Onam 2022: ಓಣಂ ಹಬ್ಬ ಯಾವಾಗ? ವಿಧಿ-ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ

Onam 2022 Rituals: ಸುಮಾರು 20ಕ್ಕೂ ಹೆಚ್ಚು ವಿಶೇಷ ಆಹಾರ ಪದಾರ್ಥಗಳನ್ನು ಈ ಸದ್ಯದಲ್ಲಿ ಬಡಿಸಲಾಗುತ್ತದೆ. ಇನ್ನು ಈ ಸದ್ಯದಲ್ಲಿ ಮಿಸ್​ ಮಾಡದೇ ಪಾಯಸವನ್ನು ತಿನ್ನಲೇಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಓಣಂ (Onam) ಹತ್ತಿರ ಬರುತ್ತಿದೆ. ಇದೊಂದು ಸುಗ್ಗಿಯ ಹಬ್ಬವಾಗಿದ್ದು (Harvest Festival), ಇದನ್ನು ಮುಖ್ಯವಾಗಿ ಕೇರಳ (Kerala) ರಾಜ್ಯದಲ್ಲಿ ಆಚರಿಸಲಾಗುತ್ತದೆ. ಇದು ರಾಕ್ಷಸರ ರಾಜ ಮಹಾಬಲಿಯ ವರ್ಷಕ್ಕೆ ಒಮ್ಮೆ ಮನೆಗೆ ಬರುವುದನ್ನು ಸೂಚಿಸುವ ಕೇರಳದ ಅತ್ಯಂತ ದೊಡ್ಡ ಹಬ್ಬವಾಗಿದೆ. ಓಣಂ ಹಬ್ಬವನ್ನು ಎಲ್ಲಾ ಮಲಯಾಳಿಗಳು ಅಥವಾ ಕೇರಳೀಯರು ಹತ್ತು ದಿನಗಳ ಕಾಲ ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಈ ವರ್ಷ ಓಣಂ ಹಬ್ಬ ಆಗಸ್ಟ್ 30 ರಂದು ಆರಂಭವಾಗಲಿದ್ದು, ಈ ಹಬ್ಬವು 8ನೇ ಸೆಪ್ಟೆಂಬರ್, 2022 ರಂದು ಮುಗಿಯುತ್ತದೆ.

ಹಬ್ಬದ ಮಹತ್ವ

ಕ್ಯಾಲೆಂಡರ್ ಪ್ರಕಾರ, ಓಣಂ ಅನ್ನು ಕೊಲ್ಲವರ್ಷದ ಮೊದಲ ತಿಂಗಳ ಚಿಂಗಮ್ ಆರಂಭದಲ್ಲಿ ಆಚರಿಸಲಾಗುತ್ತದೆ. ಕೇರಳದ ಜನರು ಉತ್ತಮ ಫಸಲನ್ನು ಸಂಗ್ರಹಿಸುವ ವರ್ಷದ ಸಮಯ ಇದು. ಓಣಂ ಸಮಯದಲ್ಲಿ, ಕೇರಳದ ವಿವಿಧ ಸ್ಥಳಗಳಲ್ಲಿ ವಿವಿಧ ಉತ್ಸವಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು  ಬಹಳ ವೈಭವದಿಂದ ಮಾಡಲಾಗುತ್ತದೆ.

ಹಬ್ಬದ ಕಥೆ

ಹಿಂದೂ ಪುರಾಣದ ಪ್ರಕಾರ, ರಾಜ ಮಹಾಬಲಿ ಕೇರಳದ ಶ್ರೇಷ್ಠ ಆಡಳಿತಗಾರ. ಅವನ ಆಳ್ವಿಕೆಯಲ್ಲಿ, ರಾಜ್ಯವು ಸಮೃದ್ಧ ಮತ್ತು ಶಾಂತಿಯುತವಾಗಿತ್ತು. ಎಲ್ಲರೂ ಸಂತೋಷವಾಗಿದ್ದರು ಮತ್ತು ಎಲ್ಲರೂ ತಮ್ಮ ರಾಜನನ್ನು ಪ್ರೀತಿಸುತ್ತಿದ್ದರು. ಆದರೆ ರಾಜ ಮಹಾಬಲಿ ಆಳ್ವಿಕೆಯನ್ನು ಕೊನೆಗೊಳಿಸಲು ವಿಷ್ಣುವನ್ನು ಕಳುಹಿಸಿದರು. ಭಗವಾನ್ ವಿಷ್ಣುವು ವಾಮನ ಅವತಾರವಾಗಿ ಕಾಣಿಸಿಕೊಂಡು ಮಹಾಬಲಿಯಿಂದ ಮೂರು ಅಡಿ ಭೂಮಿಯನ್ನು ಕೇಳಿದನು.

ಈ ಸಮಯದಲ್ಲಿ ಭಗವಾನ್ ವಿಷ್ಣುವು ಎಲ್ಲಾ ಲೋಕಗಳನ್ನು ಎರಡು ಹೆಜ್ಜೆಗಳಲ್ಲಿ ಅಳೆದನು ಮತ್ತು ಮಹಾಬಲಿಗೆ ತನ್ನ ಮೂರನೇ ಹೆಜ್ಜೆ ಇಡಲು ಸ್ಥಳವನ್ನು ಕೇಳಿದಾಗ,ಮಹಾಬಲಿ ವಾಮನನನ್ನು ತನ್ನ ತಲೆಯ ಮೇಲೆ ತನ್ನ ಪಾದವನ್ನು ಇಡುವಂತೆ ವಿನಂತಿಸುತ್ತಾನೆ. ಭಗವಾನ್ ವಿಷ್ಣುವು ಮಹಾಬಲಿಯಿಂದ ಪ್ರಸನ್ನನಾಗಿ, ಕಲಿಯುಗದ ಅಂತ್ಯದವರೆಗೆ ಆಳಲು ಆದೇಶ ನೀಡಿ, ಮಹಾಬಲಿಗೆ ವರ್ಷಕ್ಕೊಮ್ಮೆ ತನ್ನ ರಾಜ್ಯಕ್ಕೆ ಭೇಟಿ ನೀಡಬಹುದೆಂದು ವರವನ್ನು ಸಹ ನೀಡುತ್ತಾನೆ. ಈ ಕಾರಣದಿಂದ ಪ್ರತಿ ವರ್ಷ ರಾಜ್ಯದ ಜನರು ಈ ಓಣಂ ಹಬ್ಬವನ್ನು ತಮ್ಮ ಪ್ರೀತಿಯ ರಾಜ ಮಹಾಬಲಿಯ ಮನೆಗೆ ಬರುವ ದಿನವಾಗಿ ಆಚರಿಸುತ್ತಾರೆ.

ಆಚರಣೆಗಳು

ಕುಟುಂಬದ ಸದಸ್ಯರು ಬೆಳಗ್ಗೆ ಬೇಗ ಎದ್ದು ಹೊಸ ಬಟ್ಟೆ  ಧರಿಸುತ್ತಾರೆ. ನಂತರ ವಾಮನ ವಿಷ್ಣುವಿನ ಮೂರ್ತಿಗಳನ್ನು ಇಟ್ಟು ಪೂಜೆ ಮಾಡುತ್ತಾರೆ.  ಮಲಯಾಳಿ ಮಹಿಳೆಯರು ತಮ್ಮ ಮನೆಯ ಮುಂದೆ ವಿಭಿನ್ನವಾದ "ಪೂಕ್ಕಲಂ", ಹೂವಿನ ರಂಗೋಲಿ ಬಿಡಿಸುತ್ತಾರೆ. ಅದರ ಮೇಲೆ ದೀಪಗಳನ್ನು ಬೆಳಗಿಸುತ್ತಾರೆ ಮತ್ತು ರಾಜ ಮಹಾಬಲಿಯನ್ನು ಸ್ವಾಗತಿಸಲು ಸಾಂಪ್ರದಾಯಿಕ ಓಣಂ ಹಾಡುಗಳನ್ನು ಹಾಡುತ್ತಾರೆ.

ಇದನ್ನೂ ಓದಿ: ಕೆಮಿಕಲ್ ಇಲ್ಲದೇ ಮನೆಯಲ್ಲಿಯೇ ಐ ಲೈನರ್ ತಯಾರಿಸಿ, ಇಲ್ಲಿದೆ ನೋಡಿ ಮಾಡುವ ವಿಧಾನ

ತಿರು ಓಣಂನಂದು, ಮರದ ಎತ್ತರದ ಕೊಂಬೆಗೆ ಈ ಉಯ್ಯಾಲೆಯನ್ನು ಕಟ್ಟುವ ಸಮಾರಂಭವನ್ನು ನಡೆಸಲಾಗುತ್ತದೆ. ಮಹಿಳೆಯರು ಈ ಉಯ್ಯಾಲೆಯನ್ನು ಹೂವಿನಿಂದ ಅಲಂಕರಿಸಿ, ಸಂಭ್ರಮದಿಂದ ಆಚರಿಸುತ್ತದೆ.  ಓಣಂನ ಮೂರನೇ ದಿನದಂದು, ಜನರು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರನ್ನು ಓಣಂ ಸದ್ಯ ಎಂಬ ಅದ್ಭುತವಾದ ಊಟವನ್ನು ಸವಿಯಲು ಆಹ್ವಾನಿಸುತ್ತಾರೆ.

ಸುಮಾರು 20ಕ್ಕೂ ಹೆಚ್ಚು ವಿಶೇಷ ಆಹಾರ ಪದಾರ್ಥಗಳನ್ನು ಈ ಸದ್ಯದಲ್ಲಿ ಬಡಿಸಲಾಗುತ್ತದೆ. ಇನ್ನು ಈ ಸದ್ಯದಲ್ಲಿ ಮಿಸ್​ ಮಾಡದೇ ಪಾಯಸವನ್ನು ತಿನ್ನಲೇಬೇಕು.  ಇನ್ನು ಈ ಸಮಯದಲ್ಲಿ ಪ್ರಸಿದ್ಧವಾದ "ವಲ್ಲಂಕಾಲಿ" ಅಥವಾ ಸ್ನೇಕ್ ಬೋಟ್ ರೇಸ್ ಅನ್ನು ವಿವಿಧ ಸ್ಥಳಗಳಲ್ಲಿ ಆಯೋಜಿಸಲಾಗುತ್ತದೆ. ಕೇರಳದ ಆಲಪ್ಪುಳದಲ್ಲಿ ಕನಿಷ್ಠ ಏಳು ಡ್ರಮ್‌ಗಳನ್ನು ಹೊಂದಿರುವ ನೂರಾರು ದೊಡ್ಡ ಮತ್ತು ಅಲಂಕೃತ ದೋಣಿಗಳು ಓಟದಲ್ಲಿ ಭಾಗವಹಿಸುತ್ತವೆ. ಓಣಂನ ಈ ಅದ್ಧೂರಿ ಕಾರ್ಯಕ್ರಮವನ್ನು ವೀಕ್ಷಿಸಲು ವಿದೇಶಗಳಿಂದ ಮತ್ತು ದೇಶದ ವಿವಿಧ ಭಾಗಗಳಿಂದ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.

ಓಣಂನ ಒಂಬತ್ತನೇ ದಿನದಂದು, ಕುಟುಂಬದ ಹಿರಿಯ ಸದಸ್ಯರಿಗೆ ತರಕಾರಿಗಳು, ತೆಂಗಿನ ಎಣ್ಣೆಯನ್ನು ಉಡುಗೊರೆಯಾಗಿ ನೀಡುತ್ತಾರೆ. ಈ ಸಂಪ್ರದಾಯವನ್ನು ಮುಖ್ಯವಾಗಿ ಕೇರಳದ ನಾಯರ್ ಪಂಗಡಗಳಲ್ಲಿ ಆಚರಿಸಲಾಗುತ್ತದೆ.

ಇದನ್ನೂ ಓದಿ: ರಾತ್ರಿ ಅಪ್ಪಿ ತಪ್ಪಿ ಈ ಆಹಾರಗಳನ್ನು ಸೇವಿಸಬೇಡಿ, ಸುಮ್ನೆ ಆರೋಗ್ಯ ಹಾಳಾಗುತ್ತೆ

ಓಣಂ ಹಬ್ಬದ ಸಮಯದಲ್ಲಿ ಮತ್ತು ವಿಶೇಷವಾಗಿ ಹತ್ತನೇ ದಿನದಂದು ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಉತ್ಸವಗಳು ನಡೆಯುತ್ತವೆ. ಆನೆಗಳನ್ನು ಆಭರಣಗಳಿಂದ ಅಲಂಕರಿಸಿ, ಭವ್ಯವಾದ ಮೆರವಣಿಗೆಗಳನ್ನು ನಡೆಸಲಾಗುತ್ತದೆ.
Published by:Sandhya M
First published: