ನೀವು ಈರುಳ್ಳಿ- ಬೆಳ್ಳುಳ್ಳಿ ತಿನ್ನೋದಿಲ್ವ?; ಹಾಗಿದ್ದರೆ ಈ ಸುದ್ದಿ ಓದಿ...

ಸಸ್ಯಾಹಾರಿ ಅಡುಗೆಯೇ ಆಗಿರಲಿ ಮಾಂಸಾಹಾರವೇ ಇರಲಿ ಈರುಳ್ಳಿ- ಬೆಳ್ಳುಳ್ಳಿ ಬಳಸದಿದ್ದರೆ ರುಚಿಯೇ ಕಡಿಮೆಯಾಗುತ್ತದೆ. ಆದರೆ, ಈ ಎರಡು ಪದಾರ್ಥಗಳು ರುಚಿಗೆ ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದಲೂ ಬಹಳ ಉಪಯುಕ್ತವಾಗಿವೆ ಎಂಬುದು ಹಲವರಿಗೆ ಗೊತ್ತಿಲ್ಲ.

sushma chakre | news18
Updated:February 27, 2019, 7:53 PM IST
ನೀವು ಈರುಳ್ಳಿ- ಬೆಳ್ಳುಳ್ಳಿ ತಿನ್ನೋದಿಲ್ವ?; ಹಾಗಿದ್ದರೆ ಈ ಸುದ್ದಿ ಓದಿ...
ಸಾಂದರ್ಭಿಕ ಚಿತ್ರ
  • News18
  • Last Updated: February 27, 2019, 7:53 PM IST
  • Share this:
ಮೊದಲೆಲ್ಲ ವರ್ಷಕ್ಕೊಮ್ಮೆ ಕೆಮ್ಮು, ಜ್ವರ, ನೆಗಡಿ ಬಂದರೆ ಅದೇ ಹೆಚ್ಚು. ಆಗೆಲ್ಲ ಮನೆ ಮದ್ದಿನಲ್ಲಿಯೇ ಎಲ್ಲವೂ ವಾಸಿಯಾಗಿಬಿಡುತ್ತಿತ್ತು. ಆದರೆ, ಯಾವಾಗ ಹೈಫೈ ಆಸ್ಪತ್ರೆಗಳು ಬಂದು ಎಲ್ಲದಕ್ಕೂ ವೈದ್ಯರು ಬೇಕೇಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಯಿತೋ ಆಗ ಖಾಯಿಲೆಗಳೂ ಹೈಫೈ ಆಗತೊಡಗಿದವು. ಅದರ ಜೊತೆಗೆ ಜೀವನಶೈಲಿ, ಆಹಾರ ಪದ್ಧತಿಯಲ್ಲೂ ಬದಲಾವಣೆ ಆಗಿದ್ದರಿಂದ ದಿನದಿಂದ ದಿನಕ್ಕೆ ಹೊಸ ಖಾಯಿಲೆಗಳು ಹುಟ್ಟಿಕೊಳ್ಳತೊಡಗಿವೆ.

ಆ ಪಟ್ಟಿಯಲ್ಲಿ ಕ್ಯಾನ್ಸರ್​ ಕೂಡ ಒಂದು. ಇತ್ತೀಚಿನ ದಿನಗಳಲ್ಲಿ ದೇಹದಲ್ಲಿ ಇರುವ ಎಲ್ಲ ಅಂಗಗಳಿಗೂ ಕ್ಯಾನ್ಸರ್​ ಎಂಬ ಮಾರಿ ಅಂಟಿಕೊಳ್ಳಲಾರಂಭಿಸಿದೆ. ಇತ್ತೀಚೆಗೆ ಕ್ಯಾನ್ಸರ್​ಗೆ ಚಿಕಿತ್ಸೆ ಕಂಡುಹಿಡಿಯಲಾಗಿದ್ದರೂ ಬಡ ಮತ್ತು ಮಧ್ಯಮವರ್ಗದವರಿಗೆ ಅದರ ಖರ್ಚನ್ನು ಭರಿಸುವುದು ಸುಲಭದ ಮಾತೇನಲ್ಲ. ಹಾಗಾಗಿಯೇ ಕ್ಯಾನ್ಸರ್​ ತಡೆಗಟ್ಟಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬಹುದು ಎಂದು ಹಲವಾರು ಜನ ಹುಡುಕಾಟ ನಡೆಸುತ್ತಿರುತ್ತಾರೆ.

ಬಿಸಿಲ ಬೇಗೆ ತಣಿಸಲು ಹೀಗೆ ಮಾಡಿ

ಇತ್ತೀಚೆಗೆ ನಡೆದ ಅಧ್ಯಯನದ ಪ್ರಕಾರ ನಾವು ದಿನನಿತ್ಯ ಬಳಸುವ ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲೇ ಕ್ಯಾನ್ಸರ್​ ನಿವಾರಕ ಅಂಶಗಳಿವೆಯಂತೆ. ಚೀನಾ ಮೆಡಿಕಲ್ ಯೂನಿವರ್ಸಿಟಿಯ ವಿಜ್ಞಾನಿಗಳು ಈ ಬಗ್ಗೆ ಅಧ್ಯಯನ ನಡೆಸಿದ್ದು, ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಹೆಚ್ಚಾಗಿ ಬಳಸುವುದರಿಂದ ಕರುಳು ಕ್ಯಾನ್ಸರ್​ನಿಂದ ಮುಕ್ತಿ ಪಡೆಯಬಹುದು ಎನ್ನಲಾಗಿದೆ.

ಈರುಳ್ಳಿ, ಬೆಳ್ಳುಳ್ಳಿಯನ್ನು ನಾವು ಎಲ್ಲ ಅಡುಗೆಗೂ ಬಳಸುತ್ತೇವೆ. ಆದರೆ, ಈ ಪದಾರ್ಥಗಳು ಕ್ಯಾನ್ಸರ್​ ಸೆಲ್​ಗಳ ವಿರುದ್ಧವೂ ಹೋರಾಡಬಲ್ಲವು. ಮೆಡಿಕಲ್ ನ್ಯೂಸ್​ ಪ್ರಕಾರ, ಈರುಳ್ಳಿ, ಬೆಳ್ಳುಳ್ಳಿಯಂತಹ ಪದಾರ್ಥಗಳನ್ನು ಬಳಸುವವರ ಮೇಲಿನ ಪರಿಣಾಮಗಳೂ ಬೇರೆ ಬೇರೆ ರೀತಿ ಇರುತ್ತವೆ. ಆದರೆ, ಸಾಮಾನ್ಯವಾಗಿ ಎಲ್ಲ ಜನರಿಗೂ ಅನ್ವಯವಾಗುವ ರೀತಿಯಲ್ಲಿ ಡಾಟಾ ಸಿದ್ಧಪಡಿಸಲಾಗಿದೆ.

ಉಪ್ಪು ತಿಂದರೆ ನೀರು ಕುಡಿದರೆ ಸಾಕಾಗಲ್ಲ, ಮಾತ್ರೆಯನ್ನು ತಿನ್ನಬೇಕಾಗುತ್ತದೆ..ಎಚ್ಚರಿಕೆ

ಅಧ್ಯಯನಕ್ಕಾಗಿ ಸಂಶೋಧಕರು ಕರುಳು ಕ್ಯಾನ್ಸರ್​ನಿಂದ ಬಳಲುತ್ತಿರುವ 833 ವ್ಯಕ್ತಿಗಳನ್ನು ಸಂದರ್ಶಿಸಲಾಗಿತ್ತು. ಸ್ಥಳ, ವಯಸ್ಸು, ಮತ್ತು ಲಿಂಗ ಒಂದೇ ಆಗಿರುವ ಸಮೂಹವೊಂದನ್ನು ಸಂದರ್ಶನಕ್ಕೆ ಬಳಸಿಕೊಳ್ಳಲಾಗಿತ್ತು. ಪ್ರತಿಯೊಬ್ಬರನ್ನೂ ಸಂದರ್ಶನ ಮಾಡಿ, ಅವರ ಡಯಟ್​ ಹವ್ಯಾಸಗಳನ್ನು ಅಧ್ಯಯನ ನಡೆಸಿ ಪ್ರಶ್ನಾವಳಿಯನ್ನು ಸಿದ್ಧಪಡಿಸಲಾಗಿತ್ತು. ಈ ಅಧ್ಯಯನದಲ್ಲಿ ಅತಿಹೆಚ್ಚು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇವಿಸುವ ವಯಸ್ಕರು ಕರುಳು ಕ್ಯಾನ್ಸರ್​ನಿಂದ ಬಳಲುವ ಸಾಧ್ಯತೆ ಬೇರೆ ಈರುಳ್ಳಿ- ಬೆಳ್ಳುಳ್ಳಿಯನ್ನು ಬಳಸದವರಿಗಿಂತ ಶೇ. 79ಕರಷ್ಟು ಕಡಿಮೆಯಿದೆ ಎಂದು ತಿಳಿದುಬಂದಿದೆ.
First published:February 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ