HOME » NEWS » Lifestyle » ONE OF THE STUDY SAYS EVENINGS MAY BE THE BEST TIME TO EXERCISE FOR OVERWEIGHT PEOPLE STG AE

ಸ್ಥೂಲಕಾಯದ ಪುರುಷರಿಗೆ ಸಂಜೆಯ ವ್ಯಾಯಾಮ ಸೂಕ್ತವಂತೆ..!

ಬೆಳಗ್ಗಿನ ವ್ಯಾಯಾಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಹೆಚ್ಚು ಸಾಮರ್ಥ್ಯ ನೀಡುತ್ತದೆ ಎಂಬುವುದು ಎಲ್ಲರಿಗೂ ತಿಳಿದೇ ಇದೆ. ಆದರೆ, ಹೆಚ್ಚು ಕೊಬ್ಬಿನ ಆಹಾರ ತಿನ್ನವವರು ಮತ್ತು ಅತೀ ತೂಕವುಳ್ಳ ವ್ಯಕ್ತಿಗಳು ಸಂಜೆ ವ್ಯಾಯಾಮ ಮಾಡುವುದೇ ಹೆಚ್ಚು ಒಳ್ಳೆಯದು.

Trending Desk
Updated:June 25, 2021, 11:45 PM IST
ಸ್ಥೂಲಕಾಯದ ಪುರುಷರಿಗೆ ಸಂಜೆಯ ವ್ಯಾಯಾಮ ಸೂಕ್ತವಂತೆ..!
ಸಾಂದರ್ಭಿಕ ಚಿತ್ರ
  • Share this:
ಅತಿ ತೂಕ ಹೊಂದಿರುವ ವ್ಯಕ್ತಿಗಳು, ಮುಖ್ಯವಾಗಿ ಪುರುಷರು , ಸಂಜೆಯ ವೇಳೆಗೆ ವ್ಯಾಯಾಮ ಮಾಡುವುದರಿಂದ, ಕೊಲೆಸ್ಟ್ರಾಲ್ ಮತ್ತು ರಕ್ತ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಾಧ್ಯವಿದೆ ಎಂದು ಆಸ್ಟ್ರೇಲಿಯಾದಲ್ಲಿ ನಡೆಸಲಾದ ಅಧ್ಯಯನವೊಂದರಿಂದ ತಿಳಿದು ಬಂದಿದೆ. ಆಸ್ಟ್ರೇಲಿಯಾದ ಕ್ಯಾಥೋಲಿಕ್ ವಿಶ್ವವಿದ್ಯಾಲಯವು, ಟೈಪ್ 2 ಮಧುಮೇಹದ ಅಪಾಯವುಳ್ಳ ಅತೀ ಬೊಜ್ಜಿನ ವ್ಯಕ್ತಿಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ, ಸಂಜೆ ವ್ಯಾಯಾಮ ಮಾಡಿದವರ ಚಯಾಪಚಯ ಆರೋಗ್ಯ, ಅದೇ ವ್ಯಾಯಾಮವನ್ನು ಬೆಳಿಗ್ಗೆ ಮಾಡಿದವರ ಚಯಾಪಚಯ ಆರೋಗ್ಯಕ್ಕಿಂತ ಚೆನ್ನಾಗಿತ್ತು ಎಂಬುವುದು ತಿಳಿದು ಬಂದಿದೆಯಂತೆ.

ಬೆಳಗ್ಗಿನ ವ್ಯಾಯಾಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಹೆಚ್ಚು ಸಾಮರ್ಥ್ಯ ನೀಡುತ್ತದೆ ಎಂಬುವುದು ಎಲ್ಲರಿಗೂ ತಿಳಿದೇ ಇದೆ. ಆದರೆ, ಹೆಚ್ಚು ಕೊಬ್ಬಿನ ಆಹಾರ ತಿನ್ನವವರು ಮತ್ತು ಅತೀ ತೂಕವುಳ್ಳ ವ್ಯಕ್ತಿಗಳು ಸಂಜೆ ವ್ಯಾಯಾಮ ಮಾಡುವುದೇ ಹೆಚ್ಚು ಒಳ್ಳೆಯದು.

Exercise, Over weight, Diet, ವ್ಯಾಯಾಮ, ಅತಿ ತೂಕ, ಆಹಾರ ಕ್ರಮ, one of the study says evenings may be the best time to exercise for overweight people ae
ಸಾಂದರ್ಭಿಕ ಚಿತ್ರ


ಬೆಳಗ್ಗೆ ವ್ಯಾಯಾಮ ಮಾಡುವ ಬದಲು, ಸಂಜೆ ವ್ಯಾಯಾಮ ಮಾಡುವುದರಿಂದ ಕೊಬ್ಬಿನ ಆಹಾರದಿಂದ ಆಗುವ ಅನಾರೋಗ್ಯಕರ ಪರಿಣಾಮಗಳನ್ನು ತಡೆಯುವುದು ಸಾಧ್ಯ ಎಂಬುದನ್ನು ಆಸ್ಟ್ರೇಲಿಯಾದ ಕ್ಯಾಥೋಲಿಕ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಕೊಂಡಿದ್ದಾರೆ.

ಇದನ್ನೂ ಓದಿ: Bigg Boss 8 Kannada: ಬಿಗ್ ಬಾಸ್​ ಮನೆಯಲ್ಲಿ ಭೂತದ ಕಾಟ: ಕ್ಯಾಪ್ಟನ್​ ಕೋಣೆಯಲ್ಲಿ ಏನನ್ನು ನೋಡಿ ಹೆದರಿದ್ರು ಬ್ರೋ ಗೌಡ..!

ಈ ಅಧ್ಯಯನ ವರದಿಯ ಫಲಿತಾಂಶಗಳು, ಯಾವಾಗಲೂ ಗ್ಲೂಕೋಸ್ ನಿಯಂತ್ರಣದ ಸಮಸ್ಯೆಯಿಂದ ಬಳಲುವ ಮಧುಮೇಹ ರೋಗಿಗಳಿಗೆ ಉಪಯುಕ್ತ ಎಂದು ಅಧ್ಯಯನ ವರದಿಯ ಮುಖ್ಯ ಲೇಖಕ ಟ್ರಿನೆ ಮೊಹೊಲ್ಟ್​ ಹೇಳಿದ್ದಾರೆ.

ಅಧ್ಯಯನದ ವಿಧಾನದ ವಿವರ1. 24 ಜನ ಪುರುಷರಿಗೆ ಸತತ 11 ದಿನಗಳ ಕಾಲ ಅತಿ ಹೆಚ್ಚು ಕೊಬ್ಬು ಇರುವ ಆಹಾರವನ್ನು ನೀಡಲಾಯಿತು.

2. ಭಾಗವಹಿಸದವರು 30-45 ವಯೋಮಾನದ, 27ರಿಂದ 35 ಕೆಜಿ/ಎಮ್2 ಬಿಎಂಐ ಪ್ರಮಾಣ ಹೊಂದಿದ್ದವರು. ಹಾಗೂ ಯಾವುದೇ ಹೃದಯ ಅಥವಾ ಸಕ್ಕರೆ ಕಾಯಿಲೆ ಇಲ್ಲದವರು.

3. ಊಟದಲ್ಲಿ 65% ಕೊಬ್ಬು ಇರುತ್ತಿತ್ತು, ಅದನ್ನು ಅವರು 5 ದಿನಗಳ ಕಾಲ ಸೇವಿಸಿ, ವಿವಿಧ ಪರೀಕ್ಷೆಗಳನ್ನು ಮಾಡಲು ಪ್ರಯೋಗಾಲಯಕ್ಕೆ ಭೇಟಿ ನೀಡಬೇಕಿತ್ತು.

4. ಅವರಲ್ಲಿ ಕೆಲವರು ಬೆಳಗ್ಗೆ ಮತ್ತು ಸಂಜೆ ವ್ಯಾಯಾಮ ಮಾಡಿದರೆ, ಇನ್ನು ಕೆಲವರು ಮಾಡಲೇ ಇಲ್ಲ.

5. ಬಳಿಕ ವಿಜ್ಞಾನಿಗಳು ಅವರನ್ನು ಮೂರು ಭಾಗಗಳಾಗಿ ವಿಂಗಡಿಸಿದರು.

6. ಒಂದು ತಂಡ ಬೆಳಗ್ಗೆ 6.30ಕ್ಕೆ ವ್ಯಾಯಾಮ ಮಾಡಬೇಕಿತ್ತು, ಇನ್ನೊಂದು ತಂಡ ಸಂಜೆ 6.30ಕ್ಕೆ ಮಾಡಬೇಕಿತ್ತು. ಮತ್ತೊಂದು ತಂಡ ಏನೂ ಮಾಡದೆ ಸುಮ್ಮನಿರಬೇಕಿತ್ತು.ಬೆಳಗ್ಗೆ ಮತ್ತು ಸಂಜೆ ವ್ಯಾಯಾಮ ಮಾಡುವವರಲ್ಲಿ ಹೃದಯ ರಕ್ತನಾಳದ ಫಿಟ್‍ನೆಸ್ ಒಂದೇ ರೀತಿ ಇತ್ತು. ಆದರೆ ರಾತ್ರಿಯ ಗ್ಲೈಸೆಮಿಕ್ ನಿಯಂತ್ರಣವು ಸಂಜೆಯ ವ್ಯಾಯಾಮ ಗುಂಪಿನಲ್ಲಿ ಮಾತ್ರ ಕಂಡು ಬಂತು ಎಂದು ಡಾ. ಟ್ರಿನೆ ಮೊಹೊಲ್ಟ್​ ಹೇಳಿದ್ದಾರೆ.

ಈ ಸಂಶೋಧನೆಯ ಫಲಿತಾಂಶ ಎಲ್ಲರಿಗೂ ಅನ್ವಯವಾಗುವುದಿಲ್ಲ. ಯಾಕೆಂದರೆ ಈ ಅಧ್ಯಯನ ಹೆಚ್ಚು ಕೊಬ್ಬಿನ ಆಹಾರ ತಿನ್ನುವ ವ್ಯಕ್ತಿಗಳನ್ನು ಮಾತ್ರ ಒಳಗೊಂಡಿತ್ತು. ಉಳಿದವರ ಪಾಲಿಗೆ, ಕೊಬ್ಬನ್ನು ಕರಗಿಸಲು ಬೇಗ ಎದ್ದು, ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದೇ ಹೆಚ್ಚು ಪರಿಣಾಮಕಾರಿ. ಅದರಿಂದ ಮಾನಸಿಕ ಆರೋಗ್ಯದ ಮೇಲೆ ಕೂಡ ಉತ್ತಮ ಪರಿಣಾಮ ಉಂಟಾಗುತ್ತದೆ ಹಾಗೂ ಒತ್ತಡ ಕಡಿಮೆ ಮಾಡಲು ಕೂಡ ಸಹಾಯಕ.

ಇದನ್ನೂ ಓದಿ:  Malashree Ramu: ಕೊರೋನ ಲಸಿಕೆಯ ಮೊದಲ ಡೋಸ್​ ಪಡೆದ ಮಾಲಾಶ್ರೀ ರಾಮು..!

ವ್ಯಾಯಾಮ ಮಾಡುವುದಕ್ಕೆ ಸೂಕ್ತವಲ್ಲದ ಸಮಯ ಎಂಬುದಿಲ್ಲ. ನಿಮಗೆ ಯಾವಾಗ ಸಮಯ ಸಿಗುತ್ತದೋ ಆಗ ಮಾಡಿ, ಒಟ್ಟಾರೆ ವ್ಯಾಯಾಮ ಮಾಡುವುದು ಮುಖ್ಯ ಎನ್ನುತ್ತಾರೆ ನಾರ್ತ್ ಕೆರೋಲಿನಾ ಚಾಪೆಲ್ ವಿಶ್ವ ವಿದ್ಯಾನಿಲಯದ ವ್ಯಾಯಾಮ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಪ್ರೊಫೆಸರ್ ಆಂಟೋನಿ ಹ್ಯಾಕ್ನೆ.ನೆನಪಿಡಿ, ನೀವು ವ್ಯಾಯಾಮದಿಂದ ತಪ್ಪಿಸಿಕೊಳ್ಳುವಂತಿಲ್ಲ, ಅದಕ್ಕೆ ಸೂಕ್ತವಾದ ವೇಳೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಅಷ್ಟೆ.
Published by: Anitha E
First published: June 25, 2021, 3:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories