Onam 2022: ಓಣಂ ಸ್ಪೆಷಲ್​ ಬೀಟ್​ರೂಟ್​ ಪಚಡಿ ಮಾಡೋದು ಬಹಳ ಸುಲಭ, ರೆಸಿಪಿ ಇಲ್ಲಿದೆ

Onam Festival 2022: ಓಣಂ ಸದ್ಯದ ಮಾಡಲಾಗುವ ಬೀಟ್​ರೂಟ್​ ಪಚಡಿ ಮಾಡುವ ವಿಧಾನವನ್ನು ನಾವಿಲ್ಲಿ ನೀಡಿದ್ದು, ನೀವೂ ಟ್ರೈ ಮಾಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಓಣಂ ಹಬ್ಬ (Onam Festival) ಕೇರಳದ (Keralaಜನರ ಪ್ರೀತಿಯ ಹಬ್ಬ. ಇದನ್ನು ಆಗಸ್ಟ್​ (August) ಮತ್ತು ಸೆಪ್ಟೆಂಬರ್ನಲ್ಲಿ (September) ಆಚರಿಸಲಾಗುತ್ತದೆ. ಓಣಂ ಹಬ್ಬವನ್ನು ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ, ಇದನ್ನು ಸುಗ್ಗಿಯ ಹಬ್ಬ ಎಂದು ಕರೆಯಲಾಗುತ್ತದೆ. ಇದನ್ನು ತಿರು-ಓಣಂ ಅಥವಾ ತಿರುವೊಣಂ ಎಂದೂ ಕರೆಯುತ್ತಾರೆ. ಆಚರಣೆಗಳು ಅಥಂ ದಿನದಂದು ಆರಂಭವಾಗಿ ಹತ್ತು ದಿನಗಳ ಕಾಲ ತಿರುವೋಣಂ ದಿನದವರೆಗೆ ನಡೆಯುತ್ತದೆ, ಇದನ್ನು ಹಬ್ಬದ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಹಬ್ಬದ ಬಗ್ಗೆ ಇನ್ನೂ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿದೆ.  ಹಬ್ಬದ ಇತಿಹಾಸ ಪುರಾಣಗಳ ಪ್ರಕಾರ, ಓಣಂ ಅನ್ನು ರಾಜ ಮಹಾಬಲಿಯ ಮರಳಿ ಬರುವ ನೆನಪಿಗಾಗಿ ಆಚರಿಸಲಾಗುತ್ತದೆ. ಆತನನ್ನ ಬ್ರಾಹ್ಮಣ ಋಷಿ ಮತ್ತು ಪ್ರಹ್ಲಾದನ ಮೊಮ್ಮಗನಾಗಿದ್ದ ಕಶ್ಯಪನ ವಂಶಸ್ಥನೆಂದು ಹೇಳಲಾಗುತ್ತದೆ.  ಇನ್ನು ಹಬ್ಬದ ಹತ್ತು ದಿನಗಳನ್ನು ವಿಭಿನ್ನವಾಗಿ ಆಚರಣೆ ಮಾಡಲಾಗುತ್ತದೆ.

ಎಲ್ಲಾ ಮಲಯಾಳಿಗಳು ಪ್ರತಿ ವರ್ಷ ಓಣಂ ಹಬ್ಬವನ್ನು ಎದುರು ನೋಡುತ್ತಾರೆ. ಇದು ಕೇರಳದ ಸುಗ್ಗಿಯ ಹಬ್ಬ ಮತ್ತು ಮಲಯಾಳಿ ಸಂಸ್ಕೃತಿಯ ಆಚರಣೆ ಅತಿ ದೊಡ್ಡ ಹಬ್ಬವಾಗಿದೆ. ಇದು ಸಾಮಾನ್ಯವಾಗಿ ಆಗಸ್ಟ್ ಮಧ್ಯದಲ್ಲಿ ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ ಮಧ್ಯದವರೆಗೆ ಆಚರಿಸಲಾಗುತ್ತದೆ. ಓಣಂ ಆಚರಣೆಯ ಸಂದರ್ಭದಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ಓಣಂ ಹಬ್ಬವು ಹತ್ತು ದಿನಗಳ ಕಾಲ ಕೇರಳದ ಸಂಸ್ಕೃತಿ ಮತ್ತು ಪ್ರಕೃತಿ ಸೌಂದರ್ಯವನ್ನು ಪ್ರದರ್ಶಿಸುತ್ತದೆ. ಈ ಸಮಯದಲ್ಲಿ ಓಣಂ ಸದ್ಯವನ್ನು ಮಾಡಿ ಸವಿಯಲಾಗುತ್ತದೆ.

ಅತ್ಯಂತ ಗಮನಾರ್ಹವಾದ ಓಣಂ ಆಚರಣೆ ಎಂದರೆ ಓಣಂ ಸದ್ಯ, ಬೆರಗುಗೊಳಿಸುವ ದೋಣಿ ರೇಸ್ ಮತ್ತು ಆಕರ್ಷಕವಾದ ಕೈಕೊಟ್ಟಿಕಲಿ ನೃತ್ಯ. ಓಣಂ ಸದ್ಯದ ಮಾಡಲಾಗುವ ಬೀಟ್​ರೂಟ್​ ಪಚಡಿ ಮಾಡುವ ವಿಧಾನವನ್ನು ನಾವಿಲ್ಲಿ ನೀಡಿದ್ದು, ನೀವೂ ಟ್ರೈ ಮಾಡಬಹುದು.

ಇದನ್ನೂ ಓದಿ: ತೆಂಗಿನಕಾಯಿ ಸಿಪ್ಪೆ ವೇಸ್ಟ್​ ಅಂತ ಬಿಸಾಡಬೇಡಿ, ಎಷ್ಟೆಲ್ಲಾ ಉಪಯೋಗವಿದೆ ನೋಡಿ

ಬೀಟ್​ರೂಟ್​ ಪಚಡಿ ಮಾಡಲು ಬೇಕಾಗುವ ಸಾಮಾಗ್ರಿಗಳು

ಬೀಟ್ರೂಟ್ - 1 ದೊಡ್ಡದು

ತುರಿದ ತೆಂಗಿನಕಾಯಿ - 1/2 ಕಪ್

ಮೊಸರು - 1 ಕಪ್

ಹಸಿರು ಮೆಣಸಿನಕಾಯಿ - 2

ಕೆಂಪು ಮೆಣಸಿನಕಾಯಿ - 2

ಶುಂಠಿ - 1 ಸಣ್ಣ ತುಂಡು

ಕರಿಬೇವಿನ ಎಲೆಗಳು - 2 ಎಲೆಗಳು

ಜೀರಿಗೆ - 1/2 ಟೀಸ್ಪೂನ್

ಸಾಸಿವೆ - 1/2 ಟೀಸ್ಪೂನ್

ನೀರು - 1/4 ಕಪ್

ಎಣ್ಣೆ - 1 ಟೀಸ್ಪೂನ್

ರುಚಿಗೆ ತಕ್ಕಂತೆ ಉಪ್ಪು

ಬೀಟ್​ರೂಟ್​ ಪಚಡಿ ಮಾಡುವ ವಿಧಾನ

ಬೀಟ್ರೂಟ್ ಅನ್ನು ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿಕೊಳ್ಳಿ. ನೀರು, ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿ. ಅದು ತಣ್ಣಗಾದ ನಂತರ,ಒಮ್ಮೆ ಮಿಶ್ರಣ ಮಾಡಿ.  ಈ ತುರಿದ ತೆಂಗಿನಕಾಯಿ, ಹಸಿಮೆಣಸಿನಕಾಯಿ, ಶುಂಠಿ, ಜೀರಿಗೆ, ಸಾಸಿವೆ ಮತ್ತು 2 ಕರಿಬೇವಿನ ಎಲೆಗಳನ್ನು ಹಾಕಿ ಒಟ್ಟಿಗೆ ರುಬ್ಬಿಕೊಂಡು ನುಣ್ಣಗೆ ಪೇಸ್ಟ್​ ಮಾಡಿಕೊಳ್ಳಿ.

ಈಗಾಗಲೇ ಬೇಯಿಸಿದ ಬೀಟ್ರೂಟ್​ಗೆ ಈ ರುಬ್ಬಿಕೊಂಡ ಪೇಸ್ಟ್ ಅನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. 5 ನಿಮಿಷಗಳ ಕಾಲ ಕುದಿಸಿ. ಮೊಸರು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಮೊಸರನ್ನು ಹಾಕಿದ ನಂತರ ಯಾವುದೇ ಕಾರಣಕ್ಕೂ ಕುದಿಸಬೇಡಿ, ಉರಿಯನ್ನು ಆಫ್ ಮಾಡಿ.

ಇದನ್ನೂ ಓದಿ: ಮಕ್ಳಳ ಎತ್ತರ ಹೆಚ್ಚಾಗಬೇಕು ಅಂದ್ರೆ ಹೀಗೆ ಮಾಡಿ ಸಾಕು

ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಕಾದ ನಂತರ ಸಾಸಿವೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಸೊಪ್ಪನ್ನು ಹಾಕಿ ಸಿಡಿಸಿ, ಹುರಿದುಕೊಳ್ಳಿ. ಈಗ ಇದನ್ನು ತಯಾರಾದ ಮಿಶ್ರಣಕ್ಕೆ ಹಾಕಿ ಸೇರಿಸಿ ಮಿಶ್ರಣ ಮಾಡಿದರೆ, ಬೀಟ್​ರೂಟ್​ ಪಚಡಿ ಸವಿಯಲು ಸಿದ್ದ.
Published by:Sandhya M
First published: