Onam 2022: ಆಹಾ! ಇದೇ ನೋಡಿ ಓಣಂ ಸದ್ಯ, ಇಲ್ಲಿದೆ ಈ ಹಬ್ಬದ ವಿಶೇಷ 26 ವಿಧದ ಭಕ್ಷ್ಯಗಳು

ಓಣಂಸಾದ್ಯ ಈ ಹಬ್ಬದ ಒಂದು ಅವಿಭಾಜ್ಯ ಅಂಗವಾಗಿದೆ. ಓಣಂ ಹಬ್ಬದ ವಿಶೇಷ ಸಂದರ್ಭದಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸುವ ಸಂಪ್ರದಾಯವಿದೆ. ಬಾಳೆಹಣ್ಣಿನ ಪಪ್ಪಡ್‌, ಉಪ್ಪೇರಿ ಮತ್ತು ಸಾಂಬಾರ್, ಪಚಡಿ ಮುಂತಾದುವುಗಳನ್ನು ತಯಾರಿಸಲಾಗುತ್ತದೆ. ಹಾಗಾದರೆ ಓಣಂಸಾದ್ಯದಲ್ಲಿ ಕೇರಳದಲ್ಲಿ ಏನೆಲ್ಲಾ ಮಾಡುತ್ತಾರೆ ಎಂಬುವುದನ್ನು ನಾವಿಲ್ಲಿ ನೋಡೋಣ.

ಓಣಂ ಸಾದ್ಯ

ಓಣಂ ಸಾದ್ಯ

  • Share this:
ಕೇರಳದ (Kerala) ಅತ್ಯಂತ ಹಳೆಯ ಮತ್ತು ಸಾಂಪ್ರದಾಯಿಕ ಹಬ್ಬವಾದ ಓಣಂ (Onam) ಅನ್ನು ಈ ಬಾರಿ ಆಗಸ್ಟ್‌ 30ರಂದು ಆಚರಿಸಲಾಗುವುದು. ಈ ಹಬ್ಬವನ್ನು 10 ದಿನಗಳ ಕಾಲ ಕೇರಳಿಗರು ಅತ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷತೆ ಎಂದರೆ ಇದನ್ನು ಯಾವುದೇ ನಿರ್ದಿಷ್ಟ ದೇವಸ್ಥಾನದಲ್ಲಿ ಆಚರಿಸುವುದಿಲ್ಲ, ಆದರೆ ಇದನ್ನು ಮನೆಗಳಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಉತ್ತಮ ಫಸಲು (harvest) ಮತ್ತು ಇಳುವರಿಗಾಗಿ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ಓಣಂ ಅನ್ನು ತಿರು-ಓಣಂ ಅಥವಾ ತಿರುವೋಣಂ (Thiruvonam) ಎಂದೂ ಸಹ ಕರೆಯುತ್ತಾರೆ. ಓಣಂ ಹಬ್ಬವನ್ನು ಮಂಗಳಕರವೆಂದು ಕೇರಳದಲ್ಲಿ ನಂಬಲಾಗಿದೆ. ಮನೆಗಳನ್ನು ಅಲಂಕರಿಸುವುದು, ರಂಗೋಲಿಗಳನ್ನು ಬಿಡಿಸುವುದು, ಹೊಸ ಬಟ್ಟೆಗಳನ್ನು ಧರಿಸುವುದರ ಮೂಲಕ ಪ್ರೀತಿಪಾತ್ರರನ್ನು ಮನೆಗೆ ಬರಮಾಡಿ ಅವರೊಟ್ಟಿಗೆ ಆಚರಿಸಲಾಗುತ್ತದೆ.

ಹಬ್ಬದ ಪ್ರಮುಖ ವಿಶೇಷವೆಂದರೆ ಊಟ. ಹಬ್ಬದಲ್ಲಿ ಓಣಂಸಾದ್ಯ ಅಥವಾ ಓಣಸಾದ್ಯ ಎಂಬ ಅಧ್ಬುತ ಔತಣವನ್ನು ಸಿದ್ಧಪಡಿಸುವ ಮೂಲಕ ಆಚರಿಸಲಾಗುತ್ತದೆ. ಓಣಂಸಾದ್ಯ ಈ ಹಬ್ಬದ ಒಂದು ಅವಿಭಾಜ್ಯ ಅಂಗವಾಗಿದೆ. ಓಣಂ ಹಬ್ಬದ ವಿಶೇಷ ಸಂದರ್ಭದಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸುವ ಸಂಪ್ರದಾಯವಿದೆ. ಬಾಳೆಹಣ್ಣಿನ ಪಪ್ಪಡ್‌, ಉಪ್ಪೇರಿ ಮತ್ತು ಸಾಂಬಾರ್, ಪಚಡಿ ಮುಂತಾದುವುಗಳನ್ನು ತಯಾರಿಸಲಾಗುತ್ತದೆ. ಹಾಗಾದರೆ ಓಣಂಸಾದ್ಯದಲ್ಲಿ ಕೇರಳದಲ್ಲಿ ಏನೆಲ್ಲಾ ಮಾಡುತ್ತಾರೆ ಎಂಬುವುದನ್ನು ನಾವಿಲ್ಲಿ ನೋಡೋಣ.

ಸಾಂಪ್ರದಾಯಿಕ ಓಣಂಸಾದ್ಯದಲ್ಲಿ ತಯಾರಿಸುವ 26 ಭಕ್ಷ್ಯಗಳಿವು

  • ಪಪ್ಪಡಂ
    ಪಪ್ಪಡಂವಿಲ್ಲದೆ ಓಣಂ ಸಾಧ್ಯ ಅಪೂರ್ಣ ಎನ್ನಬಹುದು. ಅಕ್ಕಿ ಹಿಟ್ಟಿನಿಂದ ಗರಿಗರಿಯಾಗಿ ತಯಾರಿ ಮಾಡುವ ಪಪ್ಪಡಂ ಓಣಂ ಓಣಂ ಸಾಧ್ಯ ದ ಸೂಪರ್‌ ಭಕ್ಷ್ಯವಾಗಿದೆ.

  • ಉಪ್ಪೇರಿ
    ಉಪ್ಪೇರಿ ಅಥವಾ ಬಾಳೆಹಣ್ಣಿನ ಚಿಪ್ಸ್ ಸಾಧ್ಯದಲ್ಲಿ ಅತ್ಯಂತ ಪ್ರಿಯವಾದ ಖಾದ್ಯಗಳಲ್ಲಿ ಒಂದಾಗಿದೆ. ಸಾಂಪ್ರದಾಯಿಕ ಹಬ್ಬದಲ್ಲಿ ಸಾಮಾನ್ಯವಾಗಿ ಬಾಳೆ ಎಲೆ ಮೇಲೆ ಒಂದು ಹಿಡಿ ಉಪ್ಪೇರಿಯನ್ನು ಬಡಿಸಲಾಗುತ್ತದೆ.


ಇದನ್ನೂ ಓದಿ: Ganesha Chaturthi: ಗಣಪನಿಗೆ ಇಷ್ಟವಾದ ಕಡಬು ಮಾಡುವ ವಿಧಾನ

  • ಶರ್ಕರ ವರಟ್ಟಿ
    ಶರ್ಕರ ವರಟ್ಟಿ, ಬಾಳೆಹಣ್ಣಿನಲ್ಲಿ ತಯಾರಿಸುವ ಒಂದು ಸಿಹಿ ಖಾದ್ಯವಾಗಿದೆ. ಬಾಳೆಹಣ್ಣುಗಳನ್ನು ಬೆಲ್ಲದ ಪಾಕದಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯಲಾಗುತ್ತದೆ. ನಂತರ ಇದನ್ನು ಏಲಕ್ಕಿ, ಜೀರಿಗೆ ಮತ್ತು ಒಣ ಶುಂಠಿಯೊಂದಿಗೆ ಸವಿಯಲಾಗುತ್ತದೆ.

  • ಇಂಜಿ ಕರಿ
    ಇಂಜಿ ಕರಿಯನ್ನು ಶುಂಠಿ, ಹುಣಸೆಹಣ್ಣು ಮತ್ತು ಬೆಲ್ಲದಿಂದ ತಯಾರಿಸಲಾಗುತ್ತದೆ. ಕೇರಳದಲ್ಲಿ ತಿರುವೋಣಂ ಹಬ್ಬದಲ್ಲಿ ತಯಾರಿಸುವ ಮೊದಲ ಭಕ್ಷ್ಯಗಳಲ್ಲಿ ಇದೂ ಒಂದು.

  • ಮಾವಿನಕಾಯಿ ಕರಿ
    ಮಾವಿನ ಕರಿಯನ್ನು ಹಸಿ ಮಾವು ಮತ್ತು ತೆಂಗಿನ ಹಾಲಿನಿಂದ ತಯಾರಿಸಲಾಗುತ್ತದೆ. ಈ ಖಾದ್ಯವು ಸಧ್ಯಕ್ಕೆ ಮಸಾಲೆಯುಕ್ತ ಘಮ ನೀಡುತ್ತದೆ.

  • ನಾರಂಗ ಕರಿ
    ನಾರಂಗ ಕರಿ ಒಂದು ಹುಳಿ ನಿಂಬೆ ಉಪ್ಪಿನಕಾಯಿಯಾಗಿದ್ದು, ಇದು ಹಬ್ಬದ ಊಟಕ್ಕೆ ಹೆಚ್ಚಿನ ರುಚಿ ಕೊಡುತ್ತದೆ.

  • ಪಚಡಿ
    ಮೊಸರಲ್ಲಿ ತಯಾರಿಸುವ ಪಚಡಿಯನ್ನು ಅನಾನಸ್ ಅಥವಾ ಹಾಗಲಕಾಯಿ ಮತ್ತು ತುರಿದ ತೆಂಗಿನಕಾಯಿಯಿಂದ ತಯಾರಿಸಲಾಗುತ್ತದೆ. ಇದು ಸಾಧ್ಯದ ಮತ್ತೊಂದು ರುಚಿಕರವಾದ ಪಾಕವಿಧಾನವಾಗಿದೆ.

  • ಓಲನ್
    ಓಲನ್ ಅನ್ನು ಬಿಳಿ ಅಥವಾ ಬೂದಿ ಸೋರೆಕಾಯಿ ಮತ್ತು ಕೆಂಪು ಬೀನ್ಸ್ ಅನ್ನು ಹೆಚ್ಚಿಗೆ ಹಾಕಿ ತೆಂಗಿನ ಹಾಲಿನೊಂದಿಗೆ ತಯಾರಿಸಲಾಗುತ್ತದೆ. ಇದು ಸಹ ಸಾಧ್ಯದ ತಟ್ಟೆಯಲ್ಲಿರುವ ಬಹು ಜನಪ್ರಿಯ ಪಾಕವಿಧಾನ.

  • ಎಲ್ಲಿಶೇರಿ
    ಎಲ್ಲಿಶೇರಿಯನ್ನು ಕುಂಬಳಕಾಯಿ, ಕೆಂಪು ಬೀನ್ಸ್ ಮತ್ತು ಉದಾರ ಪ್ರಮಾಣದಲ್ಲಿ ತುರಿದ ತೆಂಗಿನಕಾಯಿಯಿಂದ ತಯಾರಿಸಲಾಗುತ್ತದೆ.

  • ಅವಿಯಲ್
    ಅವಿಯಲ್‌ ಅನ್ನು ಹಬ್ಬದಲ್ಲಿ ಮಾತ್ರವಲ್ಲದೇ ಕೇರಳದಲ್ಲಿ ಸಾಮಾನ್ಯವಾಗಿ ಆಗಾಗೆ ಮಾಡಲಾಗುತ್ತದೆ. 13 ತರಕಾರಿಗಳು ಮತ್ತು ತುರಿದ ತೆಂಗಿನಕಾಯಿಯನ್ನು ಬೆರೆಸಿ ಮಾಡಿದ ಮಿಶ್ರ ತರಕಾರಿ ಭಕ್ಷ್ಯವಾಗಿದೆ ಇದು. ಇದಕ್ಕೆ ತೆಂಗಿನ ಎಣ್ಣೆ ಮತ್ತು ಕರಿಬೇವಿನ ಎಲೆಗಳೊಂದಿಗೆ ಒಗ್ಗರಣೆ ಹಾಕಿದರೆ ಆಹಾ ರುಚಿ ಇನ್ನಷ್ಟು ಹೆಚ್ಚುತ್ತದೆ. ಸಧ್ಯದಲ್ಲಿ ಈ ಅಡುಗೆಗೆ ಭಾರಿ ಬೇಡಿಕೆ ಇದೆ. ಅನ್ನ, ರೊಟ್ಟಿ ಜೊತೆ ಇದು ಉತ್ತಮ ರುಚಿ ನೀಡುತ್ತದೆ.

  • ತೋರನ್
    ತರಕಾರಿಗಳಿಂದ ತಯಾರಿಸುವ ತೋರನ್‌ ಓಣಂ ಹಬ್ಬದ ಪ್ರಮುಖ ಭಕ್ಷ್ಯವಾಗಿದೆ. ಸಾಮಾನ್ಯವಾಗಿ, ಇದನ್ನು ಎಲೆಕೋಸು ಮತ್ತು ಕ್ಯಾರೆಟ್ ಅಥವಾ ಬೀನ್ಸ್ ತುರಿದ ತೆಂಗಿನಕಾಯಿಯೊಂದಿಗೆ ತಯಾರಿಸಲಾಗುತ್ತದೆ.

  • ಚೋರ್
    ಅನ್ನ ಅಥವಾ ಚೋರ್ ಓಣಂ ಸಧ್ಯದ ಅವಿಭಾಜ್ಯ ಪಾಕ. ಈ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಮಲಯಾಳಿಗಳು ಕೆಂಪು ಅನ್ನವನ್ನು ಬಡಿಸುತ್ತಾರೆ.

  • ಪರಿಪ್ಪು ಕರ್ರಿ
    ಹೆಸರು ಬೇಳೆಯಿಂದ ತಯಾರಿಸುವ ಈ ಕರ್ರಿಯನ್ನು ತುಪ್ಪ, ಕೆಂಪು ಮೆಣಸಿನಕಾಯಿಗಳು ಮತ್ತು ಕಪ್ಪು ಎಳ್ಳು ಬೀಜಗಳೊಂದಿಗೆ ಇದನ್ನು ತಯಾರಿಸಲಾಗುತ್ತದೆ.

  • ಚೆನ್ನ ಮೇಜ್ಕ್ಕುಪುರಟ್ಟಿ
    ಗೆಣಸನ್ನು ತೆಳುವಾದ ಹೋಳುಗಳಾಗಿ ಕತ್ತರಿಸಿ ಚೆನ್ನ ಮೇಜ್ಕುಪುರಟ್ಟಿಯನ್ನು ತಯಾರಿಸಲಾಗುತ್ತದೆ. ನಂತರ, ಅದನ್ನು ಮಸಾಲೆಗಳೊಂದಿಗೆ ಅದ್ದಿ ತೆಂಗಿನ ಎಣ್ಣೆಯಲ್ಲಿ ಹುರಿಯಲಾಗುತ್ತದೆ.


ಇದನ್ನೂ ಓದಿ:  Onam 2022: ಓಣಂ ಸ್ಪೆಷಲ್​ ಬೀಟ್​ರೂಟ್​ ಪಚಡಿ ಮಾಡೋದು ಬಹಳ ಸುಲಭ, ರೆಸಿಪಿ ಇಲ್ಲಿದೆ

  • ಸಾಂಬಾರ್‌
    ಕೇರಳದಲ್ಲಿ ಪ್ರತಿಮನೆಗಳು ಸಹ ತನ್ನದೇ ಆದ ಸಾಂಪ್ರದಾಯಿಕ ಪಾಕವಿಧಾನಗಳನ್ನು ಹೊಂದಿದೆ. ಹುಣಸೆ ಹಣ್ಣಿನ ಸಾರುಗಳಲ್ಲಿ ಬೇಯಿಸಿದ ಮಸೂರ ಆಧಾರಿತ ತರಕಾರಿ ಸಾಂಬಾರ್ ಆಗಿದೆ.

  • ‌ಪುಲಿಸ್ಸೆರಿ
    ಕುಂಬಳಕಾಯಿಯಿಂದ ಸೌತೆಕಾಯಿಯವರೆಗೆ ನಿಮ್ಮ ಆಯ್ಕೆಯ ತರಕಾರಿಗಳೊಂದಿಗೆ ಮೊಸರಿನಲ್ಲಿ ‌ಪುಲಿಸ್ಸೆರಿಯನ್ನು ತಯಾರಿಸಲಾಗುತ್ತದೆ. ತರಿದ ತೆಂಗಿನಕಾಯಿಯನ್ನು ಮೇಲಕ್ಕೆ ಸಿಂಪಡಿಸುವ ಮೂಲಕ ಮತ್ತಷ್ಟು ರುಚಿ ನೀಡಬಹುದು.

  • ಕಾಲನ್
    ಓಣಂನಲ್ಲಿ ಕಡ್ಡಾಯವಾಗಿ ಮಾಡುವ ಈ ಕಾಲನ್ ಖಾದ್ಯವನ್ನು ಮೊಸರು‌, ಬಾಳೆಹಣ್ಣು ಮತ್ತು ತುರಿದ ತೆಂಗಿನಕಾಯಿಯಿಂದ ತಯಾರಿಸಲಾಗುತ್ತದೆ.

  • ಮೋರ್ರು ಕಚ್ಚಿಯಾತ
    ಕಪ್ಪು ಎಳ್ಳು, ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿಯೊಂದಿಗೆ ಮೊಸರನ್ನು ಕುದಿಸಿ ಮೊರ್ರು ಕಚಿಯಾತವನ್ನು ತಯಾರಿಸಲಾಗುತ್ತದೆ.

  • ಕಿಚಡಿ
    ಕಿಚಡಿ ಓಣಂ ಸಾಧ್ಯದ ಮತ್ತೊಂದು ರುಚಿಕರವಾದ ಖಾದ್ಯವಾಗಿದೆ. ಇದನ್ನು ಮಸಾಲೆಯುಕ್ತ ಮೊಸರು ಮತ್ತು ಬೆಂಡೆಕಾಯಿ, ಸೌತೆಕಾಯಿ ಅಥವಾ ಹಾಗಲಕಾಯಿಯಂತಹ ತರಕಾರಿಗಳನ್ನು ಬಳಸಿ ತಯಾರಿಸಲಾಗುತ್ತದೆ.

  • ರಸಂ
    ಸಾಮಾನುವಾಗಿ ಅನ್ನಕ್ಕೆ ಹೇಳಿ ಮಾಡಿಸಿದ ರಸಂ, ಓಣಂ ಸಾಧ್ಯದ ಪ್ರಮುಖ ಅಡುಗೆ. ಟೊಮೆಟೋ, ಹುಣಸೆ ಹಣ್ಣು, ಒಗ್ಗರಣೆಯಿಂದ ತಯಾರಿಸುವ ಇದರ ರುಚಿ ಅದ್ಭುತ.

  • ಕೂಟು ಕರಿ
    ಕೂಟು ಕರಿ ಎಂಬುದು ಬಾಳೆಹಣ್ಣು, ಕರಿಬೇವು ಮತ್ತು ತುರಿದ ತೆಂಗಿನಕಾಯಿಯಿಂದ ಮಾಡಿದ ಭಕ್ಷ್ಯವಾಗಿದೆ.

  • ನೆಯ್ಯ್
    ಸಾಮಾನ್ಯವಾಗಿ ಹಿಂದಿಯಲ್ಲಿ ತುಪ್ಪ ಎಂದು ಕರೆಯಲ್ಪಡುವ ಒಂದು ಚಮಚ ನೆಯ್ಯಿಯನ್ನು ಅನ್ನ ಮತ್ತು ಪರಪ್ಪು ಕರ್ರಿಗೆ ಹೆಚ್ಚುವರಿ ಪರಿಮಳವನ್ನು ನೀಡಲು ಸೇರಿಸಲಾಗುತ್ತದೆ. ಇದಿಲ್ಲದೆ ಓಣಂ ಸಧ್ಯ ಅಪೂರ್ಣ ಎನ್ನಬಹುದು.


ಇದನ್ನೂ ಓದಿ:  KFC ಚಿಕನ್​ ಮಾಡೋದು ಹೇಗೆ? ಮನೆಯಲ್ಲಿಯೇ ಈ ವಿಧಾನ ಟ್ರೈ ಮಾಡಿ ನೋಡಿ

  • ಇಂಜಿ ತಾಯಿರ್
    ಇಂಜಿ ತಾಯಿರ್ ಶುಂಠಿ, ಮೊಸರು, ಕಪ್ಪು ಎಳ್ಳು ಮತ್ತು ಮಸಾಲೆಗಳನ್ನು ಬಳಸಿ ಮಾಡಿದ ರುಚಿಕರವಾದ ಭಕ್ಷ್ಯವಾಗಿದೆ.

  • ಪೂವನ್ ಪಜಮ್
    ಪೂವನ್ ಪಜಮ್ ಬಾಳೆಹಣ್ಣಿನ ಒಂದು ರುಚಿಯಾದ ಪಾಕವಿಧಾನ. ಇದನ್ನು ಪಾಯಸದೊಂದಿಗೆ ಬೆರೆಸಿ ಸಹ ಸವಿಯುತ್ತಾರೆ.

  • ಪಾಲದ ಪ್ರಧಾನ
    ಪಾಲಾದ ಪ್ರಧಾನ್ ಎಂಬುದು ಹಾಲು, ಡ್ರೈ ಫ್ರೂಟ್ಸ್ ಮತ್ತು ಅನ್ನದಿಂದ ಮಾಡಿದ ಸಿಹಿ ಭಕ್ಷ್ಯವಾಗಿದೆ. ಇದನ್ನು ಊಟದ ಕೊನೆಯಲ್ಲಿ ಬಡಿಸಲಾಗುತ್ತದೆ.

  • ಪಜಮ್ ಪ್ರಧಾನನ್
    ಪಜಮ್ ಪ್ರಧಾನ್ ಅನ್ನು ಅನ್ನ, ಗೋಡಂಬಿ, ಚಿಕ್ಕಕದಾಗಿ ತ್ತರಿಸಿದ ತೆಂಗಿನಕಾಯಿ ತುಂಡು ಮತ್ತು ಬೆಲ್ಲದಿಂದ ತಯಾರಿಸಲಾಗುತ್ತದೆ. ಇದು ಸಹ ಓಣಂ ಸಾಧ್ಯದ ಮತ್ತೊಂದು ಪಾಕವಿಧಾನ

Published by:Ashwini Prabhu
First published: