Onion Cheese Bhajis: ಚಳಿಗಾಲಕ್ಕೆ ಸಖತ್ Crispy ಆಗಿರುತ್ತೆ ಚೀಸ್ ಈರುಳ್ಳಿ ಬಜ್ಜಿ, ರೆಸಿಪಿ ಇಲ್ಲಿದೆ, ಟ್ರೈ ಮಾಡಿ

ಚೀಸ್ ಈರುಳ್ಳಿ ಬಜ್ಜಿ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಇದು ಎಲ್ಲಾ ಬಜ್ಜಿಗಳಿಗಿಂತ ತುಂಬಾ ವಿಭಿನ್ನವಾಗಿರುವುದಲ್ಲದೇ ರುಚಿಯಾಗಿಯೂ ಇರುತ್ತದೆ. ಇದನ್ನು ಟೀ, ಕಾಫಿ ಜೊತೆ ತಿಂದರೆ ಇನ್ನು ರುಚಿ. ಇದನ್ನು ಒಮ್ಮೆ ಮಾಡಿದರೆ ಮತ್ತೆ ಮತ್ತೆ ಮಾಡುವಂತೆ ನಿಮ್ಮನ್ನು ಪ್ರೇರೇಪಿಸುವುದು ಮಾತ್ರ ಸತ್ಯ

ಚೀಸ್ ಈರುಳ್ಳಿ  ಬಜ್ಜಿ

ಚೀಸ್ ಈರುಳ್ಳಿ ಬಜ್ಜಿ

  • Share this:
ಚಳಿಗಾಲ(Winter Season), ಮಳೆಗಾಲ(Rainy Season) ಬಂತೆಂದರೆ ಸಾಕು ನಾಲಿಗೆ ರುಚಿರುಚಿಯಾದ(Tasty) ಕರಿದ ಪದಾರ್ಥಗಳನ್ನು(Food) ಬಯಸುತ್ತದೆ. ಊಟ(Meal)ದ ಜೊತೆ, ಕಾಫಿ(Coffee)ಯ ಸಮಯದಲ್ಲಿ ಕರಿದ ಪದಾರ್ಥಗಳಿದ್ದರೆ ಅಬ್ಬಾ ಮನಸ್ಸಿಗೆ ಏನೋ ಖುಷಿ. ನಾಲಿಗೆಯಲ್ಲಿನ ರುಚಿಯ ಮೊಗ್ಗುಗಳಿಗೂ ತೃಪ್ತಿ. ಹೌದು ಚಳಿಗಾಲ ಅಥವಾ ಮಳೆಗಾಲದಲ್ಲಿ ಒಂದು ಕೈಯಲ್ಲಿ ಟೀ(Tea) ಅಥವಾ ಕಾಫಿ ಕಪ್(Coffee cup), ಮತ್ತೊಂದು ಕೈಯಲ್ಲಿ ನಿಮಗೆ ಇಷ್ಟವಾದ ಈರುಳ್ಳಿ ಬೊಂಡ(Onion Bonda), ಮೆಣಸಿನಕಾಯಿ ಬಜ್ಜಿ(Capsicum Bhajis), ಕಡ್ಲೆ ಬೇಳೆ ವಡೆಯೋ(Vada) ಇಟ್ಟುಕೊಂಡು ತಿನ್ನುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು ಎನಿಸಿಬಿಡುತ್ತದೆ. ಇಂತಹ ಪದಾರ್ಥಗಳನ್ನು ಕ್ಷಣಾರ್ಧದಲ್ಲಿ ತಯಾರಿಸಿಬಿಟ್ಟರೆ ಇನ್ನು ಉತ್ತಮವಾಗಿರುತ್ತದೆ.

ಆರಾಮದಾಯಕವಾದ ಬೆಚ್ಚಗಿನ ಅನುಭವ ನೀಡುವ ತ್ವರಿತ ರುಚಿಕರವಾದ ತಿಂಡಿಯನ್ನು ಯಾರು ಇಷ್ಟಪಡುವುದಿಲ್ಲ ಹೇಳಿ. ಹಾಗಾದ್ರೆ ಕ್ಷಣಾರ್ಧದಲ್ಲಿ ಮಾಡುವ ಮನೆಯವರೆಲ್ಲರಿಗೂ ಇಷ್ಟವಾಗುವ ಚೀಸ್ ಈರುಳ್ಳಿ ಬಜ್ಜಿ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಇದು ಎಲ್ಲಾ ಬಜ್ಜಿಗಳಿಗಿಂತ ತುಂಬಾ ವಿಭಿನ್ನವಾಗಿರುವುದಲ್ಲದೇ ರುಚಿಯಾಗಿಯೂ ಇರುತ್ತದೆ. ಇದನ್ನು ಟೀ, ಕಾಫಿ ಜೊತೆ ತಿಂದರೆ ಇನ್ನು ರುಚಿ. ಇದನ್ನು ಒಮ್ಮೆ ಮಾಡಿದರೆ ಮತ್ತೆ ಮತ್ತೆ ಮಾಡುವಂತೆ ನಿಮ್ಮನ್ನು ಪ್ರೇರೇಪಿಸುವುದು ಮಾತ್ರ ಸತ್ಯ.

ಇದನ್ನೂ ಓದಿ:Weight Loss Tips: ಬರೀ ವ್ಯಾಯಾಮದಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂದುಕೊಂಡಿದ್ದೀರಾ..? ಇದನ್ನೊಮ್ಮೆ ಓದಿ

ಚೀಸ್ ಈರುಳ್ಳಿ ಬಜ್ಜಿ ಮಾಡಲು ಬೇಕಾದ ಆಹಾರ ಪದಾರ್ಥಗಳು

• ಎರಡು ಟೇಬಲ್ ಚಮಚ ಕಡ್ಲೆಹಿಟ್ಟು,
• ಎರಡು ಚೀಸ್ ಕ್ಯೂಬ್ಸ್
• ಒಂದು ಮಧ್ಯಗಾತ್ರದ ಈರುಳ್ಳಿ,
• ಅರ್ಧ ಚಮಚ ಕೆಂಪು ಮೆಣಸಿನಕಾಯಿ ಪುಡಿ
• ಅರ್ಧ ಚಮಚ ಮೆಣಸಿನಕಾಳು ಪುಡಿ
• ಉಪ್ಪು ರುಚಿಗೆ ತಕ್ಕಷ್ಟು

ಚೀಸ್ ಈರುಳ್ಳಿ ಬಜ್ಜಿಗೆ ನಾವು ಸರಳವಾದ ಮನೆಯ ಪದಾರ್ಥಗಳಾದ ಕಡ್ಲೆಹಿಟ್ಟು, ಪರಿಮಳ ತರಲು ಮಸಾಲೆಗಳು, ಚೀಸ್ ಅನ್ನು ಇನ್ನಷ್ಟು ರುಚಿಕರವಾಗಿಸಲು ಮತ್ತು ಕತ್ತರಿಸಿದ ಈರುಳ್ಳಿಯನ್ನು ಬಳಸಲಾಗುತ್ತದೆ.

ಚೀಸ್ ಈರುಳ್ಳಿ ಬಜ್ಜಿ ಮಾಡುವ ವಿಧಾನ

ಈ ಪದಾರ್ಥಕ್ಕೆ ಚೀಸ್ ಮುಖ್ಯವಾದ ಅಂಶ. ಇದು ಇದಕ್ಕೆ ವಿಭಿನ್ನವಾದ ರುಚಿ ನೀಡುವುದರಿಂದ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಮೇಲೆ ಹೇಳಿದ ಅಳತೆಯ ಅನುಸಾರ ಅಥವಾ ನಿಮ್ಮ ಮನೆಯ ಮಂದಿಗೆ ಬೇಕಾಗುವಷ್ಟು ಅಳತೆ ಅನುಸರಿಸಿ ಮಾಡಬಹುದು. ಈ ಕೆಳಗಿನ ವಿಧಾನ ಅನುಸರಿಸುವ ಮೂಲಕ ನೀವು ಇಷ್ಟಪಡುವ ಗರಿಗರಿಯಾದ ಚೀಸ್ ಈರುಳ್ಳಿ ಬಜ್ಜಿ ತಯಾರಿಸಿ ಸವಿಯಬಹುದು.

ಇದನ್ನೂ ಓದಿ:Benefits of Ashwagandha: ಸರ್ವರೋಗಕ್ಕೆ ಮನೆ ಮದ್ದು ಈ ಅಶ್ವಗಂಧ; ಇದರ ಪ್ರಯೋಜನಗಳನ್ನು ಕೇಳಿದ್ರೆ ಅಚ್ಚರಿ ಪಡ್ತೀರಾ..!

• ಮೊದಲು ಈರುಳ್ಳಿಯನ್ನು ಕತ್ತರಿಸಿಕೊಳ್ಳಬೇಕು
• ನಂತರ ಇದಕ್ಕೆ ಮಿಶ್ರಣ ಮಾಡಲು ಆಗುವಷ್ಟು ಕಡ್ಲೆಹಿಟ್ಟನ್ನು ಬಳಸಬೇಕು
• ಕಡ್ಲೆಹಿಟ್ಟು ಹಾಕಿದ ಬಳಿಕ ಚೀಸ್ ಅನ್ನೂ ಮಿಶ್ರಣ ಮಾಡಬೇಕು
• ಸ್ವಲ್ಪ ನೀರನ್ನು ಹಾಕುತ್ತಾ ಹಿಟ್ಟು ದಪ್ಪವಿರುವ ರೀತಿಯಲ್ಲಿ ನಿಧಾನವಾಗಿ ಕಲೆಸಬೇಕು
• ಒಂದು ಕಡಾಯಿಗೆ ಎಣ್ಣೆ ಹಾಕಬೇಕು, ಆ ಎಣ್ಣೆ ಬಿಸಿಯಾಗುವವರೆಗೆ ಕಾಯಬೇಕು
• ಇವೆಲ್ಲಾ ಹಂತಗಳು ಮುಗಿದ ಮೇಲೆ ಕಲೆಸಿ ಇಟ್ಟುಕೊಂಡು ಈರುಳ್ಳಿ, ಕಡ್ಲೆಹಿಟ್ಟು, ಈರುಳ್ಳಿ ಮಿಶ್ರಣವನ್ನು ಬಾಣಲಿಯಲ್ಲಿ ಒಂದು ಚಮಚದ ಸಹಾಯದಿಂದ ಸಣ್ಣದಾಗಿ ಹಾಕಿ
• ಇದು ಗರಿಗರಿಯಾಗಿ ಗೋಲ್ಡನ್ ಬಣ್ಣ ಬರುವವರೆಗೆ ಕಾಯಿರಿ  
Published by:Latha CG
First published: