವಿಂಕಲ್ ಖನ್ನಾ ಸೇರಿದಂತೆ ಅನೇಕ ನಟಿಯರು ಕೂದಲ ಆರೈಕೆಗೆ ಈರುಳ್ಳಿ ರಸ ಅನ್ವಯಿಸುತ್ತಾರೆ. ಕೋಟಿಗಟ್ಟಲೆ ಸಂಪತ್ತು ಇದ್ದರೂ ಸಹ ಕೂದಲು ಮತ್ತು ತ್ವಚೆಯ ಆರೈಕೆಗೆ ಇವರೂ ಸಹ ಮನೆಮದ್ದುಗಳನ್ನೇ ಹೆಚ್ಚು ಬಳಕೆ ಮಾಡುತ್ತಾರೆ.

    ಇದನ್ನೂ ಓದಿ: ಅಕ್ಕಿ ತೊಳೆದ ನೀರು, ಗಂಜಿ ಚೆಲ್ಲುತ್ತೀರಾ? ಚರ್ಮ ಮತ್ತು ಕೂದಲ ಸಮಸ್ಯೆಗೆ ಇದೇ ರಾಮಬಾಣವಂತೆ!

    ಈರುಳ್ಳಿ ಜ್ಯೂಸ್ ಈ ನಟಿಯರ ಕೂದಲ ರಕ್ಷಣೆಯ ದಿನಚರಿಯಿಂದ ಹೊರತಾಗಿಲ್ಲ. ಬಿಟೌನ್ ನಟಿಯರು ಈರುಳ್ಳಿ ಜ್ಯೂಸ್ ಅನ್ನು ಹೇಗೆ ಅನ್ವಯಿಸುತ್ತಾರೆ ಎಂಬುದನ್ನು ಈ ಕೆಳಗೆ ನೋಡೋಣ.

    ತರಕಾರಿಯ ರಸ ಅನ್ವಯಿಸುವುದು

    ಸಂದರ್ಶನವೊಂದರಲ್ಲಿ ನಟಿ ಟ್ವಿಂಕಲ್ ಖನ್ನಾ ತಮ್ಮ ಕೂದಲಿನ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅವರು ಈರುಳ್ಳಿ ಎಣ್ಣೆ ಅನ್ವಯಿಸುವುದಾಗಿ ಹೇಳಿದ್ದಾರೆ. ನಂತರ ಅವರು ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ನಟಿ ಟ್ವಿಂಕಲ್ ಖನ್ನಾ ಅವರು ಕೂದಲಿಗೆ ತರಕಾರಿ ರಸ ಸಹ ಅನ್ವಯಿಸುವುದಾಗಿ ಹೇಳಿದ್ದಾರೆ.

    ಟ್ವಿಂಕಲ್ ಅವರು ಈರುಳ್ಳಿ ರಸ ತೆಗೆದು ಅದನ್ನು ನೆತ್ತಿಯ ಮೇಲೆ ಹಚ್ಚಿ ಸ್ವಲ್ಪ ಸಮಯದವರೆಗೆ ಮಸಾಜ್ ಮಾಡುತ್ತಾರೆ. 20 ನಿಮಿಷಗಳ ಕಾಲ ಅದನ್ನು ಕೂದಲಿನಲ್ಲಿ ಹಾಗೇ ಬಿಟ್ಟು ನಂತರ ಕೂದಲನ್ನು ತೊಳೆಯುತ್ತಾರೆ. ಈರುಳ್ಳಿ ರಸವು ಕೂದಲಿನ ಬೇರುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದರು.

    ನಟಿ ಮಲೈಕಾ ಅರೋರಾ

    ನಟಿ ಮಲೈಕಾ ಅರೋರಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಅವರು ಈರುಳ್ಳಿ ರಸವನ್ನು ತಮ್ಮ ಕೂದಲಿಗೆ ಹೇಗೆ ಅನ್ವಯಿಸುತ್ತಾರೆ ಎಂದು ಹೇಳಿದ್ದಾರೆ. ಅವರು ಈರುಳ್ಳಿಯನ್ನು ತುರಿದು ಅದರ ರಸವನ್ನು ಶೋಧಿಸಿ ನಂತರ ತಲೆ ಹಚ್ಚುತ್ತಾರೆ. ಅವರು ಹತ್ತಿಯ ಸಹಾಯದಿಂದ ಕೂದಲಿನ ಬೇರುಗಳಿಗೆ ಈ ರಸವನ್ನು ಅನ್ವಯಿಸುತ್ತಾರೆ.

    ಸ್ವಲ್ಪ ಹೊತ್ತು ಹಾಗೇ ಬಿಟ್ಟು, ಪ್ಯಾರಾಬೆನ್ ಫ್ರೀ ಶಾಂಪೂವಿನಿಂದ ಕೂದಲನ್ನು ತೊಳೆಯುತ್ತಾರೆ. ಈರುಳ್ಳಿ ರಸ ಬಳಕೆ ಮಾಡುವುದರಿಂದ ಕೇವಲ ಒಂದು ವಾರದಲ್ಲಿ ವ್ಯತ್ಯಾಸ ಆಗುತ್ತದೆ ಎಂದು ಹೇಳಿದ್ದಾರೆ.

    ನಟಿ ಬಿಪಾಶಾ ಬಸು

    ಬೆಂಗಾಲಿ ಸುಂದರಿ ಬಿಪಾಶಾ ಬಸು ಕೂಡ ತಮ್ಮ ಸುಂದರ ಕೂದಲ ರಕ್ಷಣೆಯ ವಿಡಿಯೋ ಶೇರ್ ಮಾಡಿದ್ದಾರೆ. 2 ದೊಡ್ಡ ಈರುಳ್ಳಿ ತೆಗೆದುಕೊಂಡು ಅವುಗಳನ್ನು ರುಬ್ಬಿದ ನಂತರ, ರಸ ತೆಗೆಯುತ್ತಾರೆ. ನಂತರ ಆ ರಸವನ್ನು ತಲೆಗೆ ಅನ್ವಯಿಸುತ್ತಾರೆ. ಮತ್ತು ಕೆಲವು ನಿಮಿಷಗಳ ಕಾಲ ಮಸಾಜ್ ಮಾಡುತ್ತಾರೆ. ರಸವನ್ನು ತಲೆಯಲ್ಲಿ ಒಂದು ಗಂಟೆ ಬಿಟ್ಟು ನಂತರ ಕೂದಲನ್ನು ತೊಳೆಯುತ್ತಾರೆ.

    ಇದನ್ನೂ ಓದಿ: ಅಪರೂಪದ ಬ್ಯಾಕ್ಟೀರಿಯಾದಿಂದ ಹರಡುವ ಸೋಂಕಿನಿಂದ ಸಾವು; ಯಾವುದು ಈ ಕಾಯಿಲೆ?

    ವಾರಕ್ಕೊಮ್ಮೆ ಈರುಳ್ಳಿ ರಸ ನೆತ್ತಿಗೆ ಹಚ್ಚಿರಿ. ಇದು ಅವರ ಕೂದಲು ಉದುರುವಿಕೆ ಕಡಿಮೆ ಮಾಡುತ್ತದೆ. ಕೂದಲಿನ ಬೆಳವಣಿಗೆ ಹೆಚ್ಚಿಸುತ್ತದೆ. ಈರುಳ್ಳಿ ರಸದ ಜೊತೆ ತೆಂಗಿನೆಣ್ಣೆ, ಲ್ಯಾವೆಂಡರ್ ಆಯಿಲ್ ಮತ್ತು ಲಿಂಬೆ ಕೂಡ ಸೇರಿಸಬಹುದು.
    Published by:renukadariyannavar
    First published: